For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಚರ್ಮ ಕೆಂಪಾಗುವುದನ್ನು ತಡೆಯಲು ಸರಳ ಟಿಪ್ಸ್

|

ಚಳಿಗಾಲ ಬಂದರೆ ಸಾಕು. ಚರ್ಮವೆಲ್ಲವೂ ಒಣಗಿ ಹೋಗಿ ಹಲವಾರು ರೀತಿಯ ಸಮಸ್ಯೆ ಉಂಟು ಮಾಡುವುದು. ಇನ್ನು ಕೆಲವರ ತ್ವಚೆಯು ಒಣಗಿ ಕೆಂಪಾಗುವುದು. ಇದು ಚಳಿಗಾಲದಲ್ಲಿ ಹೆಚ್ಚಿನವರಿಗೆ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ತ್ವಚೆಗೆ ತೇವಾಂಶದ ಕೊರತೆ ಕಾಣಿಸಿಕೊಂಡಾಗ ಅದು ಒಣಗಿ, ಕೆಂಪಾಗುವುದು. ಇಂತಹ ಸಮಸ್ಯೆಯು ಹೆಚ್ಚಾಗಿ ಅತಿಯಾಗಿ ಸೂಕ್ಷ್ಮತೆ ಹೊಂದಿರುವ ಚರ್ಮದವರಲ್ಲಿ ಕಾಣಿಸಿಕೊಳ್ಳುವುದು. ಚರ್ಮದಲ್ಲಿ ಉರಿಯೂತ ಉಂಟಾಗಿದೆ ಎನ್ನುವುದಕ್ಕೆ ಚರ್ಮವು ಕೆಂಪಾಗುವುದು ಒಂದು ಸೂಚನೆಯಾಗಿದೆ.

easy tips to fight winter skin redness

ಆ್ಯಂಟಿ ಬ್ಯಾಕ್ಟೀರಿಯಾ ಸೋಪ್, ಡಿಟರ್ಜೆಂಟ್ ಮತ್ತು ಇತರ ಕೆಲವೊಂದು ರಾಸಾಯನಿಕಯುಕ್ತ ಸೋಪ್ ಗಳು ಚಳಿಗಾಲದಲ್ಲಿ ತ್ವಚೆಯನ್ನು ಕೆಂಪಾಗಿಸುವುದು. ತ್ವಚೆ ಕೆಂಪಾಗುವುದನ್ನು ತಡೆಯಲು ಹಲವಾರು ರೀತಿಯ ಲೋಷನ್, ಕ್ರೀಮ್ ಇತ್ಯಾದಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಹೆಚ್ಚಾಗಿ ಚಳಿಗಾಲಕ್ಕಾಗಿಯೇ ತಯಾರಿಸಲಾಗಿದೆ. ಇದರ ಹೊರತಾಗಿ ಚರ್ಮವನ್ನು ಆರೋಗ್ಯವಾಗಿಡಲು ಕೆಲವೊಂದು ವಿಚಾರಗಳನ್ನು ಗಮದಲ್ಲಿಟ್ಟುಕೊಳ್ಳಬೇಕು. ಈ ಲೇಖನದಲ್ಲಿ ಚಳಿಗಾಲದಲ್ಲಿ ಚರ್ಮವನ್ನು ಆರೋಗ್ಯವಾಗಿಡಲು ಕೆಲವೊಂದು ಸಲಹೆಗಳನ್ನು ನೀಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಮೊಶ್ಚಿರೈಸ್

ಮೊಶ್ಚಿರೈಸ್

ಚಳಿಗಾಲದಲ್ಲಿ ಚರ್ಮ ಒಣಗಿ, ಸತ್ತ ಚರ್ಮದ ಕೋಶವು ಎದ್ದು ಬಂದು ಕೆಂಪಾಗುವುದು ಸಹಜ. ಇದಕ್ಕಾಗಿ ನೀವು ಕೆಲವೊಂದು ಮೂಲ ಸಲಹೆಗಳನ್ನು ಪಾಲಿಸಿಕೊಂಡು ಹೋಗಬೇಕು. ಚರ್ಮವು ಕೆಂಪಾಗುವುದು ಚರ್ಮದಲ್ಲಿ ತೇವಾಂಶವಿಲ್ಲದೆ ಇರುವುದರ ಲಕ್ಷಣವಾಗಿದೆ ಮತ್ತು ಇದಕ್ಕೆ ನಿಮಗೆ ಹೆಚ್ಚಿನ ತೇವಾಂಶ ಬೇಕಾಗಿದೆ. ಇದರೊಂದಿಗೆ ಚರ್ಮದಲ್ಲಿ ಕೆಲವೊಂದು ಕಲೆ ಹಾಗೂ ಗಾಐಗಳು ಕೂಡ ಉಂಟಾಗಬಹುದು. ಇದಕ್ಕಾಗಿ ನೀವು ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ಈ ಸಮಯದಲ್ಲಿ ನೀವು ಪಾಲಿಸಬೇಕಾಗಿರುವ ವಿಚಾರವೆಂದರೆ ಚಳಿಗಾಲಕ್ಕಾಗಿ ಮಾಡಿರುವಂತಹ ಕೆಲವೊಂದು ಮೊಶ್ಚಿರೈಸರ್ ಗಳನ್ನು ಬಳಸಿಕೊಳ್ಳಬೇಕು. ನಿಮ್ಮ ಚರ್ಮಕ್ಕೆ ಅನುಗುಣವಾಗಿ ನೀವು ಈ ಮೊಶ್ಚಿರೈಸರ್ ಗಳನ್ನು ಬಳಸಿ. ಚರ್ಮದಲ್ಲಿನ ಕೆಂಪು ಮಾಯವಾಗಲು ದಿನಕ್ಕೆ ಎರಡು ಸಲವಾದರೂ ಇದನ್ನು ನೀವು ಬಳಸಿಕೊಳ್ಳಿ.

MOst Read: ಒಣ ತ್ವಚೆ ಸಮಸ್ಯೆಯನ್ನು ಹೋಗಲಾಡಿಸುವ ಪ್ರಮುಖ ಎಣ್ಣೆಗಳು

ತುಂಬಾ ನಯವಾಗಿರುವ ಬ್ರಷ್ ಹಾಗೂ ಟವೆಲ್ ಗಳನ್ನು ಬಳಸಿಕೊಳ್ಳಿ

ತುಂಬಾ ನಯವಾಗಿರುವ ಬ್ರಷ್ ಹಾಗೂ ಟವೆಲ್ ಗಳನ್ನು ಬಳಸಿಕೊಳ್ಳಿ

ಚರ್ಮದ ಬಗ್ಗೆ ನೀವು ಒರಟುತನ ಪ್ರದರ್ಶನ ಮಾಡಬಾರದು. ಇದು ಹೇಗೆಂದರೆ ನೀವು ಚರ್ಮದ ಸತ್ತ ಕೋಶಗಳ ನಿವಾರಣೆ ಮಾಡಲು ಗಡುಸಾದ ಬ್ರಷ್ ಬಳಸಬೇಡಿ. ಇದರಿಂದ ಚರ್ಮಕ್ಕೆ ಮತ್ತಷ್ಟು ಹಾನಿಯಾಗುವುದು. ಇದನ್ನು ನೀವು ಚಳಿಗಾಲದಲ್ಲಿ ತುಂಬಾ ಶಿಸ್ತಿನಿಂದ ಪಾಲಿಸಿಕೊಂಡು ಹೋಗಬೇಕು. ಚರ್ಮವು ಈಗಾಗಲೇ ತುಂಬಾ ಸೂಕ್ಷ್ಮ ಸ್ಥಿತಿಯಲ್ಲಿರುವ ಕಾರಣದಿಂದಾಗಿ ಅದರ ಮೇಲೆ ಒರಟುತನ ಪ್ರದರ್ಶನ ಮಾಡಿದರೆ ಆಗ ಮತ್ತಷ್ಟು ಹಾನಿಯಾಗುವುದರಲ್ಲಿ ಸಂಶಯವೇ ಇಲ್ಲ. ಇದರಿಂದ ಚರ್ಮದಲ್ಲಿ ಕಿರಿಕಿರಿ ಮತ್ತು ಹಾನಿಯಾಗುವುದು. ಪ್ರತಿನಿತ್ಯವು ಚರ್ಮವನ್ನು ಸ್ವಚ್ಛಗೊಳಿಸಬೇಕು ಎನ್ನುವುದು ನಿಜವಾದರೂ ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಎನ್ನುವುದು ಅಷ್ಟೇ ಅಗತ್ಯ. ಚರ್ಮವನ್ನು ತುಂಬಾ ಒರಟಾಗಿ ಉಜ್ಜಿಕೊಂಡರೆ ಆಗ ಚರ್ಮಕ್ಕೆ ಹಾನಿಯಾಗುವುದು ಹೆಚ್ಚು. ಇದರಿಂದ ನೀವು ಚರ್ಮದ ಬಗ್ಗೆ ಮೃದುಧೋರಣೆ ತಳೆಯಬೇಕು. ಯಾವಾಗಲೂ ತುಂಬಾ ನಯವಾಗಿರುವ ಬ್ರಷ್ ಹಾಗೂ ಟವೆಲ್ ಗಳನ್ನು ಬಳಸಿಕೊಳ್ಳಿ.

Most Read: ರಾತ್ರಿ ಮಲಗುವ ಮುನ್ನ, ಈ ಫೇಸ್ ಪ್ಯಾಕ್‌ಗಳನ್ನು ಮುಖಕ್ಕೆ ಹಚ್ಚಿದರೆ, ತ್ವಚೆ ಇನ್ನಷ್ಟು ಬೆಳ್ಳಗಾಗುವುದು

ಸನ್ ಸ್ಕ್ರೀನ್ ಬಳಸಿ

ಸನ್ ಸ್ಕ್ರೀನ್ ಬಳಸಿ

ಚಳಿಗಾಲ ಇರಲಿ ಅಥವಾ ಇಲ್ಲದೆ ಇರಲಿ, ನೀವು ಸನ್ ಸ್ಕ್ರೀನ್ ಬಳಸಿಕೊಂಡರೆ ಅದರಿಂದ ಖಂಡಿತವಾಗಿಯೂ ಚರ್ಮವು ರಕ್ಷಣೆಯಲ್ಲಿರುವುದು. ಚರ್ಮವು ತುಂಬಾ ಸೂಕ್ಷ್ಮವಾಗಿದ್ದರೆ ಮತ್ತು ಇದಕ್ಕೆ ಮತ್ತಷ್ಟು ಹಾನಿಯಾಗಬಾರದು ಎಂದು ನಿಮಗನಿಸಿದ್ದರೆ ಆಗ ನೀವು ಹೀಗೆ ಮಾಡಲೇಬೇಕು. ಬಿಸಿಲಿನಲ್ಲಿ ಮೈಯೊಡ್ಡಿ ಹಾನಿಕಾರಕ ಯುವಿ ಕಿರಣಗಳು ದೇಹಕ್ಕೆ ತಾಗಿದರೆ ಆಗ ಚರ್ಮಕ್ಕೆ ಮತ್ತಷ್ಟು ಹಾನಿಯಾಗುವುದು. ಇದರಿಂದಾಗಿ ನೀವು ಯಾವಾಗಲೂ ಮನೆಯಿಂದ ಹೊರಗೆ ಹೋಗುವ ವೇಳೆ ಸನ್ ಸ್ಕ್ರೀನ್ ಬಳಕೆ ಮಾಡಿಕೊಳ್ಳಿ. ಇದು ಚರ್ಮಕ್ಕೆ ರಕ್ಷಣೆ ನೀಡುವುದು.

ಆಹಾರ ಕ್ರಮದ ಬಗ್ಗೆ ಗಮನಹರಿಸಿ

ಆಹಾರ ಕ್ರಮದ ಬಗ್ಗೆ ಗಮನಹರಿಸಿ

ಚರ್ಮವನ್ನು ಒಳಗಿನಿಂದ ರಕ್ಷಣೆ ಮಾಡಬೇಕಾದರೆ ಆಗ ನೀವು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅತೀ ಅಗತ್ಯವಾಗಿರುವುದು. ಇದಕ್ಕಾಗಿ ನೀವು ಚಳಿಗಾಲದಲ್ಲಿ ಆಹಾರದ ಕಡೆ ಹೆಚ್ಚಿನ ಗಮನ ಹರಿಸಬೇಕು. ಇದರಿಂದ ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯು ಉತ್ತಮವಾಗುವುದು. ಚಳಿಗಾಲದಲ್ಲಿ ಸಾಮಾನ್ಯವಾಗಿ ಪ್ರತಿರೋಧಕ ವ್ಯವಸ್ಥೆಯು ಕುಗ್ಗುವುದು. ಇಂತಹ ಸಮಯದಲ್ಲಿ ಆಹಾರದ ಪಾತ್ರ ಮಹತ್ವದ್ದಾಗಿರುವುದು. ಇದನ್ನು ಪಾಲಿಸಿಕೊಂಡು ಹೋಗಲು ನೀವು ಸರಿಯಾದ ಆಹಾರ ಕ್ರಮ ಪಾಲಿಸಿಕೊಂಡು ಹೋಗಬೇಕು. ಆ್ಯಂಟಿಆಕ್ಸಿಡೆಂಟ್ ಹೆಚ್ಚಾಗಿರುವಂತಹ ಆಹಾರಗಳನ್ನು ಸೇವನೆ ಮಾಡಬೇಕು. ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವಂಥಹ ಕ್ಯಾರೆಟ್, ಬೆರ್ರಿಗಳು, ಬೀಟ್ ರೂಟ್ ಇತ್ಯಾದಿ ಸೇವನೆ ಮಾಡಬೇಕು. ಇದರಿಂದ ಚರ್ಮದಲ್ಲಿನ ಸ್ಥಿತಿಯು ಸುಧಾರಣೆಯಾಗುವುದು.

English summary

easy tips to fight winter skin redness

Dryness and redness are common skin problems that we all face during the winter. When your skin lacks hydration it makes your skin dry and red especially if your skin is super sensitive. Redness is usually an indication of inflammation on the skin. Moisturising, applying sunscreen, etc., can be done to ensure that your skin remains healthy during winter.
X
Desktop Bottom Promotion