ಚಳಿಗಾಲದಲ್ಲಿ ಚರ್ಮದ ರಕ್ಷಣೆಗಾಗಿ ಈ ಹಣ್ಣುಗಳನ್ನು ಸೇವಿಸಿ

By: Arshad
Subscribe to Boldsky

ಚುಮುಚುಮು ಚಳಿಯಲ್ಲಿ ಬೆಚ್ಚನೆಯ ಬಟ್ಟೆಗಳನ್ನು ಧರಿಸಿ ಬಿಸಿಬಿಸಿ ಟೀ, ಗರಿಗರಿ ಬಜ್ಜಿ, ಮೆಣಸಿನ ಬೋಂಡಾ ಸವಿದರೆ ಸ್ವರ್ಗವೇ ಧರೆಗಿಳಿದಂತೆ. ಆದರೆ ಒಣಹವೆ ಚರ್ಮವನ್ನು ಒಣದಾಗಿಸಿ ಬಿರಿಯಲು ಕಾರಣವಾಗುತ್ತದೆ. ಇದಕ್ಕೆ ಗಾಳಿಯಲ್ಲಿ ಆರ್ದ್ರತೆ ಕಡಿಮೆಯಾಗಿರುವುದೇ ಕಾರಣ. ಈ ಕೊರತೆಯನ್ನು ಕೆಲವು ಫಲಗಳು ಸಮರ್ಥವಾಗಿ ಪೂರೈಸುತ್ತವೆ. ನೈಸರ್ಗಿಕ ಹಣ್ಣುಗಳ ಫೇಸ್ ಪ್ಯಾಕ್- ಕಡಿಮೆ ವೆಚ್ಚ ಅಧಿಕ ಲಾಭ!

ಉದಾಹರಣೆಗೆ ನೆಲ್ಲಿಕಾಯಿ, ಪಪ್ಪಾಯಿ, ಅನಾನಸ್ ಹಣ್ಣು ಮತ್ತು ದಾಳಿಂಬೆ. ಬನ್ನಿ, ಈ ಫಲಗಳು ಚಳಿಗಾಲದಲ್ಲಿ ಹೇಗೆ ಚರ್ಮದ ರಕ್ಷಣೆ ಮಾಡುತ್ತವೆ ಎಂಬುದನ್ನು ನೋಡೋಣ......   

 ನೆಲ್ಲಿಕಾಯಿ

ನೆಲ್ಲಿಕಾಯಿ

ಕೇಶ ಮತ್ತು ಸೌಂದರ್ಯವೃದ್ಧಿ ಪ್ರಸಾಧನಗಳಲ್ಲಿ ಪ್ರಮುಖವಾಗಿ ಉಪಯೋಗಿಸಲ್ಪಡುವ

ನೆಲ್ಲಿಕಾಯಿಯಲ್ಲಿ ಹಲವಾರು ಪೋಷಕಾಂಶಗಳಿದ್ದು ಇವು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಮತ್ತು ರಕ್ತವನ್ನು ಶುದ್ಧೀಕರಿಸಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮ ಒಣಗುವುದರಿಂದ ತಪ್ಪಿದಂತಾಗಿ ಕಾಂತಿಯುಕ್ತ ಮತ್ತು ಕಲೆಯಿಲ್ಲದಂತಾಗಿರಲು ನೆರವಾಗುತ್ತದೆ. ಎಲೆಲೆ ಬೆಟ್ಟದ ನೆಲ್ಲಿಕಾಯಿಯೇ, ನಿನಗೆ ಸರಿ ಸಾಟಿ ಯಾರಿಲ್ಲಿ?

ಪಪ್ಪಾಯಿ

ಪಪ್ಪಾಯಿ

ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಮತ್ತು ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸುವ ಕಿಣ್ವಾಗಳಿವೆ. ಈ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಚರ್ಮದ ರಕ್ಷಣೆ ಮಾಡುವ ಜೊತೆಗೇ ಕಾಂತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಪಪ್ಪಾಯಿ (ಪರಂಗಿ ಹಣ್ಣು)ಯಲ್ಲಿರುವ ಪಪಾಯಿನ್ ಎಂಬ ಕಿಣ್ವ ಬಳಕೆಯಾಗದ ಪ್ರೋಟೀನುಗಳನ್ನು ಒಡೆದು ಹೆಚ್ಚಿನ ಪೋಷಣೆ ಒದಗಿಸುವ ಜೊತೆಗೇ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲೂ ನೆರವಾಗುತ್ತವೆ. ಅಲ್ಲದೇ ಸಡಿಲಗೊಂಡ ಚರ್ಮದ ಸೆಳೆತವನ್ನು ಹೆಚ್ಚಿಸಿ ನೆರಿಗೆಗಳಾಗದಂತೆ ನೆರವಾಗುತ್ತದೆ.ಸೌಂದರ್ಯದ ಮಾಂತ್ರಿಕ ಶಕ್ತಿ ಪರಂಗಿಯಲ್ಲಿದೆ

ದಾಳಿಂಬೆ

ದಾಳಿಂಬೆ

ದಾಳಿಂಬೆಯಲ್ಲಿರುವ ಪೋಷಕಾಂಶಗಳು ಚರ್ಮದ ಆಳಕ್ಕೆ ಇಳಿಯಲು ಸಮರ್ಥವಾಗಿದ್ದು ಚರ್ಮದ ಅಡಿಯಿಂದ ಪೋಷಣೆ ನೀಡಲು ಸಮರ್ಥವಾಗಿದೆ. ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಚರ್ಮದ ಸೆಳೆತ ಹೆಚ್ಚಿಸಿ ನೆರಿಗೆ ರಹಿತ ತ್ವಚೆಯನ್ನು

ಹೊಂದಲು ನೆರವಾಗುತ್ತದೆ. ಚರ್ಮ ಚಳಿಗಾಲದಲ್ಲಿ ಹೆಚ್ಚು ಸಡಿಲವಾಗುವ ಕಾರಣ ನೆರಿಗೆಗಳು ಮೂಡುವ ಸಾಧ್ಯತೆ ಹೆಚ್ಚು.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು

ದಾಳಿಂಬೆಯ ಸೇವನೆಯಿಂದ ಚರ್ಮದ ಸೂಕ್ಷ್ಮರಂಧ್ರಗಳು ಕಿರಿದಾಗಿ ಕಲ್ಮಶ ತುಂಬಿಕೊಳ್ಳುವ ಸಾಧ್ಯತೆಯೂ ಕಡಿಮೆಯಾಗುತ್ತದೆ ಹಾಗೂ ಬಿರುಕು ಮೂಡುವುದರಿಂದ ರಕ್ಷಣೆ ನೀಡುತ್ತದೆ.ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

ಅನಾನಸ್ ಹಣ್ಣು

ಅನಾನಸ್ ಹಣ್ಣು

ಈ ಹಣ್ಣಿನಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಚಳಿಗಾಲದಲ್ಲಿ ಚರ್ಮಕ್ಕೆ ಎದುರಾಗುವ ಇನ್ನೊಂದು ತೊಂದರೆ ಎಂದರೆ ಮೊಡವೆಗಳು. ಇದಕ್ಕೆ ಚಳಿಗಾಲದಲ್ಲಿ ಚರ್ಮದ ಸೂಕ್ಷ್ಮರಂಧ್ರಗಳ ಗೋಡೆಗಳು ಬಿರುಕು ಬಿಡುವುದೇ ಕಾರಣ. ಈ ಬಿರುಕು ರಂಧ್ರಗಳನ್ನು ಇನ್ನಷ್ಟು ಆಳಗೊಳಿಸಿ ಸೋಂಕು ಹರಡಿಸಿ ಮೊಡವೆಗಳಾಗಲು ಕಾರಣವಾಗುತ್ತದೆ. ಮುಖದ ಸೌಂದರ್ಯಕ್ಕೆ ಅನಾನಸ್ ಹಣ್ಣಿನ ಫೇಸ್ ಪ್ಯಾಕ್!

ಮೊಡವೆಗಳಿಗೆ ರಾಮಬಾಣ...

ಮೊಡವೆಗಳಿಗೆ ರಾಮಬಾಣ...

ಅನಾನಸಿನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಮೊಡವೆಗಳು, ಕೀವುಭರಿತ ಗುಳ್ಳೆ, ಕಪ್ಪು ಕಲೆಗಳು, ಮೊದಲಾದವುಗಳನ್ನು ತೊಡೆಯಲು ನೆರವಾಗುತ್ತವೆ ಹಾಗೂ ಸೂಕ್ಷ್ಮರಂಧ್ರಗಳ ಆಳದಿಂದ ಪೋಷಣೆ ನೀಡಿ ಸೋಂಕಿನಿಂದ ಮುಕ್ತಿ ಪಡೆಯಲು ನೆರವಾಗುತ್ತವೆ.

 
English summary

Fruits to eat in winter for healthy skin

Winter calls for a hot cup of tea and fried snacks. But don't forget to dig into gooseberry, papaya and pomegranate to combat dry skin which the cold season brings along with it, says an expert.So boldsky today has shared a list of winter fruits that you and your skin can enjoy during winter season..
Subscribe Newsletter