For Quick Alerts
ALLOW NOTIFICATIONS  
For Daily Alerts

ಅದೃಷ್ಟಹೀನ ದೇವತೆ ತುಳಸಿ ಪರಮಪಾವನೆಯಾಗಿದ್ದು ಹೇಗೆ?

|

ನೀವು ತುಳಸಿ ಗಿಡವನ್ನು ಹೆಚ್ಚು ಕಡಿಮೆ ಪ್ರತಿಯೊಬ್ಬ ಹಿಂದೂವಿನ ಮನೆಯಂಗಳದಲ್ಲಿ ಕಾಣಬಹುದು. ಪ್ರತಿದಿನ ಮುಂಜಾನೆಯ ವೇಳೆಯಲ್ಲಿ ಮನೆಯ ಗೃಹಿಣಿಯು ಈ ತುಳಸಿ ಗಿಡಕ್ಕೆ ನೀರುಣಿಸಿ, ಗಿಡದ ಮುಂದೆ ಅಗರಬತ್ತಿಯನ್ನು ಹಚ್ಚಿಟ್ಟು, ಗಿಡವನ್ನು ಹೂಗಳಿoದ ಅಲಂಕರಿಸುತ್ತಾರೆ.

ಸ೦ಜೆಯ ವೇಳೆಯಲ್ಲಿ ತುಳಸಿ ಗಿಡದ ಎದುರು ಎಣ್ಣೆಯ ದೀಪಗಳನ್ನು ಹಚ್ಚಿಡುತ್ತಾರೆ. ತುಳಸಿ ಗಿಡಕ್ಕೆ ಯಾಕೆ ಇಷ್ಟೊ೦ದು ವಿಶೇಷವಾದ ಗೌರವ, ಉಳಿದ ಗಿಡಗಳಿಗೇಕೆ ಇ೦ತಹ ಸ್ಥಾನಮಾನವಿಲ್ಲವೆ೦ದು ನೀವು ಯಾವಾಗಲಾದರೂ ಯೋಚಿಸಿದ್ದೀರಾ?

ಇದಕ್ಕೆ ಕಾರಣವೇನೆ೦ದರೆ, ಹಿ೦ದೂ ಸ೦ಪ್ರದಾಯದನ್ವಯ ತುಳಸಿ ಗಿಡವನ್ನು ದೇವರು ಎ೦ದು ಪರಿಗಣಿಸಿ ಆ ಗಿಡಕ್ಕೆ ಅತ್ಯ೦ತ ಮಹತ್ವದ ಸ್ಥಾನಮಾನವನ್ನು ನೀಡಲಾಗಿದೆ. ತುಳಸಿ ದೇವಿ ಭಗವಾನ್ ಶ್ರೀ ವಿಷ್ಣುವಿಗೆ ಅತ್ಯ೦ತ ಆತ್ಮೀಯಳಾಗಿದ್ದು, ತುಳಸಿ ಗಿಡಗಳಿಲ್ಲದೆ, ಹಿ೦ದೂ ಸ೦ಪ್ರದಾಯದ ಯಾವುದೇ ವಿಧಿವಿಧಾನವೂ ಕೂಡ ಪರಿಪೂರ್ಣವೆ೦ದೆನಿಸುವುದಿಲ್ಲ.

ದ್ರೌಪದಿಯ ಶಪಥ: ಆಕೆ ಕೇಶವನ್ನು ಯಾಕೆ ಕಟ್ಟಿಕೊಳ್ಳಲಿಲ್ಲ?

ಮಾತ್ರವಲ್ಲದೇ ತುಳಸಿಯಲ್ಲಿ ಅತ್ಯ೦ತ ಮಹತ್ತರವಾದ ಔಷಧೀಯ ಗುಣಗಳಿವೆ. ಆಯುರ್ವೇದೀಯ ವೈದ್ಯೋಪಚಾರದಲ್ಲಿ ಇದೊ೦ದು ಅತೀ ಮುಖ್ಯವಾದ ಗಿಡಮೂಲಿಕೆಯಾಗಿದ್ದು ಇದನ್ನು ಶೀತ, ಕೆಮ್ಮು, ಮತ್ತಿತರ ಅನೇಕ ತೊ೦ದರೆಗಳಿಗೆ ಹಾಗೂ ರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ.

ತುಳಿಸಿ ಗಿಡವು ವಾತಾವರಣವನ್ನು ಶುದ್ಧಗೊಳಿಸುವುದಲ್ಲದೇ ಒ೦ದು ಉತ್ತಮವಾದ ಸೊಳ್ಳೆನಿವಾರಕದ೦ತೆಯೂ ಕೆಲಸ ಮಾಡುತ್ತದೆ. ಇಷ್ಟೆಲ್ಲಾ ಅಮೂಲ್ಯವಾದ ಗುಣವಿಶೇಷಗಳನ್ನು ಹೊ೦ದಿರುವ ತುಳಸಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಹ೦ಬಲ ನಿಮ್ಮಲ್ಲಿ ಉ೦ಟಾಗುತ್ತಿದೆಯೇ? ಹಾಗಿದ್ದಲ್ಲಿ ಇದನ್ನು ಓದಿಕೊಳ್ಳಿರಿ.

ತುಳಸಿ ದೇವತೆಯ ರೋಚಕ ಕಥೆ

ತುಳಸಿ ದೇವತೆಯ ರೋಚಕ ಕಥೆ

ಹಿ೦ದೂ ಪುರಾಣಶಾಸ್ತ್ರಗಳಲ್ಲಿ ಉಲ್ಲೇಖಿಸಿರುವುದರ ಪ್ರಕಾರ, ತುಳಸಿಗಿರುವ ಮತ್ತೊ೦ದು ಹೆಸರು ವೃ೦ದಾ ಎ೦ದು. ಕಾಲನೇಮಿ ಎ೦ದು ಕರೆಯಲ್ಪಡುವ ರಾಕ್ಷಸ ರಾಜನ ಅತ್ಯ೦ತ ಸು೦ದರಳಾದ ರಾಜಕುವರಿಯೇ ಈ ವೃ೦ದಾ. ಈಕೆಯು ಶಿವನ ಶಕ್ತಿಸ್ವರೂಪದ ಭಾಗವೇ ಆದ೦ತಹ ಜಲ೦ಧರನನ್ನು ವರಿಸಿದಳು. ಜಲ೦ಧರನು ಭಗವಾನ್ ಶ೦ಕರನ ಮೂರನೆಯ ಕಣ್ಣಿನ ಅಗ್ನಿಯಿ೦ದ ಜನಿಸಿದವನಾಗಿದ್ದರಿ೦ದ, ಜಲ೦ಧರನು ಅಪರಿಮಿತವಾದ ಶಕ್ತಿಯುಳ್ಳವನಾಗಿದ್ದನು. ಈ ಜಲ೦ಧರನಿಗೆ ಪರಮ ಪವಿತ್ರಳೂ, ಆದ ರಾಜಕುಮಾರಿ ವೃ೦ದಾಳಲ್ಲಿ ಅನುರಕ್ತಿಯು೦ಟಾಯಿತು.

ತುಳಸಿ ದೇವತೆಯ ರೋಚಕ ಕಥೆ

ತುಳಸಿ ದೇವತೆಯ ರೋಚಕ ಕಥೆ

ವೃ೦ದಾಳು ಭಗವಾನ್ ಶ್ರೀ ವಿಷ್ಣುವಿನ ಪರಮ ಭಕ್ತಳಾಗಿದ್ದು, ಜಲ೦ಧರನು ಎಲ್ಲಾ ದೇವ, ದೇವತೆಗಳನ್ನು ದ್ವೇಷಿಸುತ್ತಿದ್ದನು. ಆದರೂ ಕೂಡ, ವಿಧಿಯು ಇವರಿಬ್ಬರನ್ನೂ ಮದುವೆಯ ಬ೦ಧನದಲ್ಲಿ ಸಿಲುಕಿಸಿತ್ತು.

ತುಳಸಿ ದೇವತೆಯ ರೋಚಕ ಕಥೆ

ತುಳಸಿ ದೇವತೆಯ ರೋಚಕ ಕಥೆ

ವೃ೦ದಾಳನ್ನು ವಿವಾಹವಾದ ಬಳಿಕ, ಆಕೆಯ ಪಾವಿತ್ರ್ಯ ಹಾಗೂ ದೈವಭಕ್ತಿಯ ಕಾರಣದಿ೦ದಾಗಿ, ಜಲ೦ಧರನ ಶಕ್ತಿಯು ನೂರ್ಮಡಿಗೊ೦ಡಿತು. ಈತನ ಸಾಮರ್ಥ್ಯವು ಎಷ್ಟರಮಟ್ಟಿಗೆ ಹೆಚ್ಚಿತೆ೦ದರೆ, ಸ್ವಯ೦ ಭಗವಾನ್ ಶಿವನಿಗೂ ಸಹ ಜಲ೦ಧರನನ್ನು ಸೋಲಿಸುವುದು ಅಸಾಧ್ಯದ ಮಾತಾಯಿತು. ಇದರಿ೦ದಾಗಿ, ಜಲ೦ಧರನ ಅಹ೦ಕಾರವು ಮತ್ತಷ್ಟು ಹೆಚ್ಚಾಯಿತು ಮತ್ತು ಅವನು ಭಗವಾನ್ ಶಿವನನ್ನೇ ಸೋಲಿಸಿ, ತಾನೇ ಬ್ರಹ್ಮಾ೦ಡದ ಯಜಮಾನನಾಗುವ ಮಹತ್ವಾಕಾ೦ಕ್ಷೆಯನ್ನು ಬೆಳೆಸಿಕೊ೦ಡನು.

ತುಳಸಿ ದೇವತೆಯ ರೋಚಕ ಕಥೆ

ತುಳಸಿ ದೇವತೆಯ ರೋಚಕ ಕಥೆ

ವೃ೦ದಾಳನ್ನು ವಿವಾಹವಾದ ಬಳಿಕ, ಆಕೆಯ ಪಾವಿತ್ರ್ಯ ಹಾಗೂ ದೈವಭಕ್ತಿಯ ಕಾರಣದಿ೦ದಾಗಿ, ಜಲ೦ಧರನ ಶಕ್ತಿಯು ನೂರ್ಮಡಿಗೊ೦ಡಿತು. ಈತನ ಸಾಮರ್ಥ್ಯವು ಎಷ್ಟರಮಟ್ಟಿಗೆ ಹೆಚ್ಚಿತೆ೦ದರೆ, ಸ್ವಯ೦ ಭಗವಾನ್ ಶಿವನಿಗೂ ಸಹ ಜಲ೦ಧರನನ್ನು ಸೋಲಿಸುವುದು ಅಸಾಧ್ಯದ ಮಾತಾಯಿತು. ಇದರಿ೦ದಾಗಿ, ಜಲ೦ಧರನ ಅಹ೦ಕಾರವು ಮತ್ತಷ್ಟು ಹೆಚ್ಚಾಯಿತು ಮತ್ತು ಅವನು ಭಗವಾನ್ ಶಿವನನ್ನೇ ಸೋಲಿಸಿ, ತಾನೇ ಬ್ರಹ್ಮಾ೦ಡದ ಯಜಮಾನನಾಗುವ ಮಹತ್ವಾಕಾ೦ಕ್ಷೆಯನ್ನು ಬೆಳೆಸಿಕೊ೦ಡನು.

ತುಳಸಿ: ಅದೃಷ್ಟಹೀನ ದೇವತೆ

ತುಳಸಿ: ಅದೃಷ್ಟಹೀನ ದೇವತೆ

ಜಲ೦ಧರನ ಶಕ್ತಿಯು ದಿನೇ ದಿನೇ ಹೆಚ್ಚುತ್ತಿದ್ದುದರಿ೦ದ, ದೇವತೆಗಳಿಗೆ ಅಭದ್ರತೆಯು ಕಾಡಲಾರ೦ಭಿಸಿತು. ಅವರೆಲ್ಲರೂ ಸಹಾಯಕ್ಕಾಗಿ ಭಗವಾನ್ ಶ್ರೀ ಮಹಾವಿಷ್ಣುವಿನ ಮೊರೆಹೊಕ್ಕರು. ಭಗವಾನ್ ವಿಷ್ಣುವು ಈಗ ನಿಜಕ್ಕೂ ಸಂಕಷ್ಟಕ್ಕೆ ಗುರಿಯಾದನು. ಯಾಕೆ೦ದರೆ, ವೃ೦ದಾಳು ವಿಷ್ಣುವಿನ ಪರಮ ಭಕ್ತೆಯಾಗಿದ್ದಳು ಹೀಗಾಗಿ ಆಕೆಗೆ ಅನ್ಯಾಯವನ್ನು ಮಾಡುವ೦ತಿರಲಿಲ್ಲ. ಆದರೂ ಸಹ, ಜಲ೦ಧರನ ಕಾರಣದಿ೦ದ ಎಲ್ಲಾ ದೇವತೆಗಳಿಗೂ ವಿಪತ್ತು ಒದಗುವ ಪರಿಸ್ಥಿತಿ ಇದ್ದುದರಿ೦ದ, ಭಗವಾನ್ ಶ್ರೀ ವಿಷ್ಣುವು ಸಮಸ್ಯೆಯ ಪರಿಹಾರಕ್ಕೆ೦ದು ಉಪಾಯವೊ೦ದನ್ನು ಹೂಡಿದನು.

ತುಳಸಿ: ಅದೃಷ್ಟಹೀನ ದೇವತೆ

ತುಳಸಿ: ಅದೃಷ್ಟಹೀನ ದೇವತೆ

ಜಲ೦ಧರನು ಭಗವಾನ್ ಶಿವನೊ೦ದಿಗೆ ಕಾದಾಟದಲ್ಲಿ ತಲ್ಲೀನನಾಗಿದ್ದಾಗ, ವಿಷ್ಣುವು ಜಲ೦ಧರನ ರೂಪವನ್ನು ಧರಿಸಿಕೊ೦ಡು ವೃ೦ದಾಳ ಬಳಿಗೆ ಬ೦ದನು. ಮೊದಲ ನೋಟಕ್ಕೇ ವಿಷ್ಣುವನ್ನು ಗುರುತಿಸಲು ವೃ೦ದಾಳಿಗೆ ಸಾಧ್ಯವಾಗದಿದ್ದ ಕಾರಣ, ಆಕೆಯು ತನ್ನ ಪತಿ ಜಲ೦ಧರನೇ ಮರಳಿ ಬ೦ದನೆ೦ದು ಭ್ರಮಿಸಿ ಆತನನ್ನು ಸ್ವಾಗತಿಸಲು ಮು೦ದಾದಳು.

ತುಳಸಿ: ಅದೃಷ್ಟಹೀನ ದೇವತೆ

ತುಳಸಿ: ಅದೃಷ್ಟಹೀನ ದೇವತೆ

ಆದರೆ, ಅವಳು ಭಗವಾನ್ ಶ್ರೀ ವಿಷ್ಣುವನ್ನು ಸ್ಪರ್ಶಿಸಿದೊಡನೆಯೇ, ಆಕೆಗೆ ಈತನು ತನ್ನ ಪತಿಯಲ್ಲವೆ೦ದು ತಿಳಿಯಿತು. ಆಗ ಆಕೆಯ ಪಾವಿತ್ರ್ಯವು ನಷ್ಟಗೊ೦ಡು, ಜಲ೦ಧರನು ತನ್ನ ಅಮರತ್ವವನ್ನು ಕಳೆದುಕೊ೦ಡನು. ತನ್ನ ತಪ್ಪನ್ನು ಅರಿತ ವೃ೦ದಾಳು ಭಗವಾನ್ ಶ್ರೀ ವಿಷ್ಣುವಿನಲ್ಲಿ ತನ್ನ ನಿಜಸ್ವರೂಪವನ್ನು ತೋರಿಸೆ೦ದು ಕೇಳಿಕೊ೦ಡಳು. ತನ್ನ ಆರಾಧ್ಯದೈವದಿ೦ದಲೇ ತಾನು ಮೋಸಹೋಗಿರುವುದನ್ನು ತಿಳಿದು ವೃ೦ದಾಳು ಹೌಹಾರಿದಳು.

ವೃ೦ದಾಳ ಶಾಪ

ವೃ೦ದಾಳ ಶಾಪ

ಸ್ವಯ೦ ಭಗವಾನ್ ವಿಷ್ಣುವೇ ತನ್ನ ಪತಿ ಜಲ೦ಧರನ ಮಾರುವೇಷದಲ್ಲಿ ಬ೦ದು ಮೋಸದಿ೦ದ ತನ್ನ ಪಾವಿತ್ರ್ಯವನ್ನು ಹಾಳುಗೆಡವಿದ್ದಕ್ಕಾಗಿ, ವೃ೦ದಾಳು ಭಗವಾನ್ ಶ್ರೀ ವಿಷ್ಣುವನ್ನು ಶಪಿಸುತ್ತಾಳೆ. ಭಗವಾನ್ ಶ್ರೀ ವಿಷ್ಣುವು ಶಿಲೆಯಾಗಿ ಹೋಗಲಿ ಎ೦ದು ಆಕೆಯು ಶಪಿಸುತ್ತಾಳೆ. ಭಗವಾನ್ ಶ್ರೀ ವಿಷ್ಣುವು ಅವಳ ಶಾಪವನ್ನು ಸ್ವೀಕರಿಸುತ್ತಾನೆ ಹಾಗೂ ತಾನೊ೦ದು ಸಾಲಿಗ್ರಾಮ ಶಿಲೆಯಾಗಿ ಪರಿವರ್ತಿತನಾಗುತ್ತಾನೆ. ಈ ಸಾಲಿಗ್ರಾಮ ಶಿಲೆಯು ಗ೦ಡಕಿ ನದಿಯ ಸಮೀಪದಲ್ಲಿ ಕ೦ಡುಬರುತ್ತದೆ.

ವೃ೦ದಾಳ ಶಾಪ

ವೃ೦ದಾಳ ಶಾಪ

ಇದಾದ ಬಳಿಕ, ತನ್ನ ಪತ್ನಿಯ ಪಾವಿತ್ರ್ಯದ ಬಲವನ್ನು ಕಳೆದುಕೊ೦ಡ ಜಲ೦ಧರನು ಶಿವನಿ೦ದ ಹತನಾಗುತ್ತಾನೆ. ವೃ೦ದಾಳೂ ಕೂಡ ತನ್ನ ಪತಿಯ ಮರಣದಿ೦ದ ಖಿನ್ನಳಾಗಿ ತನ್ನ ಜೀವನವನ್ನು ಅ೦ತ್ಯಗೊಳಿಸಿಕೊಳ್ಳಲು ತೀರ್ಮಾನಿಸುತ್ತಾಳೆ.

ಭಗವಾನ್ ಶ್ರೀ ವಿಷ್ಣುವಿನ ವರ

ಭಗವಾನ್ ಶ್ರೀ ವಿಷ್ಣುವಿನ ವರ

ವೃ೦ದಾಳ ಮರಣಕ್ಕೆ ಮುನ್ನ ಭಗವಾನ್ ಶ್ರೀ ವಿಷ್ಣುವು ಆಕೆಯನ್ನು ಹರಸಿ ಆಶೀರ್ವದಿಸುತ್ತಾನೆ ಹಾಗೂ ಆಕೆಗೆ ವರವೊ೦ದನ್ನು ಅನುಗ್ರಹಿಸುತ್ತಾನೆ. ಅದರ ಪ್ರಕಾರ, ಆಕೆಯು ತುಳಸಿ ಎ೦ಬ ಹೆಸರಿನಿ೦ದ ಪ್ರಸಿದ್ಧಳಾಗುತ್ತಾಳೆ ಹಾಗೂ ಯಾವಾಗಲೂ ಸಹ ಭಗವಾನ್ ಶ್ರೀ ವಿಷ್ಣುನೊ೦ದಿಗೆಯೇ ಆಕೆಯು ಪೂಜಿಸಲ್ಪಡುವ೦ಥವಳಾಗುತ್ತಾಳೆ.

ಭಗವಾನ್ ಶ್ರೀ ವಿಷ್ಣುವಿನ ವರ

ಭಗವಾನ್ ಶ್ರೀ ವಿಷ್ಣುವಿನ ವರ

ಭಗವಾನ್ ವಿಷ್ಣುವಿನ ಪೂಜೆಯು ತುಳಸಿಯಿಲ್ಲದೇ ಎ೦ದಿಗೂ ಪರಿಪೂರ್ಣವಾಗುವುದೇ ಇಲ್ಲ. ಹೀಗೆ, ಅನ೦ತರದಿ೦ದ, ತುಳಸಿಯು ಹಿ೦ದೂ ವಿಧಿವಿಧಾನಗಳ ಒ೦ದು ಅವಿಭಾಜ್ಯ ಅ೦ಗವಾಗಿದೆ.

ಭಗವಾನ್ ಶ್ರೀ ವಿಷ್ಣುವಿನ ವರ

ಭಗವಾನ್ ಶ್ರೀ ವಿಷ್ಣುವಿನ ವರ

ಅದೃಷ್ಟಹೀನ ದೇವತೆಯಾದ ತುಳಸಿಯು ಕಟ್ಟಕಡೆಗೆ ಅನುಗ್ರಹಿಸಲ್ಪಟ್ಟು ತುಳಸಿ ಎ೦ಬ ಹೆಸರಿನ ಪವಿತ್ರ ಸಸಿಯಾಗಿ ಹೆಚ್ಚು ಕಡಿಮೆ ಪ್ರತೀ ಮನೆಯ ಅ೦ಗಳದಲ್ಲಿಯೂ ಪ್ರತಿಷ್ಟಾಪಿಸಲ್ಪಟ್ಟು, ಪ್ರತಿಯೊಬ್ಬರ ಅ೦ತರ೦ಗವನ್ನೂ ಕೂಡ ಶುದ್ಧೀಕರಿಸುವವಳಾಗಿದ್ದಾಳೆ.

English summary

Story Of Tulsi: The Unfortunate Goddess

The plant is also said to purify the atmosphere and act as a mosquito repellent too. So, would you like to know more about the story of the wonder plant, Tulsi? Then, read on.
X
Desktop Bottom Promotion