Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಸನ್‌ಸ್ಕ್ರೀನ್ ಲೋಷನ್ ನ ಗುಣ ಮತ್ತು ಅವಗುಣಗಳು

ಯಾವ ಬಗೆಯ ಸನ್‌ಸ್ಕ್ರೀನ್ ಲೋಷನ್ ಒಳ್ಳೆಯದಲ್ಲ?
ಸನ್‌ಸ್ಕ್ರೀನ್ ನ SPF ಪ್ರಮಾಣ 30ಕ್ಕಿಂತ ಕಡಿಮೆಯಿದ್ದರೆ ಅಂತಹ ಸನ್‌ಸ್ಕ್ರೀನ್ ಬಳಸುವುದು ಒಳ್ಳೆಯದಲ್ಲ, ಅಲ್ಲದೆ ಇಂತಹ ಸನ್‌ಸ್ಕ್ರೀನ್ ಲೋಷನ್ ಅನ್ನು ಚಳಿಗಾಲದಲ್ಲಿ ಬಳಸಲು ಕೂಡ ಸೂಕ್ತವಲ್ಲ. ಆದ್ದರಿಂದ ಸನ್‌ಸ್ಕ್ರೀನ್ ಲೋಷನ್ ಕೊಳ್ಳುವಾಗ ಸರಿಯಾದ ಸನ್‌ಸ್ಕ್ರೀನ್ ಅನ್ನು ನೋಡಿ ಕೊಳ್ಳಬೇಕು.
ಸನ್‌ಸ್ಕ್ರೀನ್ ಬಳಸಿದರೆ ಪಡೆಯಬಹುದಾದ ಪ್ರಯೋಜನಳು:
1. ಸನ್‌ಸ್ಕ್ರೀನ್ ಬಳಸಿದರೆ ಸೂರ್ಯನ ಕಿರಣಗಳಿಂದ ತ್ವಚೆ ಹಾಳಾಗುವುದನ್ನು ತಡೆಯುತ್ತದೆ ಹಾಗೂ ಸನ್ ಟ್ಯಾನ್ ಉಂಟಾಗಿದ್ದರೆ ಅದನ್ನು ಹೋಗಲಾಡಿಸುತ್ತದೆ.
2. ಬಿಸಿಲಿನಲ್ಲಿ ಹೋಗುವಾಗ ಸನ್‌ಸ್ಕ್ರೀನ್ ಹಚ್ಚಿದರೆ ಮುಖದ ಹೊಳಪು ಕಡಿಮೆಯಾಗುವುದಿಲ್ಲ, ಇದನ್ನು ಕೈ ಕಾಲುಗಳಿಗೂ ಹಚ್ಚಬಹುದು.
3. ನೈಸರ್ಗಿಕವಾದ ವಸ್ತುಗಳಿಂದ ತಯಾರಿಸಿದ ಸನ್‌ಸ್ಕ್ರೀನ್ ಬಳಸಿದರೆ ತ್ವಚೆಗೆ ತುಂಬಾ ಒಳ್ಳೆಯದು.
4. ಸೂರ್ಯನ ನೇರಳಾತೀತ ಕಿರಣಗಳು ಚರ್ಮದ ಮೇಲೆ ಬೀಳುವುದನ್ನು ತಡೆದು ಚರ್ಮದ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.
5. ತುಂಬಾ ಬಿಸಿಲಿಗೆ ಹೋದಾಗ ಅಲರ್ಜಿ ಉಂಟಾಗುವುದಾದರೆ ಇದನ್ನು ಬಳಸುವುದು ಒಳ್ಳೆಯದು.
ಸನ್‌ಸ್ಕ್ರೀನ್ ತರಬಹುದಾದ ಸಮಸ್ಯೆಗಳು:
1. ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುವಂತಹ ರಾಸಾಯನಿಕವನ್ನು ಸನ್ ಸ್ಕ್ರಿನ್ ನಲ್ಲಿ ಬಳಸಲಾಗಿರುತ್ತದೆ ಆದರೆ ಈ ರಾಸಾಯನಿಕಗಳು ಕೆಲವೊಮ್ಮೆ ತ್ವಚೆಯನ್ನು ಒರಟಾಗಿಸುತ್ತದೆ. ಆದ್ದರಿಂದ ಇದನ್ನು ತ್ವಚೆಗೆ ತುಂಬಾ ಒಳ್ಳೆಯದು ಎಂದು ಹೇಳಲು ಸಾಧ್ಯವಿಲ್ಲ.
2. ಇದು ದೇಹದ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟು ಮಾಡಬಹುದು. ಇದರಿಂದ ತ್ವಚೆ ಅಲರ್ಜಿ, ಅಲಜೈಮರ್ಸ್ ಮುಂತಾದ ಸಮಸ್ಯೆ ಕೂಡ ಕಂಡು ಬರಬಹುದು.
3. ಸನ್‌ಸ್ಕ್ರೀನ್ ಹಚ್ಚಿದಾಗ ಸೂರ್ಯನ ಕಿರಣದಲ್ಲಿರುವ ವಿಟಮಿನ್ ಡಿಯನ್ನು ತ್ವಚೆಗೆ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.



Click it and Unblock the Notifications
