Latest Updates
-
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು!
ಕಲ್ಲಂಗಡಿ ಹಣ್ಣಿನಿಂದ ತ್ವಚೆ ಹಾಗೂ ಕೂದಲಿನ ಆರೈಕೆ
ಬೇಸಿಗೆ ಕಾಲದಲ್ಲಿ ಹಸಿವು ಹಾಗೂ ಬಾಯಾರಿಕೆಯನ್ನು ನಿವಾರಿಸುವಂತಹ ಪ್ರಮುಖ ಹಣ್ಣಾಗಿರುವ ಕಲ್ಲಂಗಡಿ ಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಅದರಲ್ಲೂ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಹೇಳಿ ಮಾಡಿಸಿದಂತಹ ಹಣ್ಣಾಗಿದೆ. ಇದು ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಕಲ್ಲಂಗಡಿ ಬೀಜಗಳನ್ನು ಹಾಕಿ ಬೇಯಿಸಿದ ನೀರು-ಆಯಸ್ಸು ನೂರು!
ಆರೋಗ್ಯವನ್ನು ಕಾಪಾಡುವ ಈ ಹಣ್ಣು ಕೂದಲು ಹಾಗೂ ತ್ವಚೆಯ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುತ್ತದೆ. ತ್ವಚೆ ಹಾಗೂ ಕೂದಲಿಗೆ ಕಲ್ಲಂಗಡಿ ಹಣ್ಣನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಮುಖದ ಸೌಂದರ್ಯಕ್ಕೆ
ಒಂದು ಕಪ್ ಕಲ್ಲಂಗಡಿ ಹಣ್ಣಿನ ತಿರುಳನ್ನು ಸಂಗ್ರಹಿಸಿ, ಬೀಜ ನಿವಾರಿಸಿ. ಈ ತಿರುಳನ್ನು ನಯವಾಗಿ ಅರೆದು ದಪ್ಪನೆಯ ಲೇಪನವಾಗಿಸಿ ಈಗತಾನೇ ತೊಳೆದುಕೊಂಡ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಈ ಮುಖಲೇಪದಿಂದ ತ್ವಚೆಗೆ ತಣ್ಣನೆಯ ಆರಾಮ ದೊರಕುವುದರ ಜೊತೆಗೇ ಸೂಕ್ಷ್ಮ ರಂಧ್ರಗಳಲ್ಲಿ ಸಿಲುಕಿದ್ದ ಧೂಳು ಮತ್ತು ಇತರ ಪ್ರದೂಷಣಾ ಕಣಗಳನ್ನು ನಿವಾರಿಸಬಹುದು. ಈ ಮೂಲಕ ತ್ವಚೆಯ ಆಳಕ್ಕೆ ಆರ್ದ್ರತೆ ದೊರೆತು ಚರ್ಮದ ಸೆಳೆತ ಹೆಚ್ಚುತ್ತದೆ ಹಾಗೂ ತಾರುಣ್ಯದ ತ್ವಚೆ ನಿಮ್ಮದಾಗುತ್ತದೆ. ಒಂದು ವೇಳೆ ಬಿಸಿಲಿನಲ್ಲಿ ಚರ್ಮ ತೀರಾ ಒಣಗಿದ್ದರೆ ಕೆಲವು ಕಲ್ಲಂಗಡಿ ತುಂಡುಗಳನ್ನು ಫ್ರಿಜ್ಜಿನಲ್ಲಿಟ್ಟು ಘನೀಕರಿಸಿ. ಈ ತುಂಡಿನಿಂದ ಮುಖವನ್ನು ಹೆಚ್ಚಿನ ಒತ್ತಡವಿಲ್ಲದೇ ಉಜ್ಜಿಕೊಳ್ಳುತ್ತಾ ಬಂದರೆ ಸೂಕ್ಷ್ಮರಂಧ್ರಗಳನ್ನು ತಕ್ಷಣಎ ತೆರೆದು ತಾಜಾತನವನ್ನು ಪಡೆಯಬಹುದು.

ಕೂದಲನ್ನು ತೇವಾಂಶದಿಂದ ಇಡುವುದು
ಕಲ್ಲಂಗಡಿ ಹಣ್ಣಿನ ಫೇಸ್ ಮಾಸ್ಕ್ ಮಾಡಲು ಸ್ವಲ್ಪ ಕಲ್ಲಂಗಡಿ ಹಣ್ಣಿನ ತಿರುಳುನ್ನು ತೆಗೆದುಕೊಳ್ಳಿ. ಇದರ ಬೀಜವನ್ನು ಎಚ್ಚರಿಕೆಯಿಂದ ತೆಗೆಯಿರಿ. ಇದನ್ನು ಹಿಚುಕಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಫೇಸ್ ಮಾಸ್ಕ್ ಆಗಿ ಬಳಸಿ. ಇದು ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ.

ಚರ್ಮದ ಹೊಳಪಿಗೆ
ಕಲ್ಲಂಗಡಿ ಹಣ್ಣಿನ ತಿರುಳನ್ನು ತೆಗೆದುಕೊಂಡು ಅದರಲ್ಲಿನ ಬೀಜಗಳನ್ನು ಹೊರತೆಗೆಯಿರಿ. ಇದನ್ನು ರುಬ್ಬಿಕೊಂಡು ಅದರ ದಪ್ಪಗಿನ ಪೇಸ್ಟ್ ಮಾಡಿಕೊಂಡ ಬಳಿಕ ಸರಿಯಾಗಿ ಜಜ್ಜಿಕೊಂಡು ರಸ ತೆಗೆಯಿರಿ. ಇದಕ್ಕೆ ಒಂದು ಚಮಚ ಗ್ಲಿಸರಿನ್ ಹಾಕಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಇದು ನೈಸರ್ಗಿಕ ಟೋನರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ.

ಬಿಸಿಲಿನಿಂದ ಸುಟ್ಟ ಕಲೆಗಳಿಗೆ
ಕಲ್ಲಂಗಡಿ ಹಣ್ಣಿನ ಕೆಲವು ತುಂಡುಗಳನ್ನು ತೆಗೆದುಕೊಂಡು ಅದರ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಚಮಚ ಅಲೋವೆರಾ, ½ ಚಿಟಿಕೆ ಅರಶಿನ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಇದು ಬಿಸಿಲಿನಿಂದ ಸುಟ್ಟ ಕಲೆಗಳನ್ನು ನಿವಾರಿಸುತ್ತದೆ ಮತ್ತು ಚರ್ಮಕ್ಕೆ ತಂಪನ್ನು ಒದಗಿಸುವುದು.

ಕೂದಲಿನ ಬೆಳವಣಿಗೆಗೆ
ಕಲ್ಲಂಗಡಿ ಹಣ್ಣೀನ ಕೆಲವು ತುಂಡುಗಳನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಜಜ್ಜಿಕೊಳ್ಳಿ ಮತ್ತು ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ಮಯೋನಿಸ್ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಗೆ ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.



Click it and Unblock the Notifications