For Quick Alerts
ALLOW NOTIFICATIONS  
For Daily Alerts

ಕರೀನಾ ಕಪೂರ್ ರವರ ಹೊಳೆಯುವ ತ್ವಚೆಯ ಹಿಂದಿನ ರಹಸ್ಯ

|

ನಾವೆಲ್ಲರೂ ಸಿನಿ ತಾರೆಯರು ಹಾಗೂ ಪ್ರಸಿದ್ಧವಾದ ವ್ಯಕ್ತಿಗಳನ್ನು ಅನುಕರಿಸುವುದನ್ನು ಇಷ್ಟಪಡುತ್ತೇವೆ.ಅವರ ಸೂಪರ್-ಸ್ಟೈಲಿಶ್ ಬಟ್ಟೆ, ಅಲಂಕಾರಿಕ ಶೂಗಳು, ಸುಂದರವಾದ ಮೇಕಪ್ ಅಥವಾ ಕೇಶವಿನ್ಯಾಸ ಇವೆಲ್ಲವನ್ನೂ ನಾವು ನಮ್ಮ ಜೀವನದಲ್ಲಿ ಒಮ್ಮೆಯಾದರೂ ಅನುಕರಿಸಿಯೇ ಇರುತ್ತೇವೆ ಅಲ್ಲವೇ? ಹೌದು ನಾವೇಕೆ ಮಾಡಬಾರದು? ಅವರು ಯಾವಾಗಲೂ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುತ್ತಾರೆ. ಯಾರು ತಾನೇ ಸುಂದರವಾಗಿ ಮತ್ತು ಅದ್ಭುತವಾಗಿ ಕಾಣುವುದನ್ನು ಇಷ್ಟ ಪಡುವುದಿಲ್ಲ ಹೇಳಿ? ಖಂಡಿವಾಗಿಯೂ ನಾವೆಲ್ಲರೂ ಹಾಗೆ ಆಗಲು ಬಯಸುತ್ತೇವೆ.

ಆದರೆ ಅವರ ದೋಷರಹಿತ ಚರ್ಮ ಅಥವಾ ಸರಿಯಾದ ದೇಹದ ಆಕಾರ ಇದಕ್ಕೆ ಕಾರಣಗಳೇನು ಎಂದು ನಿಮಗೆ ನಿಜವಾಗಿಯೂ ತಿಳಿದಿದೆಯೇ? ನೀವು ತಿಳಿದುಕೊಂಡಿರುವ ಹಾಗೆ ಇದು ಖಂಡಿತವಾಗಿ ಸೌಂದರ್ಯವರ್ಧಕ ಚಿಕಿತ್ಸೆಗಳ ಪ್ರತಿಫಲವಲ್ಲ. ಪ್ರಸಿದ್ಧ ವ್ಯಕ್ತಿಗಳಲ್ಲಿ ಬಹಳಷ್ಟು ಜನ ತಮ್ಮನ್ನು ತಾವೇ ಆರೋಗ್ಯಕರವಾಗಿಟ್ಟು ಕೊಳ್ಳಲು ಸರಳವಾದ ಚರ್ಮದ ರಕ್ಷಣೆಯ ದಾರಿಗಳನ್ನು ಮತ್ತು ಫಿಟ್ನೆಸ್ ದಿನಚರಿಯನ್ನು ಅನುಸರಿಸಲು ಇಷ್ಟಪಡುತ್ತಾರೆ. ಮೇಕಪ್ ಖಂಡಿವಾಗಿಯೂ ಇನ್ನೊಂದು ವಿಷಯ. ಆದರೆ, ಚರ್ಮದರಕ್ಷಣೆ ಅವರಿಗೆ ತುಂಬಾ ಮುಖ್ಯವಾಗಿರುತ್ತದೆ. ಮತ್ತು, ಅವರು ತಮ್ಮ ಚರ್ಮವನ್ನು ಆದ್ರತೆಯಿಂದ ಇರುವಂತೆ ಮತ್ತು ಎಲ್ಲಾ ಸಮಯದಲ್ಲೂ ನೀರಿನಾಂಶ ಚರ್ಮದಲ್ಲಿ ಚೆನ್ನಾಗಿರುವಂತೆ ನೋಡಿಕೊಳ್ಳುತ್ತಾರೆ.

ಈ ಬ್ಯೂಟಿ ಟಿಪ್ಸ್ ಅನುಸರಿಸಿ-ಇನ್ನಷ್ಟು ಸುಂದರವಾಗಿ ಕಾಣುವಿರಿ!

kareena kapoor beauty tips

ಇತ್ತೀಚೆಗೆ, ಎಲ್ಲೆಯೊಂದಿಗೆ ನಡೆದ ಸಂದರ್ಶನವೊಂದರಲ್ಲಿ,ಕರೀನಾ ಕಪೂರ್ ತನ್ನ ಚರ್ಮದ ರಕ್ಷಣೆಗಾಗಿ ಅಡುಗೆ ಮನೆಯಲ್ಲಿರುವ ಮೂಲ ಪದಾರ್ಥಗಳನ್ನು ಬಳಸುತ್ತೇನೆಂದು ಉಲ್ಲೇಖಿಸಿದರು. ಈ ಪದಾರ್ಥಗಳು ಯಾವುವೆಂದು ಮತ್ತು ಅವು ನಿಮ್ಮ ಚರ್ಮಕ್ಕೆ ಯಾವ ಜಾದು ಮಾಡಬಹುದು ಎಂದು ತಿಳಿದುಕೊಳ್ಳಬೇಕೇ? "ನಾನು ನನ್ನ ಮುಖಕ್ಕೆ ಸಾಕಷ್ಟು ಬಾದಾಮಿ ತೈಲ ಮತ್ತು ಮೊಸರು ಬಳಸುತ್ತೇನೆ,ನನ್ನ ಕೂದಲಿಗೆ ಕೂಡಾ ನಾನು ಮೊಸರನ್ನು ಹಚ್ಚುತ್ತೇನೆ,ಆದರೆ ನನ್ನ ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಹಲವು ರೀತಿಯ ಎಣ್ಣೆಗಳ ಮಸಾಜ್ ಅನ್ನು ಪಡೆಯುತ್ತೇನೆ."

ವೀರ್ ದೇ ವೆಡ್ಡಿಂಗ್ ನ ನಟಿ ನಿಮಗೆಲ್ಲಾ ಮನೆಯಲ್ಲೇ ಸಿಗುವ ಪರಿಹಾರಗಳನ್ನು ನಿಮ್ಮ ಚರ್ಮ ರಕ್ಷಣೆಗೆ ಬಳಸಿ ಎಂದು ಹೇಳುತ್ತಾರೆ. "ಸತ್ಯವಾಗಿಯೂ,ನಾನು ನನ್ನ ಚರ್ಮವನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಹಲವು ಉತ್ಪನ್ನಗಳನ್ನು ಬಳಸುವುದಿಲ್ಲ. ನೀವು ಒಬ್ಬ ಸಕಾರಾತ್ಮಕ ವ್ಯಕ್ತಿಯಾಗಿರುವುದು ನಿಜವಾಗಿಯೂ ಈ ವಿಷಯದಲ್ಲಿ ಸಹಾಯ ಮಾಡುತ್ತದೆ. ನೀವು ಮನಮೋಹಕವಾಗಿ ಕಾಣಬೇಕಾದರೆ ಮೊದಲು ನೀವು ಖುಷಿಯಾಗಿ ಇರಬೇಕೆಂಬುದನ್ನು ನೆನಪಿಟ್ಟುಕೊಳ್ಳಿ. ಆಗ ನಿಮ್ಮ ವ್ಯಕ್ತಿತ್ವಕ್ಕ್ಕೆ ಒಳಗಿಂದಲೇ ಹೊಳಪು ಬರುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.

ದೋಷರಹಿತ ಚರ್ಮಕ್ಕಾಗಿ ನೀವೇ ತಯಾರಿಸಿಕೊಳ್ಳಬಹುದಾದ ಮೊಸರಿನ ಫೇಸ್ ಪ್ಯಾಕ್

ಬೇಕಾಗಿರುವ ಪದಾರ್ಥಗಳು:

•2ಚಮಚ ಮೊಸರು
•1 ಚಮಚ ಬಾದಾಮಿ ತೈಲ
• ಒಂದು ಚಿಟಿಕೆ ಅರಿಶಿನ
• ಜೇನುತುಪ್ಪದ ಕೆಲವು ಹನಿಗಳು

ತಯಾರಿಸುವ ವಿಧಾನ

ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಮೊಸರನ್ನು ಸೇರಿಸಿ.ಅದಕ್ಕೆ ಅರಿಶಿನ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಬೆರೆಸಿ.ಕೊನೆಗೆ ಬಾದಾಮಿ ಎಣ್ಣೆಯನ್ನು ಸೇರಿಸಿ ಅದನ್ನು ಸರಿಯಾದ ಪೇಸ್ಟ್ ಆಗುವವರೆಗೆ ಚೆನ್ನಾಗಿ ಕಲಸಿ.ನಿಮ್ಮ ಮುಖದ ಮೇಲೆ ಅದನ್ನು ಹಚ್ಚುವ ಮೊದಲು ಕೆಲವು ನಿಮಿಷಗಳವರೆಗೆ ಮಿಶ್ರಣವನ್ನು ಹಾಗೆಯೇ ಬಿಡಿ.ಶುದ್ಧವಾದ ನೀರಿನಿಂದ ನಿಮ್ಮ ಮುಖವನ್ನು ತೊಳೆದ ನಂತರ ನಿಮ್ಮ ಮುಖದ ಮೇಲೆ ಈ ಮಿಶ್ರಣವನ್ನು ಹಚ್ಚಿರಿ.ಆದರೆ ಕಣ್ಣುಗಳು,ಕಿವಿಗಳು ಮತ್ತು ಬಾಯಿಯ ಬಳಿ ಹಚ್ಚುವುದರಿಂದ ದೂರವಿರಿ. ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ಮಿಶ್ರಣವನ್ನು ಒಂದೇ ರೀತಿಯಲ್ಲಿ ಹಚ್ಚಿರಿ. ನಿಮ್ಮ ಮುಖ ಮತ್ತು ಕುತ್ತಿಗೆಯ ಚರ್ಮದ ಟೋನ್ ಒಂದೇ ಆಗಿರುತ್ತದೆ ಆದ್ದರಿಂದ ಕುತ್ತಿಗೆಯ ಮೇಲೂ ಕೂಡ ನೀವು ಪ್ಯಾಕ್ ಅನ್ನು ಹಾಕುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. 20 ನಿಮಿಷಗಳ ಕಾಲ ಅದನ್ನು ಒಣಗಲು ಬಿಡಿ. ನಂತರ ನೀರಿನಲ್ಲಿ ತೊಳಿಯಿರಿ. ಶುದ್ಧವಾದ ಬಟ್ಟೆಯಲ್ಲಿ ನಿಮ್ಮ ಮುಖವನ್ನು ಒರೆಸಿಕೊಳ್ಳಿ

ಗಮನಿಸಬೇಕಾದ ವಿಷಯ

ಫೇಸ್ ಪ್ಯಾಕ್ ಅನ್ನು ಹಚ್ಚಿದ ನಂತರ ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಫೇಸ್ ವಾಷ್ ಅನ್ನು ಬಳಸಬೇಡಿ.ಇದರಿಂದ ಫೇಸ್ ಪ್ಯಾಕ್ನ ಪರಿಣಾಮ ಕಡಿಮೆಯಾಗುತ್ತದೆ. ಸೂಕ್ಷ್ಮ ಚರ್ಮ ಹೊಂದಿರುವವರು ಮೊದಲು ತಮ್ಮ ಮುಂಗೈ ಮೇಲೆ ಈ ಫೇಸ್ ಪ್ಯಾಕ್ ಅನ್ನು ಹಚ್ಚಿ 24 ಗಂಟೆಯ ಕಾಲ ಕಾಯಬೇಕು. ಇದರಿಂದ ನಿಮ್ಮ ಚರ್ಮಕ್ಕೆ ಯಾವುದೇ ರೀತಿಯ ಕಿರಿಕಿರಿಯಾಗದಿದ್ದರೆ ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಬಹುದು.ಇದು ಎಲ್ಲಾ ರೀತಿಯ ಫೇಸ್ ಪ್ಯಾಕ್ ಗಳು ​​ಅಥವಾ ಫೇಸ್ ವಾಷ್ ಗಳಿಗೆ ಅನ್ವಯಿಸುತ್ತದೆ ಏಕೆಂದರೆ ಪ್ರತಿಯೊಬ್ಬರ ಚರ್ಮದ ವಿಧಗಳು ವಿಭಿನ್ನವಾಗಿರುತ್ತವೆ.

ಇನ್ನೊಂದು ಸಂದರ್ಭದಲ್ಲಿ ಮೇಕಪ್ನ ಬಗ್ಗೆ ಮಾತನಾಡುವಾಗ,ಕರೀನಾ ಹಲವು ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳು ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತವೆ. "ನೀವು ದೊಡ್ಡ ಕಣ್ಣುಗಳು ಕಾಣುವಂತೆ ಮಾಡುತ್ತಿದ್ದರೆ,ನಿಮ್ಮ ತುಟಿಗಳಿಗೆ ಕಡಿಮೆ ಮೇಕಪ್ ಮಾಡಿ, ನೀವು ತುಟಿಗಳು ಗಾಢವಾಗಿ ಕಾಣುವಂತೆ ತಯಾರಾದರೆ ನಿಮ್ಮ ಕಣ್ಣುಗಳು ಸುಂದರವಾಗಿ ಕಾಣುವಂತೆ ಕಡಿಮೆ ಮೇಕಪ್ ಮಾಡಿಕೊಳ್ಳಿ. ನಿಮ್ಮ ಕಣ್ಣುಗಳನ್ನು ಆಕರ್ಷವಾಗಿ ಹೊಳೆಯುವಂತೆ ಮಾಡಲು ಯಾವಾಗಲೂ ದೊಡ್ಡ ಗಾತ್ರದ ಮಸ್ಕರಾವನ್ನು ಆರಿಸಿಕೊಳ್ಳಿ" ಎಂದು ಕರೀನಾ ಹೇಳಿದ್ದಾರೆ. ಈಗ ವೀರ್ ದೇ ವೆಡ್ಡಿಂಗ್ ನ ಸುಂದರ ತಾರೆಯ ದೋಷರಹಿತ ಮತ್ತು ಆಕರ್ಷಕವಾದ ಸೌಂದರ್ಯದ ಗುಟ್ಟು ನಿಮಗೆ ತಿಳಿದಿದೆ.

ಕರೀನಾ ಕಪೂರ್ ರವರ ಚರ್ಮದ ರಕ್ಷಣೆಯ ಬಗ್ಗೆ ನಿಮಗೆ ಏನೆನಿಸುತ್ತದೆ ಎಂಬುದರ ಬಗ್ಗೆ ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ ಹಾಗೂ ನಾವು ಇನ್ನು ಹೆಚ್ಚಾಗಿ ಏನು ಬರೆಯಬೇಕು ಎಂಬುದನ್ನೂ ತಿಳಿಸಿ.ನಿಮಗೆ ಕೇಶವಿನ್ಯಾಸ, ಕೂದಲ ರಕ್ಷಣೆಯ ಸಲಹೆಗಳು ಮತ್ತು ಚರ್ಮದ ರಕ್ಷಣೆಯ ಕುರಿತು ಇನ್ನೂ ಇಂತಹ ಸಲಹೆಗಳು ಬೇಕಾಗಿದ್ದಲ್ಲಿ ಬೋಲ್ಡ್ ಸ್ಕೈ ಗೆ ಚಂದಾದಾರರಾಗಿ.

English summary

Kareena Kapoor Reveals The Secret Behind Her Glowing Skin

Most celebrities like to follow a simple skincare and fitness routine that helps them maintain themselves. They ensure that they keep their skin moisturised and hydrated at all times. Recently, in an interview with Elle, Kareena Kapoor mentioned that she uses basic ingredients from the kitchen as a part of her skincare regime.
X
Desktop Bottom Promotion