ಬ್ಯೂಟಿ ಟಿಪ್ಸ್: ಮನೆಯಂಗಳದ 'ತುಳಸಿ ಎಲೆಗಳ' ಫೇಸ್ ಪ್ಯಾಕ್

By: Arshad
Subscribe to Boldsky

ಕೆಲವು ಶತಮಾನಗಳಿಂದ ತುಳಸಿಯನ್ನು ತ್ವಚೆಯ ಆರೈಕೆಯಲ್ಲಿ ವಿಶ್ವದಾದ್ಯಂತ ಮಹಿಳೆಯರು ಬಳಸುತ್ತಾ ಬಂದಿದ್ದಾರೆ. ತುಳಸಿಯಲ್ಲಿ ನೂರಾರು ಔಷಧೀಯ ಗುಣಗಳಿದ್ದು ಇವುಗಳಲ್ಲಿ ಕೆಲವು ತ್ವಚೆಗೆ ಅದ್ಭುತವಾದ ಆರೈಕೆಯನ್ನು ನೀಡುತ್ತವೆ. ಇದರ ಔಷಧೀಯ ಗುಣಗಳು ಹಲವಾರು ಚರ್ಮದ ತೊಂದರೆಗಳನ್ನು ಕಡಿಮೆಮಾಡುತ್ತದೆ. ಆರೋಗ್ಯ ರಕ್ಷಕ- 'ತುಳಸಿ ಎಲೆಯ' ಜಬರ್ದಸ್ತ್ ಪವರ್

ಮೊಡವೆ, ಕಪ್ಪುತಲೆ, ಕಲೆಗಳು ಮತ್ತು ಮೊಡವೆಗಳು ಒಣಗಿದ ಬಳಿಕ ಉಳಿದ ಗುರುತುಗಳು, ಎಲ್ಲವನ್ನೂ ಸರಿಪಡಿಸಲು ತುಳಸಿಯನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಅದ್ಭುತವಾದ ಪರಿಣಾಮವನ್ನು ಪಡೆಯಬಹುದು. ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್

ವಾರಕ್ಕೊಂದು ಅಥವಾ ತಿಂಗಳಿಗೊಂದು ಬಾರಿ ನಿಮ್ಮ ತ್ವಚೆಗೆ ತುಳಸಿಯ ಆರೈಕೆಯನ್ನು ನೀಡುವ ಮೂಲಕ ಅತ್ಯುತ್ತಮ ಪರಿಹಾರ ಪಡೆಯಬಹುದು. ಇದೇ ಕಾರಣಕ್ಕೆ ಇಂದು ಬೋಲ್ಡ್ ಸ್ಕೈ ತಂಡ ತುಳಸಿಯನ್ನು ಬಳಸುವ ಕೆಲವು ವಿಧಾನಗಳನ್ನು ಪ್ರಸ್ತುತಪಡಿಸಲು ಹರ್ಷಿಸುತ್ತಿದೆ....  

ತುಳಸಿ, ಮೊಟ್ಟೆಯ ಬಿಳಿಭಾಗದ ಮುಖಲೇಪ

ತುಳಸಿ, ಮೊಟ್ಟೆಯ ಬಿಳಿಭಾಗದ ಮುಖಲೇಪ

ಒಂದು ವೇಳೆ ಬಿಸಿಲಿಗೆ ತ್ವಚೆ ಗಾಢಗೊಂಡಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಸುಮಾರು ಒಂದು ಮುಷ್ಠಿಯಲ್ಲಿ ಹಿಡಿಸುವಷ್ಟು ತುಳಸಿ ಎಲೆಗಳನ್ನು ಜಜ್ಜಿ ಒಂದು ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಪ್ಪಗಾಗಿರುವ ಭಾಗಕ್ಕೆ ಹಚ್ಚಿ ಒಣಗಲು ಬಿಡಿ. ಬಳಿಕ ಒದ್ದೆಬಟ್ಟೆಯೊಂದನ್ನು ಬಳಸಿ ನಯವಾದ ಒತ್ತಡದಿಂದ ಒರೆಸಿಕೊಳ್ಳಿ. ನಂತರ ನಿಮ್ಮ ನಿತ್ಯದ ಬಳಕೆಯ ಟೋನರ್ ಬಳಸಿ ತೊಳೆದುಕೊಳ್ಳಿ. ವಾರಕ್ಕೊಂದು ಬಾರಿ ಈ ವಿಧಾನ ಅನುಸರಿಸುವ ಮೂಲಕ ಶೀಘ್ರವೇ ಸಹಜವರ್ಣ ಪಡೆಯಬಹುದು.

ತುಳಸಿ ಎಲೆ ಮತ್ತು ಮೊಸರಿನ ಮುಖಲೇಪ

ತುಳಸಿ ಎಲೆ ಮತ್ತು ಮೊಸರಿನ ಮುಖಲೇಪ

ಮುಖದಲ್ಲಿ ಮೊಡವೆಗಳಿದ್ದರೆ ಈ ವಿಧಾನ ಅತ್ಯುತ್ತಮ ಆರೈಕೆ ನೀಡುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮೊಡವೆಗಳಾಗಂತೆ ತಡೆಯುತ್ತದೆ. ಇದಕ್ಕಾಗಿ ಸುಮಾರು ಏಳೆಂಟು ತುಳಸಿ ಎಲೆಗಳನ್ನು ತಾಜಾ ಮೊಸರಿನೊಂದಿಗೆ ಬೆರೆಸಿ ಕಡೆಯಿರಿ. ಈ ಲೇಪವನ್ನು ಇಡಿಯ ಮುಖಕ್ಕೆ ಹಚ್ಚಿ ಕೊಂಚ ಹೊತ್ತು ಒಣಗಲು ಬಿಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಅನುಸರಿಸುವ ಮೂಲಕ ಮೊಡವೆಗಳಿಲ್ಲದ ಸುಂದರ ವದನವನ್ನು ಪಡೆಯುವುದರ ಜೊತೆಗೇ ಹಳೆಯ ಮೊಡವೆಗಳ ಗುರುತುಗಳನ್ನು ನಿವಾರಿಸಲೂ ಸಾಧ್ಯವಾಗುತ್ತದೆ.

ತುಳಸಿ ಎಲೆಗಳ ಫೇಸ್ ವಾಶ್

ತುಳಸಿ ಎಲೆಗಳ ಫೇಸ್ ವಾಶ್

ಸುಮಾರು ಹತ್ತು ಹನ್ನೆರಡು ತುಳಸಿ ಎಲೆಗಳನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿಗೆ ಹಾಕಿ ಕುದಿಸುವುದನ್ನು ಸುಮಾರು ಮೂರರಿಂದ ನಾಲ್ಕು ನಿಮಿಷ ಮುಂದುವರೆಸಿ. ಬಳಿಕ ಉರಿ ನಂದಿಸಿ ತಣಿಯಲು ಬಿಡಿ. ತಣಿದ ಬಳಿಕ ಈ ನೀರನ್ನು ಒಂದು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ.

ತುಳಸಿ ಎಲೆಗಳ ಫೇಸ್ ವಾಶ್

ತುಳಸಿ ಎಲೆಗಳ ಫೇಸ್ ವಾಶ್

ಈ ನೀರನ್ನು ಬಳಸಿ ನೀವು ಫೇಸ್ ವಾಶ್ ಅನ್ನು ಹೇಗೆ ಬಳಸುತ್ತೀರೋ ಅದೇ ರೀತಿ ಬಳಸಿ. ಈ ವಿಧಾನವನ್ನು ತಿಂಗಳಿಗೆ ಎರಡು ಬಾರಿ ಅನುಸರಿಸುವ ಮೂಲಕ ತ್ವಚೆ ಸ್ವಚ್ಛಗೊಳ್ಳುವುದರ ಜೊತೆಗೇ ಕಾಂತಿಯನ್ನೂ ಹೆಚ್ಚಿಸುತ್ತದೆ. ಮೊಡವೆಯ ಬಾಧೆಗೆ ತುಳಸಿಯ ನಲ್ಮೆಯ ಆರೈಕೆ

ತುಳಸಿ ಎಲೆ ಮತ್ತು ಚಂದನಪುಡಿಯ ಮುಖಲೇಪ

ತುಳಸಿ ಎಲೆ ಮತ್ತು ಚಂದನಪುಡಿಯ ಮುಖಲೇಪ

ಸುಮಾರು ಹತ್ತು ಹನ್ನೆರಡು ತುಳಸಿ ಎಲೆಗಳನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿಗೆ ಹಾಕಿ ಕೊಂಚ ಹೊತ್ತು ಕುದಿಸಿದ ಬಳಿಕ ಉರಿ ಆರಿಸಿ. ಬಳಿಕ ಈ ನೀರನ್ನು ಗಂಧದ ಪುಡಿಯೊಡನೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಿರುವಂತೆ ಬೆರೆಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿ ತಾನಾಗಿ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಡಲೆಹಿಟ್ಟು ಹಾಗೂ ತುಳಸಿ ಎಲೆಗಳು

ಕಡಲೆಹಿಟ್ಟು ಹಾಗೂ ತುಳಸಿ ಎಲೆಗಳು

ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

 
English summary

Ways To Include Basil Leaves In Your Skin Care Routine

Boldsky we are letting you know about some of the most amazingly effective ways in which basil leaves can become a part of your weekly and monthly skin care ingredient. Listed below are some of the effective ways in which you can include basil leaves in your skin care routine.
Please Wait while comments are loading...
Subscribe Newsletter