Latest Updates
-
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ?
ಮೊಡವೆಯ ಕಲೆಗಳನ್ನು ನಿವಾರಿಸಲು ಮೆಂತೆ ಸೊಪ್ಪಿನ ಫೇಸ್ ಪ್ಯಾಕ್
ಮೊಡವೆಗಳು ಹದಿಹರೆಯದಲ್ಲಿ ಕಾಡುವ ತೊಂದರೆಯಾಗಿದ್ದು ಚರ್ಮದಾಳದಿಂದ ಮೂಡಿದ ಕೀವುಭರಿತ ಗುಳ್ಳೆಗಳಾಗಿವೆ. ಮೊಡವೆಗಳ ಬುಡದಲ್ಲಿ ಸಂಗ್ರಹವಾಗುವ ಅತಿಯಾದ ಎಣ್ಣೆ, ಸತ್ತ ಜೀವಕೋಶಗಳು ಹಾಗೂ ಬ್ಯಾಕ್ಟೀರಿಯಾಗಳು ಈ ಭಾಗದ ಚರ್ಮವನ್ನು ಬಾಧಿಸುತ್ತವೆ ಹಾಗೂ ಮೊಡವೆ ಮಾಯವಾದ ಬಳಿಕ ಇಲ್ಲಿ ಬೆಳೆಯುವ ಹೊಸಚರ್ಮ ಗಾಢವರ್ಣ ಪಡೆದಿದ್ದು ಶಾಶ್ವತ ಕಲೆ ಮೂಡಿಸುತ್ತದೆ. ಈ ಕಲೆಯನ್ನು ನಿವಾರಿಸುವುದು ಅಷ್ಟು ಸುಲಭವಲ್ಲ.
ಆದರೆ ಮೆಂತೆಸೊಪ್ಪಿಗೆ ಈ ಕಲೆಯನ್ನು ನಿವಾರಿಸುವ ಶಕ್ತಿ ಇದೆ ಹಾಗೂ ಇದನ್ನು ಸುಲಭ ಮನೆಮದ್ದಿನ ರೂಪದಲ್ಲಿ ಬಳಸುವ ಮೂಲಕ ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮವಿಲ್ಲದೇ ಸಹಜವರ್ಣ ಪಡೆಯಲು ಸಾಧ್ಯವಾಗುತ್ತದೆ. ಮೆಂತೆ ಸೊಪ್ಪಿನಲ್ಲಿ ವಿಟಮಿನ್ ಎ ಸಮೃದ್ಧವಾಗಿವೆ ಹಾಗೂ ಮೊಡವೆ, ಸೋರಿಯಾಸಿಸ್, ಎಕ್ಸಿಮಾ ಮತ್ತು ಕಪ್ಪುತಲೆಗಳಂತಹ ಚರ್ಮವ್ಯಾಧಿಗಳು ಹಾಗೂ ಚಿಕ್ಕ ಪುಟ್ಟ ಚರ್ಮದ ಗಾಯಗಳನ್ನೂ ನಿವಾರಿಸಲು ಸಮರ್ಥವಾಗಿದೆ...

ವಿಟಮಿನ್ ಎ ಸಮೃದ್ಧವಾಗಿವೆ
ಮೆಂತೆ ಸೊಪ್ಪಿನಲ್ಲಿ ವಿಟಮಿನ್ ಎ ಸಮೃದ್ಧವಾಗಿವೆ ಹಾಗೂ ಮೊಡವೆ, ಸೋರಿಯಾಸಿಸ್, ಎಕ್ಸಿಮಾ ಮತ್ತು ಕಪ್ಪುತಲೆಗಳಂತಹ ಚರ್ಮವ್ಯಾಧಿಗಳು ಹಾಗೂ ಚಿಕ್ಕ ಪುಟ್ಟ ಚರ್ಮದ ಗಾಯಗಳನ್ನೂ ನಿವಾರಿಸಲು ಸಮರ್ಥವಾಗಿದೆ. ಈ ಎಲೆಗಳಲ್ಲಿ ವಿಟಮಿನ್ ಸಿ ಎಂಬ ಪ್ರಬಲ ಆಂಟಿ ಆಕ್ಸಿಡೆಂಟ್ ಇದೆ ಹಾಗೂ ಇದರ ಬಳಕೆಯಿಂದ ಸೂರ್ಯನ ಅತಿನೇರಳೆ ಕಿರಣಗಳಿಗೆ ರಕ್ಷಣೆ ಒದಗಿಸುತ್ತದೆ ಹಾಗೂ ಈ ಮೂಲಕ ಎದುರಾಗಬಹುದಾಗಿದ್ದ ಚರ್ಮ ಕಪ್ಪಗಾಗುವುದು, ನೆರಿಗೆ ಸೂಕ್ಷ್ಮ ಗೆರೆಗಳು ಮೂಡುವುದರಿಂದ ರಕ್ಷಣೆ ದೊರಕುತ್ತದೆ. ಮೆಂತೆ ಎಲೆಗಳಲ್ಲಿ ಕ್ಯಾಲ್ಸಿಯಂ, ಸತು, ಮೆಗ್ನೀಶಿಯಂ, ಸೆಲೆನಿಯಂ ಹಾಗೂ ಕಬ್ಬಿಣ ಇದೆ. ಇವೆಲ್ಲವೂ ಚಿಕ್ಕಪುಟ್ಟ ತೊಂದರೆಗಳಿಂದ ಹಿಡಿದು ಪ್ರಮುಖ ಚರ್ಮದ ತೊಂದರೆಯನ್ನು ನಿವಾರಿಸುತ್ತವೆ.

ವಿಟಮಿನ್ ಎ ಸಮೃದ್ಧವಾಗಿವೆ
ಚರ್ಮದ ಆರೈಕೆಗಾಗಿ ಮೆಂತೆ ಎಲೆಗಳನ್ನು ಬಳಸುವ ಸುಲಭ ವಿಧಾನವೆಂದರೆ ಈ ಎಲೆಗಳನ್ನು ಜಜ್ಜಿ ಮುಖವನ್ನು ಉಜ್ಜಿಕೊಂಡು ತಣ್ಣೀರಿನಿಂದ ತೊಳೆದುಕೊಳ್ಳುವುದಾಗಿದೆ. ಈ ಮೂಲಕ ಚರ್ಮದ ಸೂಕ್ಷ್ಮರಂಧ್ರಗಳು ತೆರೆದು ಸ್ವಚ್ಛಗೊಳ್ಳುವ ಮೂಲಕ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳು ನಿವಾರಣೆಗೊಂಡು ಸೋಂಕಿನ ವಿರುದ್ಧ ರಕ್ಷಣೆ ಪಡೆದಂತಾಗುತ್ತದೆ. ಈ ಎಲೆಗಳನ್ನು ಅರೆದು ಮುಖದ ಮೇಲೆ ಹಚ್ಚಿಕೊಳ್ಳುವ ಮೂಲಕವೂ ಉರಿಯುತ, ಚಿಕ್ಕಪುಟ್ಟ ಸುಟ್ಟ ಗಾಯ, ಮೊಡವೆ ಹಾಗೂ ಇತರ ಚರ್ಮದ ತೊಂದರೆಗಳು ಇಲ್ಲವಾಗುತ್ತವೆ. ಅಲ್ಲದೇ ಚರ್ಮದ ಕಲೆಗಳನ್ನು ತಿಳಿಯಾಗಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ. ಮೆಂತೆ ಎಲೆಗಳನ್ನು ಅರೆದು ತಯಾರಿಸಿದ ಮುಖಲೇಪದ ಬಳಕೆಯಿಂದ ತ್ವಚೆಯ ಸೆಳೆತ ಹೆಚ್ಚುತ್ತದೆ ಹಾಗೂ ವೃದ್ಧಾಪ್ಯದ ಚಿಹ್ನೆಗಳಾದ ನೆರಿಗೆ ಮತ್ತು ಜೋಲು ಬೀಳುವ ಚರ್ಮ ಮೊದಲಾದವುಗಳಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಮೆಂತೆಸೊಪ್ಪನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕವೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.

ಮೆಂತೆಸೊಪ್ಪಿನ ಸೇವನೆಯ ಪ್ರಯೋಜನಗಳು
ಮೆಂತೆಸೊಪ್ಪಿನ ಸೇವನೆಯಿಂದ ವಿಶೇಷವಾಗಿ ಕ್ಷಮತೆ ಕಳೆದುಕೊಂಡಿದ್ದ ಯಕೃತ್ ಹಾಗೂ ಡಿಸ್ಪೀಸಿಯಾ ರೋಗಕ್ಕೆ ನೈಸರ್ಗಿಕವಾದ ಚಿಕಿತ್ಸೆ ದೊರಕುತ್ತದೆ. ಜೊತೆಗೇ ಜೀರ್ಣಕ್ರಿಯೆಯ ತೊಂದರೆಗಳಾದ ಅತಿಸಾರ, ಬೇಧಿ, ವಾಯುಪ್ರಕೋಪ ಮೊದಲಾದವುಗಳನ್ನೂ ಸರಿಪಡಿಸುತ್ತದೆ. ಒಣಗಿಸಿದ ಮೆಂತೆ ಎಲೆಗಳು ಊಟದ ಬಳಿಕ ಸೇವಿಸಿ ಬಾಯಿಯ ದುರ್ವಾಸನೆಯನ್ನು ತಡೆಗಟ್ಟಬಹುದು. ಕೊಂಚ ಮೆಂತೆ ಎಲೆಗಳನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಈ ನೀರನ್ನು ಸೋಸಿ ಪ್ರಥಮ ಆಹಾರವಾಗಿ ಕುಡಿಯಿರಿ. ಈ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಆಗಿರುವ LDL cholesterol ಹಾಗೂ ಟ್ರೈಗ್ಲಿಸರೈಡ್ ಗಳ ಮಟ್ಟವನ್ನು ತಗ್ಗಿಸುತ್ತವೆ. ಅಲ್ಲದೇ ವಿಶೇಷವಾಗಿ ಕಿಣ್ವಗಳ ಏರುಪೇರಿನ ತೊಂದರೆ ಇರುವ ವ್ಯಕ್ತಿಗಳಿಗೆ ಮೆಂತೆಸೊಪ್ಪು ಹೆಚ್ಚಿನ ಪ್ರಯೋಜನವಿದೆ. ಮೆಂತೆ ಎಲೆಗಳಲ್ಲಿ ಮಧುಮೇಹ ನಿವಾರಕ ಗುಣವಿದೆ. ರಕ್ತದಲ್ಲಿರುವ ಗ್ಲುಕೋಸ್ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಮೂಲಕ ಟೈಪ್ 2 ಮಧುಮೇಹವನ್ನು ಗುಣಪಡಿಸಲು ನೆರವಾಗುತ್ತದೆ. ಜೊತೆಗೇ ಕೂದಲ ಬೆಳವಣಿಗೆಗೂ ನೆರವಾಗುತ್ತದೆ.

ಮೊಡವೆಯ ಕಲೆಗಳನ್ನು ನಿವಾರಿಸಲು ಮನೆಯಲ್ಲಿಯೇ ಸುಲಭ ಮನೆಮದ್ದನ್ನು ತಯಾರಿಸಿಕೊಳ್ಳುವುದು ಹೇಗೆ?
*ಪ್ರಮಾಣ: ಒಂದು ಬಾರಿಯ ಬಳಕೆಗೆ
*ಸಮಯ: ಐದು ನಿಮಿಷಗಳು
ಸಾಮಾಗ್ರಿಗಳು:
*ಒಂದು ಕಪ್ ಮೆಂತೆ ಎಲೆಗಳು
*ಕಾಲು ಚಿಕ್ಕಚಮಚ ಅರಿಶಿನ ಪುಡಿ
*ಒಂದು ಚಿಕ್ಕ ಚಮಚ ಹಸಿ ಹಾಲು
*ಅಗತ್ಯ ಎನಿಸುವಷ್ಟು ನೀರು

ವಿಧಾನ
ಮೆಂತೆಸೊಪ್ಪು, ಅರಿಶಿನ, ಹಾಲು ಮತ್ತು ನೀರಿನಿಂದ ಮುಖಲೇಪ ತಯಾರಿಸುವ ಬಗೆ:
*ಒಂದು ಕಪ್ ಮೆಂತೆ ಎಲೆಗಳನ್ನು ಸಂಗ್ರಹಿಸಿ
*ಇದನ್ನು ಬ್ಲೆಂಡರ್ ನಲ್ಲಿ ಹಾಕಿ
*ಕೊಂಚ ನೀರು ಸೇರಿಸಿ
*ನುಣ್ಣಗೆ ಅರೆಯಿರಿ
*ಇದನ್ನು ಒಂದು ಪಾತ್ರೆಗೆ ಸುರಿದು ಹಾಲು ಹಾಕಿ ಬೆರೆಸಿ.
*ಬಳಿಕ ಅರಿಶಿನ ಪುಡಿ ಬೆರೆಸಿ
*ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
*ಈಗ ಮೆಂತೆ ಎಲೆಯ ಮುಖಲೇಪ ತಯಾರಾಗಿದೆ.

ಬಳಕೆಯ ವಿಧಾನ
*ಈ ಲೇಪವನ್ನು ಈಗ ತಾನೇ ತೊಳೆದುಕೊಂಡ ಮುಖ ಮತ್ತು ಕುತ್ತಿಗೆಗೆ ತೆಳ್ಳನೆ ಲೇಪಿಸಿ
*ಸುಮಾರು ಮುಕ್ಕಾಲು ಘಂಟೆ ಹಾಗೇ ಬಿಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
*ಮೊಡವೆಗಳು ಇಲ್ಲವಾಗುವವರೆಗೂ ನಿತ್ಯವೂ ಒಂದು ಬಾರಿ ಹಚ್ಚಿಕೊಳ್ಳುತ್ತಾ ಹೋಗಿ.



Click it and Unblock the Notifications