ಮುಖದ ನೆರಿಗೆ ನಿವಾರಣೆಗೆ, ಅಡುಗೆ ಮನೆಯ ಬೆಳ್ಳುಳ್ಳಿ ಸಾಕು!

By Super
Subscribe to Boldsky

ನೆರಿಗೆಗಳು ನೀವು ವಯಸ್ಸಾಗುವಿಕೆಯನ್ನು ಸೂಚಿಸುತ್ತಿದ್ದು ಇದು ವೃದ್ಧಾಪ್ಯದ ಸೂಚನೆಯಾಗಿದೆ ಅಂತೆಯೇ ಅಸಹ್ಯಕರವಾಗಿ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಇದೇನೂ ಪರಿಹಾರವೇ ಕಾಣದ ಸಮಸ್ಯೆಯೇನಲ್ಲ. ಕೆಲವೊಂದು ಆರೋಗ್ಯಕರ ಜೀವನ ಶೈಲಿಗಳನ್ನು ನೀವು ಅನುಸರಿಸಿದಲ್ಲಿ ನೆರಿಗೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಮಾಲ್ ಮತ್ತು ಸೂಪರ್ ಮಾರುಕಟ್ಟೆಗಳಲ್ಲಿ ಸೌಂದರ್ಯ ಉತ್ಪನ್ನಗಳು ದೊರೆಯುತ್ತಿದ್ದು ಇದು ದುಬಾರಿ ಮತ್ತು ತ್ವಚೆಗೆ ಹಾನಿಕರವಾಗಿರಬಹುದು. ಇಂತಹ ಉತ್ಪನ್ನಗಳನ್ನು ಒಮ್ಮೆ ನೀವು ಬಳಸಿದರೆ ಅವುಗಳನ್ನು ಮತ್ತಷ್ಟು ಬಳಸುವಂತೆ ಇವುಗಳು ಮಾಡಬಹುದು.

DIY: One Secret Recipe To Get Rid Of Wrinkles In Seven Days!
 

ಈ ಕಾರಣಗಳಿಂದಾಗಿ, ನೈಸರ್ಗಿಕ ಉತ್ಪನ್ನಗಳನ್ನೇ ವೈದ್ಯರುಗಳು ಶಿಫಾರಸು ಮಾಡುತ್ತಾರೆ. ನೆರಿಗೆಗಳನ್ನು ಉಂಟುಮಾಡುವುದು ಓಕ್ಸಿಡೆಂಟ್ಸ್ ಆಗಿದೆ. ಅದಾಗ್ಯೂ, ಆಂಟಿಆಕ್ಸಿಡೆಂಟ್ಸ್ ತ್ವಚೆಗೆ ಉತ್ತಮವಾಗಿದ್ದು, ಓಕ್ಸಿಡೆಂಟ್ಸ್‎ಗಳನ್ನು ಇದು ನಿವಾರಿಸುತ್ತದೆ. ಬೆಳ್ಳುಳ್ಳಿ, ರುಚಿಕರವಾದ ಮತ್ತು ಸುವಾಸನೆಯುಕ್ತ ಮಸಾಲಾ ಸಾಮಾಗ್ರಿಯಾಗಿದ್ದು, ನೆರಿಗೆ ನಿವಾರಕ ಉತ್ಪನ್ನವಾಗಿದೆ. ಮೊಡವೆ ಮತ್ತು ನೆರಿಗೆಗಳನ್ನು ನಿವಾರಿಸಲು ಇದನ್ನು ಬೇರೆ ಬೇರೆ ವಿಧಾನದಲ್ಲಿ ಬಳಸಬಹುದಾಗಿದೆ. ಕಣ್ಣಿನ ಸುತ್ತಲಿರುವ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಮತ್ತು ತ್ವಚೆಯನ್ನು ಯವ್ವೌನಪೂರ್ಣಗೊಳಿಸುತ್ತದೆ. ಅದ್ದರಿಂದ ನೆರಿಗೆಗಳನ್ನು ನಿವಾರಿಸುವಲ್ಲಿ ಬೆಳ್ಳುಳ್ಳಿ ಪ್ರಮುಖ ನೈಸರ್ಗಿಕ ಉತ್ಪನ್ನವಾಗಿದೆ. ನೆರಿಗೆ ಬೀಳದಂತೆ ತ್ವಚೆ ರಕ್ಷಣೆ ಮಾಡುವ 9 ಜ್ಯೂಸ್

ವಿಟಮಿನ್ ಇ, ವಿಟಮಿನ್ ಸಿ, ಉತ್ಕರ್ಷಣ ನಿರೋಧಿ ಅಂಶಗಳು ಮತ್ತು ಆಂಟಿ ಏಜಿಂಗ್ ಉತ್ಪನ್ನಗಳನ್ನು ಬೆಳ್ಳುಳ್ಳಿ ಒಳಗೊಂಡಿದೆ. ನಿಮ್ಮ ಮುಖದಲ್ಲಿರುವ ನೆರಿಗೆಗಳನ್ನು ನಿವಾರಿಸಲು ಬೆಳ್ಳುಳ್ಳಿಯನ್ನು ಹೇಗೆ ಬಳಸುವುದು ಎಂಬುದನ್ನು ಕೆಳಗೆ ನಾವು ನೀಡುತ್ತಿದ್ದೇವೆ. ಪ್ರತೀ ದಿನ ಬೆಳ್ಳುಳ್ಳಿಯನ್ನು ಸೇವಿಸುವುದು ನೆರಿಗೆಗಳನ್ನು ಆರಂಭದಲ್ಲೇ ಇದು ತಡೆಯುತ್ತದೆ. ನಿಮಗೆ ಇದರ ರುಚಿ ಮತ್ತು ಸುವಾಸನೆ ಹಿಡಿಸುತ್ತಿಲ್ಲ ಎಂದಾದಲ್ಲಿ, ನಿಮಗಾಗಿ ಇಲ್ಲಿ ಪರಿಹಾರವಿದೆ!

DIY: One Secret Recipe To Get Rid Of Wrinkles In Seven Days!

4 ಬೆಳ್ಳುಳ್ಳಿಯನ್ನು ತೆಗೆದುಕೊಂಡು ಇದಕ್ಕೆ 1 ಚಮಚ ಜೇನು ಮತ್ತು 2 ಚಮಚ ಮೊಸರನ್ನು ಸೇರಿಸಿ. ನಿಮ್ಮ ಸಂಪೂರ್ಣ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿ 20 ನಿಮಿಷ ಬಿಡಿ. ಏಳು ದಿನಗಳ ಕಾಲ ಇದನ್ನು ನೀವು ಮಾಡಿದಲ್ಲಿ, ನೆರಿಗೆಗಳ ಇಳಿಕೆಯನ್ನು ನಿಮಗೆ ಗಮನಿಸಿಕೊಳ್ಳಬಹುದು ಅಂತೆಯೇ ಮೃದು ತ್ವಚೆ ನಿಮಗೆ ದೊರೆಯುತ್ತದೆ. ಔಷಧೀಯ ಗುಣಗಳ ಆಗರ-ಬಿಳಿ ಬಿಳಿ ಬೆಳ್ಳುಳ್ಳಿ  

ಬೆಳ್ಳುಳ್ಳಿ ವಾಸನೆಯಿಂದ ನಿಮಗೇನೂ ತೊಂದರೆ ಇಲ್ಲ ಎಂದಾದಲ್ಲಿ ಹಾಗಿದ್ದರೆ ಇದನ್ನು ಪ್ರಯತ್ನಿಸಿ. ಬೆಳ್ಳುಳ್ಳಿಯನ್ನು ನೇರವಾಗಿ ಸಂಪೂರ್ಣ ಮುಖಕ್ಕೆ ಹಚ್ಚಿ. ಎಚ್ಚರಿಕೆಯಿಂದ ಈ ಕೆಲಸವನ್ನು ಮಾಡಿ. ಬೆಳ್ಳುಳ್ಳಿಯ ಸಣ್ಣ ತುಂಡನ್ನು ಬಳಸಿ ಸಮಸ್ಯೆ ಇರುವ ಜಾಗಕ್ಕೆ ಹಚ್ಚಿ.

DIY: One Secret Recipe To Get Rid Of Wrinkles In Seven Days!
 

ಬೆಳ್ಳುಳ್ಳಿ ಖಾರದ ಗುಣವನ್ನು ಹೊಂದಿರುವುದರಿಂದ ಹೆಚ್ಚು ಬಲವಾಗಿ ಇದನ್ನು ಮುಖಕ್ಕೆ ಉಜ್ಜಬೇಡಿ. ಸಣ್ಣಗೆ ಇದನ್ನು ನೀವು ಜಜ್ಜಿಕೊಳ್ಳಬೇಕು ಇದರಿಂದ ನಿಮಗೆ ಅಷ್ಟೊಂದು ಖಾರ ಎಂದೆನಿಸುವುದಿಲ್ಲ. ಸಮಸ್ಯೆ ಇರುವ ಭಾಗಕ್ಕೆ ಬೆಳ್ಳುಳ್ಳಿ ರಸ ಮತ್ತು ವಿನೇಗರ್ ಅನ್ನು ಹಚ್ಚಿಕೊಳ್ಳಿ 7-10 ನಿಮಿಷ ಹಾಗೆಯೇ ಬಿಡಿ ಏಳು ದಿನ ಹೀಗೆ ಮಾಡಿ.

ನೆರಿಗೆಗಳನ್ನು ನಿವಾರಿಸುವುದರ ಜೊತೆಗೆ ನಿಮ್ಮ ತ್ವಚೆಯ ಪಿಎಚ್ ಅನ್ನು ಇದು ನಿರ್ವಹಿಸುತ್ತದೆ. ಇನ್ನಷ್ಟು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು, ಬೆಳ್ಳುಳ್ಳಿಯ 2-3 ಎಸಳುಗಳನ್ನು ತೆಗೆದುಕೊಂಡು ಅಷ್ಟೇ ಪ್ರಮಾಣದ ವಿನೇಗರ್ ರಸದೊಂದಿಗೆ ಇದನ್ನು ಮಿಶ್ರ ಮಾಡಿಕೊಳ್ಳಿ.

For Quick Alerts
ALLOW NOTIFICATIONS
For Daily Alerts

    English summary

    DIY: One Secret Recipe To Get Rid Of Wrinkles In Seven Days!

    Wrinkles are an unpleasant reality of growing older. These marks of ageing are more unsightly to the person carrying them, than to the others who view them. Wrinkles not only make a person look old, but also feel old and unattractive. Wrinkles can be avoided and there are many ways to do this successfully.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more