For Quick Alerts
ALLOW NOTIFICATIONS  
For Daily Alerts

ಮೇಕಪ್ ಇಲ್ಲದೆಯೇ ಹೇಗೆ ಸುಂದರವಾಗಿ ಕಾಣುವುದು ನೋಡಿ...

|

ಕಣ್ಣಿಗೆ ಕಾಡಿಗೆ, ತುಟಿಗೆ ಒಂದಿಷ್ಟು ಬಣ್ಣ ಮುಖದ ಹೊಳಪಿಗೆ ಕೊಂಚ ಕ್ರೀಮ್ ಹೀಗೆ ಸೌಂದರ್ಯ ವರ್ಧಕಗಳನ್ನು ಬಳಸಿಕೊಂಡು ಸುಂದರವಾದ ನೋಟ ಪಡೆಯುವುದು ಎಂದರೆ ಹೆಣ್ಣಿಗೆ ಅದೇನೋ ಒಂದು ಬಗೆಯ ಸಂತೋಷ ಹಾಗೂ ಸಂಭ್ರಮ. ಮನೆಯಿಂದಾಚೆ ಹೋಗಬೇಕು ಎಂದರೆ ಮೊದಲು ಕನ್ನಡಿಯನ್ನು ನೋಡಿ, ತಮ್ಮ ಮುಖದ ಸೌಂದರ್ಯಕ್ಕೆ ಅಗತ್ಯವಾದ ಮೇಕಪ್ ಮಾಡಿಕೊಳ್ಳುವುದು ಸಹಜ. ಹಾಗಾಗಿ ಮೇಕಪ್ ಎಂದರೆ ಹೆಣ್ಣಿಗಿರುವ ಒಂದು ಹಕ್ಕು ಎಂದು ಸಹ ಹೇಳಬಹುದು.

ಸಮಾಜದ ಆಕರ್ಷಣೆಯಾಗಿರುವ ಹೆಣ್ಣು ಎಷ್ಟು ಸುಂದರವಾಗಿ ಕಾಣಿಸುತ್ತಾಳೋ ಅಷ್ಟು ಆನಂದ ಹಾಗೂ ಹೆಮ್ಮೆಯಿರುತ್ತದೆ. ಸಮಾಂಭದಲ್ಲಿ ಅಥವಾ ಮನೆಯಲ್ಲಿ ಇರುವ ಮಹಿಳೆಯರು ಒಬ್ಬರಿಗಿಂತ ಒಬ್ಬರು ಸುಂದರವಾದ ಉಡುಗೆ ತೊಡುಗೆ ಹಾಗೂ ಮೇಕಪ್ ಹೊಂದಿ ಸಿಂಗರಿಸಿಕೊಂಡಿದ್ದಾರೆ ಎಂದರೆ ನೋಡುವವರ ಮನಸ್ಸಿಗೂ ಸಂತೋಷ ಹಾಗೂ ಸಂಭ್ರಮ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿಯೇ ಅನೇಕ ಸಂಸ್ಥೆಗಳು ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರ ಮೂಲಕ ಆರ್ಥಿಕ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ನಿಜ, ಮೇಕಪ್ ಎನ್ನುವುದು ಹೆಣ್ಣಿಗೆ ತಾನಿರುವುದಕ್ಕಿಂತ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳುವ ಸಾಧನ ಅಥವಾ ಕ್ರಿಯೆ ಎಂದು ನಂಬಿದ್ದಾಳೆ.

ಮೇಕಪ್ ಹೊಂದಿರುವ ಹುಡುಗಿ ಅಥವಾ ಮಹಿಳೆಯ ನೋಡವು ಮೇಕಪ್ ರಹಿತವಾಗಿರುವ ಮಹಿಳೆಯರಿಗಿಂತ ಹೆಚ್ಚು ಆಕರ್ಷಕ ಹಾಗೂ ಸುಂದರವಾಗಿ ಕಾಣುತ್ತಾರೆ. ಆದರೆ ಪದೇ ಪದೇ ಮೇಕಪ್ ಮಾಡುವುದು ಅಥವಾ ದಿನವಿಡೀ ಅಧಿಕ ಸಮಯಗಳ ಕಾಲ ಮೇಕಪ್ ಹೊಂದುವುದು ಎಂದರೆ ಮುಖದ ತ್ವಚೆಯು ತನ್ನ ನೈಸರ್ಗಿಕ ಕಳೆಯನ್ನು ಅಥವಾ ಆರೋಗ್ಯವನ್ನು ಕಳೆದುಕೊಳ್ಳುವುದು.

 ಕಾಲೇಜು ಹಾಗೂ ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ

ಕಾಲೇಜು ಹಾಗೂ ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ

ದೀರ್ಘ ಸಮಯಗಳ ಕಾಲ ರಾಸಾಯನಿಕ ಪದಾರ್ಥಗಳನ್ನು ಬಳಸಲಾಗಿರುವ ಸೌಂದರ್ಯ ವರ್ಧಕಗಳನ್ನು ಹೊಂದಿದ್ದರೆ ಮುಖದ ಮೇಲೆ ಮೊಡವೆ, ತುರಿಕೆ, ಸುಕ್ಕುಗಟ್ಟುವುದು, ಚರ್ಮ ಒರಟಾಗುವುದು, ಉರಿಯೂತ, ಶುಷ್ಕತೆಯಿಂದ ಕೂಡಿರುವುದು ಹೀಗೆ ಅನೇಕ ಬಗೆಯ ಸಮಸ್ಯೆಗಳು ಉಂಟಾಗುತ್ತವೆ. ಅಂತಹ ಸಂದರ್ಭದಲ್ಲಿ ಅವುಗಳ ಆರೈಕೆಗಾಗಿಯೂ ಸಾಕಷ್ಟು ಔಷಧ ಅಥವಾ ಮನೆ ಪರಿಹಾರಗಳ ಮೊರೆ ಹೋಗಲೇ ಬೇಕಾಗುವ ಅನಿವಾರ್ಯತೆ ಎದುರಾಗುವುದು. ಕಾಲೇಜು ಹಾಗೂ ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ ಮೇಕಪ್ ಅನಿವಾರ್ಯವಾಗಿರುತ್ತವೆ. ತಮ್ಮ ನೋಟಗಳನ್ನು ಸೂಕ್ತ ರೀತಿಯಲ್ಲಿ ತೋರಿಸಿಕೊಳ್ಳಬೇಕು ಎನ್ನುವ ಹಂಬಲದಿಂದ ಸಾಕಷ್ಟು ಸೌಂದರ್ಯ ವರ್ದಕಗಳನ್ನು ಬಳಸಿ ಮೇಕಪ್ ಮಾಡುವುದು ಸಹಜ. ಅತಿಯಾದ ಮೇಕಪ್ ಇಲ್ಲವಾದರೂ ನಿತ್ಯವೂ ಪೌಂಡೇಶನ್ ಕ್ರೀಮ್, ಲಿಪ್‍ಸ್ಟಿಕ್, ಐಬ್ರೋ ಪೆನ್ಸಿಲ್, ಕಾಜಲ್, ಪೌಡರ್‍ಗಳನ್ನಾದರೂ ಸಾಮಾನ್ಯವಾಗಿ ಬಳಸುತ್ತಾರೆ. ಇವು ನಿತ್ಯವು ನಿಧಾನವಾಗಿ ನಮ್ಮ ತ್ವಚೆಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತವೆ ಎನ್ನುವ ಅರಿವು ಇರುವುದಿಲ್ಲ. ಕೆಲವರಿಗೆ ಆ ಕುರಿತು ಸ್ವಲ್ಪ ಜ್ಞಾನವಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ತೋರುವ ಸಾಧ್ಯತೆಗಳೂ ಹೆಚ್ಚು.

ಮೇಕಪ್ ಇಲ್ಲದೆಯೇ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು!

ಮೇಕಪ್ ಇಲ್ಲದೆಯೇ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು!

ಮೇಕಪ್ ಇಲ್ಲದೆಯೇ ನಮ್ಮ ಸೌಂದರ್ಯವನ್ನು ಸುಂದರಗೊಳಿಸಬಹುದು. ಜೊತೆಗೆ ಇತರರಿಗೂ ಉತ್ತಮ ನೋಟವನ್ನು ಪ್ರದರ್ಶಿಸಬಹುದು. ಅದಕ್ಕಾಗಿ ಕೆಲವು ಕ್ರಮಗಳನ್ನು ಅನುಸರಿಸಿದರೆ ಸಾಕು. ನಿಮ್ಮ ತ್ವಚೆಯು ನೈಸರ್ಗಿಕವಾಗಿ ಸುಂದರವಾಗಿಯೇ ಇರುತ್ತದೆ. ಚರ್ಮವೂ ತನ್ನ ಆರೋಗ್ಯದಲ್ಲಿ ಸುಧಾರಣೆಯನ್ನು ಕಂಡುಕೊಳ್ಳುವುದು ಎಂದು ಹೇಳಲಾಗುವುದು. ಹಾಗಾದರೆ ಆಸಲಹೆಗಳು ಏನು? ನೀವು ಈ ರೀತಿಯ ಪರಿಹಾರ ವನ್ನು ಹುಡುಕುತ್ತಿದ್ದೀರಿ ಎಂದಾದರೆ ಲೇಖನದ ಮುಂದಿನ ಭಾಗ ಹೆಚ್ಚಿನ ಪರಿಹಾರವನ್ನು ನೀಡುವುದು.

Most Read: ರಾತ್ರಿ ಮಲಗುವ ಮುನ್ನ ಈ ಫೇಸ್ ಮಾಸ್ಕ್ ಬಳಸಿ-ಬೆಳಿಗ್ಗೆ ಎದ್ದಾಗ ಮುಖ ಇನ್ನಷ್ಟು ಸುಂದರವಾಗಿ ಕಾಣುತ್ತೆ

ಸನ್‍ಸ್ಕ್ರೀನ್ ಅಗತ್ಯವಾಗಿ ಬಳಸಿ

ಸನ್‍ಸ್ಕ್ರೀನ್ ಅಗತ್ಯವಾಗಿ ಬಳಸಿ

ಮನೆಯಿಂದ ಆಚೆ ಹೋಗುತ್ತಿದ್ದೀರಿ ಎಂದಾದರೆ ಮೊದಲು ನಿಮ್ಮ ಮುಖಕ್ಕೆ ಸನ್‍ಸ್ಕ್ರೀನ್ ಹಚ್ಚುವುದನ್ನು ಮರೆಯದಿರಿ. ಸೂರ್ಯನ ಬೆಳಕಿಗೆ ಮುಖವನ್ನು ತೆರೆದುಕೊಲ್ಲುವ ಮೊದಲು 15 ನಿಮಿಷಗಳಿಗೂ ಮುಂಚೆ ಅನ್ವಯಿಸಿಕೊಳ್ಳಬೇಕು. ಸನ್‍ಸ್ಕ್ರೀನ್ ಅನ್ವಯಿಸಿಕೊಳ್ಳುವುದು ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳುವ ಮೊದಲ ಹಂತ ಎನ್ನಬಹುದು.

ಟಿಂನ್‍ಟೆಡ್ ಮಾಯಿಶ್ಚುರೈಸರ್

ಟಿಂನ್‍ಟೆಡ್ ಮಾಯಿಶ್ಚುರೈಸರ್

ನಿಮಗೆ ನಿಮ್ಮ ಮುಖ ತುಂಬಾ ಮಂದವಾಗಿ ಕಾಣುತ್ತಿದೆ ಎಂದೆನಿಸಿದರೆ ಮಧ್ಯಮ ವ್ಯಾಪ್ತಿಗೆ ಟಿಂನ್‍ಟೆಡ್ ಮಾಯ್ಚುರೈಸರ್ ಕ್ರೀಮ್ ಅನ್ನು ಬಳಸಿ. ಅನಿವಾರ್ಯ ಸಂದರ್ಭ ಅಥವಾ ದೊಡ್ಡ ಸಮಾರಂಭಗಳಿಗೆ ಹೋಗುವಾಗ ಮಾತ್ರ ಹೆಚ್ಚಿನ ವ್ಯಾಪ್ತಿಯ ಅಥವಾ ಗಾಢವಾಗಿ ಅನ್ವಯಿಸಿಕೊಳ್ಳುವುದು ಸೂಕ್ತ.

Most Read: ಬೆಳಿಗ್ಗೆ ಎದ್ದಾಗ ಮುಖ ಸುಂದರವಾಗಿ ಕಾಣಬೇಕೇ? ಹಾಗಾದರೆ ಹೀಗೆ ಮಾಡಿ

ಬೆಚ್ಚಗಿನ ನಿಂಬೆ ಹಣ್ಣಿನ ನೀರು

ಬೆಚ್ಚಗಿನ ನಿಂಬೆ ಹಣ್ಣಿನ ನೀರು

ಪ್ರತಿದಿನ ಬೆಚ್ಚಗಿನ ನೀರಿಗೆ ತಾಜಾ ನಿಂಬೆಹಣ್ಣಿನ ರಸವನ್ನು ಸೇರಿಸಿ ಕುಡಿಯಿರಿ. ಇದರಿಂದ ಮುಂಜಾನೆಯ ಪ್ರಾಥಮಿಕ ಕ್ರಿಯೆಯು ಸುಲಭವಾಗುವುದು. ದೇಹವು ಶುದ್ಧವಾಗುತ್ತದೆ. ಜೊತೆಗೆ ಚರ್ಮದ ಆರೋಗ್ಯಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುವುದು. ಜರ್ಮವು ಆರೋಗ್ಯಕರ ಹೊಳಪಿನಿಂದ ಕಂಗೊಳಿಸುವುದು.

ಎಫ್ಫೋಲಿಯಾಟ್ ಮಾಡಿಸುವುದನ್ನು ಮರೆಯದಿರಿ

ಎಫ್ಫೋಲಿಯಾಟ್ ಮಾಡಿಸುವುದನ್ನು ಮರೆಯದಿರಿ

ನಿಮ್ಮ ಚರ್ಮವು ನಿರಂತರವಾಗಿ ಧೂಳು ಹಾಗೂ ಹೊಗೆಗೆ ತೆರೆದುಕೊಂಡಿರುತ್ತದೆ. ಜೊತೆಗೆ ಆಗಾಗ ಅನ್ವಯಿಸುವ ಮೇಕಪ್‍ಗಳ ಪ್ರಭಾವದಿಂದ ತ್ವಚೆಯು ಸಾಕಷ್ಟು ಹಾನಿಗೆ ಒಳಗಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಎಫ್ಫೋಲಿಯಾಟ್ ಮಾಡಿ ಸುವುದರಿಂದ ಚರ್ಮದ ಆರೋಗ್ಯವು ಉತ್ತಮವಾಗಿರುತ್ತದೆ. ಚರ್ಮದ ಮೇಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಲಾಗುವುದು. ಚರ್ಮವು ಶುಚಿಯಾಗಿ ಆರೋಗ್ಯಕರವಾಗಿರುತ್ತದೆ. ನಿಮ್ಮ ಚರ್ಮ ಮಂದವಾಗಿದೆ ಎಂದರೆ ವಾರದಲ್ಲಿ 2-3 ಬಾರಿ ಎಫ್ಫೋಲಿಯಾಟ್ ಮಾಡಿಸಬಹುದು.

ಟೋನರ್ ಬಳಕೆ ಮಾಡಿ

ಟೋನರ್ ಬಳಕೆ ಮಾಡಿ

ಸಾಮಾನ್ಯವಾಗಿ ಮುಖವನ್ನು ತೊಳೆಯುವಾಗ ಟೋನರ್ ಹಂತವನ್ನು ಮರೆತುಬಿಟ್ಟಿರುತ್ತೇವೆ. ಆರೋಗ್ಯಕರವಾದ ಚರ್ಮವನ್ನು ಹೊಂದಬೇಕು ಎಂದರೆ ಟೋನರ್ ಬಳಕೆಯ ಹಂತ ಅತ್ಯಂತ ಪ್ರಮುಖವಾದ ಹೆಜ್ಜೆ. ಟೋನರ್ ಬಳಸಿ ಮುಖವನ್ನು ತೊಳೆಯುವುದರಿಂದ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನ ಗೊಳಿಸುತ್ತದೆ. ಜೊತೆಗೆ ನಿಮ್ಮ ಚರ್ಮವು ಉಲ್ಲಾಸದಿಂದ ಕೂಡಿರುತ್ತದೆ.

Most Read: ಕಾಂತಿಯುಕ್ತ, ಪ್ರಜ್ವಲಿಸುವ ತ್ವಚೆಗಾಗಿ ಸಂಪೂರ್ಣ ನೈಸರ್ಗಿಕ ಆರೈಕೆಯ ಗುಟ್ಟು

ಹೆಚ್ಚು ನೀರನ್ನು ಸೇವಿಸಿ

ಹೆಚ್ಚು ನೀರನ್ನು ಸೇವಿಸಿ

ನೀವು ಉತ್ತಮ ಹಾಗೂ ಆರೋಗ್ಯಕರವಾದ ಚರ್ಮವನ್ನು ಪಡೆಯಬೇಕು ಎಂದರೆ ಸಾಕಷ್ಟು ನೀರನ್ನು ಕುಡಿಯಬೇಕು. ಹೆಚ್ಚು ನೀರನ್ನು ಸೇವಿಸುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಆಗ ಚರ್ಮವು ಸುಕ್ಕಾಗದೆ ಮೃದುವಾದ ಕೋಮಲತೆಯನ್ನು ಪಡೆದುಕೊಳ್ಳುವುದು. ಜೊತೆಗೆ ಉತ್ತಮ ಹೊಳಪು ಹಾಗೂ ಆಕರ್ಷಣೆಯಿಂದ ಕಂಗೊಳಿಸುವುದು. ಆಗ ನೀವು ನಿಮ್ಮ ನೋಟವನ್ನು ಆಕರ್ಷಿಸಲು ಮೇಕಪ್ ಬಳಕೆ ಮಾಡುವ ಅಗತ್ಯವಿರುವುದಿಲ್ಲ. ನೈಸರ್ಗಿಕ ವಾಗಿಯೇ ಸುಂದರ ತ್ವಚೆ ಹಾಗೂ ಸೌಂದರ್ಯವನ್ನು ಪಡೆದುಕೊಳ್ಳುವಿರಿ.

English summary

natural ways to look good without makeup!

We can’t get enough of looking good with make-up every time we step out. Be it a bright lipstick colour or a swipe of concealer to hide your acne, don’t we woman rely on make-up every day? And that’s when we start believing that we hardly look good without those layers of foundations and the coats of mascara. And let’s face it, your face needs a make-up detox so that your skin can breathe.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more