For Quick Alerts
ALLOW NOTIFICATIONS  
For Daily Alerts

ಎಣ್ಣೆಯುಕ್ತ ಚರ್ಮದ ನಿವಾರಣೆ ಮಾಡುವುದು ಹೇಗೆ?

|

ಒಬ್ಬೊಬ್ಬರದ್ದು ಒಂದೊಂದು ರೀತಿಯ ದೇಹ ಪ್ರಕೃತಿ. ಕೆಲವರದ್ದು ತುಂಬಾ ತಂಪು ಹಾಗೂ ಇನ್ನು ಕೆಲವರದ್ದು ತುಂಬಾ ಉಷ್ಣ ದೇಹ. ಅದೇ ರೀತಿಯಾಗಿ ಚರ್ಮ ಕೂಡ ಇರುವುದು. ಒಣ ಚರ್ಮ, ಎಣ್ಣೆಯಂಶವಿರುವ ಚರ್ಮ, ಸೂಕ್ಷ್ಮ ಚರ್ಮ ಹೀಗೆ...ಚರ್ಮದಲ್ಲಿ ಎಣ್ಣೆಯಂಶ ಅತಿಯಾಗಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಮೇದೋಜೀರಕ ಗ್ರಂಥಿಗಳ ಅತಿಯಾಗಿ ಸ್ರವಿಸುವುದು. ಇದರಿಂದ ಚರ್ಮವು ತುಂಬಾ ಹೊಳೆಯುವಂತೆ ಕಾಣುವುದು ಮತ್ತು ಜಿಡ್ಡಿನಿಂದ ಕೂಡಿರುವುದು. ಮೇದೋಜೀರಕ ಸ್ರಾವವು ಕೊಬ್ಬಿನಿಂದ ಮಾಡಲ್ಪಡುವುದು ಮತ್ತು ಚರ್ಮದಲ್ಲಿ ಮೊಶ್ಚಿರೈಸ್ ಉಳಿಯಲು ಮತ್ತು ಚರ್ಮವನ್ನು ರಕ್ಷಿಸಲು ನೆರವಾಗುವುದು. ಆದರೆ ಅತಿಯಾಗಿ ಮೇದೋಜೀರಕ ಗ್ರಂಥಿಯು ಸ್ರವಿಸುವಿಕೆ ಪರಿಣಾಮವಾಗಿ ಅದು ಮೊಡವೆ ಉಂಟು ಮಾಡುವುದು ಮತ್ತು ಮುಖದ ಮೇಲೆ ಬೊಕ್ಕೆಗಳು ಮೂಡಬಹುದು.

ಎಣ್ಣೆಯುಕ್ತ ಚರ್ಮವು ಕೆಲವೊಂದು ಹವಾಮಾನ, ಅನುವಂಶೀಯತೆ ಮತ್ತು ಜೀವನಶೈಲಿ ಬದಲಾವಣೆಯಿಂದಾಗಿ ಬರುವುದು. ಎಣ್ಣೆಯುಕ್ತ ಚರ್ಮವನ್ನು ನಿಭಾಯಿಸುವುದು ತುಂಬಾ ಕಷ್ಟ. ಆದರೆ ಎಣ್ಣೆಯು ಉತ್ಪತ್ತಿಯಾದಂತೆ ತಡೆಯಲು ಕೆಲವೊಂದು ವಿಧಾನಗಳು ಇದೆ ಮತ್ತು ಪೌಡರ್ ಬಳಸದೆ ನೀವು ಚರ್ಮದ ಸಮತೋಲನ ಕಾಪಾಡಿಕೊಳ್ಳಬಹುದು.

ಎಣ್ಣೆಯುಕ್ತ ಚರ್ಮದ ನಿವಾರಣೆ ಮಾಡುವುದು ಹೇಗೆ

Oily Skin

ಶುದ್ಧೀಕರಣ ಮತ್ತು ಕಿತ್ತುಹಾಕುವುದನ್ನು ಸಮತೋಲನ ಮಾಡುವುದು

ಎಣ್ಣೆಯುಕ್ತ ಚರ್ಮ ಇರುವಂತಹ ಜನರು ಸಾಮಾನ್ಯವಾಗಿ ಮಾಡುವಂತಹ ತಪ್ಪೆಂದರೆ ಅದು ಪದೇ ಪದೇ ಮುಖ ತೊಳೆಯುವುದು ಮತ್ತು ಅದನ್ನು ಶುದ್ಧೀಕರಿಸುವುದು. ಇದರಿಂದ ಒಳ್ಳೆಯ ತ್ವಚೆಯು ಕಂಡಬರುವುದು. ಆದರೆ ಇದು ತಾತ್ಕಾಲಿಕ. ಇದು ನಿಮಗೆ ಅಚ್ಚರಿ ಉಂಟು ಮಾಡಬಹುದು. ಆದರೆ ಅತಿಯಾಗಿ ಮುಖ ತೊಳೆದುಕೊಂಡರೆ ಆಗ ಎಣ್ಣೆಯಂಶವು ಮತ್ತಷ್ಟು ಹೆಚ್ಚಾಗುವುದು.

ಮುಖ ತೊಳೆದುಕೊಳ್ಳುವ ಕಾರಣದಿಂದಾಗಿ ಮುಖದ ಮೇಲಿನ ಆಮ್ಲದ ಮೇಲೆ ಪರಿಣಾಮ ಬೀರಬಹುದು. ಇದು ಚರ್ಮವನ್ನು ರಕ್ಷಿಸುವಂತಹ ತೆಳುವಾದ ಚರ್ಮದ ಪದರವಾಗಿದೆ. ಮುಖದ ಮೇಲಿನ ಆಮ್ಲೀಯ ಸಮತೋಲನದ ಮೇಲೆ ಪರಿಣಾಮ ಬೀರಿದರೆ ಆಗ ಕಿರಿಕಿರಿ ಮತ್ತು ಬೊಕ್ಕೆ ಕಾಣಿಸುವುದು. ಚರ್ಮದಲ್ಲಿ ಆಮ್ಲದ ಸಮತೋಲನ ಕಾಪಾಡಿಕೊಳ್ಳಲು ಏನು ಮಾಡಬೇಕೆಂದು ಕೇಳಿದರೆ ಆಗ ಕೇವಲ ಎರಡು ಸಲ ಮಾತ್ರ ಮುಖ ತೊಳೆದುಕೊಳ್ಳಬೇಕು.

Most Read: ಎಣ್ಣೆಯುಕ್ತ ಚರ್ಮದ ಸಮಸ್ಯೆಗೆ 'ಕಿತ್ತಳೆ ಸಿಪ್ಪೆ'ಯ ಫೇಸ್ ಪ್ಯಾಕ್

ಚರ್ಮದ ಸತ್ತ ಕೋಶಗಳನ್ನು ಕಿತ್ತು ಹಾಕುವುದನ್ನು ನಿಯಮಿತವಾಗಿ ಮಾಡುತ್ತಲಿರಬೇಕು. ಎಣ್ಣೆಯುಕ್ತ ಚರ್ಮವು ಯಾವಾಗಲೂ ರಂಧ್ರವನ್ನು ಮುಚ್ಚಿಹಾಕುವುದು, ಚರ್ಮದ ಸತ್ತಕೋಶಗಳನ್ನು ತೆಗೆಯುವುದರಿಂದ ಕಪ್ಪುಕಲೆಗಳು ಮೂಡುವುದು ತಪ್ಪುವುದು. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಮಾಸ್ಕ್ ಗಳು ಸಿಗುವುದು ಮತ್ತು ಮನೆಯಲ್ಲಿ ಕೂಡ ರಾಸಾಯನಿಕ ಮುಕ್ತ ಹಾಗೂ ಸುರಕ್ಷಿತವಾಗಿರುವಂತಹ ಮಾಸ್ಕ್‌ನ್ನು ತಯಾರಿಸಿಕೊಂಡು ಬಳಸಬಹುದು.

ಓಟ್ ಮೀಲ್ ಮಾಸ್ಕ್

ಓಟ್ ಮೀಲ್ ನಲ್ಲಿ ಉರಿಯೂತ ಶಮನಕಾರಿ ಮತ್ತು ಆಂಟಿಆಕ್ಸಿಡೆಂಟ್ ಗುಣಗಳು ಇವೆ. ಇದು ಚರ್ಮದ ಕಿರಿಕಿರಿ ತಪ್ಪಿಸುವುದು ಮತ್ತು ಇದು ಎಣ್ಣೆಯಕ್ತ ಚರ್ಮಕ್ಕೆ ಒಳ್ಳೆಯ ಆಯ್ಕೆಯಾಗಿರುವುದು.

ಬೇಕಾಗುವ ಸಾಮಗ್ರಿಗಳು

  • 1 ಚಮಚ ಓಟ್ ಮೀಲ್
  • 1 ಚಮಚ ಜೇನುತುಪ್ಪ
  • ನೀರು

ವಿಧಾನ

•ಒಂದು ಪಿಂಗಾಣಿಯಲ್ಲಿ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಅದರಿಂದ ದಪ್ಪಗಿನ ಪೇಸ್ಟ್ ಮಾಡಿ.
•ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಹಾಗೆ ಬಿಡಿ.
•ಕೈಬೆರಳುಗಳನ್ನು ಒದ್ದೆ ಮಾಡಿಕೊಂಡು ಚರ್ಮಕ್ಕೆ ನಿಧಾನವಾಗಿ ಸ್ಕ್ರಬ್ ಮಾಡಿ.
•ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ.
•ವಾರದಲ್ಲಿ ಮೂರ ಸಲ ನೀವು ಈ ಸ್ಕ್ರಬ್‌ನ್ನು ಬಳಕೆ ಮಾಡಿ.

ಫೇಶಿಯಲ್ ಎಣ್ಣೆಯಿಂದ ಚರ್ಮಕ್ಕೆ ಮಾಯಿಶ್ಚಿರೈಸ್ ಮಾಡಿ

ಎಣ್ಣೆಯುಕ್ತ ಚರ್ಮವನ್ನು ನಿವಾರಣೆ ಮಾಡಲು ಎಣ್ಣೆಯನ್ನು ಬಳಸಬಹುದೇ? ಇದು ನಿಮ್ಮಲ್ಲಿ ಪ್ರಶ್ನೆ ಕಾಡಬಹುದು. ಆದರೆ ಫೇಶಿಯಲ್ ಎಣ್ಣೆಯು ಮುಖದಲ್ಲಿನ ಎಣ್ಣೆಯನ್ನು ತೆಗೆಯುವುದು ಮತ್ತು ಅದು ವಿಘಟನೆಗೊಳ್ಳಲು ನೆರವಾಗುವುದು. ಜೊಜೊಬಾ ಎಣ್ಣೆಯು ಶ್ರೇಷ್ಠ ಮಾಯಿಶ್ಚಿರೈಸ್ ಆಗಿದೆ ಮತ್ತು ಇದನ್ನು ಎಣ್ಣೆ ವಿರುದ್ಧ ಹೋರಾಡುವ ಗುಣಗಳು ಇವೆ.

ಬೇಕಾಗುವ ಸಾಮಗ್ರಿಗಳು

  • ಜೊಜೊಬಾ ಎಣ್ಣೆ

ವಿಧಾನ

ಬೆರಳುಗಳಿಂದ ಕೆಲವು ಹನಿ ಜೊಜೊಬಾ ಎಣ್ಣೆ ತೆಗೆದುಕೊಳ್ಳಿ ಮತ್ತು ಮುಖ ಹಾಗೂ ಕುತ್ತಿಗೆಗೆ ನಿಧಾನವಾಗಿ ವೃತ್ತಾಕಾರದಲ್ಲಿ ಉಜ್ಜಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಡಿ. ಬೆಳಗ್ಗೆ ಎದ್ದ ಬಳಿಕ ನೀರಿನಿಂದ ಮುಖ ತೊಳೆಯಿರಿ.

ಮಣ್ಣಿನ ಮಾಸ್ಕ್

ಎಣ್ಣೆಯುಕ್ತ ಚರ್ಮಕ್ಕೆ ಮಣ್ಣಿನ ಮಾಸ್ಕ್ ತುಂಬಾ ಒಳ್ಳೆಯದು. ಬೆಂಟೊನೈಟ್ ಮಣ್ಣು ಎಣ್ಣೆಯುಕ್ತ ಚರ್ಮಕ್ಕೆ ಬಳಸುವಂತಹ ತುಂಬಾ ಜನಪ್ತಿಯ ಮಣ್ಣು ಆಗಿದೆ. ಇದರಲ್ಲಿ ಹೀರಿಕೊಳ್ಳುವಂತಹ ಅದ್ಭುತವಾದ ಗುಣಗಳು ಇದೆ ಮತ್ತು ಇದು ಚರ್ಮದಲ್ಲಿ ಇರುವ ಅತಿಯಾದ ಎಣ್ಣೆಯಂಶವನ್ನು ಹೀರಿಕೊಳ್ಳುವುದು. ಇದರಲ್ಲಿ ಮೆಗ್ನಿಶಿಯಂ, ಕಬ್ಬಿಣ, ತಾಮ್ರ, ಸಿಲಿಕೇಟ್ ಮತ್ತು ಪೊಟಾಶಿಯಂ ಇದೆ. ಎಲ್ಲವು ಚರ್ಮದ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ. ಈ ಮಣ್ಣನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು

*1 ಚಮಚ ಬೆಂಟೊನೈಟ್ ಮಣ್ಣು
*1 ಚಮಚ ನೀರು

ವಿಧಾನ

•ಒಂದು ಪಿಂಗಾಣಿಯಲ್ಲಿ ಬೆಂಟೊನೈಟ್ ಮಣ್ಣು ಮತ್ತು ನೀರನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಅದರ ಮೆತ್ತಗಿನ ಪೇಸ್ಟ್ ಮಾಡಿ.
•ಮುಖ ಹಾಗೂ ಕುತ್ತಿಗೆಗೆ ಈ ಮಾಸ್ಕ್ ನ್ನು ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ಅದು ಒಣಗಲಿ.
•ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ.

Most Read: ಬ್ಯೂಟಿ ಟಿಪ್ಸ್: ಪುರುಷರ ಎಣ್ಣೆಯುಕ್ತ ತ್ವಚೆಗೆ ಪರ್ಫೆಕ್ಟ್ ಮನೆಮದ್ದುಗಳು

ಒತ್ತಡ ಕಡಿಮೆ ಮಾಡಿ

ಎಣ್ಣೆಯುಕ್ತ ಚರ್ಮ ಮತ್ತು ಒತ್ತಡಕ್ಕೆ ನೇರ ಸಂಬಂಧವಿಲ್ಲ. ಆದರೆ ಒತ್ತಡ ಜಾಸ್ತಿಯಾದ ವೇಳೆ ಅದು ನಮ್ಮ ಮುಖದ ಮೇಲೆ ಕಾಣಿಸಿಕೊಳ್ಳುವುದು. ಇದರಿಂದ ನಮ್ಮ ಮಾನಸಿಕ ಆರೋಗ್ಯ ಮತ್ತು ಚರ್ಮದ ಆರೋಗ್ಯ ಮೇಲೆ ತುಂಬಾ ಸಂಬಂಧವಿದೆ. ಒತ್ತಡವು ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳನ್ನು ಉಂಟು ಮಾಡುವುದು ಮತ್ತು ಇದರಿಂದಾಗಿ ಎಣ್ಣೆಯಂಶದ ಚರ್ಮದ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಒತ್ತಡವು ಅಂಡ್ರೆನಾಲ್ ಅಂಡ್ರೊಜೆನ್ ಎನ್ನುವ ಹಾರ್ಮೋನುಗಳನ್ನು ಉಂಟು ಮಾಡುವುದು. ಇದರಿಂದ ಮುಖದ ಮೇಲೆ ಎಣ್ಣೆಯು ಅತಿಯಾಗಿ ಉತ್ಪತ್ತಿಯಾಗುವುದು ಮತ್ತು ಚರ್ಮದ ರಂಧ್ರಗಳು ಮುಚ್ಚಿ ಹೋಗುವುದು.

ಯೋಗವು ಒತ್ತಡವನ್ನು ಕಡಮೆ ಮಾಡುವುದು. ಅದೇ ರೀತಿಯಾಗಿ ಧ್ಯಾನ ಕೂಡ. ನಿಧಾನವಾಗಿ ಉಸಿರಾಡುವತ್ತ ನೀವು ಗಮನಹರಿಸಿ ಮತ್ತು ಒತ್ತಡವು ನಿಮ್ಮ ದೇಹದಿಂದ ಹೊರಹೋಗುವುದು ನಿಮ್ಮ ಗಮನಕ್ಕೆ ಬರುವುದು.

ಆರೋಗ್ಯಕಾರಿ ಆಹಾರ ಸೇವಿಸಿ

ಆಂಟಿಆಕ್ಸಿಡೆಂಟ್ ಮತ್ತು ಒಮೆಗಾ3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿರುವಂತಹ ಆಹಾರವು ಚರ್ಮದ ಕಾಂತಿ ಹೆಚ್ಚಿಸುವುದು. ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವಂತಹ ಆಹಾರವೆಂಧರೆ ನೇರಳೆಹಣ್ಣುಗಳು, ಕ್ರಾನ್ಬೆರಿ, ಸೇಬು, ಬಸಲೆ, ಇಡೀ ಧಾನ್ಯ ಮತ್ತು ಮೆಣಸು. ಒಮೆಗಾ 3 ಕೊಬ್ಬಿನಾಮ್ಲವನ್ನು ಪಡೆಯಲು ನೀವು ಟ್ಯುನಾ ಮೀನು, ಅಕ್ರೋಡಾ ಮತ್ತು ಫ್ಲ್ಯಾಕ್ಸ್ ಬೀಜಗಳನ್ನು ಸೇವಿಸಬೇಕು.

ಬೆಳ್ತಿಗೆ ಅಕ್ಕಿ, ಬಿಳಿ ಬ್ರೆಡ್ ಮತ್ತು ಸಕ್ಕರೆಯಂತಹ ಆಹಾರವನ್ನು ತ್ಯಜಿಸಬೇಕು. ಇದರಲ್ಲಿ ಗ್ಲೈಸೆಮಿಕ್ ಅಧಿಕವಾಗಿದೆ ಮತ್ತು ಮೋಧೋಗ್ರಂಥಿಗಳ ಕಾರ್ಯವನ್ನು ಇದು ಹೆಚ್ಚು ಮಾಡುವುದು. ಎಣ್ಣೆಯುಕ್ತ, ಜಿಡ್ಡಿನ ಆಹಾರಗಳು ಚರ್ಮಕ್ಕೆ ಒಳ್ಳೆಯದಲ್ಲ ಮತ್ತು ಇದು ಚರ್ಮದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದು. ಆರೋಗ್ಯಕಾರಿ ಆಹಾರ ಸೇವನೆ ಮಾಡುವುದರಿಂದ ಅತಿಯಾಗಿ ಮೇಧೋಸ್ರಾವವು ಉಂಟಾಗುವುದು ತಪ್ಪುವುದು ಮತ್ತು ಇದರಿಂದ ಚರ್ಮದ ಕಿರಿಕಿರಿ ತಪ್ಪುವುದು.

ದೇಹವನ್ನು ತೇವಾಂಶದಿಂದ ಇಡಿ

ಆರೋಗ್ಯಕಾರಿ ಚರ್ಮವನ್ನು ಕಾಪಾಡಿಕೊಳ್ಳಲು ಹೆಚ್ಚಿನ ನೀರು ಸೇವನೆ ಮಾಡಿಕೊಂಡು ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳಬೇಕು. ನೀರಿನಲ್ಲಿ ಕೆಲವೊಂದು ಅತ್ಯುತ್ತಮ ಅಂಶಗಳು ಇದ್ದು, ಇದು ಚರ್ಮವನ್ನು ಸುಧಾರಣೆ ಮಾಡುವುದು ಮತ್ತು ಮೊಡವೆ ಹಾಗೂ ಚರ್ಮದ ಬೇರೆ ಪರಿಸ್ಥಿತಿ ಕಡಿಮೆ ಮಾಡುವುದು. ನೀರು ಸೇವನೆ ಕಡಿಮೆ ಮಾಡಿದರೆ ಅದರಿಂದ ನಿಸ್ತೇಜ, ನೆರಿಗೆ ಮತ್ತು ಮೊಡವೆ ಉಂಟಾಗುವಂತಹ ಚರ್ಮವನ್ನು ಉಂಟು ಮಾಡುವುದು. ಮೋಧೋಸ್ರಾವ ಉಂಟಾಗುವಂತೆ ಮಾಡುವುದು. ಇದರಿಂದಾಗಿ ಚರ್ಮದ ಮೇಲೆ ಎಣ್ಣೆಯು ಶೇಖರಣೆ ಆಗುವುದು. ಇದರಿಂದಾಗಿ ಪ್ರತಿನಿತ್ಯ 8-10 ಲೋಟ ನೀರು ಕುಡಿಯಬೇಕು.

ಲಿಂಬೆ ನೀರು ಕೂಡ ಚರ್ಮದಲ್ಲಿ ತೇವಾಂಶವನ್ನು ಕಾಪಾಡಲು ನೆರವಾಗುವುದು. ಇದರಲ್ಲಿ ಇರುವಂತಹ ವಿಟಮಿನ್ ಸಿ ಮೊಡವೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ಆಗಿರುವುದು.

ಹೀರಿಕೊಳ್ಳುವ ಹಾಳೆಗಳು

ಈ ಹಾಳೆಗಳು ತುಂಬಾ ತೆಳು ಮತ್ತು ಸಣ್ಣ ಕಾಗದಗಳು. ಇದು ಮುಖದಲ್ಲಿ ಇರುವಂತಹ ಅತಿಯಾದ ಎಣ್ಣೆಯನ್ನು ಹೀರಿಕೊಳ್ಳುವುದು. ಇದು ಹೊಳೆಯುವ, ಜಿಡ್ಡಿನ ಚರ್ಮದ ಸಮಸ್ಯೆ ನಿವಾರಣೆ ಮಾಡುವುದು. ಇದು ಹೆಚ್ಚು ದುಬಾರಿ ಕೂಡ ಇಲ್ಲ ಮತ್ತು ಅದನ್ನು ನೀವು ಬ್ಯಾಗ್ ನಲ್ಲೂ ಇಟ್ಟುಕೊಳ್ಳಬಹುದು ಮತ್ತು ನಿಮಗೆ ಯಾವಾಗ ಬೇಕೋ ಆಗ ಅದನ್ನು ತೆಗೆದು ಬಳಸಿಕೊಳ್ಳಬಹುದು.

ಬಾದಾಮಿ ಬಳಸಿ

ಬಾದಾಮಿಯು ಚರ್ಮದಲ್ಲಿ ಇರುವಂತಹ ಅತಿಯಾದ ಎಣ್ಣೆಯಂಶವನ್ನು ಹೀರಿಕೊಳ್ಳುವುದು. ಬಾದಾಮಿ ಬಳಸುವುದು ಹೇಗೆ ಎಂದು ನಾವು ಇಲ್ಲಿ ತಿಳಿಯುವ.

ಬೇಕಾಗುವ ಸಾಮಗ್ರಿಗಳು

  • 3 ಚಮಚ ಬಾದಾಮಿ ಹುಡಿ
  • 2 ಚಮಚ ಜೇನುತುಪ್ಪ

ವಿಧಾನ

•ಎರಡನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಅದನ್ನು ಮುಖದ ಮೇಲೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಸುಮಾರು 5-10 ನಿಮಿಷ ಕಾಲ ಹಾಗೆ ಮಸಾಜ್ ಮಾಡಿ.
•ಬಿಸಿ ನೀರಿನಿಂದ ಮುಖ ತೊಳೆಯಿರಿ.

ಬ್ಯಾಕ್ಟೀರಿಯಾ ದೂರ ಮಾಡಿಕೊಳ್ಳಲು ಜೇನುತುಪ್ಪ ಬಳಸಿ

ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಇವೆ. ಇದು ಮೊಡವೆ ಹಾಗೂ ಎಣ್ಣೆಯುಕ್ತ ಚರ್ಮದ ನಿವಾರಣೆ ಮಾಡಲು ತುಂಬಾ ಸಹಕಾರಿ. ಜೇನುತುಪ್ಪವು ಚರ್ಮವನ್ನು ಮೊಶ್ಚಿರೈಸ್ ಆಗಿ ಇಡುವುದು

ಬೇಕಾಗುವ ಸಾಮಗ್ರಿಗಳು

  • ಜೇನುತುಪ್ಪ

ವಿಧಾನ

ಜೇನುತುಪ್ಪದ ತೆಳು ಪದರವನ್ನು ಮುಖಕ್ಕೆ ಹಚ್ಚಿಕೊಂಡು 10-15 ನಿಮಿಷ ಕಾಲ ಹಾಗೆ ಒಣಗಲು ಬಿಡಿ.
ಬಿಸಿ ನೀರಿನಿಂದ ಮುಖ ತೊಳೆಯಿರಿ.
ನೀವು ಗಮನಿಸಬೇಕಾದ ಕೆಲವೊಂದು ಅಂಶಗಳು
•ಯಾವಾಗಲೂ ತುಂಬಾ ಲಘುವಾಗಿರುವಂತಹ ಮೊಶ್ಚಿರೈಸರ್ ಬಳಸಿ ಮತ್ತು ಇದು ಚರ್ಮವು ಎಣ್ಣೆಯನ್ನು ಕಡಿಮೆ ಹೀರಿಕೊಳ್ಳುವಂತೆ ಮಾಡುವುದು.
•ಮೇಕಪ್ ಬಳಸಿಕೊಳ್ಳುವ ವೇಳೆ ಯಾವಾಗಲೂ ಎಣ್ಣೆಯಿಲ್ಲದ ಮತ್ತು ನಾನ್-ಕಾಮೆಡೊಜೆನಿಕ್ ಉತ್ಪನ್ನಗಳನ್ನು ಬಳಸಿಕೊಳ್ಳಿ. ಇದರಿಂದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುವುದು ತಡೆಯಬಹುದು.
•ಅತಿಯಾಗಿ ಪೌಡರ್ ಬಳಸಿಕೊಳ್ಳಬೇಡಿ. ಇದರಿಂದ ಮತ್ತೆ ಅತಿಯಾಗಿ ಎಣ್ಣೆಯು ಚರ್ಮದಲ್ಲಿ ಉತ್ಪತ್ತಿ ಆಗಬಹುದು ಮತ್ತು ಇದರಿಂದ ನಿಮ್ಮ ಚರ್ಮವು ಕೆಟ್ಟದಾಗಿ ಕಾಣಿಸಬಹುದು. ಚರ್ಮದಲ್ಲಿ ಹೊಳೆಯುವ ಭಾಗಕ್ಕೆ ಮಾತ್ರ ಪೌಡರ್ ಬಳಸಿಕೊಳ್ಳಿ.
•ಸನ್ ಸ್ಕ್ರೀನ್ ಎಲ್ಲಾ ರೀತಿಯ ಚರ್ಮಕ್ಕೆ ತುಂಬಾ ಒಳ್ಳೆಯದು. ಎಣ್ಣೆಯುಕ್ತ ಚರ್ಮ ಹೊಂದಿರುವಂತಹ ಹೆಚ್ಚಿನವರು ಸನ್ ಸ್ಕ್ರೀನ್ ನ್ನು ಬಳಸುವುದಿಲ್ಲ. ಯಾಕೆಂದರೆ ಅದು ತುಂಬಾ ಎಣ್ಣೆಯುಕ್ತ ಮತ್ತು ಜಿಡ್ಡಿನಿಂದ ಕೂಡಿರುವುದು. ಎಣ್ಣೆಯಿಲ್ಲದೆ ಇರುವುದನ್ನು ಬಳಸಿಕೊಳ್ಳಿ. ನಿಯಾಸಿನಾಮೈಡ್ ನಂತಹ ಕೆಲವೊಂದು ಅಂಶಗಳು ಚರ್ಮದಲ್ಲಿನ ಅತಿಯಾದ ಎಣ್ಣೆಯನ್ನು ಹೀರಿಕೊಳ್ಳಲು ನೆರವಾಗುವುದು ಮತ್ತು ಚರ್ಮವನ್ನು ತುಂಬಾ ನಯವಾಗಿಸುವುದು.

English summary

How To Get Rid Of Oily Skin

Oily skin can be a result of environmental, genetic and lifestyle factors. Oily skin is difficult to manage, but there are various ways in which you can control oil and get a more balanced skin without dabbing layers of loose powder. One can use natural ingredients like honey, clay, tomatoes etc., to get rid of oily skin.
X
Desktop Bottom Promotion