Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಟೂತ್‌ಪೇಸ್ಟ್ ಬಳಸಿ ಕೂಡ ಮೊಡವೆ ಹಾಗೂ ಬ್ಲ್ಯಾಕ್ ಹೆಡ್ಸ್ ನಿವಾರಿಸಬಹುದು!
ಸೌಂದರ್ಯ ವೃದ್ಧಿಸಲು ಅದರಲ್ಲೂ ಮುಖದ ಮೇಲೆ ಇರುವಂತಹ ಕಲೆ ಹಾಗೂ ಮೊಡವೆಗಳ ನಿವಾರಣೆ ಮಾಡಲು ಇದ್ದಬದ್ದ ಕ್ರೀಮ್ ಗಳನ್ನು ಬಳಸಿಕೊಂಡ ಬಳಿಕ ಕೊನೆಗೆ ಏನೇನೋ ಪ್ರಯೋಗಗಳನ್ನು ಮಾಡಲು ಹೊರಡುತ್ತಾರೆ ಕೆಲವರು. ಇದರ ಫಲವಾಗಿಯೇ ನೀವು ಹಲ್ಲುಜ್ಜುವಂತಹ ಪೇಸ್ಟ್ ಕೂಡ ಸೌಂದರ್ಯ ವರ್ಧಕವಾಗಿ ಬಳಸಬಹುದು ಎಂದು ಕೆಲವೊಂದು ಸಂಶೋಧನೆಗಳು ಹೇಳಿವೆ. ನೀವು ಇದನ್ನು ಓದಿ ಅಚ್ಚರಿ ಪಡಬೇಕಾಗಿಲ್ಲ. ಯಾಕೆಂದರೆ ಹಲ್ಲುಜ್ಜುವ ಪೇಸ್ಟ್ ನಿಂದ ಮುಖದ ಮೇಲಿನ ಮೊಡವೆಗಳು ದೊಡ್ಡದಾಗದಂತೆ ತಡೆಯಬಹುದು. ಮೊಡವೆ ದೊಡ್ಡದಾಗುತ್ತಲಿದ್ದರೆ ಆಗ ನೀವು ಟೂತ್ ಪೇಸ್ಟ್ ಹಚ್ಚಿಕೊಳ್ಳಿ. ಆದರೆ ಹಲ್ಲುಜ್ಜುವ ಪೇಸ್ಟ್ ನ್ನು ಬಳಸಲು ಕೆಲವೊಂದು ಕ್ರಮಗಳು ಇವೆ.
ಸಾಮಾನ್ಯವಾಗಿ ನಾವು ಟೂತ್ ಪೇಸ್ಟ್ ನ್ನು ಹಲ್ಲುಜ್ಜಲು ಬಳಸಿಕೊಳ್ಳುತ್ತೇವೆ. ನಾವು ಬೆಳಗ್ಗೆ ಎದ್ದ ಬಳಿಕ ಬ್ರಷ್ ಗೆ ಪೇಸ್ಟ್ ಹಾಕಿಕೊಂಡು ಹಲ್ಲುಜ್ಜುತ್ತೇವೆ. ಇದನ್ನು ತ್ವಚೆಗೂ ಬಳಸಿಕೊಳ್ಳಬಹುದಾಗಿದೆ. ಈ ಲೇಖನದಲ್ಲಿ ನಿಮಗೆ ಸೌಂದರ್ಯವರ್ಧಿಸುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ. ಸೌಂದರ್ಯವರ್ಧಕಗಳ ಬಗ್ಗೆ ಇರುವಂತಹ ಕೆಲವೊಂದು ವಿಚಾರಗಳನ್ನು ಇಲ್ಲಿ ಹೇಳಲಾಗುವುದು. ಬೆಳಗ್ಗೆ ನೀವು ಹಲ್ಲುಜ್ಜಲು ಬಳಸುವ ಟೂತ್ ಪೇಸ್ಟ್ ಹಲ್ಲುಗಳು ಮುತ್ತುಗಳಂತೆ ಹೊಳೆಯುವಂತೆ ಮಾಡುವುದು.

ಸರಿಯಾದ ಟೂತ್ ಪೇಸ್ಟ್ ಬಳಸಿ
ಮುಖದಲ್ಲಿ ಮೂಡಿರುವಂತಹ ಮೊಡವೆಗಳ ನಿವಾರಣೆ ಮಾಡಲು ನೀವು ಟೂತ್ ಪೇಸ್ಟ್ ಬಳಸುವುದಾದರೆ ಆಗ ನೀವು ಸರಿಯಾದ ಟೂತ್ ಪೇಸ್ಟ್ ಬಳಸಿ. ಬಿಳಿ ಬಣ್ಣದ ಟೂತ್ ಪೇಸ್ಟ್ ಇದಕ್ಕೆ ನೀವು ಮಾಡಬಹುದಾದ ಸರಿಯಾದ ಆಯ್ಕೆ. ಕೆಂಪು, ಹಸಿ ಅಥವಾ ನೀಲಿ ಬಣ್ಣದ ಟೂತ್ ಪೇಸ್ಟ್ ಗಳನ್ನು ನೀವು ಇದಕ್ಕೆ ಬಳಸಿಕೊಳ್ಳಬಾರದು. ಬಿಳಿ ಬಣ್ಣದ ಟೂತ್ ಪೇಸ್ಟ್ ನಲ್ಲಿ ಮೊಡವೆ ನಿವಾರಣೆಗಾಗಿ ಬೇಕಾಗುವಂತಹ ಟ್ರಿಕ್ಲೊಸೆನ್, ಅಡುಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ನ್ನು ಬಳಸಲಾಗುತ್ತದೆ. ಇವೆಲ್ಲವೂ ಬಿಳಿ ಬಣ್ಣದ ಟೂತ್ ಪೇಸ್ಟ್ ನಲ್ಲಿರುವ ಕಾರಣ ಇದು ತುಂಬಾ ಒಳ್ಳೆಯದು.

ಹಲ್ಲು ಬಿಳಿಗೊಳಿಸುವ ಟೂತ್ ಪೇಸ್ಟ್ ಕಡೆಗಣಿಸಿ
ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಟೂತ್ ಪೇಸ್ಟ್ ಗಳು ಕೇವಲ ಹಲ್ಲುಗಳನ್ನು ಬಿಳಿಯಾಗಿಸಲು ಮಾತ್ರ ಇರುವುದು. ಈ ರೀತಿಯ ಟೂತ್ ಪೇಸ್ಟ್ ನಲ್ಲಿ ಕೆಲವೊಂದು ಕೃತಕ ಬ್ಲೀಚಿಂಗ್ ಗಳು ಇರುವುದು. ಇದು ಚರ್ಮಕ್ಕೆ ಹಚ್ಚಿದರೆ ಆಗ ಸುಡುವುದು. ಇದು ಚರ್ಮದ ಕಪ್ಪು ಕಲೆಗಳನ್ನು ಹೆಚ್ಚು ಮಾಡುವುದು. ಹೆಚ್ಚಿನ ಮೆಲನಿನ್ ಅಂಶವಿರುವಂತವರಲ್ಲಿ ಹೆಚ್ಚು ಪ್ರತಿಕ್ರಿಯಿಸುವುದು. ಇದರಿಂದ ಮುಖದ ಮೇಲೆ ಬೊಕ್ಕೆಗಳು ಮತ್ತು ಚರ್ಮದಲ್ಲಿ ಕಲೆಗಳು ಮೂಡುವುದು.
Most Read: ಮನೆ ವಸ್ತುಗಳ ಶುಚಿತ್ವದಲ್ಲಿ ಟೂತ್ ಪೇಸ್ಟ್ ಬಳಕೆ!

ಫ್ಲೋರೈಡ್ ಕಡಿಮೆ ಇರುವ ಟೂತ್ ಪೇಸ್ಟ್ ಬಳಸಿ
ಹಲ್ಲುಗಳಲ್ಲಿ ಇರುವಂತಹ ಪದರಗಳನ್ನು ತೆಗೆದುಹಾಕಲು ಟೂತ್ ಪೇಸ್ಟ್ ಗೆ ಫ್ಲೋರೈಡ್ ಬಳಸಲಾಗುತ್ತದೆ. ಇದು ಹಲ್ಲಿನ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಆದರೆ ಫ್ಲೋರೈಡ್ ಇರುವಂತಹ ಟೂತ್ ಪೇಸ್ಟ್ ಬಳಸಿಕೊಂಡರೆ ಅದು ಚರ್ಮಕ್ಕೆ ಹಾನಿಯುಂಟು ಮಾಡುವುದು. ತುಂಬಾ ಕಡಿಮೆ ಫ್ಲೋರೈಡ್ ಅಂಶವಿರುವಂತಹ ಟೂತ್ ಪೇಸ್ಟ್ ನ್ನು ಬಳಸುವರು. ಇದರಿಂದ ಚರ್ಮದ ಕಿರಿಕಿರಿ ತಪ್ಪುವುದು. ಟೂತ್ ಪೇಸ್ಟ್ ಬಳಸುವ ವಿಧಾನಗಳು

ಮುಖ ತೊಳೆಯಿರಿ
ಮುಖದ ಮೇಲಿನ ಮೊಡವೆ ಅಥವಾ ಕಲೆ ನಿವಾರಣೆ ಮಾಡಲು ನೀವು ಮೊದಲು ಮುಖವನ್ನು ಸಂಪೂರ್ಣವಾಗಿ ತೊಳೆಯಬೇಕು. ಮುಖದ ಮೇಲೆ ಅತಿಯಾದ ಎಣ್ಣೆ ಅಥವಾ ಧೂಳು ಚರ್ಮದಿಂದ ತೆಗೆಯಬೇಕು. ನೀವು ಮುಖವನ್ನು ಒಳ್ಳೆಯ ರೀತಿಯಲ್ಲಿ ತೊಳೆಯಿರಿ.

ಟೂತ್ ಪೇಸ್ಟ್ ತೆಗೆಯಿರಿ
ಮುಖವನ್ನು ಸರಿಯಾಗಿ ತೊಳೆದುಕೊಂಡ ಬಳಿಕ ನೀವು ಟೂತ್ ಪೇಸ್ಟ್ ನ್ನು ಟ್ಯೂಬ್ ನಿಂದ ಹಿಂಡಿಕೊಳ್ಳಿ. ಮೊಡವೆಗಳು ತುಂಬಾ ಕಡಿಮೆಯಿದ್ದರೆ ಆಗ ಸ್ವಲ್ಪ ಬಳಸಿ. ಹೆಚ್ಚಿನ ಮೊಡವೆಗಳು ಇದ್ದರೆ ಆಗ ನೀವು ಹೆಚ್ಚು ಟೂತ್ ಪೇಸ್ಟ್ ಬಳಸಿ.

ಮೊಡವೆಗಳ ಮೇಲೆ ಹಚ್ಚಿಕೊಳ್ಳಿ
ಇದರ ಬಳಿಕ ಮುಖದ ಮೇಲಿರುವ ಮೊಡವೆಗಳ ಮೇಲೆ ಟೂತ್ ಪೇಸ್ಟ್ ಹಚ್ಚಿಕೊಳ್ಳಿ. ಟೂತ್ ಪೇಸ್ಟ್ ನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಿಕೊಳ್ಳಿ ಮತ್ತು ನೇರವಾಗಿ ಮೊಡವೆಗಳ ಮೇಲೆ ಹಚ್ಚಿದರೆ ಪರಿಣಾಮಕಾರಿಯಾಗಿರಲಿದೆ. ಇದರಿಂದ ಬೇಗನೆ ಮೊಡವೆ ನಿವಾರಣೆಯಾಗುವುದು.

ತೊಳೆಯಿರಿ
ಮೊಡವೆಗಳಿಗೆ ಟೂತ್ ಪೇಸ್ಟ್ ಹಚ್ಚಿಕೊಂಡ ಬಳಿಕ 15-20 ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ತೊಳೆಯಿರಿ.

ಬ್ಲ್ಯಾಕ್ ಹೆಡ್ ನಿವಾರಣೆ
ಹೆಚ್ಚಿನ ಮಹಿಳೆಯರಲ್ಲಿ ಬ್ಲ್ಯಾಕ್ ಹೆಡ್ ಸಮಸ್ಯೆಯು ಕಾಣಿಸಿಕೊಳ್ಳುವುದು. ಸ್ಕ್ರಬ್ ಬಳಸಿಕೊಂಡರೂ ಮತ್ತು ಬ್ಲ್ಯಾಕ್ ಹೆಡ್ ನಿವಾರಣೆ ಮಾಡುವಂತಹ ಪಟ್ಟಿ ಬಳಸಿದರೂ ಇದು ಮತ್ತೆ ಮತ್ತೆ ಕಾಣಿಸಿಕೊಳ್ಳುವುದು. ನೀವು ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಆಗ ಬ್ಲ್ಯಾಕ್ ಹೆಡ್ ಇರುವಂತಹ ಭಾಗಕ್ಕೆ ನೀವು ಟೂತ್ ಪೇಸ್ಟ್ ಹಚ್ಚಿಕೊಳ್ಳಿ. ಟೂಥ್ ಪೇಸ್ಟ್, ಉಪ್ಪು ಮತ್ತು ಪುದೀನಾ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಬ್ಲ್ಯಾಕ್ ಹೆಡ್ ಗಳಿರುವಂತಹ ಜಾಗಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ. ಐದು ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ನಿಧಾನವಾಗಿ ಮಸಾಜ್ ಮಾಡುತ್ತಾ ತೊಳೆಯಿರಿ.

ಮೊಡವೆ ಮತ್ತು ಬೊಕ್ಕೆ ಸಮಸ್ಯೆ ಇದ್ದರೆ
ಬೊಕ್ಕೆ ಮತ್ತು ಮೊಡವೆ ಸಮಸ್ಯೆಯು ಪ್ರತಿಯೊಬ್ಬರಿಗೂ ಬರುವುದು. ಆದರೆ ಹಲ್ಲುಜ್ಜುವ ಪೇಸ್ಟ್ ಮೂಲಕ ಇದನ್ನು ಒಂದೇ ರಾತ್ರಿಯಲ್ಲಿ ತೆಗೆದುಹಾಕಬಹುದು. ಬೇಕಾಗುವ ಸಾಮಗ್ರಿಗಳು 2 ಚಮಚ ಹಲ್ಲುಜ್ಜು ಪೇಸ್ಟ್ 2 ಚಮಚ ಅಲೋವೆರಾ ಲೋಳೆ ಎರಡು ಚಮಚ ಅಲೋವೆರಾ ಲೋಳೆ ಮತ್ತು ಎರಡು ಚಮಚ ಹಲ್ಲುಜ್ಜುವ ಪೇಸ್ಟ್ ನ್ನು ಪಿಂಗಾಣಿಗೆ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ದಪ್ಪಗಿನ ಪೇಸ್ಟ್ ನ್ನು ಹತ್ತಿ ಉಂಡೆಯಿಂದ ಮುಖಕ್ಕೆ ಹಚ್ಚಿಕೊಳ್ಳಿ. ಪ್ರತಿನಿತ್ಯ ರಾತ್ರಿ ಮಲಗಲು ಹೋಗುವ ಮೊದಲು ಇದನ್ನು ಹಚ್ಚಿಕೊಳ್ಳಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಡವೆ ಮತ್ತು ಬೊಕ್ಕೆ ಹೋಗುವ ತನಕ ಇದನ್ನು ಬಳಸಿ.



Click it and Unblock the Notifications
