ಹೆಚ್ಚು ಕಾಲ ನೀರಿನಲ್ಲಿ ಸಮಯ ಕಳೆದರೆ ಹೀಗೂ ಆಗುವುದು..!

By: Divya
Subscribe to Boldsky

ದಿನದಲ್ಲೊಮ್ಮೆ ಈಜುವುದರಿಂದ ದೇಹಕ್ಕೆ ಉತ್ತಮ ರೀತಿಯ ವ್ಯಾಯಾಮವಾಗುತ್ತದೆ. ಮೈ ಮನಸ್ಸು ಎರಡು ತಾಜಾತನದಿಂದ ಕೂಡಿರುತ್ತದೆ. ಮಾಡುವ ಕೆಲಸಲ್ಲಿ ಹೆಚ್ಚಿನ ಉತ್ಸಾಹ ಹಾಗೂ ಶ್ರದ್ಧೆ ಬರುವಂತೆ ಮಾಡುತ್ತದೆ. ದಿನದಲ್ಲಿ ಕೆಲ ಸಮಯ ಈಜುವುದರಿಂದ ದೇಹದ ತೂಕವನ್ನು ಇಳಿಸಬಹುದು. ಇಷ್ಟೇ ಅಲ್ಲದೆ ನಮ್ಮ ಶರೀರದ ಪ್ರತಿಯೊಂದು ಭಾಗವು ಸಡಿಲವಾಗಿ, ಆರೋಗ್ಯ ಪೂರ್ಣವಾಗಿ ಇರುತ್ತದೆ. ಆದರೆ ಇವೆಲ್ಲಕ್ಕೂ ಒಂದು ಮಿತಿ ಇರಬೇಕು.

ಕೆಲವರು ಈಜುವುದು ಎಂದರೆ 10-15 ನಿಮಿಷಗಳ ಕಾಲ ನೀರಿನಲ್ಲೇ ಇರುತ್ತಾರೆ. ಹೀಗೆ ಮಾಡುವುದರಿಂದ ತ್ವಚೆ ಹಾಗೂ ಕೇಶರಾಶಿಗೆ ಒಳ್ಳೆಯದಲ್ಲ. ಕ್ಲೋರಿನೇಟೆಡ್ ನೀರಾಗಿದ್ದರೂ ಅನೇಕ ಆರೋಗ್ಯ ಸಮಸ್ಯೆ ಹುಟ್ಟಿಸಬಹುದು. ಬ್ಯಾಕ್ಟೀರಿಯಾಗಳು ತ್ವಚೆಯ ಮೇಲೆ ದಾಳಿಮಾಡಬಹುದು. ನೀರಿನಲ್ಲಿ ಹೆಚ್ಚುಕಾಲ ಕಳೆದರೂ ತ್ವಚೆ ಮತ್ತು ಕೇಶ ರಾಶಿಯ ಆರೋಗ್ಯವನ್ನು ಹೇಗೆ ಕಾಪಾಡಬಹುದು ಎಂಬ ಮಾಹಿತಿ ಇಲ್ಲಿದೆ... 

Swimming skincare tips

ಮುನ್ನೆಚ್ಚರಿಕೆ ಅಗತ್ಯ

ನೀರಿನಲ್ಲಿ ಹೆಚ್ಚು ಕಾಲ ಕಳೆಯಬೇಕು ಅಥವಾ ಈಜಬೇಕು ಎನ್ನುವ ಬಯಕೆ ಇದ್ದರೆ ಮೊದಲು ಗುಣಮಟ್ಟದ ಸಿಲಿಕೋನ್ ಟೋಪಿ, ಇಯರ್ ಪ್ಲಗ್ ಹಾಗೂ ಕನ್ನಡಕವನ್ನು ಧರಿಸಿ. ಇಲ್ಲವಾದರೆ ಇವು ನಿಮ್ಮ ರಕ್ಷಣೆ ಮಾಡುವುದಿಲ್ಲ. ಕೆಲವರು ಕಣ್ ಕಪ್ಪು, ಕಿವಿ ಓಲೆ, ತುಟಿ ಬಣ್ಣವನ್ನು ಬಳಿದುಕೊಂಡೇ ನೀರಿನಲ್ಲಿ ಇಳಿಯುತ್ತಾರೆ. ಕ್ಲೋರಿನ್‍ಯುಕ್ತ ನೀರಿನಲ್ಲಿ ಇವುಗಳ ಮಿಶ್ರಣದಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಕೇಶರಾಶಿಗೆ ಹೆಚ್ಚು ಎಣ್ಣೆಯನ್ನು ಹಚ್ಚಿಕೊಂಡು ನೀರಿಗಿಳಿದರೆ ಕೂದಲು ಒರಟಾಗದು.

ಉತ್ತಮ ಸನ್‌ಕ್ರೀಮ್ ಬಳಕೆ

ನೀರಿನ ಕೊಳಕ್ಕೆ ಹೋಗುವ ಮೊದಲು ಅಂದರೆ ಸುಮಾರು 15-20 ನಿಮಿಷ ಮೊದಲೇ ಸನ್‌ಕ್ರೀಮ್ ಅನ್ವಯಿಸಿಕೊಳ್ಳಬೇಕು. ನೀರಿನಲ್ಲಿ ಸೂರ್ಯನ ಕಿರಣವು ನೇರವಾಗಿ ಬೀಳುವುದರಿಂದ ತ್ವಚೆಯು ಬಹು ಬೇಗ ಸುಡುವ ಸಾಧ್ಯತೆ ಇರುತ್ತದೆ. ಮೊದಲೇ ಕ್ರೀಮ್ ಬಳಿದು ಕೊಂಡರೆ ತ್ವಚೆಯ ಆರೋಗ್ಯ ಕಾಪಾಡಬಹುದು.

ಶವರ್ ಸ್ನಾನ

ನೀರಿನ ಕೊಳಕ್ಕೆ ಇಳಿಯುವ ಮೊದಲೇ ಸ್ನಾನ ಮಾಡಿದರೆ ಕೊಳೆಯಿಂದ ಮುಕ್ತವಾಗಿ ದೇಹದ ಉಷ್ಣಾಂಶವನ್ನು ನಿಯಂತ್ರಿಸಬಹುದು. ಈಜಿನ ನಂತರ ಶವರ್ ಸ್ನಾನ ಮಾಡುವುದರಿಂದ ಹಾನಿಕಾರಕ ಕ್ಲೋರಿನ್ ಅಂಶ ದೇಹದಿಂದ ನಿರ್ಮೂಲನೆ ಮಾಡಬಹುದು.

ಅಯೋಡಿನ್‌‌ನಲ್ಲಿ ಮುಳುಗಿ

ಅಯೋಡಿನ್ ನೀರಿನಲ್ಲಿ ಒಮ್ಮೆ ಮುಳುಗೆದ್ದು ಕ್ಲೋರಿನ್ ಯುಕ್ತ ನೀರಿನಲ್ಲಿ ಈಜಲು ಹೋಗುವುದರಿಂದ ಸೋಂಕುಗಳು ನಿಮ್ಮ ದೇಹವನ್ನು ಸ್ಪರ್ಶಿಸದು.

ಮಾಯಿಶ್ಚರೈಸ್ ಕ್ರೀಮ್ ಬಳಕೆ

ಈಜುವ ಮುನ್ನ ಮಾಯಿಶ್ಚರೈಸ್ ಕ್ರೀಮ್‍ನ್ನು ದೇಹಕ್ಕೆ ಅನ್ವಯಿಸಿಕೊಳ್ಳಬೇಕು. ಹೀಗೆ ಮಾಡಿದರೆ ಕ್ಲೋರಿನ್ ನೀರಿನ ಪರಿಣಾಮ ತ್ವಚೆಯ ಮೇಲೆ ಉಂಟಾಗದು. ಈಜಿನ ನಂತರವೂ ಈ ಕ್ರೀಮ್ ಬಳಸಿದರೆ ತ್ವಚೆ ಸದಾ ತೇವಾಂಶದಿಂದ ಕೂಡಿರುತ್ತದೆ.

English summary

Skincare Tips To Be Followed During Swimming

However, it's not the best thing for your skin and hair, and you'll find that even a few months by the pool can wreak extensive damage on both. Most pools are also so dirty that you might even want to reconsider swimming entirely. So, here's how you can protect your skin and hair in the worst of the pool scenarios...
Story first published: Tuesday, July 11, 2017, 8:32 [IST]
Subscribe Newsletter