ಮುಖದ ಅಂದ ಹೆಚ್ಚಿಸುವ ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್

By: jaya subramanya
Subscribe to Boldsky

ತನ್ನ ಹುಳಿ ಮಿಶ್ರಿತ ಸ್ವಾದದೊಂದಿಗೆ ಬಾಯಾರಿದ ದೇಹಕ್ಕೆ ಆಹ್ಲಾದವನ್ನು ನೀಡುವ ಕಿತ್ತಳೆಯು ಕಡಿಮೆ ದರದಲ್ಲಿ ಜನಸಾಮಾನ್ಯರ ಕೈಗೆಟಕುವಂತಹ ಹಣ್ಣಾಗಿದೆ. ಸಿಟ್ರಸ್ ಅಂಶವು ಈ ಫಲದಲ್ಲಿದ್ದು ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ಉಂಟುಮಾಡುತ್ತದೆ. ದೇಹದ ತೂಕ ಇಳಿಕೆಯಲ್ಲೂ ಕೂಡ ಅಸಾಮಾನ್ಯ ಫಲಿತಾಂಶವನ್ನು ಈ ಹಣ್ಣು ಒದಗಿಸಲಿದ್ದು ಇದರ ಸೇವನೆಯಿಂದ ದೇಹಕ್ಕೆ ರೋಗನಿರೋಧಕ ಸಾಮರ್ಥ್ಯ ಕೂಡ ಒದಗುತ್ತದೆ.     ಕಿತ್ತಳೆ ಹಾಗೂ ಬೆಣ್ಣೆ ಹಣ್ಣಿನಲ್ಲಿದೆ, ಬೆಣ್ಣೆಯಂತಹ ಸೌಂದರ್ಯ!

ಬರಿಯ ಹಣ್ಣು ಮಾತ್ರವೇ ನಿಮಗೆ ಪ್ರಯೋಜನಕಾರಿಯಾಗಿರದೇ ಕಿತ್ತಳೆ ಸಿಪ್ಪೆಯು ಮಾಡಲಿರುವ ಅದ್ಭುತವನ್ನು ನಿಮಗಿಂದು ನಾವು ತಿಳಿಸುತ್ತಿದ್ದೇವೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಹೇಗೆ ಹೇರಳವಾಗಿದೆಯೋ ಅಂತೆಯೇ ಅದರ ಸಿಪ್ಪೆ ಕೂಡ ನಿಮ್ಮ ತ್ವಚೆಯ ಆರೈಕೆಯಲ್ಲಿ ಪೂರಕವಾಗಲಿದೆ.    ಬ್ಯೂಟಿ ಟಿಪ್ಸ್: ಕಿತ್ತಳೆ ಸಿಪ್ಪೆ-ಲಿಂಬೆ ರಸದ ಫೇಸ್ ಮಾಸ್ಕ್

ಹಾಗಿದ್ದರೆ ಈ ಕಿತ್ತಳೆ ಸಿಪ್ಪೆಯು ನಿಮ್ಮ ತ್ವಚೆಗೆ ಮಾಡಲಿರುವ ಅತ್ಯದ್ಭುತವನ್ನು ಇಂದಿಲ್ಲಿ ತಿಳಿಸುತ್ತಿದ್ದು ನಿಮ್ಮ ತ್ವಚೆಯ ಸೌಂದರ್ಯವನ್ನು ವೃದ್ಧಿಸಲು ಇದನ್ನು ಹೇಗೆ ಬಳಸಬಹುದು ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.  

ಕಿತ್ತಳೆ ಸಿಪ್ಪೆ ಮತ್ತು ಬಾದಾಮಿ ಸ್ಕ್ರಬ್

ಕಿತ್ತಳೆ ಸಿಪ್ಪೆ ಮತ್ತು ಬಾದಾಮಿ ಸ್ಕ್ರಬ್

ನಿಮ್ಮ ದೇಹದಿಂದ ವಿಷಕಾರಿ ಅಂಶವನ್ನು ಹೊಹಾಕಲು ನೆರವಾಗಲಿರುವ ಕಿತ್ತಳೆ ಸಿಪ್ಪೆ ಮತ್ತು ಬಾದಾಮಿ ಸ್ಕ್ರಬ್ ನಿಮಗೆ ತಾಜಾ ಮತ್ತು ನುಣುಪಾದ ತ್ವಚೆಯನ್ನು ನೀಡಲಿದೆ. ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಮತ್ತು ಒಣಗಿಸಿದ ಕಿತ್ತಳೆ ಸಿಪ್ಪೆಯನ್ನು 10-20 ಬಾದಾಮಿಯೊಂದಿಗೆ ಹುಡಿ ಮಾಡಿಕೊಳ್ಳಿ. ಹಾಲಿನೊಂದಿಗೆ ಈ ಮಿಶ್ರಣವನ್ನು ಮಿಶ್ರ ಮಾಡಿಕೊಂಡು ತ್ವಚೆಗೆ ಹಚ್ಚಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನನ್ನು ಸೇರಿಸಿಕೊಂಡು ನಿಮ್ಮ ಮುಖವನ್ನು ಮಸಾಜ್ ಮಾಡಿಕೊಳ್ಳಬಹುದಾಗಿದೆ.

ಕಿತ್ತಳೆ ಸಿಪ್ಪೆ ಮತ್ತು ಮೊಸರು

ಕಿತ್ತಳೆ ಸಿಪ್ಪೆ ಮತ್ತು ಮೊಸರು

ಮುಖದಲ್ಲಿರುವ ನೆರಿಗೆ ಮತ್ತು ಗೆರೆಗಳನ್ನು ಹೋಗಲಾಡಿಸಲು ಕಿತ್ತಳೆ ಸಿಪ್ಪೆ ಮತ್ತು ಮೊಸರು ನೆರವನ್ನು ನೀಡಲಿದೆ. ಮುಖದಿಂದ ಮೃತ ಕೋಶಗಳನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಲಿದೆ. ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಮತ್ತು ಮಿಕ್ಸಿಯಲ್ಲಿ ಅದನ್ನು ಹುಡಿ ಮಾಡಿಕೊಳ್ಳಿ.

ಕಿತ್ತಳೆ ಸಿಪ್ಪೆ ಮತ್ತು ಮೊಸರು

ಕಿತ್ತಳೆ ಸಿಪ್ಪೆ ಮತ್ತು ಮೊಸರು

ಇದನ್ನು ಮೊಸರಿನೊಂದಿಗೆ ಮಿಶ್ರ ಮಾಡಿಕೊಳ್ಳಿ ಮತ್ತು ವೃತ್ತಾಕಾರವಾಗಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಸ್ವಲ್ಪ ನಿಮಿಷ ಹಾಗೆಯೇ ಬಿಟ್ಟು ನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

ಕಿತ್ತಳೆ ಸಿಪ್ಪೆ ಮತ್ತು ಸಕ್ಕರೆ ಸ್ಕ್ರಬ್

ಕಿತ್ತಳೆ ಸಿಪ್ಪೆ ಮತ್ತು ಸಕ್ಕರೆ ಸ್ಕ್ರಬ್

ಕಿತ್ತಳೆ ಸಿಪ್ಪೆ ಮತ್ತು ಸಕ್ಕರೆ ಸ್ಕ್ರಬ್ ನಿಮ್ಮ ಮುಖವನ್ನು ತಾಜಾಗೊಳಿಸಿ ಮುಖವನ್ನು ಸ್ವಚ್ಛಗೊಳಿಸುತ್ತದೆ. ಡಿಹೈಡ್ರೇಟೆಡ್ ಮತ್ತು ಡ್ರೈ ಸ್ಕಿನ್ ಅನ್ನು ನಿವಾರಿಸಲಿದೆ. ಒಂದು ಬೌಲ್ ಅನ್ನು ತೆಗೆದುಕೊಂಡು ಇದಕ್ಕೆ ಸ್ವಲ್ಪ ಸಕ್ಕರೆಯನ್ನು ಹಾಕಿ ಮತ್ತು ಕಿತ್ತಳೆ ಸಿಪ್ಪೆಯನ್ನು ತುರಿದುಕೊಳ್ಳಿ. ಇದಕ್ಕೆ ಒಂದು ಚಮಚದಷ್ಟು ತೆಂಗಿನೆಣ್ಣೆಯನ್ನು ಸೇರಿಸಿ ಮತ್ತು ಒಂದು ಚಮಚದಷ್ಟು ಜೇನು ಮಿಶ್ರ ಮಾಡಿ. ಚೆನ್ನಾಗಿ ಎಲ್ಲವನ್ನೂ ಕಲಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಸ್ಕ್ರಬ್ ಮಾಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಕಿತ್ತಳೆ ಸಿಪ್ಪೆ ಮತ್ತು ಹಾಲಿನ ಫೇಸ್ ಮಾಸ್ಕ್

ಕಿತ್ತಳೆ ಸಿಪ್ಪೆ ಮತ್ತು ಹಾಲಿನ ಫೇಸ್ ಮಾಸ್ಕ್

ಮುಖವನ್ನು ಹೈಡ್ರೇಟ್ ಮಾಡಲು ಮತ್ತು ತಾಜಾಗೊಳಿಸಲು ಕಿತ್ತಳೆ ಸಿಪ್ಪೆ ಮತ್ತು ಹಾಲಿನ ಫೇಸ್ ಮಾಸ್ಕ್ ಸಹಕಾರಿಯಾಗಲಿದೆ. ಇದು ತ್ವಚೆಗೆ ಉತ್ತಮ ಕಾಂತಿಯನ್ನು ಒದಗಿಸಲಿದ್ದು ಕಿತ್ತಳೆ ಸಿಪ್ಪೆಯೊಂದಿಗೆ ನೀವು ಸಿದ್ಧಪಡಿಸಬಹುದಾದ ಉತ್ತಮ ಸ್ಕಿನ್ ಪ್ಯಾಕ್ ಆಗಿದೆ. ಇದು ಮೊಡವೆಯನ್ನು ಹೋಗಲಾಡಿಸಲಿದ್ದು, ದೊಡ್ಡ ಗಾತ್ರದ ಕಲೆಗಳನ್ನು ನಿವಾರಿಸಲಿದೆ.

ಕಿತ್ತಳೆ ಸಿಪ್ಪೆ ಮತ್ತು ಹಾಲಿನ ಫೇಸ್ ಮಾಸ್ಕ್

ಕಿತ್ತಳೆ ಸಿಪ್ಪೆ ಮತ್ತು ಹಾಲಿನ ಫೇಸ್ ಮಾಸ್ಕ್

ಎರಡು ಚಮಚದಷ್ಟು ಕಿತ್ತಳೆ ಸಿಪ್ಪೆ ಹುಡಿಯನ್ನು ತೆಗೆದುಕೊಂಡು ಸ್ವಲ್ಪ ಹಾಲು ಅಥವಾ ಹಾಲಿನ ಕ್ರೀಮ್‌ನೊಂದಿಗೆ ಮಿಶ್ರ ಮಾಡಿ. ಇದಕ್ಕೆ ಒಂದು ಚಮಚದಷ್ಟು ತೆಂಗಿನೆಣ್ಣೆಯನ್ನು ಹಾಕಿ ಮತ್ತು ಈ ಮಿಶ್ರಣದೊಂದಿಗೆ ನಿಮ್ಮ ಮುಖವನ್ನು ಮಸಾಜ್ ಮಾಡಿಕೊಳ್ಳಿ. ನಿಮ್ಮ ಮುಖದಲ್ಲಿ 15 ನಿಮಿಷಗಳ ಕಾಲ ಈ ಮಿಶ್ರಣ ಹಾಗೆಯೇ ಇರಲಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಕಿತ್ತಳೆ ಸಿಪ್ಪೆ ಮತ್ತು ಬೇವಿನೆಲೆಗಳು

ಕಿತ್ತಳೆ ಸಿಪ್ಪೆ ಮತ್ತು ಬೇವಿನೆಲೆಗಳು

ಮೊಡವೆ ಮತ್ತು ಕಲೆಗಳಿಂದ ಹಾನಿಗೊಳಗಾದ ಮುಖವನ್ನು ರಿಪೇರಿ ಮಾಡಲು ಕಿತ್ತಳೆ ಸಿಪ್ಪೆ ಮತ್ತು ಬೇವಿನೆಲೆಗಳ ಪ್ಯಾಕ್ ಕಮಾಲನ್ನು ಉಂಟುಮಾಡಲಿದೆ. ನಿಮ್ಮ ಸೂಕ್ಷ್ಮ ತ್ವಚೆಗೆ ಇದು ಉತ್ತಮ ಫೇಸ್ ಪ್ಯಾಕ್ ಎಂದೆನಿಸಿದ್ದು, ಜಿಡ್ಡಿನ ಮೊಡವೆ ಮುಖಕ್ಕೆ ಇದು ಉತ್ತಮ ಎಂದೆನಿಸಲಿದೆ. ಸ್ವಲ್ಪ ಕಿತ್ತಳೆ ಸಿಪ್ಪೆಯನ್ನು ತೆಗೆದುಕೊಂಡು ಅದರಿಂದ ಹುಡಿಯನ್ನು ಮಾಡಿಕೊಳ್ಳಿ.

ಕಿತ್ತಳೆ ಸಿಪ್ಪೆ ಮತ್ತು ಬೇವಿನೆಲೆಗಳು

ಕಿತ್ತಳೆ ಸಿಪ್ಪೆ ಮತ್ತು ಬೇವಿನೆಲೆಗಳು

ಈಗ ಬೇವಿನ ಎಲೆಯ ಹುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಮಿಶ್ರ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಎರಡನ್ನೂ ಮಿಶ್ರ ಮಾಡಿ ಮತ್ತು ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ ಉತ್ತಮ ಫಲಿತಾಂಶವನ್ನು ನೀವು ಪಡೆದುಕೊಳ್ಳುವುದು ಖಂಡಿತ.

 
English summary

Homemade Skin Packs To Try With Orange Peel

We have all heard of how great it is to consume oranges for the skin. But here's how you can use orange peel for your skin with the help of these skin packs!
Please Wait while comments are loading...
Subscribe Newsletter