For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ ಸಿಂಪಲ್ ಫೇಸ್ ಪ್ಯಾಕ್...

By Manu
|

ಸೌಂದರ್ಯವು ಎದ್ದು ಕಾಣಬೇಕೆಂದಾದರೆ ತ್ವಚೆಯ ಆರೈಕೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಸಂಪೂರ್ಣ ದೇಹದ ಆರೋಗ್ಯವನ್ನು ಚರ್ಮವು ಪ್ರತಿನಿಧಿಸುತ್ತದೆ. ಚರ್ಮವು ಕಾಂತಿಯುತವಾಗಿದ್ದರೆ ದೇಹದ ಆರೋಗ್ಯವು ಸರಿಯಾಗಿದೆ ಎಂದರ್ಥ.

ಕಲುಷಿತ ವಾತಾವರಣದಿಂದ ಧೂಳು ಮತ್ತಿತರ ಕಲ್ಮಶಗಳು ಚರ್ಮದ ರಂಧ್ರವನ್ನು ಸೇರಿಕೊಂಡು ಅದನ್ನು ಮುಚ್ಚುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು ಮೂಡುತ್ತದೆ. ತ್ವಚೆಯ ಆರೈಕೆಗಾಗಿ ಹಲವಾರು ರೀತಿಯ ಕ್ರೀಮ್‪ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದನ್ನು ಬಳಸಿದರೆ ಅದರಲ್ಲಿರುವ ರಾಸಾಯನಿಕಗಳು ಅಡ್ಡಪರಿಣಾಮ ಬೀರಬಹುದು. ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್

ಮನೆಯಲ್ಲಿಯೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆಯನ್ನು ಮಾಡಿದರೆ ಅದರಿಂದ ಯಾವುದೇ ಅಡ್ಡಪರಿಣಾಮವೂ ಆಗಲ್ಲ ಮತ್ತು ತ್ವಚೆಯನ್ನು ಸರಿಯಾಗಿ ಇಟ್ಟುಕೊಳ್ಳಬಹುದಾಗಿದೆ. ಇಂತಹ ಕೆಲವೊಂದು ಫೇಸ್ ಪ್ಯಾಕ್‌ಗಳ ಬಗ್ಗೆ ತಿಳಿಯಿರಿ. ಮುಖದ ಅಂದಕ್ಕೆ ಪ್ರಯತ್ನಿಸಿ-ಹೂವುಗಳ ಫೇಸ್ ಪ್ಯಾಕ್

ರೋಸ್ ವಾಟರ್ ಮತ್ತು ವಿನೇಗರ್

ರೋಸ್ ವಾಟರ್ ಮತ್ತು ವಿನೇಗರ್

ಬೇಕಾಗುವ ಸಾಮಗ್ರಿಗಳು:

4 ಚಮಚ ರೋಸ್ ವಾಟರ್

4 ಚಮಚ ವಿನೇಗರ್

ಬಳಸುವುದು ಹೇಗೆ?

ಬಳಸುವುದು ಹೇಗೆ?

ಒಂದು ಸಣ್ಣ ಪಿಂಗಾಣಿಯಲ್ಲಿ ರೋಸ್ ವಾಟರ್ ಮತ್ತು ವಿನೇಗರ್ ಅನ್ನು ಮಿಶ್ರಣ ಮಾಡಿಕೊಳ್ಳಿ. ಒಂದು ಹತ್ತಿ ಉಂಡೆ ತೆಗೆದುಕೊಂಡು ಅದನ್ನು ಮಿಶ್ರಣದಲ್ಲಿ ಅದ್ದಿಕೊಳ್ಳಿ. ಹತ್ತಿಯ ಉಂಡೆಯಿಂದ ಮುಖವನ್ನು ಒರೆಸಿಕೊಳ್ಳಿ. ಇದು ತ್ವಚೆಗೆ ಕಾಂತಿ ನೀಡುವುದರೊಂದಿಗೆ ಬಿಳಿಯಾಗಿ ಕಾಣುತ್ತೀರಿ.

ತುಳಸಿ ಎಲೆಗಳಿಂದ ಸೌಂದರ್ಯ

ತುಳಸಿ ಎಲೆಗಳಿಂದ ಸೌಂದರ್ಯ

ಆರೋಗ್ಯಕ್ಕಾಗಿ ಪವಿತ್ರವೆನ್ನಲಾಗಿರುವ ತುಳಸಿ ಎಲೆಗಳನ್ನು ಬಳಸುವುದನ್ನು ನಾವು ನೋಡಿದ್ದೇವೆ. ಈಗ ಸೌಂದರ್ಯಕ್ಕಾಗಿಯೂ ಇದನ್ನು ಬಳಸಬಹುದು. ತುಳಸಿ ಎಲೆಗಳನ್ನು ಬಳಸಿಕೊಂಡು ತ್ವಚೆಯ ಕಾಂತಿಯನ್ನು ವೃದ್ಧಿಸಬಹುದಾಗಿದೆ.

ತುಳಸಿ ಎಲೆಗಳಿಂದ ಸೌಂದರ್ಯ

ತುಳಸಿ ಎಲೆಗಳಿಂದ ಸೌಂದರ್ಯ

ಬೇಕಾಗುವ ಸಾಮಗ್ರಿಗಳು:

*10-15 ತುಳಸಿ ಎಲೆಗಳು

*ಒಂದು ಕಪ್ ನೀರು

ಮಾಡುವ ವಿಧಾನ

ಮಾಡುವ ವಿಧಾನ

ಐದು ನಿಮಿಷಗಳ ಕಾಲ ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಳ್ಳಿ. ಬಳಿಕ ನೀರು ಮತ್ತು ಎಲೆಗಳನ್ನು ಬೇರ್ಪಡಿಸಿ. ನೀರು ಸ್ವಲ್ಪ ತಣ್ಣಗಾದ ಬಳಿಕ ಹತ್ತಿ ಉಂಡೆಗಳನ್ನು ನೀರಿನಲ್ಲಿ ಅದ್ದಿಕೊಂಡು ಮುಖವನ್ನು ಒರೆಸಿಕೊಳ್ಳಿ. ತುಳಸಿ ಎಲೆಗಳು ತಕ್ಷಣಕ್ಕೆ ನಿಮಗೆ ಫಲಿತಾಂಶ ನೀಡುವುದು.

ಗ್ರೀನ್ ಟೀ(ಹಸಿರು ಚಹಾ)

ಗ್ರೀನ್ ಟೀ(ಹಸಿರು ಚಹಾ)

ಗ್ರೀನ್ ಟೀಯನ್ನು ತೂಕ ಕಳೆದುಕೊಳ್ಳಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಬಳಸುತ್ತಾರೆ. ಆದರೆ ಇದರಲ್ಲಿ ತ್ವಚೆಗೆ ಕಾಂತಿಯನ್ನು ಉಂಟು ಮಾಡುವ ಗುಣಗಳಿವೆ ಎಂದು ಕೇಳಿದ್ದೀರಾ? ಗಿಡಮೂಲಿಕೆಗಳಿಂದ ತಯಾರಾಗಿರುವ ಗ್ರೀನ್ ಟೀ ತ್ವಚೆಗೆ ಪೋಷಣೆಯನ್ನು ನೀಡಿ ನೈಸರ್ಗಿಕ ತೈಲವು ಚರ್ಮಕ್ಕೆ ಸಿಗುವಂತೆ ಮಾಡುವುದು. ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ಗ್ರೀನ್ ಟೀಯನ್ನು ಬಳಸುವುದು ಹೇಗೆ?

ಗ್ರೀನ್ ಟೀಯನ್ನು ಬಳಸುವುದು ಹೇಗೆ?

ಬೇಕಾಗುವ ಸಾಮಗ್ರಿಗಳು

*ಒಂದು ಚಮಚ ಗ್ರೀನ್ ಟೀ

*ಒಂದು ಕಪ್ ಬಿಸಿ ನೀರು

ಬಳಸುವುದು ಹೇಗೆ?

ಬಳಸುವುದು ಹೇಗೆ?

ಎರಡರಿಂದ ಮೂರು ನಿಮಿಷಗಳ ಕಾಲ ಚಹಾ ಎಲೆಗಳನ್ನು ಕುದಿಸಿ ನೀರು ಮತ್ತು ಎಲೆಗಳನ್ನು ಬೇರ್ಪಡಿಸಿ. ಗ್ರೀನ್ ಟೀ ತಂಪಾಗಲು ಬಿಡಿ. ಹತ್ತಿ ಉಂಡೆಯನ್ನು ಬಳಸಿಕೊಂಡು ಗ್ರೀನ್ ಟೀಯನ್ನು ಮುಖಕ್ಕೆ ಹಚ್ಚಿಕೊಳ್ಳಿ.

English summary

Natural skincare face packs for glowing face

Today’s cosmetic market is replete with toning products which can give a revitalized look to your skin but if you replace them with homemade skin-facepacks, impact will be better than ever. And, it is very easy to make toners are home. How? Check a few examples here have a look
X
Desktop Bottom Promotion