For Quick Alerts
ALLOW NOTIFICATIONS  
For Daily Alerts

  ನೈಸರ್ಗಿಕ ಸೌಂದರ್ಯವನ್ನು ಪಡೆದುಕೊಳ್ಳಲು ಓಟ್‌ಮೀಲ್ ಪ್ರಯೋಗ!

  By Manu
  |

  ಮಹಿಳೆಯರು ಇತರ ಯಾವುದೇ ವಿಷಯಗಳಿಗೆ ಆದ್ಯತೆಯನ್ನು ನೀಡದೇ ಇದ್ದರೂ ತ್ವಚೆಯ ಸೌಂದರ್ಯವನ್ನು ಕಾಪಾಡಲು ಹಲವಾರು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ನುಣುಪಾದ ಯಾವುದೇ ಹಾನಿ ಇಲ್ಲದ ಮುಖ ಸೌಂದರ್ಯವನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ಸ್ತ್ರೀಯ ಕನಸಾಗಿರುತ್ತದೆ. ಅದಕ್ಕೆಂದೇ ಆಕೆ ಮಾರುಕಟ್ಟೆಯಲ್ಲಿ ಬರುವ ಹಲವಾರು ಉತ್ಪನ್ನಗಳನ್ನು ನಿತ್ಯವೂ ಪ್ರಯೋಗಿಸುತ್ತಿರುತ್ತಾರೆ ಮತ್ತು ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಳ್ಳಬೇಕೆಂಬ ಬಯಕೆಯನ್ನು ಹೊಂದಿರುತ್ತಾರೆ.  ಓಟ್ ಮೀಲ್ ಹೇಳುತ್ತೆ ತ್ವಚೆ ಸಮಸ್ಯೆಗೆ ಗುಡ್ ಬೈ

  ಆದರೆ ತಮ್ಮ ಸೌಂದರ್ಯಕ್ಕಾಗಿ ತಮ್ಮ ಬಳಿಯೇ ಇರುವ ಅದ್ಭುತ ಔಷಧಗಳನ್ನು ಇವರು ಮರೆತಿರುತ್ತಾರೆ. ಹೌದು ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುವ ಬದಲಿಗೆ ನಿಮ್ಮ ಅಡುಗೆ ಮನೆಯಲ್ಲೇ ದೊರೆಯುವ ಸೌಲಭ್ಯಗಳಿಂದ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು ಎಂಬ ಗುಟ್ಟನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

  ಓಟ್‌ಮೀಲ್ ಅನ್ನು ಬಳಸಿಕೊಂಡು ತಯಾರಿಸುವ ಬೇರೆ ಬೇರೆ ಫೇಸ್‌ ಮಾಸ್ಕ್ ಕುರಿತಾದ ಮಾಹಿತಿಯನ್ನು ಇಂದಿಲ್ಲಿ ನೀಡುತ್ತಿದ್ದೇವೆ. ಬರಿಯ ಓಟ್‌ಮೀಲ್ ಅಲ್ಲದೆ ಇದರೊಂದಿಗೆ ಬೇರೆ ಬೇರೆ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಫೇಸ್ ಮಾಸ್ಕ್ ಅನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ....  

  ಹಾಲು ಮತ್ತು ಓಟ್‌ಮೀಲ್

  ಹಾಲು ಮತ್ತು ಓಟ್‌ಮೀಲ್

  ಹುಡಿ ರೂಪದಲ್ಲಿರುವ ಓಟ್‌ಮೀಲ್ ಅನ್ನು ಹಾಲಿನೊಂದಿಗೆ ಬೆರೆಸಿ ಮತ್ತು ಸ್ಕ್ರಬ್ ತಯಾರಿಸಿಕೊಳ್ಳಿ. ಸ್ಕ್ರಬ್ ಮಾದರಿಯಲ್ಲಿ ವೃತ್ತಾಕಾರವಾಗಿ ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ಇದು ಟ್ಯಾನ್ ಅನ್ನು ನಿವಾರಿಸುತ್ತದೆ ಮತ್ತು ತ್ವಚೆಯನ್ನು ಹೈಡ್ರೇಟ್‌ಗೊಳಿಸುತ್ತದೆ.

  ಓಟ್‌ಮೀಲ್ ಮತ್ತು ಬಾದಾಮಿ

  ಓಟ್‌ಮೀಲ್ ಮತ್ತು ಬಾದಾಮಿ

  ನಿಮ್ಮ ಮುಖವನ್ನು ಕಾಂತಿಯುಕ್ತವಾಗಿ ಹೊಳೆಯುವಂತೆ ಮಾಡುವಲ್ಲಿ ಇವೆರಡೂ ಕಮಾಲಿನದ್ದಾಗಿದೆ. ಹುಡಿ ಮಾಡಿದ ಬಾದಾಮಿಯನ್ನು ಓಟ್ಸ್‌ನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

  ಓಟ್‌ಮೀಲ್ ಮತ್ತು ಹಣ್ಣು

  ಓಟ್‌ಮೀಲ್ ಮತ್ತು ಹಣ್ಣು

  ನಿಮ್ಮ ಮುಖದಲ್ಲಿ ಏನಾದರೂ ಗಾಯಗಳು ಅಥವಾ ಕಲೆಗಳಿದ್ದರೆ ಇದು ಅತ್ಯಂತ ಉತ್ತಮವಾಗಿರುವ ಮಾಸ್ಕ್ ಆಗಿದೆ. ಒಂದು ಬಾಳೆಹಣ್ಣನ್ನು ಹಿಸುಕಿಕೊಳ್ಳಿ ಇದಕ್ಕೆ ಸ್ವಲ್ಪ ಪಪ್ಪಾಯವನ್ನು ಸೇರಿಸಿ ಮಿಶ್ರ ಮಾಡಿಕೊಳ್ಳಿ. ನಂತರ ಲಿಂಬೆ ರಸವನ್ನು ಈ ಮಿಶ್ರಣಕ್ಕೆ ಬೆರೆಸಿಕೊಳ್ಳಿ. ವಾರಕ್ಕೊಮ್ಮೆ ಈ ಫೇಸ್‌ಪ್ಯಾಕ್ ಅನ್ನು ಹಚ್ಚಿಕೊಳ್ಳುತ್ತಿರಿ, ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

  ಓಟ್‌ಮೀಲ್ ಮತ್ತು ಜೇನು

  ಓಟ್‌ಮೀಲ್ ಮತ್ತು ಜೇನು

  ಜೇನು ಒಂದು ನೈಸರ್ಗಿಕ ಉತ್ಪನ್ನ ಎಂದೆನಿಸಿದ್ದು ನಿಮ್ಮ ತ್ವಚೆಯ ಹಲವಾರು ಸಮಸ್ಯೆಗಳಿಗೆ ಇದು ಅದ್ಭುತ ಔಷಧವಾಗಿದೆ. ತ್ವಚೆಯಲ್ಲಿರುವ ಮೃತಕೋಶಗಳನ್ನು ನಿವಾರಿಸುವಲ್ಲಿ ಜೇನು ಸಹಕಾರಿ. ಓಟ್‌ಮೀಲ್‌ನೊಂದಿಗೆ ಜೇನು ಬೆರೆಸಿ ಈ ಮಾಸ್ಕ್ ಅನ್ನು ತಯಾರಿಸಿಕೊಂಡು ನಿಮ್ಮ ತ್ವಚೆಯ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

  ಓಟ್‌ಮೀಲ್ ಮತ್ತು ಮೊಟ್ಟೆ

  ಓಟ್‌ಮೀಲ್ ಮತ್ತು ಮೊಟ್ಟೆ

  ನೈಸರ್ಗಿಕ ಕಾಂತಿಯನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ಮೊಟ್ಟೆ ಅತ್ಯುತ್ತಮ ಔಷಧ ಪರಿಹಾರ ಎಂದೆನಿಸಿದೆ. ಹುಡಿ ರೂಪದಲ್ಲಿರುವ ಓಟ್‌ಮೀಲ್ ಅನ್ನು ಮೊಟ್ಟೆಯ ಬಿಳಿ ಭಾಗದೊಂದಿಗೆ ಬೆರೆಸಿ ಮತ್ತು ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ಇದು ಒಣಗುವವರೆಗೆ ಹಾಗೆಯೇ ಬಿಡಿ ನಂತರ ತುಸು ಬೆಚ್ಚಗೆಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ತದನಂತರ ತಣ್ಣೀರಿನಿಂದ ಮುಖವನ್ನು ಇನ್ನೊಮ್ಮೆ ತೊಳೆದುಕೊಳ್ಳಿ.

   

  English summary

  Oatmeal Face Masks For Different Skin Types

  Homemade face packs are fun and easy to make. Here are some oatmeal face packs for different skin types that you can try out. So, take a look at these different oatmeal face masks and see which one would suit your skin the most.
  Story first published: Friday, March 10, 2017, 23:47 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more