ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್- ಸ್ಟೆಪ್ ಬೈ ಸ್ಟೆಪ್ ಟಿಪ್ಸ್

By: Arshad
Subscribe to Boldsky

ಇನ್ನೇನು ಬೇಸಿಗೆಯ ದಿನಗಳು ಪ್ರಾರಂಭವಾಗುವುದರಲ್ಲಿದೆ. ಬಿಸಿಲ ಬೇಗೆ ಮತ್ತು ಒಣಹವೆಯ ಕಾರಣ ನಮ್ಮ ತ್ವಚೆ ಇತರ ಸಮಯಕ್ಕಿಂತ ಹೆಚ್ಚೇ ಬಾಧೆಗೊಳಗಾಗುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಸೂರ್ಯನ ಕಿರಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಅತಿನೇರಳೆ ಕಿರಣಗಳು ಮುಖ, ಕೂದಲು ಮತ್ತು ದೇಹದ ಬಿಸಿಲಿಗೆ ಒಡ್ಡುವ ಇತರ ಭಾಗಗಳ ಚರ್ಮದ ಮೇಲೆ ಹೆಚ್ಚಿನ ಹಾನಿಯುಂಟುಮಾಡುತ್ತದೆ. ಸರ್ವ ವಿಧದಲ್ಲೂ ಪ್ರಯೋಜನಕಾರಿಯಾಗಿರುವ ಕಿತ್ತಳೆ ಸಿಪ್ಪೆ

ಒಂದು ವೇಳೆ ಸೂಕ್ತ ಆರೈಕೆ ಮತ್ತು ರಕ್ಷಣೆ ನೀಡದೇ ಹೋದರೆ ಚರ್ಮ ಕಪ್ಪಗಾಗುವುದು ಹಾಗೂ ಇತರ ತೊಂದರೆಗಳನ್ನು ಎದುರಿಸಬಹುದು. ಇದನ್ನು ತಡೆಯಲು ಕಿತ್ತಳೆಯ ಮುಖಲೇಪ ಅತಿಸೂಕ್ತವಾಗಿದ್ದು ಇದನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ಈಗ ನೋಡೋಣ....  

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*4-5 ಕಿತ್ತಳೆಯ ತೊಳೆಗಳು

*2 ಚಿಕ್ಕ ಚಮಚ ಕಡ್ಲೆ ಹಿಟ್ಟು

*2 ಚಿಕ್ಕ ಚಮಚ ಮೊಸರು ಮುಖದ ಅಂದ ಹೆಚ್ಚಿಸುವ ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್

ತಯಾರಿಸುವ ವಿಧಾನ

ತಯಾರಿಸುವ ವಿಧಾನ

* ಬ್ಲೆಂಡರಿನಲ್ಲಿ ಮೊದಲು ಕಡ್ಲೆ ಹಿಟ್ಟು ಹಾಕಿ

* ಇದರಲ್ಲಿ ಕಿತ್ತಳೆ ತೊಳೆಗಳನ್ನು ಸೇರಿಸಿ

* ಬಳಿಕ ಮೊಸರು ಸೇರಿಸಿ

* ಇಷ್ಟನ್ನೂ ಚೆನ್ನಾಗಿ ಮಿಶ್ರಣಗೊಳ್ಳುವಂತೆ ಕಡೆಯಿರಿ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

* ಈ ಲೇಪ ಮುಖಕ್ಕೆ ಹಚ್ಚಿಕೊಳ್ಳುವಷ್ಟು ನುಣುಪಾದರೆ ಸಾಕು. ಹೆಚ್ಚು ಕಡೆಯಲು ಹೋಗಬಾರದು.

* ಅಗತ್ಯವಿದ್ದರೆ ಕೆಲವು ಹನಿ ಲಿಂಬೆರಸವನ್ನೂ ಸೇರಿಸಬಹುದು.

* ಈ ಲೇಪನವನ್ನು ಈಗತಾನೇ ತಣ್ಣೀರಿನಲ್ಲಿ ತೊಳೆದುಕೊಂಡ ಮುಖ, ಕುತ್ತಿಗೆಗೆ ಹಾಕಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಇದರ ಪ್ರಯೋಜನಗಳೇನು?

ಇದರ ಪ್ರಯೋಜನಗಳೇನು?

ಈ ಮುಖಲೇಪವನ್ನು ವಿವಿಧ ಬಗೆಯ ಚರ್ಮಗಳಿಗೆ ಹಚ್ಚಿಕೊಳ್ಳುವುದರಿಂದ ಲಭ್ಯವಾಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ:

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

* ಕಿತ್ತಳೆಯಲ್ಲಿ ನೀರಿನ ಪ್ರಮಾನ ಹೆಚ್ಚಿರುವುದರಿಂದ ಇದು ಕಿತ್ತಳೆಯ ಪೋಷಕಾಂಶಗಳೊಂದಿಗೆ ಚರ್ಮದ ಆಳಕ್ಕೆ ಇಳಿದು ಅಗತ್ಯವಾದ ಆರ್ದ್ರತೆಯನ್ನು ನೀಡುತ್ತದೆ. ಹಾಗೂ ಹೆಚ್ಚಿನ ಹೊತ್ತಿನವರೆಗೆ ಆರ್ದ್ರತೆಯನ್ನು ಒದಗಿಸುತ್ತದೆ.

* ಕಿತ್ತಳೆಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುವ ಕಾರಣ ಇದು ನೈಸರ್ಗಿಕ ಸನ್ ಸ್ಕ್ರೀನ್ ನಂತೆ ಕೆಲಸ ನಿರ್ವಹಿಸಿ ಸೂರ್ಯನ ಅತಿನೇರಳೆ ಕಿರಳಗಳಿಂದ ರಕ್ಷಿಸುತ್ತದೆ.

ಕಡ್ಲೆಹಿಟ್ಟಿನ ಪ್ರಯೋಜನಗಳು

ಕಡ್ಲೆಹಿಟ್ಟಿನ ಪ್ರಯೋಜನಗಳು

ಸರಿಯಾದ ವಿಧಾನದಲ್ಲಿ ಹಚ್ಚಿಕೊಳ್ಳುತ್ತಾ ಬಂದರೆ ಕಡ್ಲೆಹಿಟ್ಟು ಚರ್ಮದ ಕಲೆಗಳನ್ನು ಮತ್ತು ಕಪ್ಪಗಾಗಿದ್ದುದನ್ನು ಸಹಜವರ್ಣಕ್ಕೆ ಬರಲು ನೆರವಾಗುತ್ತದೆ. ಬಿಸಿಲಿಗೆ ಕಪ್ಪಗಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣಕ್ಕೆ ತರಲು ನೂರಾರು ವರ್ಷಗಳಿಂದ ಬಳಸುತ್ತಾ ಬರಲಾಗಿದೆ.

ಮೊಸರಿನ ಪ್ರಯೋಜನಗಳು

ಮೊಸರಿನ ಪ್ರಯೋಜನಗಳು

ಮೊಸರಿನಲ್ಲಿಯೂ ಉತ್ತಮ ಪ್ರಮಾಣದ ನೀರು ಇದ್ದು ಚರ್ಮದ ಆಳಕ್ಕೆ ಇಳಿಯುವ ಕ್ಷಮತೆ ಹೊಂದಿದೆ. (ಬರೆಯ ನೀರನ್ನು ನಮ್ಮ ಚರ್ಮ ಹೀರಲು ಸಾಧ್ಯವಿಲ್ಲ)

ಬಿಸಿಲಿನ ಬೇಗೆಯಿಂದ ಚರ್ಮವನ್ನು ರಕ್ಷಿಸಲು ಹಾಗೂ ಕಪ್ಪಗಾಗಿದ್ದ ಚರ್ಮವನ್ನು ಸಹಜವರ್ಣಕ್ಕೆ ತಿರುಗಿಸಲು ಮೊಸರು ಉಪಯುಕ್ತವಾಗಿದೆ. ಮೊಸರಿನಲ್ಲಿ ಅಡಗಿದೆ ತ್ವಚೆಯ ಸೌಂದರ್ಯವನ್ನು ವೃದ್ಧಿಸುವ ರಹಸ್ಯ!

 
English summary

Orange Facial Mask To Keep The Skin Hydrated

Summer is almost here, and our skin tends to be the worst sufferer during this season. Our body, face and hair suffer a lot due to the harmful UV rays of the sun. However, to treat your skin right during summer, we've shared pointers on how to prepare an orange facial mask. So, to know how to prepare the orange facial mask, continue reading.
Subscribe Newsletter