For Quick Alerts
ALLOW NOTIFICATIONS  
For Daily Alerts

ಮುಖದ ಕಾಂತಿ ಹೆಚ್ಚಿಸಲು 5 ಬಗೆಯ ಹಣ್ಣುಗಳ ಫೇಸ್ ಪ್ಯಾಕ್ ರೆಡಿ!!

|

ಬಿರು ಬಿಸಿಲಿನ ಬೇಸಿಗೆ ಹತ್ತಿರ ಬರುತ್ತಿದೆ. ಬರುಬರುತ್ತಾ ಶೆಕೆಯ ಅನುಭವ ಬೇರೆ. ಬಿಸಿಲಿಗೆ ನಮ್ಮನ್ನು ಮಾತ್ರ ರಕ್ಷಿಸಿಕೊಳ್ಳುವುದಲ್ಲದೆ ಆ ಸೂರ್ಯನಿಗೇ ಚಾಲೆಂಜ್ ಮಾಡಿ, ನಮ್ಮ ಮುಖದ ಕಾಂತಿ ಕುಗ್ಗದಂತೆ ಕಾಪಾಡಿಕೊಳ್ಳುವುದು ಸಹ ನಮ್ಮೆಲ್ಲರ ಆದ್ಯ ಕರ್ತವ್ಯ . ಮುಖದ ಚರ್ಮ ಬಾಡಿ ಹೋಗದಿರಲು ಅನೇಕರು ಸ್ಕಿನ್ ಲೋಷನ್‌ಗಳ ಮೊರೆ ಹೋಗುವುದೂ ಉಂಟು. ಆದರೆ ಹಣ ವ್ಯಯ ಮಾಡಿ ಸುಮ್ಮನಾಗಿರುತ್ತಾರೆ. ಏಕೆಂದರೆ ಅವುಗಳಿಂದ ಉಪಯೋಗಕ್ಕಿಂತ ಕೆಲವೊಮ್ಮೆ ಅಪಾಯವೇ ಜಾಸ್ತಿ. ಇದಕ್ಕೆ ಕಾರಣ ಮನುಷ್ಯನ ಚರ್ಮದಲ್ಲಿನ ವ್ಯತ್ಯಯ. ಒಬ್ಬರ ಮೈ ಚರ್ಮದ ಗುಣ ಲಕ್ಷಣ ಇದ್ದಂತೆ ಇನ್ನೊಬ್ಬರ ಚರ್ಮ ಇರುವುದಿಲ್ಲ ಹಾಗಾಗಿಯೇ ಯಾವುದೇ ವ್ಯದ್ಯಕೀಯ ಸಲಹೆಗಳಿಲ್ಲದೆ ಉಪಯೋಗಿಸುವ ಇಂತಹ ಲೋಷನ್ ಗಳು ಅಪಾಯವಲ್ಲದೆ ಮತ್ತೇನು ?

Fresh Fruit Face Packs

ಆದರೆ ನೈಸರ್ಗಿಕವಾಗಿ ತಾಜಾ ಸಸ್ಯಾಹಾರಗಳಿಂದ ತಾಯಾರಾಗುವಂತಹ ಫೇಸ್ ಪ್ಯಾಕ್ ಗಳು ಎಂದಿಗೂ ಕೈ ಕೊಡುವುದಿಲ್ಲ ಮತ್ತು ಇವುಗಳಿಂದ ಯಾವ ಅಪಾಯ ಕಾದಿದೆಯೋ ಎಂಬ ಭಯವೂ ಕೂಡ ಇರುವುದಿಲ್ಲ . ಅದರಲ್ಲೂ ಇಂತಹ ಬೇಸಿಗೆಗೆಂತಲೇ ಎಲ್ಲರಿಗೂ ಹೇಳಿ ಮಾಡಿಸಿದಂತಹ ಹಾಗು ಅತ್ಯಮೂಲ್ಯವಾದ ಫೇಸ್ ಪ್ಯಾಕ್ ಗಳು ಇಲ್ಲಿವೆ . ಕೆಲವೊಂದು ಹಣ್ಣುಗಳ ಮಿಶ್ರಣ ಮಾಡಿಕೊಂಡು ತಯಾರು ಮಾಡಿದ ಈ ಫೇಸ್ ಪ್ಯಾಕ್ ಗಳು ನಿಮ್ಮ ಮುಖದ ಹೊಳಪು ಮತ್ತು ಪ್ರಕಾಶತೆಯನ್ನು ಹೆಚ್ಚಿಸಿ ನಿಮ್ಮ ನಂಬಿಕೆ ಗಿಟ್ಟಿಸದೆ ಇರಲಾರವು . ಹಾಗಿದ್ದರೆ ಬನ್ನಿ ಒಂದೊಂದಾಗಿ ತಿಳಿದುಕೊಳ್ಳೋಣ....

ಕಲ್ಲಂಗಡಿ , ಸ್ಟ್ರಾಬೆರಿ ಮತ್ತು ಬ್ಲೂ ಬೆರಿ ಫೇಸ್ ಪ್ಯಾಕ್ ಆಹಾ ಎಂತಾ ಕಾಂಬಿನೇಶನ್ !!!

ಕಲ್ಲಂಗಡಿ , ಸ್ಟ್ರಾಬೆರಿ ಮತ್ತು ಬ್ಲೂ ಬೆರಿ ಫೇಸ್ ಪ್ಯಾಕ್ ಆಹಾ ಎಂತಾ ಕಾಂಬಿನೇಶನ್ !!!

ಓಟ್‍ಮೀಲ್ ನ ಜೊತೆ ಗೂಡಿ ಈ ಹಣ್ಣುಗಳ ಮಿಶ್ರಣದಿಂದ ತಯಾರು ಮಾಡಿದ ಫೇಸ್ ಪ್ಯಾಕ್ ಅಂತೂ ಚರ್ಮಕ್ಕೆ ನೈಸರ್ಗಿಕ ಪೋಷಕಾಂಶಗಳ ಆಗರವೇ ಸರಿ . ಏಕೆಂದರೆ ನಿಮ್ಮ ಮುಖ ಸುಂದರವಾಗಿ ಕಾಣಲು ಬೇಕಾದ ಎಲ್ಲಾ ರೀತಿಯ ವಿಟಮಿನ್ ಗಳು ಇದರಲ್ಲಿವೆ . ಉದಾಹರಣೆಗೆ ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ 'ಎ', ವಿಟಮಿನ್ 'ಬಿ' ಮತ್ತು ವಿಟಮಿನ್ 'ಸಿ' ಇರುವುದರಿಂದ , ನಿಮ್ಮ ಚರ್ಮ ಯಾವಾಗಲೂ ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ ಮತ್ತು ಹೊಳಪನ್ನೂ ಕೊಡುತ್ತದೆ. ಸ್ಟ್ರಾಬೆರಿ ಗಳಲ್ಲಿ ವಿಟಮಿನ್ ' ಸಿ ' ಮತ್ತು ' ಸಾಲಿಸೈಲಿಕ್ ಆಸಿಡ್' ಇರುವುದರಿಂದ ನಿಮ್ಮ ಮುಖದ ಚರ್ಮದ ಮೇಲಿನ ಕಲೆಗಳು ಮತ್ತು ಸಣ್ಣ ಗೆರೆಗಳನ್ನು ನಿವಾರಿಸುತ್ತದೆ . ಬ್ಲೂಬೆರ್ರಿ‌ಗಳಲ್ಲಿ ಆಂಟಿ ಆಕ್ಸಿಡೆಂಟ್ ಗಳು ಬಹಳಷ್ಟಿವೆ. ಇನ್ನು ಓಟ್ ಮೀಲ್ ನ ವಿಷಯಕ್ಕೆ ಬಂದರೆ ಮುಖದ ಚರ್ಮವನ್ನು ನುಣುಪಾಗಿಸಲು ಸಹಾಯ ಮಾಡುತ್ತದೆ . ಈ ಫೇಸ್ ಪ್ಯಾಕ್ ತಯಾರು ಮಾಡುವ ವಿಧಾನಕ್ಕೆ ಬರುವುದಾದರೆ ಮೊದಲು ಕಲ್ಲಂಗಡಿ ಹಣ್ಣು ( ಬೀಜಗಳನ್ನು ತೆಗೆದಿರುವ ) , ಸ್ಟ್ರಾಬೆರಿ ಮತ್ತು ಬ್ಲೂ ಬೆರಿ ಇವುಗಳನ್ನು ಮಿಕ್ಸರ್ ನಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ . ನಂತರ ರುಬ್ಬಿಕೊಂಡ ಮಿಶ್ರಣಕ್ಕೆ ಓಟ್ ಮೀಲ್ ಪೌಡರ್ ಅನ್ನು ಬೆರೆಸಿ ಫೇಸ್ ಪ್ಯಾಕ್ ನ ಹದಕ್ಕೆ ಬರುವ ಹಾಗೆ ಚೆನ್ನಾಗಿ ಕಲಸಿಕೊಳ್ಳಿ . ಇದನ್ನು ಕೈನಲ್ಲಿ ತೆಗೆದುಕೊಂಡು ಅಥವಾ ಫೇಸ್ ಬ್ರಷ್ ನ ಸಹಾಯದಿಂದ ಮುಖದ ಮೇಲೆ ಸುರಳಿಯಾಕಾರ ಬರುವಂತೆ ನಿಧಾನವಾಗಿ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಫೇಸ್ ಪ್ಯಾಕ್ ತೆಗೆದು ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ . ಕನ್ನಡಿ ಮುಂದೆ ನಿಂತರೆ ಬಾಡಿ ಹೋಗಿದ್ದ ನಿಮ್ಮ ಮುಖ ಮಲ್ಲಿಗೆ ಹೂವಿನಂತೆ ಅರಳಿ ಕಾಂತಿಯುಕ್ತವಾಗಿರುತ್ತದೆ.

Most Read: ಮಾವಿನ ಹಣ್ಣಿನ ಪಲ್ಪ್‌‌ ಫೇಸ್ ಪ್ಯಾಕ್- ಮನೆಯಲ್ಲಿಯೇ ಸರಳವಾಗಿ ಮಾಡಿ ನೋಡಿ

ಸ್ಟ್ರಾಬೆರಿ ಮತ್ತು ಪಪಾಯ ಹಣ್ಣಿನ ಫೇಸ್ ಪ್ಯಾಕ್

ಸ್ಟ್ರಾಬೆರಿ ಮತ್ತು ಪಪಾಯ ಹಣ್ಣಿನ ಫೇಸ್ ಪ್ಯಾಕ್

ಈ ಫೇಸ್ ಪ್ಯಾಕ್ ನಲ್ಲಿ ವಿಟಮಿನ್ 'ಎ' ಅಂಶ ಹೇರಳವಾಗಿದೆ. ಮುಖದ ಚರ್ಮ ಎಂತಹ ರಣ ಬಿಸಿಲಿಗೂ ಬಾಡದಂತೆ ನೋಡಿಕೊಳ್ಳುತ್ತದೆ . ಈ ಫೇಸ್ ಪ್ಯಾಕ್ ಮಾಡಲು ಅಗತ್ಯವಾದ ಪಪಾಯ ಮತ್ತು ಸ್ಟ್ರಾಬೆರಿ ಹಣ್ಣಿನ ಚೂರುಗಳನ್ನು ಚೆನ್ನಾಗಿ ಮ್ಯಾಶ್ ಮಾಡಿ . ಅದು ಫೇಸ್ ಪ್ಯಾಕ್ ನ ಸ್ಥಿರತೆ ಕಾಯ್ದುಕೊಳ್ಳುವಂತೆ ಹಾಲಿನ ಪೌಡರ್ ಹಾಕಿ ಮಿಶ್ರಣ ಮಾಡಿ . ಅದನ್ನು ತೆಗೆದುಕೊಂಡು ಮುಖದ ಮೇಲೆ ಚೆನ್ನಾಗಿ ಮಸಾಜ್ ಮಾಡಿ. ಸುಮಾರು 8 ನಿಮಿಷಗಳವರೆಗೆ ಹಾಗೇ ಬಿಡಿ. ನಂತರ ಒಂದು ಶುದ್ಧವಾದ ಒದ್ದೆ ಬಟ್ಟೆಯಲ್ಲಿ ಅದನ್ನು ಒರೆಸಿ , ತಣ್ಣನೆಯ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಮೊದಲೇ ಹೇಳಿದಂತೆ ಇದರಿಂದ ಮುಖದ ಚರ್ಮ ಬಾಡುವುದಿಲ್ಲ ಮತ್ತು ಸುಕ್ಕು ಬಂದಂತಹ ಅನುಭವ ಆಗುವುದಿಲ್ಲ .

ಕಿವಿ ಹಣ್ಣು ಮತ್ತು ಅವಕ್ಯಾಡೊವಿನ ಫೇಸ್ ಪ್ಯಾಕ್

ಕಿವಿ ಹಣ್ಣು ಮತ್ತು ಅವಕ್ಯಾಡೊವಿನ ಫೇಸ್ ಪ್ಯಾಕ್

ನಮಗೆಲ್ಲ ಗೊತ್ತಿರುವ ಹಾಗೇ ಕಿವಿ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಉಪಯೋಗ . ಅದರಲ್ಲಿ ಆರೋಗ್ಯಕ್ಕೆ ಬೇಕಾದ ಅನೇಕ ಪೌಷ್ಟಿಕಾಂಶಗಳು ಸೇರಿವೆ . ಬಹುತೇಕ ಜನರು ಇದು ಸ್ವಲ್ಪ ದುಬಾರಿಯಾದರೂ ಸಹ ಇದನ್ನು ಹುಡುಕಿ ತಂದು ಇದರಿಂದ ಜ್ಯೂಸು ಅಥವಾ ಇನ್ನಿತರೇ ಹಣ್ಣುಗಳ ಜೊತೆ ತಮ್ಮ ದಿನ ನಿತ್ಯದ ಉಪಾಹಾರದಲ್ಲಿ ಸೇರಿಸಿ ಸವಿಯುತ್ತಾರೆ . ಕೇವಲ ತಿನ್ನುವುದಕ್ಕಷ್ಟೇ ಅಲ್ಲದೆ ಇದರಿಂದ ಫೇಸ್ ಪ್ಯಾಕ್ ತಯಾರಿಸಿದರೆ ಚರ್ಮಕ್ಕೂ ಕೂಡ ಅನೇಕ ಲಾಭಗಳಿವೆ . ಕಿವಿ ಹಣ್ಣು ಮತ್ತು ಅವಕ್ಯಾಡೊ ಮಿಶ್ರಿತ ಫೇಸ್ ಪ್ಯಾಕ್ ನಲ್ಲಿ ಆಂಟಿ - ಒಕ್ಸಿಡಾಂಟ್ ಗುಣ ಲಕ್ಷಣವಿದ್ದು ಆಂಟಿ ಏಜಿಂಗ್ ಪ್ರಾಪರ್ಟಿ ಕೂಡ ಇದೆ. ವಿಟಮಿನ್ 'ಎ' , ವಿಟಮಿನ್ ' ಬಿ' ಮತ್ತು ವಿಟಮಿನ್ 'ಸಿ' ಸಹ ಇದರಲ್ಲಿ ಇರುವುದರಿಂದ ವಯಸ್ಸಾದ ಚರ್ಮದಂತೆ ಅಥವಾ ಸುಕ್ಕು ಗಟ್ಟಿದ ಚರ್ಮದಂತೆ ಕಾಣುವುದನ್ನು ಕ್ಷಣ ಮಾತ್ರದಲ್ಲಿ ದೂರ ಮಾಡುತ್ತದೆ. ಇದರ ಫೇಸ್ ಪ್ಯಾಕ್ ತಯಾರು ಮಾಡುವುದು ತುಂಬಾ ಸುಲಭ ಒಂದು ಕಿವಿ ಹಣ್ಣು ಮತ್ತು ಅವಕ್ಯಾಡೊ ವಿನ ತಿರುಳು ತೆಗೆದುಕೊಂಡು ಪೇಸ್ಟ್ ಬರುವ ಹಾಗೇ ಚೆನ್ನಾಗಿ ಮಿಕ್ಸರ್ ನಲ್ಲಿ ರುಬ್ಬಿಕೊಳ್ಳಿ . ಅದಕ್ಕೆ ಒಂದು ಟೀ ಚಮಚದಷ್ಟು ಜೇನು ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ . ಹೀಗೆ ತಯಾರು ಮಾಡಿದ ಫೇಸ್ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ ಸುಮಾರು 20 ನಿಮಿಷಗಳವರೆಗೆ ಹಾಗೇ ಬಿಡಿ ನಂತರ ಮುಖ ತೊಳೆದುಕೊಳ್ಳಿ.

Most Read: ವಾರದೊಳಗೆ ತ್ವಚೆಯ ಕಾಂತಿ ಹೆಚ್ಚಿಸುವ ಜೇನುತುಪ್ಪ ಮತ್ತು ಹಾಲಿನ ಫೇಸ್ ಪ್ಯಾಕ್

ಮಾವು ಮತ್ತು ಪಪಾಯ ಹಣ್ಣಿನ ಫೇಸ್ ಪ್ಯಾಕ್

ಮಾವು ಮತ್ತು ಪಪಾಯ ಹಣ್ಣಿನ ಫೇಸ್ ಪ್ಯಾಕ್

ಈಗಂತೂ ಎಲ್ಲ ಕಡೆ ಮಾವಿನ ಹಣ್ಣು ಬಂದಿದೆ. ಮಾವು ಕೇವಲ ತಿನ್ನಲು ಮಾತ್ರ ರುಚಿಕರವಲ್ಲದೆ ಅದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ನೂರಾರು. ಮಾವಿನ ಹಣ್ಣು ಮತ್ತು ಪಪಾಯ ಹಣ್ಣಿನಲ್ಲಿ ವಿಟಮಿನ್ 'ಎ' ಜೀವಸತ್ವ ಅಡಗಿರುವುದರಿಂದ ಇದರ ಫೇಸ್ ಪ್ಯಾಕ್ ಮುಖದ ಚರ್ಮಕ್ಕೆ ಹೊಸ ಚೈತನ್ಯ ತಂದು ಕೊಡುತ್ತದೆ . ಈ ಫೇಸ್ ಪ್ಯಾಕ್ ತಯಾರು ಮಾಡಲು ಬೇಕಾಗಿರುವ ವಸ್ತುಗಳೆಂದರೆ , ಮಾವಿನ ಹಣ್ಣಿನ ಮತ್ತು ಪಪಾಯ ಹಣ್ಣಿನ ಚೂರುಗಳು , ಸ್ವಲ್ಪ ಮೊಸರು ಮತ್ತು ಸ್ವಲ್ಪ ಜೇನು ತುಪ್ಪ . ಈ ನಾಲ್ಕನ್ನೂ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ನ ಹದಕ್ಕೆ ಬರುವಂತೆ ತಯಾರಿಸಿಕೊಳ್ಳಿ. ತಯಾರಿಸಿದ ಫೇಸ್ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ ಸುಮಾರು 20 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ಮುಖ ತೊಳೆಯಿರಿ .

ಸೇಬು ಹಣ್ಣು ಮತ್ತು ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಸೇಬು ಹಣ್ಣು ಮತ್ತು ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಸೇಬು ಹಣ್ಣು ಮತ್ತು ಕಿತ್ತಳೆ ಹಣ್ಣಿನಲ್ಲಿ ಆಂಟಿ ಓಕ್ಸಿಡೆಂಟ್ ಗುಣಗಳಿದ್ದು , ಇದರಿಂದ ತಯಾರಾದ ಫೇಸ್ ಪ್ಯಾಕ್ ಮುಖದ ಚರ್ಮಕ್ಕೆ ಬೇಕಾದ ಪೋಷ್ಟಿಕಾಂಶಗಳನ್ನು ತಕ್ಷಣ ಕೊಡುತ್ತದೆ. ಸ್ವಲ್ಪ ಸೇಬು ಹಣ್ಣಿನ ಮತ್ತು ಕಿತ್ತಳೆ ಹಣ್ಣಿನ ತೊಳೆಗಳನ್ನು ಮಿಕ್ಸರ್ ಜಾರ್ ನಲ್ಲಿ ಹಾಕಿ. ಇದಕ್ಕೆ ಸ್ವಲ್ಪ ಅರಿಸಿನ ಪುಡಿ ಮತ್ತು ಹಾಲನ್ನು ಬೆರೆಸಿ ಎಲ್ಲವನ್ನೂ ಚೆನ್ನಾಗಿ ರುಬ್ಬಿಕೊಳ್ಳಿ. ಹೀಗೆ ತಯಾರಿಸಿದ ಪೇಸ್ಟ್ ಅನ್ನು ನಿಮ್ಮ ಬಿಡುವಿನ ಸಮಯದಲ್ಲಿ ಮುಖಕ್ಕೆ ಹಚ್ಚಿ. ಇದರ ಉಪಯೋಗದಿಂದ ಮುಖ ಕಾಂತಿಯುಕ್ತವಾಗಿರುವುದಲ್ಲದೆ ನೋಡಲು ಚೆನ್ನಾಗಿ ಕಾಣುತ್ತದೆ ಕೂಡ. ನೋಡಿದಿರಲ್ಲ!!! ಯಾವುದೋ ಕೆಮಿಕಲ್ ಯುಕ್ತ ಫೇಸ್ ಕ್ರೀಮ್ ಗಳಿಗೆ ಹಣ ಸುರಿದು ಸುಮ್ಮನಾಗುವ ಬದಲು ಮನೆಯಲ್ಲೇ ಸುಲಭವಾಗಿ ಸಿಗುವ ಹಣ್ಣುಗಳಲ್ಲಿ ಫೇಸ್ ಪ್ಯಾಕ್ ತಯಾರಿಸಿ ಮಖಕ್ಕೆ ಹಚ್ಚಿದರೆ ಏನೆಲ್ಲಾ ಉಪಯೋಗವಿದೆ ಎಂದು. ಈ ಫೇಸ್ ಪ್ಯಾಕ್ ಗಳನ್ನು ಇಂದೇ ಟ್ರೈ ಮಾಡಿ ಮತ್ತು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ .

English summary

5 Fresh Fruit Face Packs For Glowing Skin

Summers are slowly yet steadily making their way, I can feel the heat already. It’s also the time to give refreshing treats to the skin as a respite from the scorching heat. One of the best ways to rejuvenate your skin during summers is by using fresh fruit face packs and nothing like it if you can make a combo of yummy fruits that would also add glow and radiance to the skin. Here are 5 best fresh fruit face pack combinations that you must try during this season:
X
Desktop Bottom Promotion