ಸಿಹಿ ಖರ್ಜೂರ- ಆರೋಗ್ಯಕ್ಕೂ ಸೈ-ಸೌಂದರ್ಯಕ್ಕೂ ಜೈ!

By: Hemanth
Subscribe to Boldsky

ಮರುಭೂಮಿಯಲ್ಲಿ ಹುಲ್ಲು ಕೂಡ ಬೆಳೆಯದು ಎನ್ನುವ ಮಾತಿದೆ. ಮರುಭೂಮಿಯೆಂದರೆ ಅಲ್ಲಿ ಸಾವಿರಾರು ಮೈಲು ದೂರದವರೆಗೂ ನೀರು ಎನ್ನುವುದೇ ಸಿಗುವುದಿಲ್ಲ. ಕೆಲವೊಂದು ಕಡೆಗಳಲ್ಲಿ ಸಿಗುವಂತಹ ನೀರು ಜೀವ ಕಾಪಾಡಲು ಸಾಕಾಗುತ್ತದೆ. ಇಂತಹ ಮರುಭೂಮಿಯಲ್ಲೂ ಕೆಲವೊಂದು ಹಣ್ಣುಗಳು ಬೆಳೆಯುತ್ತದೆ.

ಈ ಹಣ್ಣುಗಳಲ್ಲಿ ಸಿಗುವಂತಹ ಪೋಷಕಾಂಶಗಳು ಬೇರೆ ಯಾವುದೇ ಹಣ್ಣುಗಳಲ್ಲಿ ಸಿಗುವುದಿಲ್ಲವೆಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಈ ಹಣ್ಣುಗಳಲ್ಲಿ ಅಷ್ಟೊಂದು ಬಗೆಯ ಪೋಷಕಾಂಶಗಳು ಇವೆ. ಅದರಲ್ಲೂ ಮರುಭೂಮಿಯಲ್ಲಿ ಬೆಳೆಯುವ ಬಂಗಾರವೆಂದೇ ಕರೆಯಲ್ಪಡುವ ಖರ್ಜೂರದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಪ್ರೋಟೀನ್ ಸಮೃದ್ಧವಾಗಿದೆ. ಇದನ್ನು ಹಲವಾರು ರೀತಿಯಿಂದ ಆಹಾರಗಳಲ್ಲಿ ಬಳಸಿಕೊಳ್ಳುತ್ತಾರೆ. 

ದಿನಕ್ಕೆ ಎರಡೇ ಎರಡು ಖರ್ಜೂರ, ಲಾಭಗಳು ಅಪಾರ!

ಅದರಲ್ಲೂ ಸಿಹಿ ಖರ್ಜೂರವು ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರಿಗೂ ಇಷ್ಟವಾಗುವುದು. ಖರ್ಜೂರವು ದೇಹಕ್ಕೆ ಮಾತ್ರವಲ್ಲದೆ ತ್ವಚೆ ಹಾಗೂ ಕೂದಲಿಗೂ ತುಂಬಾ ಲಾಭಕಾರಿ ಎನ್ನಲಾಗಿದೆ. ಖರ್ಜೂರವನ್ನು ಹಲವಾರು ರೀತಿಯಿಂದ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ. ಖರ್ಜೂರವನ್ನು ತ್ವಚೆ ಹಾಗೂ ಕೂದಲಿಗೆ ಬಳಸಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ಈ ಮೂಲಕ ನಿಮಗೆ ಹೇಳಿಕೊಡಲಿದೆ....

ತ್ವಚೆಗೆ ಯೌವನ

ತ್ವಚೆಗೆ ಯೌವನ

ಖರ್ಜೂರವನ್ನು ನಿಮ್ಮ ಚರ್ಮದ ಆರೈಕೆಯಲ್ಲಿ ಬಳಸಿಕೊಂಡರೆ ಅದು ಚರ್ಮಕ್ಕೆ ಕಾಂತಿ ಹಾಗೂ ಯೌವನ ನೀಡುವುದು. ಖರ್ಜೂರದಲ್ಲಿ ಇರುವಂತಹ ಪ್ರೋಟೀನ್ ಮತ್ತು ಕಿಣ್ವಗಳು ಚರ್ಮವನ್ನು ಆರೋಗ್ಯವಾಗಿಡುವುದು ಮಾತ್ರವಲ್ಲದೆ ಜೋತು ಬೀಳದಂತೆ ತಡೆಯುತ್ತದೆ. ಹೀಗ ಖರ್ಜೂರದಿಂದ ಫೇಸ್ ಪ್ಯಾಕ್ ಹೇಗೆ ತಯಾರಿಸುವುದು ಎಂದು ನಿಮಗನಿಸುತ್ತಿರಬಹುದು. ಖರ್ಜೂರದ ಫೇಸ್ ಪ್ಯಾಕ್ ಮಾಡಲು ಬೀಜ ತೆಗೆದ ಖರ್ಜೂರ ತೆಗೆದುಕೊಳ್ಳಿ ಮತ್ತು ಅದನ್ನು ಹಾಲಿನಲ್ಲಿ ನೆನೆಯಲು ಹಾಕಿ. ರಾತ್ರಿಯಿಡಿ ಹಾಗೆ ಬಿಟ್ಟು ಬೆಳಿಗ್ಗೆ ತೆಗೆದು ರುಬ್ಬಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಮುಖ ತೊಳೆದರೆ ಕಾಂತಿ ಸಿಗುವುದು.

ವಯಸ್ಸಾಗುವ ಲಕ್ಷಣ ತಡೆಯುವುದು

ವಯಸ್ಸಾಗುವ ಲಕ್ಷಣ ತಡೆಯುವುದು

ಜೀವಕೋಶಗಳಿಗೆ ಉಂಟಾಗುವಂತಹ ಆಕ್ಸಿಡೇಟಿವ್ ಒತ್ತಡವನ್ನು ಪ್ರಚೋದಿಸುವ ಫ್ರೀ ರ್ಯಾಡಿಕಲ್ ನ್ನು ಖರ್ಜೂರದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಕೊಂದು ಹಾಕುವುದು. ಖರ್ಜೂರವನ್ನು ಬಳಸಿದರೆ ಇದು ವಯಸ್ಸಾಗುವ ಲಕ್ಷಣ ತಡೆದು ನೆರಿಗೆ ಹಾಗೂ ಗೆರೆಗಳು ಬೀಳುವ ಚರ್ಮವನ್ನು ಸುಂದರಗೊಳಿಸುವುದು. ವಯಸ್ಸಾಗುವ ಲಕ್ಷಣ ತಡೆಯುವಂತಹ ಫೇಸ್ ಪ್ಯಾಕ್ ಮಾಡಬೇಕಾದರೆ ಕೆಲವು ಖರ್ಜೂರದ ಬೀಜ ತೆಗೆದು ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಬೇಕು. ಇದಕ್ಕೆ

ಒಂದು ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿಕೊಳ್ಳಿ. ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ವಿಟಮಿನ್ ಸಿ ಆಗರ

ವಿಟಮಿನ್ ಸಿ ಆಗರ

ಖರ್ಜೂರದಲ್ಲಿ ಯು ಅತ್ಯಧಿಕವಾಗಿರುವ ಕಾರಣದಿಂದಾಗಿ ಇದು ಚರ್ಮದಲ್ಲಿನ ಸ್ಥಿತಿಸ್ಥಾಪಕತ್ವ ನಿವಾರಣೆ ಮಾಡುವುದು. ಖರ್ಜುರದಲ್ಲಿ ಇರುವಂತಹ ಪೋಷಕಾಂಶಗಳು ಚರ್ಮದ ಕೋಶಗಳ ಗುಣಮಟ್ಟ ವೃದ್ಧಿಸಿ ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುವುದು. ಬೀಜ ತೆಗೆದ ಖರ್ಜೂರವನ್ನು ತೆಗೆದುಕೊಂಡು ಅದರ ಪೇಸ್ಟ್ ಮಾಡಿ. ಈ ಪೇಸ್ಟ್ ಗೆ ಒಂದು ಚಮಚ ಅರಶಿನ ಹುಡಿ, ಒಂದು ಚಮಚ ಗಂಧದ ಹುಡಿ ಮತ್ತು ಸ್ವಲ್ಪ ಹಾಲು ಹಾಕಿ. ಎಲ್ಲವನ್ನು ಸರಿಯಾಗಿ ಮಿಶ್ರಣ

ಮಾಡಿಕೊಂಡು ಮುಖದ ಮೇಲೆ ಹಚ್ಚಿ. ಸ್ವಲ್ಪ ಹೊತ್ತು ಕಳೆದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.

ಹೆರಿಗೆಯ ರೇಖೆಗಳನ್ನು ನಿವಾರಿಸುತ್ತದೆ

ಹೆರಿಗೆಯ ರೇಖೆಗಳನ್ನು ನಿವಾರಿಸುತ್ತದೆ

ಖರ್ಜೂರದಲ್ಲಿರುವ ವಿಟಮಿನ್ ಬಿ ಚರ್ಮದ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ವಿಟಮಿನ್ ಬಿ ಕೊರತೆಯಾದರೆ ಕೆಳಹೊಟ್ಟೆಯಲ್ಲಿ ಸೆಳೆತದ ಗುರುತುಗಳು ಬೀಳುತ್ತವೆ. ನಿಯಮಿತವಾಗಿ ಖರ್ಜೂರವನ್ನು ತಿನ್ನುತ್ತಾ ಬರುವ ಮೂಲಕ ಈ ಸಂಭವವನ್ನು ಸಾಕಷ್ಟು ಕಡಿಮೆಗೊಳಿಸಬಹುದು.

ಕೂದಲು ಉದುರುವುದಕ್ಕೆ

ಕೂದಲು ಉದುರುವುದಕ್ಕೆ

ಕೂದಲು ಉದುರುವ ಸಮಸ್ಯೆಯನ್ನು ಖರ್ಜೂರವು ಸುಲಭವಾಗಿ ನಿವಾರಣೆ ಮಾಡುವುದು. ವಿಟಮಿನ್ ಕೊರತೆಯಿಂದಾಗಿ ಕೂದಲು ಉದುರುವುದು ಮತ್ತು ಕೂದಲಿನ ಕೋಶಗಳು ದುರ್ಬಲಗೊಳ್ಳುವುದು. ಖರ್ಜೂರದಲ್ಲಿ ಕಬ್ಬಿನಾಂಶ ಸಮೃದ್ಧವಾಗಿರುವ ಕಾರಣ ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ಇದರಿಂದ ಕೂದಲು ಉದುರುವುದು ಕಡಿಮೆಯಾಗುವುದು. ಖರ್ಜೂರದ ಪೇಸ್ಟ್ ಮಾಡಿಕೊಂಡು ಕೂದಲಿಗೆ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆಯಿರಿ. ಖರ್ಜೂರ ನಿಯಮಿತವಾಗಿ ಸೇವನೆ ಮಾಡುತ್ತಾ ಇದ್ದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುವುದು.

ಉದ್ದ ಹಾಗೂ ದಪ್ಪ ಕೂದಲಿಗೆ

ಉದ್ದ ಹಾಗೂ ದಪ್ಪ ಕೂದಲಿಗೆ

ಖರ್ಜೂರದ ಎಣ್ಣೆಯಿಂದ ತಲೆಬುರುಡೆ ಮತ್ತು ಕೂದಲಿಗೆ ಮಸಾಜ್ ಮಾಡಿಕೊಂಡರೆ ಇದು ಉದ್ದ ಹಾಗೂ ದಪ್ಪ ಕೂದಲಿಗೆ ನೆರವಾಗುವುದು. ಖರ್ಜೂರದ ಎಣ್ಣೆಯಲ್ಲಿ ಉನ್ನತ ಮಟ್ಟದ ಪೋಷಕಾಂಶ ಮತ್ತು ವಿಟಮಿನ್ ಗಳು ಲಭ್ಯವಿದೆ. ಇದು ಕೂದಲನ್ನು ದಪ್ಪ ಹಾಗೂ ಉದ್ದ ಮಾಡುವುದು. ಖರ್ಜೂರದ ಎಣ್ಣೆ ಬಳಸಿದರೆ ಅದರಿಂದ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ನಿಲ್ಲುತ್ತದೆ.

ಕೇವಲ ಮೂರು ಖರ್ಜೂರ ತಿನ್ನಿರಿ, ದೇಹಕ್ಕೆ ಹಿಡಿದ ರೋಗ ಓಡಿಸಿ...!

ಕೂದಲುದುರುವುದನ್ನು ನಿಲ್ಲಿಸುತ್ತದೆ

ಕೂದಲುದುರುವುದನ್ನು ನಿಲ್ಲಿಸುತ್ತದೆ

ಪ್ರತಿದಿನ ಸುಮಾರು ಎರಡರಿಂದ ಮೂರು ಖರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೂದಲ ಬುಡಗಳು ದೃಢಗೊಳ್ಳುವ ಮೂಲಕ ಕೂದಲು ಉದುರುವ ಸಂಖ್ಯೆ ಕಡಿಮೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಬಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲಿಗೂ ಉತ್ತಮ ಪೋಷಣೆ ದೊರೆತು ಆರೋಗ್ಯಕರವಾಗುತ್ತದೆ. ಇದು ನಿಮ್ಮ ಕೂದಲನ್ನು ಉದ್ದ ಮತ್ತು ಆರೋಗ್ಯಕರವಾಗಿಸುತ್ತದೆ.

English summary

Skin And Hair Benefits Of Dates

Dates, also known as Khajur, is one among the commonly consumed dry fruits in India as well as in the Asian countries. Dates are known to have a large amount of proteins and vitamins in them, which can help to benefit your body in many ways. Dates are packed with a host of nutrients and proteins, which not only benefit your body but also benefit your skin and hair in many ways when included in the beauty regimen. So, here we would mention to you about the skin and hair benefits of dates.
Subscribe Newsletter