Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕಿತ್ತಳೆ ಹಾಗೂ ಬೆಣ್ಣೆ ಹಣ್ಣಿನಲ್ಲಿದೆ, ಬೆಣ್ಣೆಯಂತಹ ಸೌಂದರ್ಯ!
ಬಾಲ್ಯದಲ್ಲಿದ್ದ ಮೃದು ಮತ್ತು ಹೊಳಪು ಕೆನ್ನೆಗಳು ವಯಸ್ಸಾಗುತ್ತಿದ್ದಂತೇ ಸೊರಗುವುದು ಸಹಜ. ಆದರೂ, ಅದೇ ಸೌಂದರ್ಯ, ಹೊಳಪನ್ನು ಬಹುತೇಕ ಕಾಪಾಡಿಕೊಳ್ಳಲು ಬಹಳಷ್ಟು ನೈಸರ್ಗಿಕ ವಿಧಾನಗಳಿವೆ. ಅದರಲ್ಲಿ ಕೆಲವೊಂದನ್ನು ಈ ಲೇಖನದ ಮೂಲಕ ತಿಳಿಸುತ್ತಿದ್ದೇವೆ. ಬಾಲ್ಯದ ದಿನಗಳಲ್ಲಿ ನಾವು ಕೆನ್ನೆಯನ್ನು ಮುಟ್ಟಿಕೊಂಡು ಅದರ ಮೃದುತ್ವವನ್ನು ಹೊಗಳುತ್ತಿದ್ದನ್ನು ಯಾರೂ ಮೆರೆತಿರಲಾರರು? ಆ ದಿನಗಳಲ್ಲಿ ಚರ್ಮಗಳಲ್ಲಿರುವ ಮೃದುತ್ವ ಮತ್ತು ಹೊಳಪು ವಯಸ್ಸಾಗುತ್ತಿದ್ದಂತೇ ಕಮ್ಮಿಯಾಗುತ್ತದೆ.
ಒತ್ತಡದ ಜೀವನ, ಅನಾರೋಗ್ಯಭರಿತ ಡಯೆಟ್, ಧೂಳು, ಕೊಳೆ ಮುಂತಾದವುಗಳಿಂದ ತ್ವಚೆಯ ಕಡೆಗೆ ಗಮನ ಕಡಿಮೆಯಾಗುವುದನ್ನು ನಮ್ಮ ಪ್ರಯಾಸದ ಮುಖ ಪ್ರತಿಬಿಂಬಿಸುತ್ತದೆ. ಹೀಗಾಗಿ, ಮುಖದ ಸೌಂದರ್ಯ ಮಂದ ಮತ್ತು ಅನಾರೋಗ್ಯ ಭರಿತವಾಗಿ ಕಾಣುತ್ತದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಂದವಾದ ಮತ್ತು ಅನಾರೋಗ್ಯಭರಿತ ಮತ್ತು ಒರಟಾದ ತ್ವಚೆಯನ್ನು ನೋಡಿ ಮನಸ್ಸಿಗೆ ಕಿರಿಕಿರಿಯಾಗುವುದು ಸಹಜ. ಎಷ್ಟೇ ಸೌಂದರ್ಯ ವರ್ಧಕಗಳನ್ನು ಬಳಸಿ ಮುಖವನ್ನು ಕಾಂತಿಯುತವನ್ನಾಗಿ ಮಾಡಲು ಪ್ರಯತ್ನಿಸಿದರೂ ಅದರಲ್ಲಿ ಮೃದುತ್ವ ಬರಲು ಸಾಧ್ಯವಿರುವುದಿಲ್ಲ.
ತ್ವಚೆಯಲ್ಲಿ ಮೃದುತ್ವ, ಹೊಳಪು ಬರಲು ಮೊದಲು ನೀರಿನ ಪದಾರ್ಥಗಳನ್ನು ದಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಚರ್ಮದಲ್ಲಿ ತೇವಾಂಶದ ಸಂಗ್ರಹಣೆ ಹೆಚ್ಚಾಗಿ ಶೇಖರಣೆಯಾಗುತ್ತದೆ. ಮುಖದ ಅಂದಕ್ಕೆ-ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್
ಇದರ ಜೊತೆಗೆ ಮಾಯಿಶ್ಚುರೈಸರ್‌ಗಳನ್ನು ಬಳಸುವುದರಿಂದ ಮುಖದ ಹೊರಭಾಗದಲ್ಲಿ ಒಣತ್ವವನ್ನು ಹೋಗಲಾಡಿಸಿ ಸೌಂದರ್ಯತೆಯನ್ನು ಕಾಪಾಡಬಹುದಾಗಿದೆ. ಇದಲ್ಲದೇ, ನೈಸರ್ಗಿಕವಾಗಿಯೂ ಕೆಲವು ವಿಧಾನಗಳನ್ನು ಬಳಸಿ ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು. ಇದಕ್ಕೆ ಬೇಕಾಗುವ ಸಾಮಗ್ರಿಗಳು ಅಡುಗೆ ಮನೆಯಲ್ಲಿಯೇ ಸಿಗುವಂತಹುದು. ಚರ್ಮದ ಮೃದುತ್ವ ಕಾಪಾಡಿಕೊಳ್ಳಲು ಮನೆಯಲ್ಲಿ ತಯಾರಿಸಿದ ವಿಧಾನವನ್ನು ಬಳಸಿಕೊಳ್ಳಲು ಇಷ್ಟ ಪಡುವವರಿಗೆ ಇಲ್ಲಿದೆ ವಿಧಾನ ಆವಕಾಡೋ(ಬೆಣ್ಣೆ ಹಣ್ಣು) ಮತ್ತು ಕಿತ್ತಳೆ ಹಣ್ಣಿನ ಫೇಶಿಯಲ್ ಮಾಸ್ಕ್
ಫೇಶಿಯಲ್ ಮಾಸ್ಕ್ ತಯಾರಿಸುವ ವಿಧಾನ:
*ಸಾಮಗ್ರಿಗಳು: ಕಿತ್ತಳೆ ರಸ -1 ಕಪ್
*ಅವಕಾಡೊ(ಬೆಣ್ಣೆ ಹಣ್ಣು)-1
*ಜೇನುತುಪ್ಪ ಎರಡು ಟೇಬಲ್ ಸ್ಪೂನ್ ಸೌಂದರ್ಯದ ಸಕಲ ಸಮಸ್ಯೆಗಳಿಗೂ-ಬೆಣ್ಣೆ ಹಣ್ಣಿನ ಚಿಕಿತ್ಸೆ
ಅವಕಾಡೊ ಹಣ್ಣು ತೇವಾಂಶವನ್ನು ಹೆಚ್ಚಿಸುವಲ್ಲಿ ಹೆಸರುವಾಸಿ. ಇದು ಚರ್ಮದ ನೈಸರ್ಗಿಕ ಸಮತೋಲನತೆಯನ್ನು ಕಾಪಾಡುವಲ್ಲಿ ಸಹಾಯಕಾರಿಯಾಗಿದೆ. ಇದು ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸಿ ಮಾಡಲಾದ ಮಾಯಿಶ್ಚುರೈಸರ್‌ಗಿಂತ ಪರಿಣಾಮಕಾರಿಯಾಗಿರುತ್ತದೆ. ಇದಕ್ಕೆ ಜೇನನ್ನು ಬಳಸುವುದರಿಂದ ತ್ವಚೆಯ ಮೃದುತ್ವ ಕಾಪಾಡಲು ಮತ್ತು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯಕಾರಿಯಾಗಿದೆ. ಅಲ್ಲದೇ, ಇದರಿಂದ ಗುಳ್ಳೆಗಳು ಮತ್ತು ಕಲೆಗಳು ಮಾಯವಾಗುತ್ತದೆ.
ಕಿತ್ತಳೆ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಇರುವುದರಿಂದ ಇದರಲ್ಲಿರುವ ರೋಗನಿರೊಧಕ ಗುಣವು ತ್ವಚೆಯನ್ನು ಕಾಪಾಡುತ್ತದೆ ಮತ್ತು ಆರೋಗ್ಯಯುಕ್ತ ಕಣಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಮಂದವಾದ ಒಣಗಿದ ಚರ್ಮಕ್ಕೆ ಹೊಸ ಹೊಳಪು ಬರುವಲ್ಲಿ ಸಹಾಯಕಾರಿಯಾಗಿರುತ್ತದೆ.
ಉಪಯೋಗಿಸುವ ವಿಧಾನ:
ಆವಕಾಡೊ ಹಣ್ಣಿನ ತಿರುಳನ್ನು ಸಿಪ್ಪೆ ತೆಗೆದಿಟ್ಟುಕೊಳ್ಳಬೇಕು. ನಂತರ ಇದನ್ನು ಮೇಲೆ ಹೇಳಿರುವ ಪ್ರಮಾಣದಲ್ಲಿ ಜೇನಿನೊಂದಿಗೆ ಬೆರೆಸಬೇಕು. ನಂತರ ಕಿತ್ತಳೆ ರಸವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಮುಂದೆ, ಇದನ್ನೆಲ್ಲಾ ರುಬ್ಬಿಕೊಂಡು ಒಂದು ಪಾತ್ರೆಯಲ್ಲಿ ಹಾಕಿ ಇದರ ಮಿಶ್ರಣವನ್ನು ಚೆನ್ನಾಗಿ ಬೆರೆಸಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.



Click it and Unblock the Notifications













