For Quick Alerts
ALLOW NOTIFICATIONS  
For Daily Alerts

ವಯಸ್ಕ ಮೊಡವೆ ನಿವಾರಣೆಗೆ ಕೆಲವು ಆರೈಕೆ ವಿಧಾನ

|

ಮೊಡವೆ ಎನ್ನುವುದು ಹದಿಹರೆಯದಲ್ಲಿ ಅಥವಾ ಪ್ರೌಢಾವಸ್ಥೆಗೆ ಕಾಲಿಟ್ಟಾಗ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಉಂಟಾಗುವ ಹಾರ್ಮೋನ್‍ಗಳ ಬದಲಾವಣೆಯಿಂದಾಗಿ ಮುಖದ ಮೇಲೆ ಹಾಗೂ ಕೆಲವರಿಗೆ ದೇಹದ ಮೇಲೂ ಕಾಣಿಸಿಕೊಳ್ಳುವುದು. ಒಂದು ಬಗೆಯ ನೋವು ಹಾಗೂ ಕಿರಿಕಿರಿಯನ್ನು ಉಂಟುಮಾಡುವ ಈ ಮೊಡವೆ ನಿವಾರಣೆ ಅಷ್ಟು ಸುಲಭವಲ್ಲ. ಅದರ ಬಗ್ಗೆ ಸೂಕ್ತ ಕಾಳಜಿವಹಿಸದಿದ್ದರೂ ಇದು ದ್ವಿಗುಣವಾಗುತ್ತಾ ಸಾಗುವುದು. ಅಲ್ಲದೆ ಮೊಡವೆ ಉಂಟಾದ ಜಾಗದಲ್ಲಿ ಕುಳಿ ಮತ್ತು ಕಲೆ ಉಂಟಾಗುವುದು ಸಹಜ. ಇದರಿಂದ ಮುಖದ ಸೌಂದರ್ಯ ಹಾಗೂ ಆಕರ್ಷಣೆ ಕಡಿಮೆಯಾಗುವುದು.

ಮೊಡವೆ ಸಮಸ್ಯೆಗೆ ಮನೆಮದ್ದುಗಳು- ಒಂದೇ ದಿನದಲ್ಲಿ ಮಂಗಮಾಯ!

What To Do When You Get Adult Acne

ಮೊಡವೆ ಕೇವಲ ಪ್ರೌಢಾವಸ್ಥೆಯಲ್ಲಿ ಇರುವಾಗಷ್ಟೇ ಅಲ್ಲ. ವಯಸ್ಕರಲ್ಲೂ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇದು ಸಹ ಹಾರ್ಮೋನ್ ಬದಲಾವಣೆಯಿಂದಲೇ ಉಂಟಾಗುವುದು ಎನ್ನಲಾಗುತ್ತದೆ. ಕೆಲವು ಬಾರಿ ಮಾಲಿನ್ಯ, ಧೂಳು, ಚರ್ಮದಲ್ಲಿ ಸಂಗ್ರಹವಾದ ಕೊಳೆ ಹಾಗೂ ಇನ್ನಿತರ ಕಾರಣಗಳಿಂದಲೂ ಕಾಣಿಸಿಕೊಳ್ಳುವುದು. ಪ್ರೌಢಾವಸ್ಥೆಯ ಮೊಡವೆಗೆ ಹೋಲಿಸಿದರೆ ಇದೊಂದು ಮೊಂಡಾದ ಅಥವಾ ಕಠಿಣವಾದ ಮೊಡವೆ ಎನ್ನಬಹುದು. ಇಂತಹ ಮೊಡವೆಯಿಂದ ನೀವು ಬಳಲುತ್ತಿದ್ದರೆ, ಅದರ ನಿವಾರಣೆ ಹಾಗೂ ಆರೈಕೆ ವಿಧಾನವನ್ನು ಈ ಮುಂದಿನ ವಿವರಣೆ ನೋಡಿ ಅರಿಯಿರಿ.

ಸೂಕ್ತವಾದ ಉತ್ಪನ್ನಗಳ ಖರೀದಿಸಿ

ಸೂಕ್ತವಾದ ಉತ್ಪನ್ನಗಳ ಖರೀದಿಸಿ

ನೀವು ಮೊಡವೆ ಹೊಂದಿರುವ ವಯಸ್ಕರಾಗಿದ್ದರೆ ಅದರ ಬಗ್ಗೆ ಸೂಕ್ತ ಆರೈಕೆ ಹಾಗೂ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮೊಡವೆ ನಿಮ್ಮ ಮುಖಕ್ಕೆ ಕೆಟ್ಟದಾಗಿ ಗೋಚರಿಸಬಹುದು. ಅದರ ಬಗ್ಗೆ ಚಿಂತಿಸದೆ ನೀವು ಬಳಸುವ ಕ್ರೀಮ್‍ಗಳಂತಹ ಉತ್ಪನ್ನಗಳ ಆಯ್ಕೆ ಸೂಕ್ತವಾಗಿರುವಂತೆ ನೋಡಿ. ಕ್ರೀಮ್‍ಗಳಲ್ಲಿ ಸ್ಯಾಲಿಸಿಕ್ ಆಮ್ಲ, ಗ್ಲೈಕೊಲಿಕ್ ಆಮ್ಲ್ ಮತ್ತು ಇತರ ಆಲ್ಫಾಹೈಡ್ರಾಕ್ಸಿ ಆಮ್ಲಗಳಿಂದ ಕೂಡಿದೆಯೇ ಎಂದು ಪರೀಕ್ಷಿಸಿ.

ಸ್ಪಾಟ್ ಚಿಕಿತ್ಸೆ

ಸ್ಪಾಟ್ ಚಿಕಿತ್ಸೆ

ವಿಶ್ವಾಸಾರ್ಹ ಬ್ರ್ಯಾಂಡ್‍ನಿಂದ ಚಿಕಿತ್ಸೆಯನ್ನು ಪಡೆಯಿರಿ. ಸ್ಪಾಟ್ ಚಿಕಿತ್ಸೆಯನ್ನು ಸೂಕ್ತರೀತಿಯಲ್ಲಿ ಮಾಡಿಸಬೇಕಾಗುತ್ತದೆ. ಇಲ್ಲವಾದರೆ ಬ್ಯಾಕ್ಟೀರಿಯಾಗಳ ಸಂಗ್ರಹ ತಣವಾಗುವುದು. ಮೊಡವೆಗಳು ದ್ವಿಗುಣವಾಗಲು ಕಾರಣವಾಗಬಹುದು. ಸೂಕ್ತ ರೀತಿಯಲ್ಲಿ ಬ್ಯಾಕ್ಟೀರಿಯಾಗಳ ನಿರ್ಮೂಲನೆ ಆಗದಿದ್ದಲ್ಲಿ ಮೊಡವೆಗಳನ್ನು ಬಹುಬೇಗ ನಿವಾರಿಸಬಹುದು. ಬ್ಯಾಕ್ಟೀರಿಯಗಳು ಹಾಗೇ ಅಡಿಯಲ್ಲಿ ಉಳಿದು ಹೋಗಿದ್ದರೆ ಸ್ಪಾಟ್ ಸಮಸ್ಯೆ ಪುನಃ ಮರುಕಳಿಸುವ ಸಾಧ್ಯತೆಗಳಿರುತ್ತವೆ.

ಮಣ್ಣಿನ ಮಾಸ್ಕ್!

ಮಣ್ಣಿನ ಮಾಸ್ಕ್!

ಮೊಡವೆ ಹೊಂದಿರುವ ವಯಸ್ಕರಿಗೆ ಮಣ್ಣಿನ ಮುಖವಾಡವು ಉತ್ತಮ ಆರೈಕೆ ನೀಡುವುದು. ಮಣ್ಣಿನ ಮಾಸ್ಕ್ ಗೆ ಇದ್ದಿಲು ಅಥವಾ ಗ್ರೀನ್ ಟೀ ಸೇರಿಸುವುದರ ಮೂಲಕ ಅನ್ವಯಿಸಬಹುದು. ಇದ್ದಿಲು ಮಾಸ್ಕ್ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಮೊಂಡುತನದ ಮೊಡವೆ ಹಾಗೂ ಕಪ್ಪು ಕೂದಲುಗಳನ್ನು ಸುಲಭವಾಗಿ ನಿರ್ಮೂಲನೆ ಮಾಡುವುದು. ಗ್ರೀನ್ ಟೀ ಸೇರಿಸುವುದರಿಂದ ಚರ್ಮದಲ್ಲಿ ಇರುವ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುವುದು. ಜೊತೆಗೆ ಮೊಡವೆಯಿಂದ ಉಂಟಾಗುವ ಉರಿಯೂತವನ್ನು ಶಮನಗೊಳಿಸುವುದು.

ಹಿಚುಕದಿರಿ

ಹಿಚುಕದಿರಿ

ಮೊಡವೆಯಲ್ಲಿರುವ ಬಿಳಿಯ ಕಣವನ್ನು ಹಿಚುಕಿ ತೆಗೆಯುವ ಕೆಲಸವನ್ನು ಮಾಡದಿರಿ. ಹೀಗೆ ಮಾಡುವುದರಿಂದ ಮೊಡವೆಯ ಆವೃತ ಪ್ರದೇಶ ಹೆಚ್ಚಾಗುವುದು. ಅಲ್ಲದೆ ಮೊಡವೆಯಿಂದ ಹೊರ ಬರುವ ಕೀವು ಚರ್ಮದ ಇತರೆಡೆಯೂ ಮೊಡವೆ ಹುಟ್ಟುವಂತೆ ಮಾಡುವುದು. ಈ ಪ್ರಕ್ರಿಯೆಯಿಂದ ಚರ್ಮದಲ್ಲಿ ಕಪ್ಪುಕಲೆಗಳು ಉಳಿದುಕೊಳ್ಳುವ ಸಾಧ್ಯತೆಗಳಿವೆ.

ಟೀ ಟ್ರೀ ಎಣ್ಣೆ ಬಳಸಿ

ಟೀ ಟ್ರೀ ಎಣ್ಣೆ ಬಳಸಿ

ಟೀ ಟ್ರೀ ಎಣ್ಣೆ ಮೊಡವೆಗಳ ನಿವಾರಣೆಗೆ ಅತ್ಯುತ್ತಮವಾದದ್ದು. ಇದು ತ್ವಚೆಯಮೇಲೆ ಶಾಂತವಾಗಿ ಮತ್ತು ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ. ಒಂದು ವಾರ ನಿಯಮಿತವಾಗಿ ಈ ಎಣ್ಣೆಯಿಂದ ಆರೈಕೆ ಕೈಗೊಂಡರೆ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಅಲ್ಲದೆ ಅವು ಚರ್ಮದಲ್ಲಿ ಉಳಿದುಕೊಳ್ಳುವುದಿಲ್ಲ ಎಂದು ಹೇಳಲಾಗುವುದು.

ಔಷಧಗಳು

ಔಷಧಗಳು

ಕೆಲವೊಮ್ಮೆ ಸಾಮಾನ್ಯವಾದ ಸಾಮೂಹಿಕ ಚಿಕಿತ್ಸೆಗಳು ಪರಿಣಾಮಕಾರಿಯಾದ ಪರಿಣಾಮ ಉಂಟುಮಾಡದು. ಹಾಗಾಗಿ ಚರ್ಮರೋಗ ತಜ್ಞರಲ್ಲಿ ಸಮಸ್ಯೆಗಳ ಬಗ್ಗೆ ಸೂಕ್ತ ಪರೀಕ್ಷೆ ಹಾಗೂ ಸಲಹೆಯನ್ನು ಪಡೆದುಕೊಳ್ಳಬೇಕು. ಆಗ ಸೂಕ್ತ ಔಷಧದೊಂದಿಗೆ ಸಮಸ್ಯೆಯನ್ನು ನಿವಾರಿಸಬಹುದು.

ಎಕ್ಸೋಲಿಯಾಟ್ ಚಿಕಿತ್ಸೆ

ಎಕ್ಸೋಲಿಯಾಟ್ ಚಿಕಿತ್ಸೆ

ಚರ್ಮದ ಮೇಲ್ಮೈ ಯಲ್ಲಿ ಕಾಣಿಸಿಕೊಳ್ಳುವ ಸತ್ತ ಜೀವಕೋಶಗಳನ್ನು ನಿವಾರಿಸಲು ಎಕ್ಸೋಲಿಯಾಟ್ ಚಿಕಿತ್ಸೆ ಪರಿಣಾಮಕಾರಿಯಾಗಿ ಇರುತ್ತದೆ. ಇದು ಚರ್ಮದ ಮೇಲಿರುವ ತ್ಯಾಜ್ಯ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸಿ. ಹೊಸ ಚರ್ಮ ಬರುವಂತೆ ಸಹಾಯ ಮಾಡುತ್ತದೆ. ಗ್ಲೈಕೋಲಿಕ್ ಆಮ್ಲ ಅಥವಾ ಲ್ಯಾಕ್ಟಿಕ್ ಆಮ್ಲ ಹೊಂದಿರುವ ಸಿಪ್ಪೆಗಳಿಂದಲೂ ಆರೈಕೆ ಮಾಡಬಹುದು. ಇದು ತೆರೆದ ರಂಧ್ರಗಳನ್ನು ಮುಚ್ಚಿ ಚರ್ಮವನ್ನು ಟೋನ್ ಮಾಡುತ್ತದೆ.

ರೆಟಿನಾಲ್ ಆಧಾರಿತ ಉತ್ಪನ್ನ

ರೆಟಿನಾಲ್ ಆಧಾರಿತ ಉತ್ಪನ್ನ

ರೆಡಿನಾಲ್ ಎನ್ನುವುದು ವಿಟಮಿನ್ ಎ ವಿಧವಾಗಿದ್ದು, ಅದು ಆಂಟಿ ಏಜಿಂಗ್ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಇದು ಮೊಡವೆಯನ್ನು ನಿವಾರಿಸಿ, ಶುಷ್ಕ ಮತ್ತು ಸತ್ತ ಜೀವಕೋಶಗಳ ನಿವಾರಣೆ ಮಾಡುತ್ತದೆ. ಅಲ್ಲದೆ ಚರ್ಮದ ಮೇಲಿರುವ ಪಿಗ್ಮೆಂಟೇಷನ್ ಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಯಸ್ಕರ ಚರ್ಮದ ಸಮಸ್ಯೆ ಹಾಗೂ ಮೊಡವೆ ನಿವಾರಣೆಗೆ ಇದು ಅತ್ಯುತ್ತಮ ಆರೈಕೆ ನೀಡುವುದು.

Read more about: beauty skin
English summary

What To Do When You Get Adult Acne

Yes, you read that right! Acne is not just something that strikes teenagers. You must have assumed that now since you have grown up, those pesky spots would not come and surprise you anymore. Well, surprise! They are here and they do not plan to go away anytime soon. So, why does adult acne happen? We have been told that acne is something that occurs due to hormonal changes during puberty and our formative years. There are a lot of causes of adult acne.
X
Desktop Bottom Promotion