Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಮುಪ್ಪಿಗೆ ವಿದಾಯ ಹೇಳುವ ನೈಸರ್ಗಿಕ ದಿವ್ಯೌಷಧಗಳು
ವಯಸ್ಸಾಗುವಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ಬರಿಯ ಮುಪ್ಪಿನ ಸಂಕೇತವಾಗಿರದೆ ಅನಾರೋಗ್ಯ ಸ್ಥಿತಿಯಲ್ಲೂ ಕಾಡುವ ಪರಿಸ್ಥಿತಿಯಾಗಿದೆ ಎಂಬುದು ಇತ್ತೀಚಿನ ಅಧ್ಯಯನಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ. ಇಂದಿನ ಆಹಾರ ಮತ್ತು ದಿನಚರಿಯಿಂದಾಗಿ ಮುಪ್ಪು ಬೇಗನೇ ಮಾನವರನ್ನು ಕಾಡುತ್ತದೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಮುಪ್ಪನ್ನು ಮರೆಮಾಚುವ ಕೆಲವೊಂದು ವಿಧಾನಗಳನ್ನು ತಿಳಿಸುತ್ತಿದ್ದೇವೆ. ಮುಖದ ನೆರಿಗೆ ನಿವಾರಣೆಗೆ, ಅಡುಗೆ ಮನೆಯ ಬೆಳ್ಳುಳ್ಳಿ ಸಾಕು!
ವಯಸ್ಸಾಗುವಿಕೆಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತಿನಂತೆ ತ್ವಚೆಯ ಸುಕ್ಕನ್ನು ಮರೆಮಾಚಲು ಸಂಪೂರ್ಣವಾಗಿ ಆಗದೇ ಇದ್ದರೂ ಕೊಂಚವಾದರೂ ಇದರ ಪ್ರಮಾಣವನ್ನು ತಗ್ಗಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ರಾಸಾಯನಿಕ ಉತ್ಪನ್ನಗಳ ಜಾಹೀರಾತಿಗೆ ಮರುಳಾಗದೇ ನೈಸರ್ಗಿಕ ವಿಧಾನಗಳನ್ನೇ ಬಳಸಿ ಎಂಬುದಾಗಿ ನಾವು ಸಲಹೆ ಮಾಡುತ್ತೇವೆ. ಮುಪ್ಪನ್ನು ಸದೆಬಡಿಯುವ ಈ ಉತ್ಪನ್ನಗಳು ನಿಜಕ್ಕೂ ನಿಮಗೆ ಪರಿಣಾಮಕಾರಿ ಎಂದೆನಿಸಲಿವೆ.....

ಸಾಕಷ್ಟು ನೀರು ಕುಡಿಯಿರಿ
ಸಾಕಷ್ಟು ನೀರು ಸೇವಿಸದಿರುವುದು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಾಕಷ್ಟು ನೀರು ಕುಡಿಯುವುದು ಅಗತ್ಯ. ನೀರು ತ್ವಚೆಯನ್ನು ಹೈಡ್ರೇಟ್ ಮಾಡಿ ತಾಜಾಗೊಳಿಸಿ ಹೊಳೆಯುವಂತೆ ಮಾಡುತ್ತದೆ. ಹೈಡ್ರೇಟ್ ಆಗಿರುವ ತ್ವಚೆ ಸುಕ್ಕುಗಳಿಗೆ ಒಳಗಾಗುವುದಿಲ್ಲ.

ಎಂಟು ಗಂಟೆಗಳ ನಿದ್ದೆ ತಪ್ಪಿಸದಿರಿ!
ಪ್ರತಿಯೋರ್ವನಿಗೂ ಎಂಟುಗಂಟೆಗಳ ನಿದ್ದೆ ಅತ್ಯಗತ್ಯವಾದುದು. ವಯಸ್ಸಾಗುವಿಕೆಯನ್ನು ನಿಯಂತ್ರಿಸಲು ನಿದ್ರೆ ಅತೀ ಅಗತ್ಯ. ನೀವು ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡುತ್ತಿಲ್ಲ ಎಂದಾದಲ್ಲಿ ಕಪ್ಪು ವರ್ತುಲಗಳು, ಸುಸ್ತಾದ ಕಣ್ಣುಗಳು ಮತ್ತು ಊದಿದ ಕಣ್ಣುಗಳನ್ನು ನೀವು ಪಡೆದುಕೊಳ್ಳುತ್ತೀರಿ.

ರೋಸ್‌ಹಿಪ್ ಆಯಿಲ್
ವಯಸ್ಸಾಗುವಿಕೆಯನ್ನು ತಡೆಹಿಡಿಯುವ ಎಣ್ಣೆ ಇದಾಗಿದೆ. ಇದನ್ನು ರಾತ್ರಿ ಮಲಗುವ ವೇಳೆಯಲ್ಲಿ ತ್ವಚೆಗೆ ಹಚ್ಚುವುದರಿಂದ ಮುಪ್ಪಿನಿಂದ ಕೊಂಚ ಮಟ್ಟಿಗಾದರೂ ಪಾರಾಗಬಹುದು!

ತೆಂಗಿನೆಣ್ಣೆ
ನಿಮ್ಮ ವಯಸ್ಸಾಗುವಿಕೆಯನ್ನು ತಡೆಹಿಡಿಯುವಲ್ಲಿ ತೆಂಗಿನೆಣ್ಣೆ ಕೂಡ ಪ್ರಯೋಜನಕಾರಿಯಾದುದು. ಇದು ಕಡಿಮೆ ದರದ್ದಾಗಿದೆ ಮತ್ತು ಪ್ರಯೋಜನಕಾರಿ ಕೂಡ ಹೌದು. ಇದನ್ನು ಮಾಯಿಶ್ಚರೈಸರ್‌ನಂತೆ ಬಳಸಿಕೊಳ್ಳಬಹುದಾಗಿದೆ.

ಅಲೋವೆರಾ
ವಯಸ್ಸಾದಂತೆ ತ್ವಚೆ ಸುಕ್ಕಾಗುತ್ತದೆ ಮತ್ತು ಒಣಗಿ ಹೋಗುತ್ತದೆ. ಅಲೋವೆರಾ ಜೆಲ್ ಇದಕ್ಕೆ ಉತ್ತಮ ಔಷಧಿ ಎಂದೆನಿಸಿದೆ. ಇದು ತ್ವಚೆಯನ್ನು ಹೈಡ್ರೇಟ್ ಆಗಿ ಇರಿಸಲು ನೆರವುಕಾರಿಯಾಗಿದೆ. ಬಹುಪಯೋಗಿ ಅಲೋವೆರಾ, ಎಷ್ಟು ಹೊಗಳಿದರೂ ಕಡಿಮೆಯೇ!

ಬಾದಾಮಿ ಎಣ್ಣೆ
ಮೊನೊ ಅನ್‌ಸ್ಯಾಚುರೇಟೆಡ್ ಕೊಬ್ಬನ್ನು ಇದು ಹೊಂದಿದೆ ಜೊತೆಗೆ ವಿಟಮಿನ್ ಇ ಯನ್ನು ಒಳಗೊಂಡಿದೆ. ಇದು ನಿಮ್ಮ ಒಣ ತ್ವಚೆಗೆ ಉತ್ತಮ ಎಂದೆನಿಸಿದೆ. ವಿಟಮಿನ್ ಇ ನಿಮ್ಮ ತ್ವಚೆಗೆ ಅತ್ಯುತ್ತಮ ಎಂದೆನಿಸಲಿದೆ.

ಬೆಣ್ಣೆ
ಬೆಣ್ಣೆಯನ್ನು ಬಳಸಿ ಕೂಡ ಮುಪ್ಪಿನ ಸಮಸ್ಯೆಯನ್ನು ನಿಮಗೆ ದೂರ ಮಾಡಿಕೊಳ್ಳಬಹುದಾಗಿದೆ. ಮಲಗುವ ಮುನ್ನ ಮುಖ ತೊಳೆಯಲು ಮರೆಯದಿರಿ.

ಹರಳೆಣ್ಣೆ
ಇದು ಒಮೆಗಾ ಫ್ಯಾಟಿ ಆಸಿಡ್ ಅನ್ನು ಒಳಗೊಂಡಿದೆ ಮತ್ತು ನೆರಿಗೆಗಳನ್ನು ಬುಡಸಮೇತ ಕಿತ್ತೊಗೆಯುತ್ತದೆ. ವಾರಕ್ಕೊಮ್ಮೆ ಈ ಎಣ್ಣೆಯನ್ನು ಬಳಸಿ ಮತ್ತು ರಾತ್ರಿ ಪೂರ್ತಿ ಪರಿಹಾರಕವಾಗಿ ಬಳಸಿಕೊಂಡು ಮುಪ್ಪಿಗೆ ವಿದಾಯ ಹೇಳಿ. ಹಳ್ಳಿಗಾಡಿನ 'ಎತ್ತಿನ ಗಾಡಿಯ ಎಣ್ಣೆ' ನಮ್ಮ ಹರಳೆಣ್ಣೆ!



Click it and Unblock the Notifications