For Quick Alerts
ALLOW NOTIFICATIONS  
For Daily Alerts

ಬೆಳಿಗ್ಗೆದ್ದ ಎದ್ದ ತಕ್ಷಣ ಮುಖ ಫ್ರೆಶ್ ಆಗಿ ಕಾಣಬೇಕೇ?

ಬೆಳಿಗ್ಗೆದ್ದ ಬಳಿಕ ವಿಶೇಷವಾಗಿ ಮುಖದ ಚರ್ಮ ಸಡಿಲವಾಗಿರುವುದನ್ನು ಗಮನಿಸಬಹುದು. ಆದರೆ ಈ ಸ್ಥಿತಿಗೆ ಬಾರದೇ ಇರಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

By Deepu
|

ನಮ್ಮಲ್ಲಿ ಹೆಚ್ಚಿನವರು ನಿದ್ದೆಯಿಂದ ಎದ್ದಾಗ ತೇಲುಗಣ್ಣು ಮತ್ತು ಅಸಂತುಷ್ಠ ಭಾವನೆಯಲ್ಲಿಯೇ ಇರುತ್ತಾರೆ. ಈ ಸಮಯದಲ್ಲಿ ಇವರಿಂದ ಯಾವ ಕೆಲಸವೂ ಆಗುವುದಿಲ್ಲ. ಕೊಂಚ ಹೊತ್ತಿನ ಬಳಿಕ ಸರಿಯಾಗಿ ಎಚ್ಚರಾದರೂ ದಿನದ ಇತರ ಕೆಲಸಗಳನ್ನು ಮಾಡಲು ಮನಸ್ಸೇ ಇರುವುದಿಲ್ಲ. ಇದರಿಂದ ಪರೋಕ್ಷವಾಗಿ ಹಲವಾರು ತೊಂದರೆಗಳಾಗುತ್ತವೆ. ಬೆಳಗ್ಗೆ ಉಲ್ಲಾಸದಿಂದ ಎದ್ದೇಳಲು ಏನು ಮಾಡಬೇಕು?

ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸುವ ಗೃಹಿಣಿಯರಿಗೆ ಅತಿ ಹೆಚ್ಚಿನ ಉದ್ವೇಗ ಹಾಗೂ ತೊಂದರೆಯುಂಟಾಗುತ್ತದೆ. ವಾಸ್ತವವಾಗಿ ಈ ಸ್ಥಿತಿಗೆ ನಮ್ಮ ಕೆಲವು ಅಭ್ಯಾಸಗಳು ಹಾಗೂ ಹಿಂದಿನ ದಿನ ರಾತ್ರಿ ನಿದ್ದೆ ತಡವಾಗಿದ್ದುದು ಪ್ರಮುಖ ಕಾರಣವಾಗಿವೆ. ಈ ಸ್ಥಿತಿ ಬರದಂತೆ ನೋಡಿಕೊಳ್ಳುವುದೇ ಜಾಣತನದ ಕ್ರಮವಾಗಿದೆ.

ಬೆಳಿಗ್ಗೆದ್ದ ಬಳಿಕ ವಿಶೇಷವಾಗಿ ಮುಖದ ಚರ್ಮ ಸಡಿಲವಾಗಿರುವುದನ್ನು ಗಮನಿಸಬಹುದು. ಆದರೆ ಈ ಸ್ಥಿತಿಗೆ ಬಾರದೇ ಇರಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಮರುದಿನ ಬೆಳಿಗ್ಗೆ ಎದ್ದ ತಕ್ಷಣ ತಾಜಾತನವನ್ನು ಅನುಭಸುವುದರ ಜೊತೆಗೇ ಹೆಚ್ಚಿನ ಚೈತನ್ಯ ಹೊಂದಿರುವ ಭಾವನೆಯನ್ನೂ ಪಡೆಯುತ್ತೀರಿ. ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ ಸಿಂಪಲ್ ಫೇಸ್ ಪ್ಯಾಕ್...

ಆದರೆ ಚರ್ಮ ಸಡಿಲಗೊಳ್ಳಲು ನಿಮ್ಮ ಆಹಾರಕ್ರಮವೂ ಕಾರಣವಾಗಿದೆ. ದಿನದ ಇತರ ಹೊತ್ತಿನಲ್ಲಿ ಸೇವಿಸುವ ಸಕ್ಕರೆ ಹಾಗೂ ಉಪ್ಪಿನ ಪ್ರಮಾಣ ಅಲ್ಪವಾಗಿರಬೇಕು. ಇವು ಹೆಚ್ಚಾದರೂ ಇದರ ಪರಿಣಾಮ ಮರುದಿನ ಬೆಳಿಗ್ಗೆ ಕಾಣಬರುತ್ತದೆ. ಬನ್ನಿ, ಬೆಳಿಗ್ಗೆದ್ದಾಗ ತಾಜಾತನ ಅನುಭವಿಸಲು ಪಾಲಿಸಬೇಕಾದ ಕೆಲವು ಸಲಹೆಗಳನ್ನು ಈಗ ನೋಡೋಣ...

ಫೇಶಿಯಲ್ ಮಿಸ್ಟ್

ಫೇಶಿಯಲ್ ಮಿಸ್ಟ್

ನಿಮ್ಮದೇ ಆದ ಫೇಶಿಯಲ್ ಮಿಸ್ಟ್ ಪಡೆಯಲು ಕೊಂಚ ನೀರಿನಲ್ಲಿ ಕೆಲವು ಹನಿ ಲ್ಯಾವೆಂಡರ್ ಎಣ್ಣೆಯನ್ನು ಬೆರೆಸಿ. ಈ ನೀರಿನಿಂದ ಮುಖವನ್ನು ತೊಳೆದುಕೊಳ್ಳುವ ಮೂಲಕ ಎದ್ದ ತಕ್ಷಣ ಎದುರಾಗಿದ್ದ ದುಗುಡ ದೂರವಾಗಿ ನಿದ್ದೆಯಿಂದಿರುವ ಮನಸ್ಸು ಎಚ್ಚರಾಗಲು ಸಾಧ್ಯವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಎಚ್ಚರಾದ ಬಳಿಕವೂ ಇನ್ನೂ ಕೊಂಚ ಹೊತ್ತು ಮಲಗಲು ಮನಸ್ಸು ಪ್ರೇರೇಪಿಸುವುದರಿಂದ ಜಡತನ ಇನ್ನಷ್ಟು ಹೆಚ್ಚುತ್ತದೆ. ಈ ನೀರನ್ನು ಬಳಸಿ ರಾತ್ರಿ ಮಲಗುವ ಮುನ್ನ ಹಾಗೂ ಬೆಳಿಗ್ಗೆದ್ದ ಬಳಿಕ ಮುಖ ತೊಳೆದುಕೊಳ್ಳುವುದು ಉತ್ತಮ.

ಫೇಶಿಯಲ್ ಎಣ್ಣೆಗಳು

ಫೇಶಿಯಲ್ ಎಣ್ಣೆಗಳು

ಈ ಎಣ್ಣೆಯನ್ನು ರಾತ್ರಿ ಮಲಗುವ ಮುನ್ನ ಕೊಂಚ ಪ್ರಮಾಣದಲ್ಲಿ ಹಚ್ಚಿಕೊಂಡು ಮಲಗುವ ಮೂಲಕ ಬೆಳಿಗ್ಗೆದ್ದಾಗ ತ್ವಚೆ ಮೃದು ಹಾಗೂ ಪೋಷಣೆ ಪಡೆದು ಕಳಕಳಿಯಾಗಿರುತ್ತದೆ. ಇವು ರಾತ್ರಿಯಿಡೀ ಚರ್ಮಕ್ಕೆ ಉತ್ತಮ ಪ್ರಮಾಣದ ಆರ್ದ್ರತೆ ಒದಗಿಸುತ್ತವೆ. ಇವುಗಳನ್ನು ಬಳಸುವುದರಿಂದ ಮೊಡವೆಗಳೇನೂ ಮೂಡುವುದಿಲ್ಲವಾದುದರಿಂದ ಯಾವುದೇ ಭಯವಿಲ್ಲದೇ ಬಳಸಬಹುದು.

ರಾತ್ರಿ ಮಲಗುವ ಮುನ್ನ ನೀರು ಕುಡಿಯಿರಿ..

ರಾತ್ರಿ ಮಲಗುವ ಮುನ್ನ ನೀರು ಕುಡಿಯಿರಿ..

ರಾತ್ರಿ ಮಲಗುವ ಮುನ್ನ ಕೈಗೆಟುಕುವಂತೆ ಒಂದು ಲೋಟ ನೀರು ಇರಿಸಿ. ಇನ್ನೇನು ನಿದ್ದೆ ಬರುತ್ತಿದೆ ಎಂದೆನಿಸಿದಾಗ ನೀರು ಕುಡಿಯಿರಿ ಹಾಗೂ ಮರುದಿನ ಬೆಳಿಗ್ಗೆ ಎದ್ದ ತಕ್ಷಣವೂ ಪ್ರಥಮ ಆಹಾರವಾಗಿ ನೀರನ್ನೇ ಕುಡಿಯಿರಿ. ಇದು ನಿಮ್ಮ ನಿತ್ಯದ ಅಭ್ಯಾಸವಾಗಬೇಕು. ಇದು ಕೊಂಚ ಕಷ್ಟಕರವಾಗಿ ಕಂಡುಬಂದರೂ ಕ್ರಮೇಣ ಅಭ್ಯಾಸವಾಗುತ್ತದೆ. ಇದು ಕೇವಲ ಚರ್ಮಕ್ಕೆ ಮಾತ್ರವಲ್ಲ, ಮುಂಜಾನೆ ಎದ್ದಾಗ ಬಾಯಿಯ ದುರ್ವಾಸನೆಯನ್ನು ದೂರಗೊಳಿಸುವ ಸಹಿತ ಹಲವಾರು ಇತರ ಪ್ರಯೋಜನಗಳನ್ನೂ ನೀಡುತ್ತದೆ.

ಸ್ಲೀಪಿಂಗ್ ಮಾಸ್ಕ್

ಸ್ಲೀಪಿಂಗ್ ಮಾಸ್ಕ್

ಈ ಪರಿಯ ಪ್ರಸಾಧನಗಳು ತೀರಾ ಇತ್ತೀಚೆಗೆ ಪರಿಚಯಿಸಲ್ಪಟ್ಟಿವೆ. ಇವುಗಳನ್ನು ಹಚ್ಚಿಕೊಂಡು ಮಲಗುವ ಮೂಲಕ ರಾತ್ರಿಯ ಸಮಯದಲ್ಲಿ ಘಾಸಿಗೊಂಡಿದ್ದ ಚರ್ಮದ ಜೀವಕೋಶಗಳು ಪುನಃಶ್ಚೇತನಗೊಳ್ಳಲು ಸಾಧ್ಯವಾಗುತ್ತದೆ.

ಫೇಸ್ ವಾಶ್

ಫೇಸ್ ವಾಶ್

ಉತ್ತಮ ತ್ವಚೆಗಾಗಿ ಫೇಸ್ ವಾಶ್ ಅತ್ಯಗತ್ಯ. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಹಾಗ್ಗೂ ಬೆಳಿಗ್ಗೆದ್ದ ಬಳಿಕ. ಏಕೆಂದರೆ ಚರ್ಮದಲ್ಲಿ ಹುದುಗಿದ್ದ ಸೂಕ್ಷ್ಮಕಣಗಳನ್ನು ನಿವಾರಿಸದೇ ಬೇರಾವ ಪ್ರಸಾದನವೂ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ಆದ್ದರಿಂದ ಉತ್ತಮ ಫೇಸ್ ವಾಶ್ ಬಳಸಿ ಮುಖ ತೊಳೆದುಕೊಳ್ಳುವುದು ತಾಜಾತನಕ್ಕೆ ಅಗತ್ಯವಾಗಿದೆ.ಯಾವ ಫೇಸ್ ವಾಶ್ ತ್ವಚೆಗೆ ಒಳ್ಳೆಯದು?

ಬೆಳಿಗ್ಗೆದ್ದ ತಕ್ಷಣ ಫೋನುಗಳನ್ನು ನೋಡಬೇಡಿ

ಬೆಳಿಗ್ಗೆದ್ದ ತಕ್ಷಣ ಫೋನುಗಳನ್ನು ನೋಡಬೇಡಿ

ನಾವೆಲ್ಲಾ ಈಗ ನಮ್ಮ ಸ್ಮಾರ್ಟ್ ಫೋನುಗಳಿಗೆ ಎಷ್ಟೊಂದು ಒಗ್ಗಿ ಬಿಟ್ಟಿದ್ದೇವೆಂದರೆ ಇದರ ಹೊರತಾಗಿ ಕ್ಷಣವೂ ಇರಲಾರೆವು ಎಂಬಷ್ಟಾಗಿದೆ. ಆದರೆ ನಿಸರ್ಗ ಇದನ್ನು ಒಪ್ಪುವುದಿಲ್ಲ. ಬೆಳಿಗ್ಗೆದ್ದ ತಕ್ಷಣ ಅಥವಾ ರಾತ್ರಿ ಮಲಗುವ ಮುನ್ನ ಫೋನ್ ಪರದೆಯ ಮೇಲೆ ಕಣ್ಣು ಕೀಲಿಸುವ ಮೂಲಕ ಮನಸ್ಸು ನಿರಾಳವಾಗಲು ಸಾಧ್ಯವಿಲ್ಲದೇ ಹೋಗುತ್ತದೆ. ಆದ್ದರಿಂದ ಮಲಗುವ ಮುನ್ನ ಮತ್ತು ಎದ್ದ ತಕ್ಷಣ ಫೋನ್ ನೋಡಲು ಹೋಗದೇ ಇರುವುದೇ ಜಾಣತನದ ಕ್ರಮವಾಗಿದೆ.

English summary

How To Wake Up Looking Fresh

Most of us have woken up groggy eyed and unhappy. But there are certain tips you can follow the night before and in the morning to make sure that you wake up all fresh.These steps will ensure that you wake up looking and feeling your best. Sometimes, when you wake up even your skin tends to look a little sallow and dull. We will tell you how you can beat all of this as well.
X
Desktop Bottom Promotion