'ಸನ್‌ ಸ್ಕ್ರೀನ್‌' ಹಚ್ಚಿಕೊಳ್ಳುವ ಸರಿಯಾದ ವಿಧಾನ-ತಪ್ಪದೇ ಅನುಸರಿಸಿ

By: manu
Subscribe to Boldsky

ಬೇಸಿಗೆ ಬಂದಾಯ್ತು. ಬೇಸಿಗೆಯ ಬೇಗೆಯಲ್ಲಿ ಬೆವರು ಹರಿಯುವುದು, ಸೆಖೆ, ಉರಿಗುಳ್ಳೆ ಮೊದಲಾದವು ಕಿರಿಕಿರಿಯುಂಟುಮಾಡುವ ತೊಂದರೆಗಳಾದರೆ ಇದಕ್ಕೂ ಭೀಕರವಾದ ಇನ್ನೊಂದು ತೊಂದರೆ ಇದೆ. ಅದೇ ಸೂರ್ಯನ ಅತಿನೇರಳೆ ಕಿರಣಗಳ ಪ್ರಭಾವದಿಂದ ಚರ್ಮ ಕಪ್ಪಗಾಗುವುದು. ಇದನ್ನು ತಡೆಯಲು ಬಿಸಿಲಿಗೆ ಹೋಗದೇ ಇರುವುದು ಸರ್ವಥಾ ಸಾಧ್ಯವಲ್ಲದ ಮಾತು. ಸನ್ ಸ್ಕ್ರಿನ್ ಬಗ್ಗೆ ಈ ಅಂಶಗಳು ತಿಳಿದಿರಲಿ

ಆದ್ದರಿಂದ ಈ ಕಿರಣಗಳ ಪ್ರಭಾವ ಬೀಳದೇ ಇರಲು ಉತ್ತಮ SPF ಮೌಲ್ಯವಿರುವ ಸನ್‌ ಸ್ರ್ಕೀನ್ ಗಳನ್ನು ಹಚ್ಚುವುದೇ ಜಾಣತನದ ಕ್ರಮ. ಆದರೆ ಸುಮ್ಮನೇ ಸನ್ ಸ್ಕ್ರೀನ್ ಹಚ್ಚಿಕೊಂಡರೆ ಸಾಕೇ? ಇದನ್ನು ಸರಿಯಾದ ಕ್ರಮದಲ್ಲಿ ಮತ್ತು ಸೂಕ್ತವಾದ ಅಂಗಗಳಿಗೆ ಹಚ್ಚಿಕೊಳ್ಳುವುದೂ ಅಗತ್ಯ.  ಸನ್‌ಸ್ಕ್ರೀನ್ ಲೋಷನ್ ನ ಗುಣ ಮತ್ತು ಅವಗುಣಗಳು

ಹೆಚ್ಚಿನ SPF ಮೌಲ್ಯವಿರುವ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ಕ್ರೀಂ ಚರ್ಮವನ್ನು ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಿಸಿ ಚರ್ಮ ಬಿಸಿಲಿಗೆ ಕಪ್ಪಗಾಗುವುದರಿಂದ ರಕ್ಷಿಸುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಯಾವಾಗ ಬಿಸಿಲಿಗೆ ಹೋಗುವ ಸಂದರ್ಭ ಎದುರಾದರೂ ಸನ್ ಸ್ಕ್ರೀನ್ ಹಚ್ಚಿಕೊಂಡೇ ಹೋಗಬೇಕು. ಇದರಿಂದ ಚರ್ಮ ಘಾಸಿಗೊಳ್ಳುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ. ಬನ್ನಿ, ವಿಶೇಷವಾಗಿ ಬೇಸಿಗೆಯಲ್ಲಿ ಇದನ್ನು ಸರಿಯಾದ ಕ್ರಮದಲ್ಲಿ ಯಾವ ಅಂಗಗಳಿಗೆ ಹೇಗೆ ಹಚ್ಚಿಕೊಳ್ಳಬೇಕೆಂಬುದನ್ನು ನೋಡೋಣ...

ತುಟಿಗಳು

ತುಟಿಗಳು

ಹೌದು, ನಿಮ್ಮ ತುಟಿಗಳು ಸಹಾ ಸೂರ್ಯನ ಕಿರಣಗಳಲ್ಲಿರುವ UVA ಮತ್ತು UVB ಕಿರಣಗಳಿಗೆ ಸುಲಭವಾಗಿ ತುತ್ತಾಗುತ್ತದೆ. ಇದನ್ನು ತಡೆಯಲು ಉತ್ತಮ SPF ಮೌಲ್ಯವಿರುವ ಲಿಪ್ ಬಾಮ್ ಒಂದನ್ನು ಹಚ್ಚಿಕೊಳ್ಳಬೇಕು. ತುಟಿಗಳಿಗೆ ಲಿಪ್ ಬಾಮ್ ಹಚ್ಚದೇ ಹೊರಹೋದವರ ತುಟಿಗಳ ಉದ್ದಗೆರೆಗಳು ಗಾಢವಾಗುತ್ತವೆ.

ತುಟಿಗಳು

ತುಟಿಗಳು

ಅಲ್ಲದೇ ಸಾಮಾನ್ಯ ಬಣ್ಣಕ್ಕಿಂತಲೂ ಗಾಢಬಣ್ಣ ಮತ್ತು ಬಿರುಕುಗಳಿಂದ ಕೂಡಿರುವ ಸಾಧ್ಯತೆ ಹೆಚ್ಚುತ್ತದೆ. ಅದರಲ್ಲೂ ಕೆಳತುಟಿಗಳು ಬಿಸಿಲಿನ ಕಿರಣಗಳಿಗೆ ಹೆಚ್ಚು ಗಾಢವಾಗುತ್ತವೆ. ಆದ್ದರಿಂದ ತುಟಿಗಳಿಗೂ ಉತ್ತಮ SPF ಉಳ್ಳ ಬಾಮ್ ಹಚ್ಚಿಕೊಳ್ಳುವುದು ಅನಿವಾರ್ಯವಾಗಿದೆ.

ನಿಮ್ಮ ಭುಜಗಳು

ನಿಮ್ಮ ಭುಜಗಳು

ನೀವು ತೋಳುರಹಿತ ಉಡುಪು ಧರಿಸುತ್ತೀರೋ ಇಲ್ಲವೋ, ಆದರೆ ಸನ್ ಸ್ರ್ಕ್ರೀನ್ ಅನ್ನು ಭುಜಗಳಿಗೂ ಹಚ್ಚಿಕೊಳ್ಳುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಭುಜಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಆದರೆ ಬೇಸಿಗೆಯ ಕಿರಣಗಳು ಪ್ರಖರವಾಗಿದ್ದು ಭುಜದ ಮೇಲಿನ ಬಟ್ಟೆ ತನ್ನದೇ ಭಾರದಿಂದ ಹೆಚ್ಚೂ ಕಡಿಮೆ ಅಂಟಿಕೊಂಡೇ ಇರುವ ಕಾರಣ ಈ ಭಾಗದಲ್ಲಿ ಸೂರ್ಯನ ಕಿರಣಗಳಿಗೆ ಚರ್ಮದ ಮೇಲೆ ನೇರವಾಗಿ ಬೀಳುವಷ್ಟಲ್ಲದಿದ್ದರೂ ಕೊಂಚ ಕಡಿಮೆಯಾದರೂ ಪ್ರಭಾವವನ್ನು ಬೀರಿಯೇ ಬೀರುತ್ತದೆ.

ನಿಮ್ಮ ಭುಜಗಳು

ನಿಮ್ಮ ಭುಜಗಳು

ಪರಿಣಾಮವಾಗಿ ಉಡುಪು ಧರಿಸಿಯೂ ಭುಜದ ಮೇಲ್ಭಾಗ ಬಿಸಿಲಿಗೆ ಕಪ್ಪಗಾಗುತ್ತದೆ. ವಿಶೇಷವಾಗಿ ಸ್ವಿಮ್ ಸೂಟ್ ಧರಿಸಿದ್ದಾಗ ಭುಜಕ್ಕೆ ಹಚ್ಚಿಕೊಳ್ಳುವುದು ಅನಿವಾರ್ಯ. ಆದ್ದರಿಂದ ಮನೆಯಿಂದ ಯಾವುದೇ ಉಡುಪು ತೊಟ್ಟು ಹೊರಗೆ ಹೋಗುವ ಮುನ್ನ ಭುಜಗಳಿಗೂ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ.

ಪಾದಗಳ ಮೇಲ್ಭಾಗ

ಪಾದಗಳ ಮೇಲ್ಭಾಗ

ನಿಮ್ಮ ಎಷ್ಟು ಮಹಿಳೆಯರು ತಮ್ಮ ಪಾದಗಳನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳುತ್ತೀರಿ? ಸಾಮಾನ್ಯವಾಗಿ ಇದಕ್ಕೆ ಎಲ್ಲರ ಉತ್ತರವೂ ಇಲ್ಲ ಎಂದೇ ಆಗಿರುತ್ತದೆ. ಏಕೆಂದರೆ ಹೆಚ್ಚಿನವರು ಮುಖಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಪಾದಗಳಿಗೆ ಕೊಡುವುದಿಲ್ಲ. ಒಂದು ವೇಳೆ ನೀವು ಸ್ಯಾಂಡಲ್ ಅಥವಾ ಫ್ಲಿಪ್ ಫ್ಲಾಪ್ ಧರಿಸಿದರೆ ಪಾದಗಳ ಮೇಲ್ಭಾಗದ ಹೆಚ್ಚಿನ ಚರ್ಮ ಬಿಸಿಲಿಗೆ ಒಡ್ಡುತ್ತದೆ. ಪರಿಣಾಮವಾಗಿ ಪಾದರಕ್ಷೆಯ ವಿನ್ಯಾಸದ ಭಾಗ ಸಹಜವರ್ಣ ಪಡೆದು ಉಳಿದ ಭಾಗ ಕಪ್ಪಗಾಗಿ ನೋಡಲು ಅಸಹ್ಯವಾಗಿರುತ್ತದೆ.

ಪಾದಗಳ ಮೇಲ್ಭಾಗ

ಪಾದಗಳ ಮೇಲ್ಭಾಗ

ಆದ್ದರಿಂದ ಬಿಸಿಲಿಗೆ ಹೋಗುವ ಮುನ್ನ ಪಾದಗಳ ಮೇಲ್ಭಾಗಕ್ಕೂ ಹಚ್ಚಿಕೊಳ್ಳುವ ಮೂಲಕ ಸೂರ್ಯನ ಕಿರಣಗಳ ಆಘಾತವನ್ನು ಕಡಿಮೆ ಮಾಡಬಹುದು. ಪಾದರಕ್ಷೆಗಳನ್ನು ಧರಿಸುವ ಮುನ್ನವೇ ಹಚ್ಚಿಕೊಂಡು ಕೊಂಚ ಒಣಗಿದ ಬಳಿಕವೇ ಪಾದರಕ್ಷೆಗಳನ್ನು ಧರಿಸುವುದು ಅತ್ಯುತ್ತಮ ವಿಧಾನವಾಗಿದೆ.

ಮೊಣಕೈ, ಮೊಣಕಾಲುಗಳಿಗೆ

ಮೊಣಕೈ, ಮೊಣಕಾಲುಗಳಿಗೆ

ಬಹುತೇಕ ಎಲ್ಲರೂ ನಿರ್ಲಕ್ಷಿಸುವ ಭಾಗವೆಂದರೆ ಮೊಣಕೈಗಳು. ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ಅನ್ನು ಸೂಕ್ತ ಪ್ರಮಾಣದಲ್ಲಿ ಮೊಣಕೈಗಳಿಗೂ ಹಚ್ಚುವುದು ಅತ್ಯಗತ್ಯವಾಗಿದೆ. ಈ ಭಾಗ ಸಾಮಾನ್ಯವಾಗಿ ಸತತ ಉಜ್ಜುವಿಕೆಯಿಂದ ಘಾಸಿಗೊಳ್ಳುತ್ತಾ ಇರುತ್ತದೆ ಹಾಗೂ ಸುಲಭವಾಗಿ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುತ್ತದೆ.

ಮೊಣಕೈ, ಮೊಣಕಾಲುಗಳಿಗೆ

ಮೊಣಕೈ, ಮೊಣಕಾಲುಗಳಿಗೆ

ಪರಿಣಾಮವಾಗಿ ಇತರ ಭಾಗಗಳಿಗಿಂತಲೂ ಈ ಭಾಗ ಹೆಚ್ಚು ಕಪ್ಪಗಾಗುತ್ತದೆ ಹಾಗೂ ಸೂಕ್ತ ಆರೈಕೆಯ ಕೊರತೆಯಿಂದ ಸರಿಪಡಿಸಲಾಗದಷ್ಟು ಘಾಸಿಗೊಳ್ಳಬಹುದು. ಆದ್ದರಿಂದ ಪ್ರತಿ ಬಾರಿ ಬಿಸಿಲಿಗೆ ಹೋಗುವ ಮುನ್ನ ಮೊಣಕೈಗಳಿಗೆ ಒಂದು ಔನ್ಸ್ ನಷ್ಟಾದರೂ ಸನ್ ಸ್ಕ್ರೀನ್ ಹಚ್ಚಿಕೊಳ್ಳಬೇಕು. ಅಂತೆಯೇ ಮೊಣಕಾಲುಗಳಿಗೂ ಕೊಂಚ ಹಚ್ಚಿಕೊಂಡು ಹೋಗುವುದು ಉಚಿತವಾಗಿದೆ.

 
English summary

Important Places You Should Never Forget To Apply Sunscreen

Summers are already here and the biggest struggle in front of us is to take care of our skin and body. Protecting your skin from the harmful rays of the sun urges the requirement of using a sunscreen with a good SPF value. Knowing about the ways to apply sunscreen also helps a great deal.
Please Wait while comments are loading...
Subscribe Newsletter