ಅಕ್ಕಿ ನೀರಿನ ಪ್ರಯೋಜನಗಳನ್ನು ಕೇಳಿದರೆ, ಅಚ್ಚರಿ ಪಡುವಿರಿ!

By: jaya
Subscribe to Boldsky

ನಿಮ್ಮ ಸೌಂದರ್ಯವನ್ನು ಅತ್ಯುತ್ತಮವಾಗಿಸುವ ಕೆಲವೊಂದು ರಹಸ್ಯಗಳನ್ನು ನಿಸರ್ಗ ತನ್ನಲ್ಲಿ ಇರಿಸಿಕೊಂಡಿದ್ದು ಅದನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕಾಗಿದೆ. ಹಿಂದಿನವರು ಯಾವುದೇ ರಾಸಾಯನಿಕ ದುಬಾರಿ ಸೌಂದರ್ಯ ಸಾಧನಗಳನ್ನು ಬಳಸಿಕೊಳ್ಳದೆಯೇ ನೈಸರ್ಗಿಕ ವಸ್ತುಗಳಿಂದಲೇ ತಮ್ಮ ಕೂದಲು ಮತ್ತು ತ್ವಚೆಯ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು.

ಇಂದಿಗೂ ಇಂತಹ ಪರಿಹಾರಗಳು ನಮ್ಮ ಸುತ್ತಮುತ್ತಲಿದ್ದು ಅದಕ್ಕಾಗಿ ನಾವು ಸಮಯವನ್ನು ವಿನಿಯೋಗಿಸಿಕೊಳ್ಳಬೇಕು. ಇಂತಹ ನೈಸರ್ಗಿಕ ಅಂಶಗಳಲ್ಲಿ ಅಕ್ಕಿ ತೊಳೆದ ನೀರು ಕೂಡ ಒಂದು. ಏಷ್ಯಾದ ಮಹಿಳೆಯರು ಈ ನೀರಿನಿಂದ ತಮ್ಮ ಕೂದಲನ್ನು ತೊಳೆದುಕೊಳ್ಳುತ್ತಾರೆ ಅಂತೆಯೇ ತ್ವಚೆ ಸಂಬಂಧಿ ರೋಗಗಳಿಗೆ ಇದು ಪರಿಹಾರ ಎಂದೆನಿಸಿದೆ. 

ಇದನ್ನೂ ಓದಿಆರೋಗ್ಯಕಾರಿ ಟಿಪ್ಸ್: ಕಾಡುವ ಮೈ ಕೈ ನೋವಿಗೆ ಅಕ್ಕಿ ರೆಸಿಪಿ!

ಅಕ್ಕಿ ತೊಳೆದ ನೀರು ಅಂದ್ರೆ ಈಗಾಗಲೇ ಎಲ್ಲರಿಗೂ ಗೊತ್ತಾಗಿರುತ್ತೆ. ಅದನ್ನು ಹೇಗೆ ತಯಾರಿಸೋದು ಅಂತ ಪ್ರತ್ಯೇಕವಾಗಿ ಯಾರಿಗೂ ಹೇಳಬೇಕಾಗಿಲ್ಲ. ಪ್ರತಿ ದಿನ ಅನ್ನ ಮಾಡುವಾಗ ಅಕ್ಕಿ ತೊಳೆದೇ ತೊಳಿತೀವಿ, ಆದ್ರೆ ಆ ನೀರನ್ನು ಸುಮ್ಮನೆ ಎಸೆದು ಬಿಡ್ತೀವಿ. ಬಟ್ ಇನ್ಮುಂದೆ ಹಾಗೆ ಮಾಡದೇ ಶೇಖರಿಸಿ ಇಟ್ಟುಕೊಂಡು ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಿ... ಬನ್ನಿ ಇದರ ಉಪಯೋಗಗಳೇನು ಎಂಬುದನ್ನು ಮುಂದೆ ಓದಿ.....  

ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತೆ!

ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತೆ!

ಹೌದು!, ಇದು ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನೀವು ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದಾದ ಸುಲಭ ವಿಧಾನ ಇದು. ಅಕ್ಕಿ ತೊಳೆದ ನೀರಿಗೆ ಕಿತ್ತಲೆ ಸಿಪ್ಪೆ, ಲಿಂಬೆಯ ಸಿಪ್ಪೆ, ಗ್ರೀನ್ ಟೀ, ತುಳಸಿ ದಳಗಳು, ಬೇವಿನ ಎಲೆ, ಇವುಗಳಲ್ಲಿ ಯಾವುದಾದ್ರೂ ಒಂದನ್ನು ಮಿಕ್ಸ್ ಮಾಡಿಕೊಂಡು ಬಳಸಿದ್ರೂ ಕೂಡ ನಿಮ್ಮ ಚರ್ಮದ ಆರೋಗ್ಯ ವೃದ್ಧಿಯಾಗಲಿದೆ. ಟ್ರೈ ಮಾಡಿ ನೋಡಿ.

ಕೂದಲಿಗೂ ಒಳ್ಳೆಯದು

ಕೂದಲಿಗೂ ಒಳ್ಳೆಯದು

ಅಕ್ಕಿ ತೊಳೆದ ನೀರಿನಲ್ಲಿ ಕೂದಲು ತೊಳೆಯುವುದರಿಂದಾಗಿ ಭವಿಷ್ಯದಲ್ಲಾಗುವ ಕೂದಲುದುರುವಿಕೆಯನ್ನು ನಿಯಂತ್ರಿಸಿಕೊಳ್ಳಬಹುದು. ಅಷ್ಟೇ ಅಲ್ಲ ಅಕ್ಕಿ ತೊಳೆದ ನೀರಿನಲ್ಲಿರುವ ಅಮೈನೋ ಆಸಿಡ್ ಅಂಶಗಳುನ ಕೂದಲಿನ ಬೇರನ್ನು ಗಟ್ಟಿಗೊಳಿಸುತ್ತೆ ಮತ್ತು ಕೂದಲು ದಪ್ಪವಾಗಿ, ಸಿಲ್ಕಿಯಾಗಿ ಬೆಳೆಯಲು ನೆರವಾಗುತ್ತೆ.ಕೇವಲ ಕೂದಲಿಗೆ ಮಾತ್ರವಲ್ಲ, ಚರ್ಮಕ್ಕೂ ಕೂಡ ಅಕ್ಕಿ ತೊಳೆದ ನೀರಿನಿಂದ ಹಲವು ಲಾಭಗಳಿವೆ. ಚರ್ಮವನ್ನು ತಂಪುಗೊಳಿಸುವ ಮತ್ತು ಮೃದುಗೊಳಿಸುವ ಸಾಮರ್ಥ್ಯ ಅಕ್ಕಿ ತೊಳೆದ ನೀರಿಗಿದೆ... ಮುಂದೆ ಓದಿ

ಇದನ್ನೂ ಓದಿ -ಕೂದಲಿನ ಎಲ್ಲಾ ಸಮಸ್ಯೆಗೆ ಸ್ಟೆಪ್ ಬೈ ಸ್ಟೆಪ್ ಸಿಂಪಲ್ ಟಿಪ್ಸ್

ತ್ವಚೆಯ ಕಿರಿಕಿರಿಯನ್ನು ಹೋಗಲಾಡಿಸುತ್ತದೆ

ತ್ವಚೆಯ ಕಿರಿಕಿರಿಯನ್ನು ಹೋಗಲಾಡಿಸುತ್ತದೆ

ತ್ವಚೆಯಲ್ಲಿ ಕೆರೆತದಂತ ಸಮಸ್ಯೆಗಳಿದ್ದಲ್ಲಿ ಕೂಡ ಅಕ್ಕಿ ತೊಳೆದ ನೀರು ಉತ್ತಮ ಪರಿಹಾರವನ್ನು ನೀಡುತ್ತದೆ. ಮುಖದಲ್ಲಿ ಕೆಂಪು ಗುಳ್ಳೆಗಳಾಗುವುದು ಮತ್ತು ಉರಿತ, ತುರಿಕೆಯನ್ನು ಈ ನೀರು ಶಮನಗೊಳಿಸುತ್ತದೆ. ತ್ವಚೆಯ ರೋಗಗಳಿಂದ ಬಳಲುತ್ತಿರುವವರು 15 ನಿಮಿಷಗಳ ಕಾಲ ಎರಡು ದಿನಕ್ಕೊಮ್ಮೆ ಅಕ್ಕಿ ತೊಳೆದ ನೀರಿನಲ್ಲಿ ಸ್ನಾನ ಮಾಡುವುದರಿಂದ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಬಹುದಾಗಿದೆ.

ಹೊಳೆಯುವ ತ್ವಚೆಯ ಕಾಂತಿಗೆ

ಹೊಳೆಯುವ ತ್ವಚೆಯ ಕಾಂತಿಗೆ

ಹೊಳೆಯುವ ಶುಭ್ರ ತ್ವಚೆಯನ್ನು ನೀಡುವಲ್ಲಿ ಅಕ್ಕಿ ತೊಳೆದ ನೀರು ಕಮಾಲಿನದ್ದಾಗಿದೆ. ಇದರಲ್ಲಿ ಸಾಕಷ್ಟು ಉತ್ತಮ ಪ್ರೊಟೀನ್ ಮತ್ತು ವಿಟಮಿನ್‌ಗಳಿದ್ದು ದೇಹದಲ್ಲಿರುವ ಕಲ್ಮಶವನ್ನು ನಿವಾರಿಸುವಲ್ಲಿ ಅಕ್ಕಿ ತೊಳೆದ ನೀರು ಸಹಾಯಕ ಎಂದೆನಿಸಲಿದೆ.

ಮೊಡವೆ ನಿವಾರಕ

ಮೊಡವೆ ನಿವಾರಕ

ಇದರಲ್ಲಿ ಆಂಟಿಯೋಕ್ಸಿಡೆಂಟ್‌ಗಳಿದ್ದು ಆಂಟಿಸೆಪ್ಟಿಕ್ ಅಂಶಗಳು ಮೊಡವೆಯನ್ನು ಸಂಪೂರ್ಣವಾಗಿ ನಿವಾರಿಸಲಿದೆ. ಒಂದು ರಾತ್ರಿಯಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸದೇ ಇದ್ದರೂ ನಿಧಾನಕ್ಕೆ ಮೊಡವೆಗಳನ್ನು ಅದರ ಕಲೆಗಳನ್ನು ಮಾಯವಾಗಿಸುತ್ತದೆ.

ತ್ವಚೆಯ ಕಾಂತಿ ವರ್ಧನೆ

ತ್ವಚೆಯ ಕಾಂತಿ ವರ್ಧನೆ

ಅಕ್ಕಿ ತೊಳೆದ ನೀರಿನ ಇನ್ನೊಂದು ಕಮಾಲಿನ ಪ್ರಯೋಜನ ಇದಾಗಿದೆ. ಇದು ನಿಮ್ಮ ತ್ವಚೆಯನ್ನು ಕಾಂತಿವರ್ಧಕವಾಗಿಸಲಿದ್ದು ವಾರಕ್ಕೊಮ್ಮೆಯಾದರೂ ಈ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಂಡು ಅದ್ಭುತ ಫಲಿತಾಂಶವನ್ನು ಕಂಡುಕೊಳ್ಳಿ.

ಬಿಳಿಕಲೆಗಳನ್ನು ಮಾಯವಾಗಿಸುತ್ತದೆ

ಬಿಳಿಕಲೆಗಳನ್ನು ಮಾಯವಾಗಿಸುತ್ತದೆ

ಅಕ್ಕಿತೊಳೆದ ನೀರು ತ್ವಚೆಯ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ನೀಡುತ್ತದೆ ಅಂತೆಯೇ ಬಿಳಿಮಚ್ಚೆ ಮತ್ತು ಕಲೆಗಳಿಗೂ ಇದು ಅತ್ಯದ್ಭುತ ಎಂದೆನಿಸಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಿ ಅಂಶಗಳು ಬಿಳಿಕಲೆ ಮತ್ತು ಮಚ್ಚೆಯನ್ನು ಹೋಗಲಾಡಿಸಿ ಸ್ವಚ್ಛ ಸುಂದರ ಮೈಕಾಂತಿಯನ್ನು ನೀಡಲಿದೆ.

English summary

Why You Should Use Rice Water For Skin Care

We have compiled a list of reasons on why you should seriously consider including rice water in your skin care regimen. The skin benefits of rice water are plenty once you start using it in your daily skin care routine..Read on to discover the various ways in which usage of rice water can benefit your skin.
Story first published: Thursday, May 18, 2017, 9:03 [IST]
Subscribe Newsletter