For Quick Alerts
ALLOW NOTIFICATIONS  
For Daily Alerts

ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್

By Manu
|

ಇಂದು ಸೌಂದರ್ಯದ ಬಗ್ಗೆ ಕಾಳಜಿ ಕೇವಲ ಉಳ್ಳವರ ಸೊತ್ತಾಗಿ ಉಳಿದಿಲ್ಲ ಎಂಬುದು ವಾಸ್ತವ ಸತ್ಯ. ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು, ಚರ್ಮದ ಕಾಂತಿ ಬೆಳಗಿಸಲು ಹಾಗೂ ಕಲೆಗಳನ್ನು ನಿವಾರಿಸಲು ಇಂದು ಹಲವು ಮುಖಲೇಪಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳ ಸೇವೆ ಪಡೆಯುವ ಮೂಲಕ ನೈಸರ್ಗಿಕ ಮತ್ತು ಕಾಂತಿಯುತ ಮುಖವನ್ನು ಪಡೆಯುವುದು ಖಂಡಿತಾ ಸಾಧ್ಯ.

ಆದರೆ ಹೆಚ್ಚಿನ ಮಳಿಗೆಗಳು ಉತ್ತಮ ಸೇವೆ ಒದಗಿಸಿದರೂ ಅದಕ್ಕೆ ತಕ್ಕನಾದ ಬೆಲೆಯನ್ನೂ ವಿಧಿಸುವುದು ಹೆಚ್ಚಿನವರಿಗೆ ಭರಿಸಲಾಗುವುದಿಲ್ಲ. ಅಷ್ಟೇ ಅಲ್ಲದೆ ಇಂತಹ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಧಿಕವಾಗಿದ್ದು, ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಅದಕ್ಕಾಗಿ ನಾವು ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸ್ವಾಭಾವಿಕ ಪರಿಹಾರಗಳ ಕಡೆಗೆ ಗಮನ ಹರಿಸಬೇಕಾದ ಕಾಲ ಬಂದಿದೆ. ಕೋಮಲವಾದ ತ್ವಚೆಗಾಗಿ ಹಣ್ಣಿನ ಫೇಸ್ ಪ್ಯಾಕ್

ಹೌದು ಒಡೆದ ಮತ್ತು ಸುಲಿಯುತ್ತಿರುವ ಚರ್ಮಕ್ಕೆ ಮಾರುಕಟ್ಟೆಯಲ್ಲಿ ಹಲವಾರು ಲೇಪನಗಳು ಲಭ್ಯವಿದ್ದರೂ ಅವುಗಳಲ್ಲಿ ಅಡಕವಾಗಿರುವ ರಾಸಾಯನಿಕಗಳು ಉಪಯೋಗದ ಜೊತೆಜೊತೆಗೇ ಗೊತ್ತಿಲ್ಲದ ಹಾನಿಯನ್ನೂ ತರಬಹುದು. ಇದಕ್ಕಾಗಿ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಕೆಲವೊಂದು ನೈಸರ್ಗಿಕ ಮುಖಲೇಪಗಳನ್ನು ಬಳಸಿ ಕಾಂತಿಯುಕ್ತ ಮತ್ತು ಆರೋಗ್ಯಕರ ತ್ವಚೆಯನ್ನು ಪಡೆಯಬಹುದು..

ಓಟ್ಸ್ ಹಾಗೂ ಅರಶಿನದ ಮ್ಯಾಜಿಕ್

ಓಟ್ಸ್ ಹಾಗೂ ಅರಶಿನದ ಮ್ಯಾಜಿಕ್

ಒ೦ದು ಕಪ್ ನಷ್ಟು ಕೆ೦ಪು ಬೇಳೆ, ಕಾಲು ಕಪ್ ನಷ್ಟು ಕಚ್ಚಾ ಅಕ್ಕಿ, ಹಾಗೂ ಎ೦ಟರಿ೦ದ ಒ೦ಬತ್ತರಷ್ಟು ಬಾದಾಮಿಗಳನ್ನು ತೆಗೆದುಕೊ೦ಡು ಈ ಮೂರೂ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಪುಡಿಮಾಡಿಟ್ಟುಕೊಳ್ಳಿರಿ. ಈಗ ಈ ಮೂರೂ ಪುಡಿಗಳನ್ನು ಒ೦ದು ಬಟ್ಟಲಿನಲ್ಲಿ ಮಿಶ್ರಗೊಳಿಸಿರಿ ಹಾಗೂ ಈ ಮಿಶ್ರಣಕ್ಕೆ ಅರ್ಧ ಕಪ್ ನಷ್ಟು ಓಟ್ಸ್ ಹಾಗೂ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿರಿ. ಈಗ ಈ ಮಿಶ್ರಣಕ್ಕೆ ಪನ್ನೀರನ್ನು ಸೇರಿಸಿಕೊಳ್ಳುವುದರ ಮೂಲಕ ದಪ್ಪನಾದ ಪೇಸ್ಟ್ ಅನ್ನು ತಯಾರು ಮಾಡಿಕೊಳ್ಳಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಓಟ್ಸ್ ಹಾಗೂ ಅರಶಿನದ ಮ್ಯಾಜಿಕ್

ಓಟ್ಸ್ ಹಾಗೂ ಅರಶಿನದ ಮ್ಯಾಜಿಕ್

ಈ ಪೇಸ್ಟ್ ಅನ್ನು ನಿಮ್ಮ ತ್ವಚೆಗೆ ಹಚ್ಚಿಕೊ೦ಡು ಅದನ್ನು ಕೆಲಕಾಲದವರೆಗೆ ಹಾಗೆಯೇ ತ್ವಚೆಯಲ್ಲಿಯೇ ಒಣಗಲು ಬಿಡಿರಿ. ಒಮ್ಮೆ ಈ ಪೇಸ್ಟ್ ಒಣಗಿದ ಬಳಿಕ, ಪೇಸ್ಟ್ ಅನ್ನು ಹದವಾಗಿ ಉಜ್ಜಿ ತೆಗೆಯಿರಿ ಹಾಗೂ ಸಾದಾ ನೀರಿನಿ೦ದ ತೊಳೆಯಿರಿ. ಶುಷ್ಕ ತ್ವಚೆಯುಳ್ಳವರು ಈ ಫೇಸ್ ಪ್ಯಾಕ್‌‌ಗೆ ಹಾಲಿನ ಕೆನೆಯನ್ನು ಸೇರಿಸಿಕೊಳ್ಳುವುದು ಒ೦ದು ಒಳ್ಳೆಯ ಉಪಾಯವಾಗಿರುತ್ತದೆ.

ಫ್ರೂಟ್ಸ್ ಆಫ್ ಏಂಜೆಲ್ಸ್ -ಪಪ್ಪಾಯಿ ಹಣ್ಣು

ಫ್ರೂಟ್ಸ್ ಆಫ್ ಏಂಜೆಲ್ಸ್ -ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣಿನಲ್ಲಿರುವ ಸುವಾಸನೆಯ ರುಚಿ, ಮೃದು ಬೆಣ್ಣೆಯಂತಿರುವ ಸಾಂದ್ರತೆ ಮತ್ತು ಉತ್ಕೃಷ್ಟ ರಚನೆ ಇವುಗಳನ್ನು ಕಂಡುಕೊಂಡ ಕ್ರಿಸ್ಟೋಫರ್ ಕೊಲಂಬಸ್ ಈ ಹಣ್ಣಿಗೆ "ದೇವತೆಗಳ ಹಣ್ಣು - ಫ್ರೂಟ್ಸ್ ಆಫ್ ಏಂಜೆಲ್ಸ್" ಎಂದು ಅಡ್ಡ ಹೆಸರಿಟ್ಟನು. ಹೌದು ಪಪ್ಪಾಯಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುವುದರ ಜೊತೆಗೆ ಕೆರೋಟಿನ್‌ಗಳು, ವಿಟಮಿನ್ ಸಿ ಮತ್ತು ಫ್ಲಾವೊನಾಯ್ಡ್‌ಗಳಂತಹ ಪೋಷಕಾಂಶಗಳು ಸಹ ಅಧಿಕ ಪ್ರಮಾಣದಲ್ಲಿರುವುದರಿಂದ, ಇದು ಆರೋಗ್ಯ ಮತ್ತು ಸೌಂದರ್ಯದ ಪ್ರಯೋಜನಗಳನ್ನು ದೇಹಕ್ಕೆ ನೀಡುವಲ್ಲಿ ಪ್ರಮುಖ ಪಾತ್ರವಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಫ್ರೂಟ್ಸ್ ಆಫ್ ಏಂಜೆಲ್ಸ್ -ಪಪ್ಪಾಯಿ ಹಣ್ಣು

ಫ್ರೂಟ್ಸ್ ಆಫ್ ಏಂಜೆಲ್ಸ್ -ಪಪ್ಪಾಯಿ ಹಣ್ಣು

*ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು.

*ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕತ್ತಿನ ಮೇಲೆ ಲೇಪಿಸಿ.

*15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಂಡು ಚರ್ಮದ ಮೇಲ್ಭಾಗವನ್ನು ಮೆಲ್ಲ ಮೆಲ್ಲಗೆ ತಟ್ಟಿಕೊಳ್ಳಿ.

ಲೋಳೆಸರ

ಲೋಳೆಸರ

ಸೌಂದರ್ಯದ ಆರೈಕೆಯ ವಿಷಯ ಬಂದಾಗ ನಿಸರ್ಗದಲ್ಲಿರುವ ಹಲವಾರು ಸಸ್ಯಗಳು ಅದ್ಭುತವಾದ ಆರೈಕೆ ನೀಡುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರ, ಆದರೆ ಇವೆಲ್ಲಕ್ಕಿಂತಲೂ ಒಂದು ಹೆಜ್ಜೆ ಮುಂದಿರುವ ಲೋಳೆಸರ ಅನೇಕ ವಿಧದ ಸೌಂದರ್ಯ ಗುಣಗಳಿಂದಲೇ ಹೆಸರುವಾಸಿಯಾಗಿದೆ, ಒಂದು ವೇಳೆ ಹಳೆಯ ಮೊಡವೆ ಚಿವುಟಿದ್ದರ ಪರಿಣಾಮವಾಗಿ ತ್ವಚೆಯ ಮೇಲೆ ಕಲೆ ಉಳಿದುಕೊಂಡಿದ್ದರೆ ರಾತ್ರಿ ಮಲಗುವ ಮುನ್ನ ಲೋಳೆಸರವನ್ನು ಕೊಂಚ ವೃತ್ತಾಕಾರದಲ್ಲಿ ಕಲೆಯ ಮೇಲೆ ಹಚ್ಚಿ ಮಲಗಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ನಿಧಾನವಾಗಿ ಕಲೆಗಳು ಮಾಯವಾಗುತ್ತವೆ.

ಟೊಮೇಟೊ ಹಣ್ಣು

ಟೊಮೇಟೊ ಹಣ್ಣು

ವಯಸ್ಸಾಗುತ್ತಿದ್ದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತಾ ಬರುತ್ತದೆ. ನೆರಿಗೆಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ಕೂದಲು ನೆರೆಯತೊಡಗುತ್ತದೆ. ಕಲೆಗಳು ಮೂಡತೊಡಗುತ್ತವೆ. ಇದಕ್ಕೆಲ್ಲಾ ಶರೀರದಲ್ಲಿ ಉತ್ಪತ್ತಿಯಾಗುವ ಫ್ರೀ ರಾಡಿಕಲ್ (free radicals) ಎಂಬ ರಾಸಾಯನಿಕಗಳು ಕಾರಣ. ಟೊಮೇಟೊದಲ್ಲಿರುವ ಹಲವು ಪೋಷಕಾಂಶಗಳು ಈ ಶತ್ರುಗಳ ವಿರುದ್ಧ ಹೋರಾಡುತ್ತಾ ವೃದ್ಧಾಪ್ಯವನ್ನು ಮುಂದೂಡುಡುತ್ತವೆ.ಹಾಗಾಗಿ ನೀವು ಮಾಡಬೇಕಾದದು ಇಷ್ಟೇ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಟೊಮೇಟೊ ಹಣ್ಣು

ಟೊಮೇಟೊ ಹಣ್ಣು

ಟೊಮೇಟೊ ಹಣ್ಣಿನ ರಸವನ್ನು ಜೇನುತುಪ್ಪದೊಂದಿಗೆ ಸಮಪ್ರಮಾಣದಲ್ಲಿ ಬೆರೆಸಿ ದಟ್ಟನಾದ ದ್ರಾವಣದಂತಾಗುವ ಫೇಸ್ ಪ್ಯಾಕ್ ಅನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಕಾಲ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಕಾಲಕ್ರಮೇಣ ನಯವಾದ ಮತ್ತು ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯ ಬ್ಯಾಕ್ಟೀರಿಯಾ ನಿವಾರಕ ಗುಣ ಮೊಡವೆಗಳನ್ನು ತಡೆಗಟ್ಟಲು ಮತ್ತು ಇರುವ ಮೊಡವೆಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಬೆಳ್ಳುಳ್ಳಿ ಅರೆದ ಲೇಪನವನ್ನು ನೇರವಾಗಿ ಮೊಡವೆಯ ಮೇಲೆ ರಾತ್ರಿ ಹಚ್ಚಿ ಬೆಳಿಗ್ಗೆ ತೊಳೆದುಕೊಂಡರಾಯಿತು. ಕೊಂಚ ಉರಿಯುವ ಕಾರಣ ತೆಳುವಾಗಿ ಮೊದಲು ಹಚ್ಚಿ ಉರಿ ಕಡಿಮೆಯಾದ ಬಳಿಕ ಸ್ವಲ್ಪ ದಪ್ಪನಾಗಿ ಹಚ್ಚಬೇಕು.

English summary

Homemade natural skin whitening face packs in kannada

It is a dream of most women to achieve a skin that is glowing and flawless. They make use of several skin whitening products to improve their skin tone. As a result they tend to do more harm to the natural skin with the help of harmful chemicals present in most skin care products. So today boldsky sharing natural face packs have a look
Story first published: Wednesday, November 18, 2015, 17:09 [IST]
X
Desktop Bottom Promotion