ಕಬ್ಬಿನ ಹಾಲಿನ ಫೇಸ್ ಪ್ಯಾಕ್- ಇನ್ನು ಚಿಂತಿಸುವ ಅಗತ್ಯವೇ ಇಲ್ಲ!

By: Hemanth
Subscribe to Boldsky

ಸುಡು ಬಿಸಿಲಿಗೆ ಒಂದು ಲೋಟ ಕಬ್ಬಿನ ಹಾಲು ಕುಡಿದರೆ ದೇಹ ತಂಪಾಗುವುದು ಮಾತ್ರವಲ್ಲದೆ, ಆಯಾಸವೆಲ್ಲವೂ ನೀಗಿದಂತೆ ಆಗುವುದು. ತಂಪು ಪಾನೀಯಗಳನ್ನು ಕುಡಿಯುವ ಬದಲಿಗೆ ಕಬ್ಬಿನ ಹಾಲನ್ನು ಕುಡಿದರೆ ಅದರಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇದೆ. ಕಬ್ಬಿನ ಹಾಲು ಅಥವಾ ಕಬ್ಬಿನ ಜ್ಯೂಸ್ ತುಂಬಾ ರುಚಿಕರವಾಗಿರುವ ಕಾರಣದಿಂದ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಅಬ್ಬಬ್ಬಾ! ಇಷ್ಟೊಂದು ಆರೋಗ್ಯಕರ ಗುಣ ಕಬ್ಬಿನಲ್ಲಿದೆಯೇ?

ಅದರಲ್ಲೂ ಕಬ್ಬಿನ ಹಾಲಿಗೆ ಸ್ವಲ್ಪ ಶುಂಠಿ ಹಾಲು ಲಿಂಬೆರಸವನ್ನು ಹಾಕಿ ಕುಡಿದರೆ ಅದರ ರುಚಿಯ ಬಗ್ಗೆ ಹೇಳುವುದೇ ಬೇಡ. ಕಬ್ಬಿನ ಹಾಲಿನಿಂದ ಆರೋಗ್ಯ ಲಾಭಗಳು ಇವೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಕಬ್ಬಿನ ಹಾಲು ದೇಹದ ಸೌಂದರ್ಯಕ್ಕೂ ಒಳ್ಳೆಯದು ಎಂದು ಎಷ್ಟು ಜನರಿಗೆ ಗೊತ್ತು? ತ್ವಚೆಗೆ ಕಬ್ಬಿನ ಹಾಲಿನ ಪ್ಯಾಕ್ ಮಾಡುವುದು ತುಂಬಾ ಸುಲಭ ಹಾಗೂ ಇದು ಹೆಚ್ಚು ವೆಚ್ಚದಾಯಕವೂ ಅಲ್ಲ.

ಬೇರೆ ಫೇಸ್ ಪ್ಯಾಕ್‌ನಲ್ಲಿ ಇರುವಂತೆ ಇದರಲ್ಲಿ ಯಾವುದೇ ರಾಸಾಯನಿಕವೂ ಇಲ್ಲ. ಇದರಿಂದ ಕಬ್ಬಿನ ಹಾಲಿನಿಂದ ಮಾಡುವಂತಹ ಪ್ಯಾಕ್ ನಿಂದ ಯಾವೆಲ್ಲಾ ಲಾಭಗಳು ನಿಮ್ಮ ತ್ವಚೆಗೆ ಸಿಗಲಿದೆ ಎಂದು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.... 

ಕಬ್ಬಿನ ಹಾಲು ಮತ್ತು ಜೇನುತುಪ್ಪದ ಪ್ಯಾಕ್

ಕಬ್ಬಿನ ಹಾಲು ಮತ್ತು ಜೇನುತುಪ್ಪದ ಪ್ಯಾಕ್

ಒಣ ಚರ್ಮಕ್ಕೆ ಇದು ಅತೀ ಉತ್ತಮವಾಗಿರುವಂತದ್ದಾಗಿದೆ. ಇದು ತ್ವಚೆಗೆ ತೇವಾಂಶವನ್ನು ನೀಡಿ ನಯವಾಗಿಡುತ್ತದೆ. ಒಣ ಚರ್ಮದ ಸಮಸ್ಯೆಯಿದ್ದರೆ ವಾರದಲ್ಲಿ ಒಂದು ಸಲ ಈ ಪ್ಯಾಕ್‌ನ್ನು ಬಳಸಿ. ಇದು ಚರ್ಮಕ್ಕೆ ಮಾಯಿಶ್ಚರೈಸ್ ನೀಡುವುದು.

ಮಾಡುವ ವಿಧಾನ

ಅರ್ಥಕಪ್ ಕಬ್ಬಿನ ಹಾಲಿಗೆ, ಒಂದೆರಡು ಚಮಚ ಜೇನು ತುಪ್ಪ ಬೆರೆಸಿ, ತ್ವಚೆಗೆ ಫೇಸ್ ಪ್ಯಾಕ್‌ನಂತೆ ಹಚ್ಚಿಕೊಳ್ಳಿ, ತದನಂತರ ಸುಮಾರು 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ... ನೆನಪಿಡಿ ಉತ್ತಮ ಫಲಿತಾಂಶಕ್ಕಾಗಿ ಈ ವಿಧಾನವನ್ನು ಸುಮಾರು ಎರಡು ವಾರಗಳವರೆಗೆ ಮುಂದುವರೆಸಿ...

ಕಬ್ಬಿನ ಹಾಲು ಮತ್ತು ಪಪ್ಪಾಯಿ

ಕಬ್ಬಿನ ಹಾಲು ಮತ್ತು ಪಪ್ಪಾಯಿ

ಮುಖದಲ್ಲಿನ ಕಲೆಗಳನ್ನು ನಿವಾರಣೆ ಮಾಡಬೇಕೆಂದರೆ ಇದು ಅತೀ ಉತ್ತಮವಾದ ಪ್ಯಾಕ್ ಆಗಿದೆ. ಬಲಿತ ಪಪ್ಪಾಯಿಯ ತುಂಡುಗಳನ್ನು ತೆಗೆದು ಅದನ್ನು ಕಬ್ಬಿನ ಹಾಲಿನೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ, ತದನಂತರ 15 ನಿಮಿಷ ಬಿಟ್ಟು ಮುಖ ತಣ್ಣೀರಿನಿಂದ ತೊಳೆದುಕೊಳ್ಳಿ

ಕಬ್ಬಿನ ಹಾಲು ಮತ್ತು ಕಾಫಿ

ಕಬ್ಬಿನ ಹಾಲು ಮತ್ತು ಕಾಫಿ

ಇದು ಸತ್ತ ಚರ್ಮಗಳನ್ನು ತೆಗೆದು ಹಾಕಲು ಮಾಡಲ್ಪಡುವಂತಹ ಅತ್ಯುತ್ತಮ ಮನೆಯ ಸ್ಕ್ರಬ್ ಆಗಿದೆ. ಸಕ್ಕರೆಯು ಕೋಶಗಳು ಪುನರುಜ್ಜೀವನಗೊಳ್ಳಲು ನೆರವಾಗುವುದು. ಸ್ವಲ್ಪ ಮಟ್ಟಿನ ಬ್ಲೀಚಿಂಗ್ ಬೇಕಾದರೆ ಇದಕ್ಕೆ ಸ್ವಲ್ಪ ಕಿತ್ತಳೆ ರಸವನ್ನು ಹಾಕಬಹುದು. ಕಿತ್ತಳೆ ರಸದಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿರುತ್ತದೆ.

ಕಬ್ಬಿನ ಹಾಲು ಮತ್ತು ಮುಲ್ತಾನಿ ಮಿಟ್ಟಿ

ಕಬ್ಬಿನ ಹಾಲು ಮತ್ತು ಮುಲ್ತಾನಿ ಮಿಟ್ಟಿ

ಎಣ್ಣೆಯಂಶವನ್ನು ಹೊಂದಿರುವ ಚರ್ಮದವರಿಗೆ ಇದು ಹೇಳಿ ಮಾಡಿಸಿದ ಪ್ಯಾಕ್ ಆಗಿದೆ. ಮುಲ್ತಾನಿ ಮಿಟ್ಟಿ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ ಮತ್ತು ಕಬ್ಬಿನ ಹಾಲು ಚರ್ಮವು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು.ಪುರಾತನ ಕಾಲದ ಸೌಂದರ್ಯ ರಹಸ್ಯ-ಮುಲ್ತಾನಿ ಮಿಟ್ಟಿ

 
English summary

Top Benefits Of Sugarcane Juice On Face

There are many health benefits of drinking sugarcane juice, and it is extremely tasty as well, isn't it? Apart from being a great drink, sugarcane juice has many beauty benefits as well and can be easily used for the skin. Here's how to use sugarcane juice on skin.
Please Wait while comments are loading...
Subscribe Newsletter