ಸೌಂದರ್ಯ ಕೆಡಿಸುವ ಎಲ್ಲಾ ಸಮಸ್ಯೆಗಳಿಗೆ-ತುಳಸಿ ಫೇಸ್ ಪ್ಯಾಕ್

By: Hemanth
Subscribe to Boldsky

ಹಿಂದಿನಿಂದಲೂ ಭಾರತೀಯರು ಕೆಲವೊಂದು ಗಿಡಮೂಲಿಕೆಗಳನ್ನು ಬಳಸಿಕೊಂಡು ಔಷಧಗಳನ್ನು ತಯಾರಿಸುತ್ತಿದ್ದರು ಎನ್ನುವುದು ನಮಗೆ ತಿಳಿದಿದೆ. ಔಷಧೀಯ ಗುಣಗಳು ಪ್ರತಿಯೊಂದು ಸಸ್ಯಗಳಲ್ಲೂ ಇರಲ್ಲ. ಆದರೆ ಕೆಲವೊಂದು ಗಿಡಗಳಲ್ಲಿ ಇದು ಹೆಚ್ಚಿರುತ್ತದೆ. ಅದರಲ್ಲಿ ತುಳಸಿ ಕೂಡ ಒಂದಾಗಿದೆ.  ಅದೃಷ್ಟಹೀನ ದೇವತೆ ತುಳಸಿ ಪರಮಪಾವನೆಯಾಗಿದ್ದು ಹೇಗೆ?

ತುಳಸಿ ಗಿಡದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಹಿಂದಿನಿಂದಲೂ ಆಯುರ್ವೇದದಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ದೇಹದ ಆರೋಗ್ಯ ಹಾಗೂ ಚರ್ಮದ ಆರೋಗ್ಯ, ಕೂದಲು ಸಹಿತ ಹಲವಾರು ರೀತಿಯ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗಲಿದೆ. ಗಿಡಮೂಲಿಕೆಗಳ ರಾಣಿ 'ತುಳಸಿ'-ಆರೋಗ್ಯದ ಸಂಜೀವಿನಿ

ತುಳಸಿಯಿಂದ ಚರ್ಮದ ಆರೈಕೆ ಹಾಗೂ ಚರ್ಮದ ಕೆಲವೊಂದು ಸಮಸ್ಯೆಗಳನ್ನು ನಿವಾರಿಸುವುದು ಹೇಗೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ... ಮುಂದೆ ಓದಿ...   

ಚರ್ಮದ ಸೋಂಕಿಗೆ

ಚರ್ಮದ ಸೋಂಕಿಗೆ

ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತುಳಸಿಯಲ್ಲಿರುವ ಕಾರಣದಿಂದ ಚರ್ಮದಲ್ಲಿ ಉಂಟಾಗುವ ಸೋಂಕನ್ನು ಇದು ತಡೆಗಟ್ಟುತ್ತದೆ. ತುರಿಕಚ್ಚಿ ಮತ್ತು ಇಸಬುನಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ. ಇದಕ್ಕೆ ಅರ್ಧ ಕಪ್ ಮೊಸರು ಹಾಕಿ ಮಿಶ್ರಣ ಮಾಡಿಕೊಂಡು, ಮುಖಕ್ಕೆ ಹಚ್ಚಿಕೊಳ್ಳಿ, ತದನಂತರ ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ. ಇದು ಚರ್ಮದ ಸೋಂಕನ್ನು ಕಡಿಮೆ ಮಾಡಿ ಹಾನಿಯನ್ನು ತಡೆಯುತ್ತದೆ.

ಆರೋಗ್ಯಕರ ಚರ್ಮ

ಆರೋಗ್ಯಕರ ಚರ್ಮ

ತುಳಸಿ ಎಲೆಗಳಲ್ಲಿ ಹಲವಾರು ಆ್ಯಂಟಿಆಕ್ಸಿಡೆಂಟ್ ಗಳಿವೆ ಮತ್ತು ಇದು ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಹೆಚ್ಚಿಸುವುದು.

ಮೊಡವೆಗಳ ನಿವಾರಣೆ

ಮೊಡವೆಗಳ ನಿವಾರಣೆ

ತುಳಸಿಯಲ್ಲಿ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅಧಿಕವಾಗಿದೆ. ಇದು ಮೊಡವೆಗಳನ್ನು ಸುಲಭವಾಗಿ ನಿವಾರಣೆ ಮಾಡುವುದು. ಇದು ಚರ್ಮವನ್ನು ನೈಸರ್ಗಿಕ ವಿಧಾನದಿಂದ ಸ್ವಚ್ಛಗೊಳಿಸುವುದು. ಇದರಿಂದ ಚರ್ಮದ ರಂಧ್ರಗಳಲ್ಲಿ ಇರುವಂತಹ ಧೂಳು, ಕಲ್ಮಶಗಳು ನಿವಾರಣೆಯಾಗುವುದು. ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಅದರ ರಸ ತೆಗೆಯಿರಿ. ಇದಕ್ಕೆ ಚಿಟಿಕೆಯಷ್ಟು ಅರಿಶಿನ ಹಾಕಿಕೊಳ್ಳಿ. ಇನ್ನು ಇವೆರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ.

ಕಲೆಗಳು ಮಾಯ!

ಕಲೆಗಳು ಮಾಯ!

ಮುಖದಲ್ಲಿ ಯಾವುದೇ ರೀತಿಯ ಕಲೆಗಳು ಇದ್ದರೆ ಅದನ್ನು ನಿವಾರಣೆ ಮಾಡುವಲ್ಲಿ ತುಳಸಿಯು ಪ್ರಮುಖ ಪಾತ್ರ ವಹಿಸುತ್ತದೆ. ಮುಖದಲ್ಲಿ ಮೊಡವೆಗಳ ಕಲೆಗಳು ಇದ್ದರೆ ತುಳಸಿ ಎಲೆಗಳಿಂದ ಇದನ್ನು ತೆಗೆದುಹಾಕಬಹುದು. ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪಮತ್ತು ಒಂದು ಚಮಚ ಲಿಂಬೆರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ.

ತುಳಸಿ ಎಲೆಗಳ ಪೇಸ್ಟ್

ತುಳಸಿ ಎಲೆಗಳ ಪೇಸ್ಟ್

ಸ್ವಲ್ಪ ತುಳಸಿ ಎಲೆಗಳನ್ನು ಸರಿಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಅರ್ಧಕಪ್ ಮೊಸರು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಇದನ್ನು ತೊಳೆಯಿರಿ. ಈ ಮದ್ದು ಚರ್ಮದ ಸೋಂಕನ್ನು ನಿವಾರಣೆ ಮಾಡಿ ಹಾನಿಯನ್ನು ತಪ್ಪಿಸುವುದು.

ತುಳಸಿ ಎಲೆಗಳ ಫೇಸ್ ವಾಶ್

ತುಳಸಿ ಎಲೆಗಳ ಫೇಸ್ ವಾಶ್

ಸುಮಾರು ಹತ್ತು ಹನ್ನೆರಡು ತುಳಸಿ ಎಲೆಗಳನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿಗೆ ಹಾಕಿ ಕುದಿಸುವುದನ್ನು ಸುಮಾರು ಮೂರರಿಂದ ನಾಲ್ಕು ನಿಮಿಷ ಮುಂದುವರೆಸಿ.ಬಳಿಕ ಉರಿ ನಂದಿಸಿ ತಣಿಯಲು ಬಿಡಿ. ತಣಿದ ಬಳಿಕ ಈ ನೀರನ್ನು ಒಂದು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರನ್ನು ಬಳಸಿ ನೀವು ಫೇಸ್ ವಾಶ್ ಅನ್ನು ಹೇಗೆ ಬಳಸುತ್ತೀರೋ ಅದೇ ರೀತಿ ಬಳಸಿ. ಈ ವಿಧಾನವನ್ನು ತಿಂಗಳಿಗೆ ಎರಡು ಬಾರಿ ಅನುಸರಿಸುವ ಮೂಲಕ ತ್ವಚೆ ಸ್ವಚ್ಛಗೊಳ್ಳುವುದರ ಜೊತೆಗೇ ಕಾಂತಿಯನ್ನೂ ಹೆಚ್ಚಿಸುತ್ತದೆ.

ತುಳಸಿ ಎಲೆ ಮತ್ತು ಚಂದನಪುಡಿಯ ಫೇಸ್ ಪ್ಯಾಕ್

ತುಳಸಿ ಎಲೆ ಮತ್ತು ಚಂದನಪುಡಿಯ ಫೇಸ್ ಪ್ಯಾಕ್

ಸುಮಾರು ಹತ್ತು ಹನ್ನೆರಡು ತುಳಸಿ ಎಲೆಗಳನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿಗೆ ಹಾಕಿ ಕೊಂಚ ಹೊತ್ತು ಕುದಿಸಿದ ಬಳಿಕ ಉರಿ ಆರಿಸಿ. ಬಳಿಕ ಈ ನೀರನ್ನು ಗಂಧದ ಪುಡಿಯೊಡನೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಿರುವಂತೆ ಬೆರೆಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿ ತಾನಾಗಿ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಡಲೆಹಿಟ್ಟು ಹಾಗೂ ತುಳಸಿ ಎಲೆಗಳು

ಕಡಲೆಹಿಟ್ಟು ಹಾಗೂ ತುಳಸಿ ಎಲೆಗಳು

ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

 

 

English summary

Simple ways tulsi or basil can help enhance your beauty

Basil, or tulasi, is known for its immense health-boosting properties. It is also used extensively in the beauty industry for its vast skin and hair benefits.
Subscribe Newsletter