For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಹೆಚ್ಚಿಸುವ ಚಾಕಲೇಟ್ ಫೇಸ್ ಮಾಸ್ಕ್-ನೀವು ತಿಳಿಯಲೇಬೇಕಾದ ಸಂಗತಿಗಳು

|

ಚಾಕಲೇಟ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರು ಚಾಕಲೇಟ್ ಪ್ರೇಮಿಗಳು. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಚಾಕಲೇಟ್ ನ್ನು ಒಂದಲ್ಲಾ ಒಂದು ರೀತಿಯಲ್ಲಿ ಇಷ್ಟಪಡುವರು. ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಕೂಡ ಇದೆ ಎಂದು ಹೇಳಲಾಗುತ್ತದೆ. ಕಡು ಬಣ್ಣದ ಚಾಕಲೇಟ್ ತಿಂದರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಅದೇ ರೀತಿಯಲ್ಲಿ ಚಾಕಲೇಟ್ ಅತಿಯಾದರೆ ಅದು ಅಪಾಯವನ್ನು ತಂದೊಡ್ಡಬಹುದು. ಅದರಲ್ಲೂ ಮಕ್ಕಳಿಗೆ ಮಿತವಾಗಿ ಚಾಕಲೇಟ್ ನೀಡಬೇಕು. ಇನ್ನು ಹುಡುಗಿಯರ ವಿಚಾರಕ್ಕೆ ಬಂದರೆ ಚಾಕಲೇಟ್ ತಿನ್ನಲು ಮತ್ತು ಅವರ ಅಂದವನ್ನು ಹೆಚ್ಚಿಸಲು ನೆರವಾಗುವುದು. ಹೌದು, ಚಾಕಲೇಟ್ ಮಾಸ್ಕ್ ನ್ನು ಬಳಸಿಕೊಂಡು ತ್ವಚೆಗೆ ಆಳವಾಗಿ ತೇವಾಂಶ ನೀಡಬಹುದು ಮತ್ತು ಇದು ಚರ್ಮಕ್ಕೆ ಪೋಷಣೆ ನೀಡುವುದು. ಸೌಂದರ್ಯ ಹೆಚ್ಚು ಮಾಡಲು ಚಾಕಲೇಟ್ ನ್ನು ಬಳಸುವುದು ಹೇಗೆ ಎಂದು ಈ ಲೇಖನದ ಮೂಲಕ ತಿಳಿಯುವ...

chocolate mask

ಚಾಕಲೇಟ್ ಫೇಸ್ ಮಾಸ್ಕ್ ಬಳಸಿಕೊಳ್ಳುವ ಲಾಭಗಳು

ಚಾಕಲೇಟ್ ನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಚರ್ಮವು ತೇವಾಂಶದಿಂದ ಇರುವಂತೆ ಮತ್ತು ಮೊಶ್ಚಿರೈಸ್ ಆಗಿ ಇಡುವುದು. ಒರಟು ಮತ್ತು ಒಣ ಚರ್ಮದ ಸಮಸ್ಯೆಯಿದ್ದರೆ ಆಗ ನೀವು ಚಾಕಲೇಟ್ ಫೇಸ್ ಮಾಸ್ಕ್ ಬಳಸಬಹುದು. ಇದು ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು ಮತ್ತು ದಿನವಿಡಿ ಚರ್ಮವನ್ನು ತೇವಾಂಶದಿಂದ ಇಡುವುದು. 15ಕ್ಕೆ ಒಂದು ಸಲ ನೀವು ಚಾಕಲೇಟ್ ಚಿಕಿತ್ಸೆ ನೀಡಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಚರ್ಮಕ್ಕೆ ಪೋಷಣೆ ನೀಡುವುದು

ಚಾಕಲೇಟ್ ಮಾಸ್ಕ್ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುವುದು. ಇದರಲ್ಲಿ ವಿಟಮಿನ್ ಗಳು ಖನಿಜಾಂಶಗಳಿದ್ದು, ಚರ್ಮಕ್ಕೆ ಲಾಭಕಾರಿ ಆಗಿದೆ. ಇದು ವಯಸ್ಸಾಗುವ ಲಕ್ಷಣದ ವಿರುದ್ಧ ಹೋರಾಡುವುದು ಮತ್ತು ಒಣ ಚರ್ಮ, ಗಡಸು ಚರ್ಮ, ಕಪ್ಪು ಕಲೆ ಮತ್ತು ಇತರ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು. ಬಿಸಿಲಿನಲ್ಲಿ ಇರುವಂತಹ ಹಾನಿಕಾರಕವಾಗಿರುವಂತಹ ಯುವಿ ಕಿರಣಗಳಿಂದ ಅದು ರಕ್ಷಣೆ ನೀಡುವುದು. ಕಲುಷಿತ ವಾತಾವರಣ ಮತ್ತು ಹವಾಮಾನದಿಂದಲೂ ಇದು ರಕ್ಷಿಸುವುದು. ಇದರಲ್ಲಿ ಟ್ರಿಪ್ಟೊಪಾನ್ ಇರುವ ಕಾರಣದಿಂದಾಗಿ ಇದು ಚರ್ಮದ ರಕ್ಷಣೆ ಮಾಡುವುದು.

ಚರ್ಮದ ಬಣ್ಣವನ್ನು ವೃದ್ಧಿಸುವುದು

ಚರ್ಮದ ಬಣ್ಣವನ್ನು ವೃದ್ಧಿಸಬೇಕು ಎಂದಾಗಿದ್ದರೆ ಆಗ ನೀವು ಚಾಕಲೇಟ್ ಮಾಸ್ಕ್ ಬಳಸಿಕೊಳ್ಳಿ. ಇದರಲ್ಲಿ ಇರುವಂತಹ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮದಲ್ಲಿನ ಕೋಶಗಳನ್ನು ಉತ್ತೇಜಿಸುವುದು ಮತ್ತು ವರ್ಣದ್ರವ್ಯ ಕುಂದುವುದನ್ನು ಕಡಿಮೆ ಮಾಡುವುದು.

Most Read: ಒಮ್ಮೆ ಚಾಕಲೇಟ್ ಫೇಸ್ ಮಾಸ್ಕ್ ಬಳಸಿ ನೋಡಿ...

ಅದ್ಭುತವಾದ ಮೊಶ್ಚಿರೈಸರ್

ಒಣ ಚರ್ಮದಿಂದಾಗಿ ಚರ್ಮವು ತುಂಬಾ ನಿಸ್ತೇಜ ಹಾಗೂ ದುರ್ಬಲವಾಗಿ ಕಾಣಿಸುವುದು. ಇದರ ಬಗ್ಗೆ ಸರಿಯಾಗಿ ಕಾಳಜಿ ವಹಿಸದರೆ ಇದ್ದರೆ ಆಗ ಸೌಂದರ್ಯ ಕೆಡುವುದು. ಚಾಕಲೇಟ್ ಫೇಸ್ ಮಾಸ್ಕ್ ಒಣಚರ್ಮದ ಆರೈಕೆಗೆ ಅದ್ಭುತವಾಗಿ ಕೆಲಸ ಮಾಡುವುದು. ಚಾಕಲೇಟ್ ನಲ್ಲಿ ಇರುವಂತಹ ಕೆಲವೊಂದು ಅಂಶಗಳು ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು ಮತ್ತು ಕಾಂತಿಯುತವಾಗಿ ಕಾಣುವಂತೆ ಮಾಡುವುದು.

ವಯಸ್ಸಾಗುವ ಲಕ್ಷಣಗಳನ್ನು ಇದು ತಡೆಯವುದು, ಚರ್ಮದಲ್ಲಿನ ವಿಷಕಾರಿ ಅಂಶ ಹೊರಹಾಕುವುದು, ಮೊಡವೆ ನಿವಾರಿಸುವುದು, ಚರ್ಮವನ್ನು ನಯವಾಗಿಸುವುದು, ಸತ್ತ ಚರ್ಮದ ಕೋಶ ತೆಗೆಯುವುದು ಮತ್ತು ಚರ್ಮವನ್ನು ಪುನರ್ಶ್ಚೇತನಗೊಳಿಸುವುದು.
ಚಾಕಲೇಟ್ ಫೇಸ್ ಮಾಸ್ಕ್ ಬಳಸುವ ಮೊದಲು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬೇರೆಲ್ಲಾ ಚಾಕಲೇಟ್ ಗಿಂತ ಕಡು ಚಾಕಲೇಟ್ ತುಂಬಾ ಒಳ್ಳೆಯದು ಮತ್ತು ಚಾಕಲೇಟ್ ಮಾಸ್ಕ್ ನಿಂದ ಹೆಚ್ಚಿನ ಲಾಭ ಪಡೆದುಕೊಳ್ಳಲು ಕಡು ಬಣ್ಣದ ಚಾಕಲೇಟ್ ಆಯ್ಕೆ ಮಾಡುವುದು ಒಳ್ಳೆಯದು. ಚಾಕಲೇಟ್ ಕೆಲವರ ಚರ್ಮಕ್ಕೆ ಅಲರ್ಜಿ ಉಂಟು ಮಾಡುವ ಕಾರಣದಿಂದಾಗಿ ಇದನ್ನು ದೇಹದ ಬೇರೆ ಭಾಗಕ್ಕೆ ಹಚ್ಚಿ ಪರೀಕ್ಷೆ ಮಾಡಿಕೊಳ್ಳಿ. ಕಣ್ಣುಗಳ ಸೂಕ್ಷ್ಮತೆ ಬಗ್ಗೆ ಗಮನಹರಿಸಿ. ಕಣ್ಣಿನ ಸುತ್ತಲು ಫೇಸ್ ಮಾಸ್ಕ್ ಧರಿಸಬೇಡಿ.

ಚಾಕಲೇಟ್ ಮಾಸ್ಕ್ ನ್ನು ಕೂದಲಿಗೆ ಬಳಸುವ ಲಾಭಗಳು

ಕೂದಲಿನ ಆರೈಕೆ ಮಾಡುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತುಂಬಾ ಸವಾಲಿನ ಕೆಲಸವಾಗಿದೆ. ಯಾವುದನ್ನು ಬಳಸಬೇಕು? ಯಾವ ಉತ್ಪನ್ನ ಕೂದಲಿನ ಆರೈಕೆಗೆ ಒಳ್ಳೆಯದು? ಈ ಎಲ್ಲಾ ಕೂದಲಿನ ಸಮಸ್ಯೆಯಿಂದ ನೀವು ಪರಿಹಾರ ಹೇಗೆ ಕಂಡುಕೊಳ್ಳುವಿರಿ? ಹಲವಾರು ಪ್ರಶ್ನೆಗಳು ಬರುತ್ತಲೇ ಇರುತ್ತದೆ ಮತ್ತು ಕೂದಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ತುಂಬಾ ಕಷ್ಟವಾಗಿರುವುದು.

Most Read: ತಕ್ಷಣಕ್ಕೆ ಹೊಳಪಿನ ತ್ವಚೆ ನೀಡುವ ಚಾಕಲೇಟ್ ಫೇಸ್ ಮಾಸ್ಕ್

ಕೂದಲಿನ ಆರೈಕೆಗೆ ಚಾಕಲೇಟ್ ಮಾಸ್ಕ್ ಹೇಗೆ ನೆರವಾಗುವುದು ಎಂದು ನಿಮಗೆ ಅಚ್ಚರಿಯಾಗುತ್ತಿರಬಹುದು. ಚಾಕಲೇಟ್ ಮಾಸ್ಕ್ ನ್ನು ಬಳಸಿಕೊಂಡು ಕೂದಲಿನ ಆರೈಕೆಯನ್ನು ಉತ್ತಮ ರೀತಿಯಲ್ಲಿ ಮಾಡುವುದು ಹೇಗೆ ಎಂದು ನೀವು ತಿಳಿಯಬಹುದು. ಆ್ಯಂಟಿಆಕ್ಸಿಡೆಂಟ್, ಖನಿಜಾಂಶಗಳು ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿರುವಂತಹ ಚಾಕಲೇಟ್ ಉದ್ದ ಮತ್ತು ದಪ್ಪಗಿನ ಕೂದಲು ಪಡೆಯಲು ನೆರವಾಗುವುದು. ತಲೆಬುರುಡೆಯು ಕಿರಿಕಿರಿ ಉಂಟು ಮಾಡುತ್ತಲಿದ್ದರೆ, ತಲೆಹೊಟ್ಟು ಇದ್ದರೆ, ಕೂದಲು ಹಾನಿಗೀಡಾಗಿದ್ದರೆ, ವಿಟಮಿನ್ ಕೊರತೆ ಅಥವಾ ಕೂದಲು ಉದುರುವಿಕೆ ಸಮಸ್ಯೆಯಿದ್ದರೆ ಆಗ ಎಲ್ಲದಕ್ಕೂ ಒಂದೇ ಪರಿಹಾರವಿದೆ.

ಹೌದು, ಚಾಕಲೇಟ್ ಮಾಸ್ಕ್ ನ್ನು ಬಳಸಿಕೊಂಡರೆ ಆಗ ನಿಮ್ಮೆಲ್ಲಾ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗುವುದು. ಇನ್ನು ತಡ ಮಾಡುವುದು ಯಾಕೆ? ನೀವು ತಕ್ಷಣವೇ ಕಡು ಚಾಕಲೇಟ್ ತಂದು ಅದರಿಂದ ಮಾಸ್ಕ್ ತಯಾರಿಸಿಕೊಳ್ಳಿ ಮತ್ತು ಅದನ್ನು ತ್ವಚೆ ಹಾಗೂ ಕೂದಲಿಗೆ ಬಳಸಿಕೊಳ್ಳಿ.

English summary

Beauty benefits of chocolate mask you must know

Chocolate works as healing agent whenever you feel low or stressed. Products made up of chocolates are loved by everyone. But do you know, chocolate not only tastes good but it also deeply hydrates and nourishes skin.Chocolates, especially the dark ones are loaded with beauty and health benefits. Here are some amazing benefits of using chocolate mask which will enhance your beauty
X
Desktop Bottom Promotion