For Quick Alerts
ALLOW NOTIFICATIONS  
For Daily Alerts

ಅಕ್ಕಿಹಿಟ್ಟಿನ ಫೇಸ್ ಪ್ಯಾಕ್ ಪ್ರಯತ್ನಿಸಿ-ಸುಂದರವಾಗಿ ಕಾಣುವಿರಿ!

ಅಕ್ಕಿಯನ್ನು ಬೇಯಿಸಿದ ಬಳಿಕ ಸೋಸಿದ ನೀರಿನಿಂದ ಮುಖವನ್ನು ತೊಳೆದುಕೊಳ್ಳುವುದರ ಮಹತ್ವವನ್ನು ನೀವು ಈಗಾಗಲೇ ಅರಿತಿದ್ದೀರಿ. ಅಂತೆಯೇ ಅಕ್ಕಿಹಿಟ್ಟನ್ನು ಮುಖಲೇಪದ ರೂಪದಲ್ಲಿ ಬಳಸುವುದರಿಂದಲೂ ಹಲವಾರು ಪ್ರಯೋಜನಗಳಿವೆ....

By Arshad
|

ಅಕ್ಕಿಯನ್ನು ಬೇಯಿಸಿದ ಬಳಿಕ ಸೋಸಿದ ನೀರಿನಿಂದ ಮುಖವನ್ನು ತೊಳೆದುಕೊಳ್ಳುವುದರ ಮಹತ್ವವನ್ನು ನೀವು ಈಗಾಗಲೇ ಅರಿತಿದ್ದೀರಿ. ಅಂತೆಯೇ ಅಕ್ಕಿಹಿಟ್ಟನ್ನು ಮುಖಲೇಪದ ರೂಪದಲ್ಲಿ ಬಳಸುವುದರಿಂದಲೂ ಹಲವಾರು ಪ್ರಯೋಜನಗಳಿವೆ.

ಹಿಂದಿನ ಕಾಲದಲ್ಲಿ ಸೌಂದರ್ಯ ವರ್ಧಕವಾಗಿ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸಲು ಅಕ್ಕಿಹಿಟ್ಟನ್ನು ಮುಖಲೇಪದ ರೂಪದಲ್ಲಿ ಏಷಿಯಾ ಖಂಡದ ಮಹಿಳೆಯರು ಸಾವಿರಾರು ವರ್ಷಗಳಿಂದ ಬಳಸುತ್ತಾ ಬಂದಿದ್ದಾರೆ. ಇದು ಮುಖದ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೇ ಕೋಮಲತೆಯನ್ನೂ ನೀಡುತ್ತದೆ.

ಆದರೆ ಅಕ್ಕಿಹಿಟ್ಟನ್ನು ಸುಮ್ಮನೇ ರೊಟ್ಟಿ ತಟ್ಟಿದಂತೆ ಮುಖಕ್ಕೆ ಹಚ್ಚಿಕೊಂಡರೆ ಸಾಲದು. ಇದರ ಸರಿಯಾದ ಬಳಕೆಯ ವಿಧಾನವನ್ನು ಇಂದಿನ ಲೇಖನದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಅಕ್ಕಿಹಿಟ್ಟನ್ನು ಹೇಗೆ ಬಳಸಬಹುದು ಎಂಬ ವಿಷಯದ ಮೇಲೆ ಹಲವಾರು ಮಾಹಿತಿಗಳು ಲಭ್ಯವಿವೆ. ಮುಖದ ಸೌಂದರ್ಯ ಹೆಚ್ಚಿಸಲು 'ಅಕ್ಕಿ ಹಿಟ್ಟಿನ' ಫೇಸ್ ಪ್ಯಾಕ್

ಆದರೆ ಈ ಮಾಹಿತಿಗಳು ಕೊಂಚ ದುಬಾರಿಯಾಗಿದ್ದು ಎಲ್ಲರ ಕೈಗೆಟುಕುವುದಿಲ್ಲ. ಇದೇ ಕೆಲಸ ಮಾಡುವ ಪ್ರಸಾಧನಗಳೂ ದುಬಾರಿಯಾಗಿದ್ದು ಇವನ್ನು ಕೊಳ್ಳಲು ಹಿಂದೇಟು ಹಾಕಬೇಕಾಗಿ ಬರಬಹುದು. ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಸಾಧ್ಯವಿರುವಾಗ ವೃಥಾ ಹಣವನ್ನೇಕೆ ವೆಚ್ಚ ಮಾಡಬೇಕು? ಇದೇ ಯೋಚನೆ ನಿಮ್ಮದೂ ಆಗಿದ್ದರೆ ಕೆಳಗಿನ ವಿಧಾನ ನಿಮ್ಮ ತೀರ್ಮಾನನ್ನು ಕಾರ್ಯಗತಗೊಳಿಸಲು ನೆರವಾಗಬಹುದು. ತ್ವಚೆಯ ಕಾಂತಿಗೆ ದುಬಾರಿ ಬೆಲೆಯ ಉತ್ಪನ್ನ ಏತಕ್ಕೆ ಬೇಕು?

ಈ ವಿಧಾನ ಸುಲಭ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸುವಂತಹದ್ದಾಗಿದ್ದು ಇದಕ್ಕೆ ಬೇಕಾದ ಜಿನ್ ಸೆಂಗ್ ಪೌಡರ್ ಒಂದನ್ನು ಮಾತ್ರ ಮಾರುಕಟ್ಟೆಯಿಂದ ತರಬೇಕಾಗುತ್ತದೆ. ಈ ಲೇಪನ ಎಲ್ಲಾ ವಿಧದ ಚರ್ಮದವರಿಗೂ ಸೂಕ್ತವಾಗಿದ್ದು ನಿಯಮಿತವಾಗಿ ಈ ವಿಧಾನವನ್ನು ಬಳಸುತ್ತಾ ಬಂದರೆ ಚರ್ಮ ಕೋಮಲ, ಕಾಂತಿಯುಕ್ತ ಹಾಗೂ ಕಲೆಯಿಲ್ಲದಂತಾಗುತ್ತದೆ....

ಅಗತ್ಯವಿರುವ ಸಾಮಗ್ರಿಗಳು

ಅಗತ್ಯವಿರುವ ಸಾಮಗ್ರಿಗಳು

*ಅಕ್ಕಿ ಹಿಟ್ಟು: ಒಂದು ದೊಡ್ಡ ಚಮಚ

*ಜೇನು: ಒಂದು ಚಿಕ್ಕ ಚಮಚ

*ಹಸಿ ಹಾಲು: ಲೇಪನಕ್ಕೆ ಅಗತ್ಯವೆನಿಸಿದಷ್ಟು

*ಜಿನ್ಸೆಂಗ್ ಪುಡಿ: ಅರ್ಧ ಚಿಕ್ಕ ಚಮಚ

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಮೇಲೆ ತಿಳಿಸಿದ ಎಲ್ಲಾ ಪರಿಕರಗಳನ್ನು ಒಂಚು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಜಿನ್ಸೆಂಗ್ ಪುಡಿ ತೋಯಲು ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ಈ ಲೇಪವನ್ನು ಕೊಂಚ ಕಾಲ ಹಾಗೇ ಬಿಡಬೇಕು.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಸುಮಾರು ಅರ್ಧ ಗಂಟೆ ನೆನೆಸಿಟ್ಟರೂ ಸಾಕಾಗುತ್ತದೆ. ಬಳಿಕ ಒಂದು ಸೌಮ್ಯವಾದ ಬ್ರಶ್ ಬಳಸಿ ಮುಖ, ಕುತ್ತಿಗೆಯ ಮೇಲೆ ನಯವಾಗಿ ಲೇಪಿಸಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ಕೇವಲ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಈ ಮುಖಲೇಪದ ಪ್ರಯೋಜನಗಳು

ಈ ಮುಖಲೇಪದ ಪ್ರಯೋಜನಗಳು

*ಅಕ್ಕಿ ಹಿಟ್ಟು ಚರ್ಮದ ಹೊರಪದರದ ಮೇಲಿರುವ ಗೀರು ಮತ್ತು ಕಲೆಗಳನ್ನು ನಿವಾರಿಸಿ ನಯವಾಗಲು ನೆರವಾಗುತ್ತದೆ. ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಹುದುಗಿದ್ದ ಕೊಳೆಯನ್ನು ನಿವಾರಿಸಲೂ ನೆರವಾಗುತ್ತದೆ.

ಹಾಲು

ಹಾಲು

*ಹಾಲು ಚರ್ಮದ ಕಪ್ಪಗಾಗಿದ್ದ ಕಲೆಗಳನ್ನು ನಿವಾರಿಸಿ ಸಹಜವರ್ಣ ಮರಳಲು ನೆರವಾಗುತ್ತದೆ. ಅಲ್ಲದೇ ಚರ್ಮಕ್ಕೆ ಅಗತ್ಯವಿರುವ ಆದ್ರತೆಯನ್ನು ನೀಡುತ್ತದೆ.

ಜೇನು

ಜೇನು

ಜೇನು ನಯವಾಗಿ ಚರ್ಮದ ಹೊರಪದರದಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ಸಡಿಲಿಸಿ ಸುಲಭವಾಗಿ ನಿವಾರಿಸಲು ನೆರವಾಗುತ್ತದೆ ಹಾಗೂ ಕಾಂತಿ ಹೆಚ್ಚಲು ಸಹಕರಿಸುತ್ತದೆ.

ಜಿನ್ಸೆಂಗ್ ಪುಡಿ

ಜಿನ್ಸೆಂಗ್ ಪುಡಿ

ಜಿನ್ಸೆಂಗ್ ಪುಡಿ ನೈಸರ್ಗಿಕ ಬಿಳಿಚುಕಾರಕವಾಗಿದ್ದು ಚರ್ಮದ ಸೆಳೆತವನ್ನು ಹೆಚ್ಚಿಸಿ ನೆರಿಗೆ ಮೂಡದಂತೆ ತಡೆಯುತ್ತದೆ ಹಾಗೂ ವೃದ್ಧಾಪ್ಯವನ್ನು ದೂರಾಗಿಸುತ್ತದೆ.

ಕೊಂಚ ಸಮಯ ತೆಗೆದುಕೊಂಡರೂ-ಅಡ್ಡಪರಿಣಾಮಗಳಿಲ್ಲ

ಕೊಂಚ ಸಮಯ ತೆಗೆದುಕೊಂಡರೂ-ಅಡ್ಡಪರಿಣಾಮಗಳಿಲ್ಲ

ಈ ಮುಖಲೇಪವನ್ನು ವಾರಕ್ಕೊಮ್ಮೆ ಉಪಯೋಗಿಸಿದರೂ ಇದರ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು ಹಾಗೂ ಚರ್ಮದ ತೊಂದರೆಗಳೆಲ್ಲಾ ನಿಧಾನವಾಗಿ ಹಿಮ್ಮೆಟ್ಟುತ್ತಿರುವುದನ್ನು ಕಾಣಬಹುದು.

English summary

Rice Flour Face Packs For A Fair And Glowing Skin

Using Rice flour for the face is one of the best kept secrets of Asian women. It helps polish and clarify the face. We'll tell you how you can make a DIY Rice flour face pack at home that would help in giving you soft and glowing skin.
Story first published: Saturday, February 25, 2017, 17:58 [IST]
X
Desktop Bottom Promotion