For Quick Alerts
ALLOW NOTIFICATIONS  
For Daily Alerts

ಓಟ್ ಮೀಲ್ ಹೇಳುತ್ತೆ ತ್ವಚೆ ಸಮಸ್ಯೆಗೆ ಗುಡ್ ಬೈ

|

ಸ್ನಾನ ಮಾಡುವಾಗ ಸೋಪು ಬದಲು ಹೆಸರುಕಾಳಿನ ಹಿಟ್ಟು ಅಥವಾ ಕಡಲೆ ಹಿಟ್ಟನ್ನು ಬಳಸುವುದು ಸಾಮಾನ್ಯ. ಆದರೆ ಕಡಲೆ ಹಿಟ್ಟು ಕೆಲವರ ತ್ವಚೆಗೆ ಅಷ್ಟಾಗಿ ಬರುವುದಿಲ್ಲ. ಮೊಡವೆ ಇದ್ದರೆ ಕೆಲವರಿಗೆ ಕಡಲೆ ಹಿಟ್ಟು ಬಳಸಿ ಕಡಿಮೆಯಾದರೆ ಮತ್ತೆ ಕೆಲವರಿಗೆ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ಓಟ್ ಮೀಲ್ ಸಾಮಾನ್ಯವಾಗಿ ಎಲ್ಲ ಬಗೆಯ ತ್ವಚೆಯವರು ಬಳಸಬಹುದಾಗಿದೆ. ಸೋಪು ಬದಲು ಓಟ್ ಮೀಲ್ ಬಳಸಿದರೆ ಈ ಕೆಳಗಿನ ಪ್ರಮುಖ ಪ್ರಯೋಜನವನ್ನು ಪಡೆಯಬಹುದು.

Skin Care From Oat Meal

1. ಕೆಲವರಿಗೆ ಮೈಯಲ್ಲಿ ವಿಪರೀತ ತುರಿಕೆ ಕಂಡುಬರುತ್ತದೆ. ಯಾವ ಸೋಪು ಬಳಸಿದರೂ ಕಡಿಮೆಯಾಗುವುದಿಲ್ಲ. ಗುಳ್ಳೆಗಳು ಬಂದು ಅಲರ್ಜಿ ರೀತಿ ಉಂಟಾಗುತ್ತದೆ. ಈ ರೀತಿ ಉಂಟಾದರೆ ಓಟ್ ಮೀಲ್ ಬಳಸಿ ಮೈ ತಿಕ್ಕಿ ತೊಳೆದರೆ ತುರಿಕೆ ಕಡಿಮೆಯಾಗುತ್ತದೆ.

2. ಪ್ರತಿದಿನ ಸ್ನಾನಕ್ಕೆ ಸೋಪು ಬದಲು ಓಟ್ ಮೀಲ್ ಬಳಸಿದರೆ ತ್ವಚೆ ಮೃದುವಾಗುವುದು. ಈ ರೀತಿ ಮಾಡುವುದರಿಂದ ತ್ವಚೆಗೆ ರಕ್ಷಣೆ ನೀಡುವುದರ ಜೊತೆಗೆ ಉತ್ತಮವಾದ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ.

3. ಚಿಕನ್ ಪಾಕ್ಸ್, ಮತ್ತಿತರ ಅಲರ್ಜಿ ಉಂಟಾಗಿ ತ್ವಚೆಯಲ್ಲಿ ಕಲೆಗಳಿದ್ದರೆ ತ್ವಚೆ ಶುಚಿಗೆ ಓಟ್ ಮೀಲ್ ಬಳಸುತ್ತಾ ಬಂದರೆ ಕಲೆ ನಿವಾರಣೆಯಾಗುವುದು.

4. ವಯಸ್ಸಾದಾಗ ನೆರಿಗೆ ಬರುವುದು ಸ್ವಾಭಾವಿಕ. ಆದರೆ ಪರಿಸರ ಮಾಲಿನ್ಯ. ಒತ್ತಡ, ಕೆಮಿಕಲ್ (ರಾಸಾಯನಿಕ) ಇರುವ ಸೌಂದರ್ಯವರ್ಧಕಗಳ ಬಳಕೆ ಇವುಗಳಿಂದ ಬೇಗನೆ ಚರ್ಮ ಸುಕ್ಕಾಗುವುದು. ಆದ್ದರಿಂದ ಚರ್ಮದ ಆರೈಕೆ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು.

5. ಹದಿಹರೆಯದವರೆಗೆ ಮತ್ತು ಯೌವನದಲ್ಲಿರುವವರೆಗೆ ಕಾಡುವ ದೊಡ್ಡ ಸೌಂದರ್ಯ ಸಮಸ್ಯೆ ಅಂದರೆ ಮೊಡವೆ. ಈ ರೀತಿ ಮೊಡವೆ ಉಂಟಾದರೆ ಮುಖದಲ್ಲಿ ಕಲೆ ಮತ್ತು ರಂಧ್ರಗಳು ಉಂಟಾಗುವುದು. ಈ ರೀತಿ ಮೊಡವೆಗಳಿಗೆ ತ್ವಚೆ ಆರೈಕೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಕೆಮಿಕಲ್ ಇರುವ ಸೋಪ್ ನಿಂದ ಮುಖ ತೊಳೆಯುವ ಬದಲು ಕಡಲೆ ಹಿಟ್ಟು ಅಥವಾ ಓಟ್ಸ್ ಉಪಯೋಗಿಸಬೇಕು. ಓಟ್ ಮೀಲ್ ಮೊಡವೆ ಕಮ್ಮಿ ಮಾಡುವುದು ಮಾತ್ರವಲ್ಲ ಕಲೆಗಳು ಉಂಟಾಗದಂತೆ ತಡೆದು, ತ್ವಚೆಯನ್ನು ರಕ್ಷಿಸುತ್ತದೆ.

6. ಒಣ ತ್ವಚೆ ಇರುವವರು ಓಟ್ ಮೀಲ್ ಬಳಸುವುದು ತುಂಬಾ ಒಳ್ಳೆಯದು. ಇದು ಚರ್ಮದ ಕ್ಯಾನ್ಸರ್ ಗೆ ಕಾರಣವಾಗುವ ಬೈಲ್ ಆಸಿಡ್ ಗಳು (bile acids) ಉಂಟಾಗದಂತೆ ತಡೆಯುತ್ತದೆ.

7. ಮಕ್ಕಳಿಗೆ ಡಯಾಪರ್ ಬಳಸಿದಾಗ ಗುಳ್ಳೆಗಳು ಉಂಟಾಗುತ್ತದೆ ಅಲ್ಲದೆ ಸೊಳ್ಳೆ ಕಚ್ಚಿ ತುರಿಕೆ ಉಂಟಾಗುವುದು. ಮಕ್ಕಳ ಮೃದು ತ್ವಚೆ ರಕ್ಷಣೆ ಮಾಡಲು ಓಟ್ ಮೀಲ್ ಬಳಸುವುದು ಒಳ್ಳೆಯದು. ಓಟ್ ಮೀಲ್ ಚಿಕ್ಕಂದಿನಿಂದ ಬಳಸಿದರೆ ದೊಡ್ಡವರಾದ ಮೇಲೂ ತ್ವಚೆ ನುಣಪಾಗಿ ಮೃದುವಾಗಿ ಇರುತ್ತದೆ.

8. ಸ್ಕ್ರಬ್ ಮಾಡಲು ಇತರ ಸಾಮಾಗ್ರಿಗಳನ್ನು ಬಳಸುವ ಬದಲು ಓಟ್ ಮೀಲ್ ಬಳಸಿದರೆ ಸಾಕು. ಓಟ್ ಮೀಲ್ ಪುಡಿ ಅದನ್ನು ಹಾಲಿನಲ್ಲಿ ಹಾಕಿ ಮಿಶ್ರ ಮಾಡಿ ಮುಖಕ್ಕೆ ಸ್ಕ್ರಬ್ ಮಾಡಿದರೆ ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್ ಗಳನ್ನು ಹೋಗಲಾಡಿಸಬಹುದು.

English summary

Skin Care From Oat Meal | Tips For Skin Care | ಓಟ್ ಮೀಲ್ ನಿಂದ ತ್ವಚೆ ರಕ್ಷಣೆ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Oatmeal not only helps to reduce to weight but it also helps to protect the skin. If you use oatmeal you can find somany skin benefit. Using natural product is always healthy for skin.
Story first published: Monday, June 11, 2012, 12:30 [IST]
X
Desktop Bottom Promotion