Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬ್ಯೂಟಿ ಟಿಪ್ಸ್: ಕಿತ್ತಳೆ ಸಿಪ್ಪೆ-ಲಿಂಬೆ ರಸದ ಫೇಸ್ ಮಾಸ್ಕ್
ಹಣ್ಣುಗಳು ದೇವರ ವರವೆಂದೇ ಹೇಳಬಹುದು. ಹಣ್ಣುಗಳಲ್ಲಿ ಇರುವ ಪೋಷಕಾಂಶಗಳು ಹಾಗೂ ವಿಟಮಿನ್‌ಗಳು ನಮ್ಮ ದೇಹಕ್ಕೆ ಅಪಾರವಾದ ಶಕ್ತಿ ಮತ್ತು ಆರೋಗ್ಯವನ್ನು ನೀಡುತ್ತದೆ. ಇಂತಹ ಹಣ್ಣುಗಳಲ್ಲಿ ಕಿತ್ತಳೆ ಕೂಡ ಒಂದಾಗಿದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಪಾರ ಪ್ರಮಾಣದಲ್ಲಿದೆ. ಇದು ನಮ್ಮ ದೇಹದಲ್ಲಿ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಕೂಡ ನಮ್ಮ ದೇಹಕ್ಕೆ ನೆರವಾಗುವ ಅಂಶಗಳು ಇದೆ ಎಂದು ಯಾರಿಗಾದರೂ ತಿಳಿದಿದೆಯಾ?
ಸಾಮಾನ್ಯವಾಗಿ ಹಣ್ಣನ್ನು ತಿಂದು ನಾವು ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಹಣ್ಣಿಗಿಂತ ಹೆಚ್ಚಿಗೆ ಕಿತ್ತಳೆ ಸಿಪ್ಪೆಯಲ್ಲಿ ಕೆಲವೊಂದು ವಿಟಮಿನ್ ಹಾಗೂ ಖನಿಜಾಂಶಗಳಿವೆ. ಇದು ನಮ್ಮ ಚರ್ಮಕ್ಕೆ ತುಂಬಾ ನೆರವಾಗುತ್ತದೆ. ನಮ್ಮ ಮುಖದ ಮೇಲೆ ಬಣ್ಣ ಮಾಸಿ ಹೋಗಿ ವೃತ್ತಕಾರದ ಕಲೆಗಳು ಮೂಡುವುದನ್ನು ನಿವಾರಿಸುವಲ್ಲಿ ಕಿತ್ತಳೆ ಸಿಪ್ಪೆಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಬಣ್ಣ ಮಾಸುವುದಕ್ಕೆ ರಾಸಾಯನಿಕ ಹಾಗೂ ಲೇಸರ್ ಚಿಕಿತ್ಸೆ ಪಡೆಯುವ ಬದಲು ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಮಾಸ್ಕ್ ಬಳಸಿ ಯಾವುದೇ ಅಡ್ಡಪರಿಣಾಮ ಇಲ್ಲದೆ ಫಲಿತಾಂಶ ಪಡೆಯಿರಿ. ಇನ್ನು ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುವ ಬದಲು ಅದನ್ನು ಜೋಪಾನವಾಗಿಟ್ಟುಕೊಳ್ಳಿ. ಕಿತ್ತಳೆ ಸಿಪ್ಪೆಯ ಲಾಭಗಳ ಬಗ್ಗೆ ತಿಳಿದುಕೊಳ್ಳಲು ಮುಂದಕ್ಕೆ ಓದಿಕೊಳ್ಳಿ.

ಮಾಸ್ಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
*2 ಚಮಚ ಕಿತ್ತಳೆಯ ಒಣಗಿದ ಸಿಪ್ಪೆಯ ಪುಡಿ(ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ ಅಥವಾ ಬಿಸಿಲಿಗೆ ಇದನ್ನು ಚೆನ್ನಾಗಿ ಒಣಗಿಸಿ ಮನೆಯಲ್ಲೇ ಹುಡಿ ಮಾಡಿಕೊಳ್ಳಬಹುದು)
*2 ಚಮಚ ಲಿಂಬೆರಸ
*ಕಿತ್ತಳೆ ಹಣ್ಣಿನ ಸಿಪ್ಪೆಯು ಆ್ಯಸಿಡ್ ಗುಣವನ್ನು ಹೊಂದಿದೆ ಹಾಗೂ ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ಚರ್ಮದಲ್ಲಿ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸಿ ಮಾಸಿ ಹೋಗಿರುವ ಬಣ್ಣವು ಮರಳಿ ಬರುವಂತೆ ಮಾಡುವುದು.
*ಕಿತ್ತಳೆ ಸಿಪ್ಪೆಯಲ್ಲಿನ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಸೋಂಕುಗಳನ್ನು ದೂರವಿರಿಸುತ್ತದೆ ಮತ್ತು ಮೊಡವೆಗಳು ಬರದಂತೆ ನೋಡಿಕೊಳ್ಳುತ್ತದೆ.
*ವಿಟಮಿನ್ ಸಿ ಚರ್ಮಕ್ಕೆ ತೇವಾಂಶ ನೀಡಿ ಚರ್ಮವು ಮೃಧುವಾಗಿ ಕಾಣುವಂತೆ ಮಾಡುತ್ತದೆ.
*ಲಿಂಬೆರಸವು ನೈಸರ್ಗಿಕ ಬ್ಲೀಚಿಂಗ್ ನಂತೆ ಕೆಲಸ ಮಾಡಿ ಚರ್ಮದ ಬಣ್ಣ ಮಾಸಿ ಹೋಗಿರುವುದನ್ನು ಮರಳಿ ಬರುವಂತೆ ಮಾಡುವುದು. ಇದರಿಂದ ಚರ್ಮದ ಕಾಂತಿ ಹೆಚ್ಚುವುದು.
ಮಾಡುವ ವಿಧಾನ
*ಹೇಳಿದಷ್ಟು ಸಾಮಗ್ರಿಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ಒಂದು ಸಣ್ಣ ಪಿಂಗಾಣಿಗೆ ಹಾಕಿ ಕಲಸಿಕೊಳ್ಳಿ. ಪೇಸ್ಟ್ ಆದ ಬಳಿಕ ಅದನ್ನು ಭಾದಿತ ಪ್ರದೇಶಗಳಿಗೆ ಹಚ್ಚಿಕೊಳ್ಳಿ. 15 ನಿಮಿಷ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.



Click it and Unblock the Notifications

