For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯ ಹೆಚ್ಚಿಸಲು-ತಾಜಾ 'ಹಣ್ಣುಗಳ ಫೇಸ್' ಪ್ಯಾಕ್!

By Manu
|

ಮುಖದ ಸೌಂದರ್ಯವನ್ನು ಹೆಚ್ಚಿಸಲು, ಚರ್ಮದ ಕಾಂತಿ ಬೆಳಗಿಸಲು ಹಾಗೂ ಕಲೆಗಳನ್ನು ನಿವಾರಿಸಲು ಇಂದು ಹಲವು ಬಗೆಯ ಫೇಸ್ ಪ್ಯಾಕ್‌ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ. ಅಲ್ಲದೇ ಈ ಫೇಸ್ ಪ್ಯಾಕ್‌‌ ಅನ್ನು ಹಚ್ಚುವ ಪರಿಣಿತರೂ ಇದ್ದಾರೆ. ಆದರೆ ಇವೆಲ್ಲಾ ಕೊಂಚ ದುಬಾರಿಯೂ, ಇದಕ್ಕಾಗಿ ಸಮಯವನ್ನು ವ್ಯಯಿಸಬೇಕಾಗಿ ಬರುವಂತಹದ್ದೂ ಆದುದರಿಂದ ಎಲ್ಲರಿಗೂ ಇವುಗಳನ್ನು ಬಳಸಲು ಸಾಧ್ಯವಿಲ್ಲ, ಆದರೆ ಇದಕ್ಕೂ ಉತ್ತಮವಾದ ಮುಖಲೇಪವನ್ನು (ಫೇಸ್‌ಪ್ಯಾಕ್) ಅನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು, ಅದೂ ಕೂಡ ಕೇವಲ ನೈಸರ್ಗಿಕವಾಗಿ ದೊರೆಯುವ ಹಣ್ಣುಗಳಿಂದ!

ಹೌದು, ಹಣ್ಣುಗಳ ತಿರುಳು ಹೇಗೆ ಆಹಾರದ ರೂಪದಲ್ಲಿ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತವೆಯೋ, ಇದೇ ಪೋಷಕಾಂಶಗಳು ಚರ್ಮದ ಹೊರಗಿನಿಂದಲೂ ಉತ್ತಮ ಆರೈಕೆ ನೀಡಬಲ್ಲವು, ಬನ್ನಿ ನೈಸರ್ಗಿಕವಾಗಿ ಹಾಗೂ ಕಡಿಮೆ ಬೆಲೆಯಲ್ಲಿ ದೊರೆಯುವಂತಹ ಕೆಲವೊಂದು ಹಣ್ಣುಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ ಮುಂದೆ ಓದಿ......

ಚೆನ್ನಾಗಿ ಕಳಿತ ಪಚ್ಚಬಾಳೆ ಹಣ್ಣು

ಚೆನ್ನಾಗಿ ಕಳಿತ ಪಚ್ಚಬಾಳೆ ಹಣ್ಣು

ಚೆನ್ನಾಗಿ ಕಳಿತ ಪಚ್ಚಬಾಳೆ ಹಣ್ಣು ಒಂದು ಕಳಿತ ಬಾಳೆಹಣ್ಣನ್ನು ಕಿವುಚಿ ಮೂರು ದೊಡ್ಡಚಮಚ ಲಿಂಬೆರಸವನ್ನು ಸೇರಿಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಪಪ್ಪಾಯಿ-ಜೇನಿನ ಫೇಸ್ ಪ್ಯಾಕ್

ಪಪ್ಪಾಯಿ-ಜೇನಿನ ಫೇಸ್ ಪ್ಯಾಕ್

*ಒಂದು ತುಂಡು ಪಪ್ಪಾಯಿ (ಚೆನ್ನಾಗಿ ಹಣ್ಣಾಗಿ ಕಳಿತ ತಿರುಳು)

*ಜೇನು

*ಹಸಿ ಹಾಲು

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಸಮಪ್ರಮಾಣದಲ್ಲಿ ಈ ಮೂರೂ ಸಾಮಾಗ್ರಿಗಳನ್ನು ಚೆನ್ನಾಗಿ ಅರೆದು ಈಗತಾನೇ ತಣ್ಣೀರಿನಲ್ಲಿ ತೊಳೆದ ಮುಖಕ್ಕೆ ತೆಳುವಾಗಿ ಲೇಪಿಸಿಕೊಳ್ಳಿ.

*ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಬಿಟ್ಟು ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಬಳಸದಿರಿ.

ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

ಹಲಸಿನ ಹಣ್ಣಿನ ಫೇಸ್ ಪ್ಯಾಕ್

ಹಲಸಿನ ಹಣ್ಣಿನ ಫೇಸ್ ಪ್ಯಾಕ್

ಬೇಕಾಗುವ ಸಾಮಾಗ್ರಿ

*ಅರ್ಧ ಕಪ್ ಹಲಸಿನ ಹಣ್ಣಿನ ತಿರುಳು

*1 ಬಾಳೆಹಣ್ಣು, 1 ಗ್ರಾಂ ಕಡಲೆಹಿಟ್ಟು,

* ಅರ್ಧ ಕಪ್ ಹಾಲು

ಹಲಸಿನ ಹಣ್ಣಿನ ಫೇಸ್ ಪ್ಯಾಕ್

ಹಲಸಿನ ಹಣ್ಣಿನ ಫೇಸ್ ಪ್ಯಾಕ್

ಮೇಲೆ ತಿಳಿಸಿದ ಎಲ್ಲಾ, ಸಾಮಾಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕುತ್ತಿಗೆಯ ಭಾಗಕ್ಕೂ ಅಪ್ಲೈ ಮಾಡಿ ಕೊಳ್ಳಬಹುದು. ಮುಖದಲ್ಲಿ ಪೂರ್ತಿಯಾಗಿ ಒಣಗುವವರೆಗೆ ಹಾಗೆಯೇ ಇಡಿ. ಸುಮಾರು ಅರ್ಧ ಗಂಟೆಯ ನಂತರ ತಣ್ಣಿರಿನಲ್ಲಿ ಚೆನ್ನಾಗಿ ಮುಖವನ್ನು ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಎರಡು ಬಾರಿ ನೀವಿದನ್ನು ಮಾಡಿಕೊಳ್ಳೋದು ಉತ್ತಮ.

ಖರ್ಜೂರ ಹಣ್ಣು

ಖರ್ಜೂರ ಹಣ್ಣು

ಖರ್ಜೂರ - 6 ರಿಂದ 7

ಹಾಲು - ಒಂದು ಸಣ್ಣ ಕಪ್

ಗೋಧಿಹಿಟ್ಟು - ನಾಲ್ಕರಿಂದ ಐದು ಸ್ಪೂನ್

ಖರ್ಜೂರ ಹಣ್ಣು

ಖರ್ಜೂರ ಹಣ್ಣು

ಮೊದಲು ಆರರಿಂದ ಏಳು ಖರ್ಜೂರದ ಬೀಜವನ್ನು ತೆಗೆದುಕೊಳ್ಳಿ,. ಹೊರಗಿನ ಧೂಳಿನಿಂದ ಹೇಗೆ ನಿಮ್ಮ ಮುಖದಲ್ಲಿ ಕೊಳೆ ಕೂರುತ್ತೋ ಹಾಗೆಯೇ ಖರ್ಜೂರದ ಹಣ್ಣಿನಲ್ಲಿ ಕೊಳೆ ಕೂರುವ ಸಾಧ್ಯತೆ ಇರುತ್ತೆ, ಹಾಗಾಗಿ ಮೊದಲು ಖರ್ಜೂರನ್ನು ನೀರಿನಲ್ಲಿ ಸ್ವಲ್ಪ ಸ್ವಚ್ಛಗೊಳಿಸಿ ಆದ್ರೆ ಖರ್ಜೂರದ ಮೇಲ್ಬಾಗದ ಚರ್ಮ ಕಿತ್ತುಹೋಗದಂತೆ ನೋಡಿಕೊಳ್ಳಿ. ನಂತ್ರ ಸ್ವಚ್ಛಗೊಳಿಸಿದ ಖರ್ಜೂರವನ್ನು ಹಾಲಿನಲ್ಲಿ ಮುಳುಗಿಸಿ ಇಡಿ. ನೀವು ಎಲ್ಲಾ ಖರ್ಜೂರವೂ ಮುಳುಗುವಷ್ಟು ಹಾಲನ್ನು ತೆಗೆದುಕೊಳ್ಳಬೇಕು.

ಖರ್ಜೂರ ಹಣ್ಣು

ಖರ್ಜೂರ ಹಣ್ಣು

ಸುಮಾರು ಒಂದು ಗಂಟೆ ನೆನಸಿದ್ರೆ ಹಾಲಿನಲ್ಲಿ ಖರ್ಜೂರ ಬೆರೆತು ಸ್ಮೂತ್ ಆಗಿರುತ್ತೆ. ನಂತ್ರ ಅವೆರಡರ ಮಿಶ್ರಣದ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಗೆ ನಾಲ್ಕರಿಂದ ಐದು ಸ್ಪೂನ್ ಗೋಧಿಹಿಟ್ಟನ್ನು ಸೇರಿಸಿ ಗಟ್ಟಿಯಾಗಿ ಕಲಸಿ ಪೇಸ್ಟ್ ರೆಡಿ ಮಾಡಿ. ಈ ಪೇಸ್ಟನ್ನು ಮುಖಕ್ಕೆ ಅಪ್ಲೈ ಮಾಡ್ಕೊಳ್ಳಿ. ಸುಮಾರು ಅರ್ಥಗಂಟೆ ಮುಖದಲ್ಲಿ ಹಾಗೆಯೇ ಇರಲಿ. ಈ ಫೇಸ್ ಪ್ಯಾಕ್ ಒಂದು ರೀತಿಯ ಸ್ಕ್ರಬ್ ರೀತಿಯೂ ಕೆಲ್ಸ ಮಾಡುತ್ತೆ. ಹಾಗಾಗಿ ಆಗಾಗ ಸ್ವಲ್ಪ ಮಸಾಜ್ ಕೂಡ ಮಾಡ್ಕೊಳ್ಳಿ. ಟ್ಯಾನ್ ತೆಗೆದುಹಾಕಲು ಕೂಡ ಈ ಫೇಸ್ ಪ್ಯಾಕ್ ನೆರವಾಗಲಿದೆ. ನಂತ್ರ ತಣ್ಣನೆಯ ನೀರಿನಿಂದ ಮುಖವನ್ನು ವಾಷ್ ಮಾಡಿ.ರಿಸಲ್ಟ್ ಏನು ಅನ್ನೋದನ್ನು ನೀವೇ ಗಮನಿಸಿಕೊಳ್ಳಬಹುದು. ಟ್ರೈ ಮಾಡಿ ನೋಡಿ.

ಸಿಹಿ ಖರ್ಜೂರ- ಆರೋಗ್ಯಕ್ಕೂ ಸೈ-ಸೌಂದರ್ಯಕ್ಕೂ ಜೈ!
ಸ್ಟಾಬೆರ್ರಿ ಫೇಸ್ ಪ್ಯಾಕ್

ಸ್ಟಾಬೆರ್ರಿ ಫೇಸ್ ಪ್ಯಾಕ್

ಒಂದು ವೇಳೆ ನಿಮಗೆ ಕಾಂತಿ ಹೀನ ತ್ವಚೆಯಿದ್ದಲ್ಲಿ, ಹೊರಗೆ ಕೆಲಸ ಮಾಡಬೇಡಿ. ಕಾಂತಿಹೀನ ತ್ವಚೆಗೆ ಮತ್ತೆ ಜೀವ ಕಳೆಯನ್ನು ನೀಡಲು ಸ್ಟ್ರಾಬೆರ್ರಿಗಳು ಸಹಕರಿಸುತ್ತವೆ. ಇದಕ್ಕಾಗಿ ಸ್ಟ್ರಾಬೆರ್ರಿಗಳನ್ನು ನೀರಿನಲ್ಲಿ ಬೆರೆಸಿ, ರುಬ್ಬಿಕೊಂಡು ಮುಖಕ್ಕೆ ಲೇಪಿಸಿ.

ಮಾವಿನ ಹಣ್ಣು

ಮಾವಿನ ಹಣ್ಣು

ಚೆನ್ನಾಗಿ ಹಣ್ಣಾದ ಮಾವಿನ ತಿರುಳನ್ನು ಕೈಯಲ್ಲಿ ಕಿವುಚಿ ರಸ ಹಿಂಡಿಕೊಳ್ಳಿ. ಈ ರಸವನ್ನು ಈಗ ತಾನೇ ತೊಳೆದ ಮುಖಕ್ಕೆ ಚೆನ್ನಾಗಿ ಸವರಿ ಐದು ನಿಮಿಷ ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ, ಈಗ ಸೋಪು ಉಪಯೋಗಿಸಬೇಡಿ. ನಿಮ್ಮ ಚರ್ಮ ಉತ್ತಮ ಸೆಳೆತ ಪಡೆದು ನೆರಿಗೆಗಳೆಲ್ಲಾ ಮಾಯವಾಗುತ್ತವೆ.

ಇದು ಮಾವಿನಹಣ್ಣಿನ ಫೇಸ್ ಪ್ಯಾಕ್‌! ಕೇಳಿ ಅಚ್ಚರಿಯಾಯಿತೇ?

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು

ದಾಳಿಂಬೆಯಲ್ಲಿಯೂ ಉತ್ತಮ ಪ್ರಮಾಣದ ಪೋಷಕಾಂಶ ಮತ್ತು ಆಂಟಿ ಆಕ್ಸಿಡೆಂಟುಗಳಿವೆ (ಉತ್ಕರ್ಷಣ ನಿರೋಧಕ). ಇವು ಚರ್ಮದ ನೆರಿಗೆಗಳನ್ನು ನಿವಾರಿಸಿ ಮುಪ್ಪು ಬೇಗನೇ ಆವರಿಸದಂತೆ ರಕ್ಷಿಸುತ್ತದೆ. ಇದಕ್ಕಾಗಿ ದಾಳಿಂಬೆಯ ಕಾಳುಗಳನ್ನು ಜಜ್ಜಿ ರಸವನ್ನು ತೆಗೆದು ಇದನ್ನು ಈಗ ತಾನೇ ತೊಳೆದ ಮುಖಕ್ಕೆ ಹಚ್ಚಿ ಐದು ನಿಮಿಷ ಒಣಗಲು ಬಿಡಿ, ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

'ದಾಳಿಂಬೆ ಸಿಪ್ಪೆಯ' ಗುಣ ಗೊತ್ತಾದರೆ, ಬಿಸಾಡಲು ಮನಸ್ಸು ಬರಲ್ಲ!

English summary

Homemade fruit facials for the glowing skin care

Fruits are a natures way to provide for us in various ways, be it as food for stomach or food for skin and hair. Some fruits heal skin, some shun pimples and acne away and some make your skin brighter bringing your lost glow back.
X
Desktop Bottom Promotion