Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ನೈಸರ್ಗಿಕ ಹಣ್ಣುಗಳ ಫೇಸ್ ಪ್ಯಾಕ್- ಕಡಿಮೆ ವೆಚ್ಚ ಅಧಿಕ ಲಾಭ!
ಚರ್ಮ ನೋಡಿ ದೇಹದ ಆರೋಗ್ಯದ ಬಗ್ಗೆ ಹೇಳಬಹುದು ಎನ್ನುತ್ತಾರೆ. ಒಬ್ಬನ ಚರ್ಮವು ಒಳ್ಳೆಯ ರೀತಿಯಲ್ಲಿದ್ದರೆ ಆಗ ಆತನ ಆರೋಗ್ಯವು ಚೆನ್ನಾಗಿ ಇದೆ ಎನ್ನಬಹುದು. ಆದರೆ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆದಾಗ ಅದು ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನೈಸರ್ಗಿಕ ತೇವಾಂಶ ಇಲ್ಲದೆ ಇರುವಂತಹ ಸಂದರ್ಭದಲ್ಲಿ ಒಣ ಚರ್ಮವು ಕಂಡುಬರುವುದು. ಸಂಪೂರ್ಣ ದೇಹವು ಇದರಿಂದ ಒಣಗದೆ ಇದ್ದರೂ ಕೆಲವೊಂದು ಭಾಗಗಳು ಒಣಗಿರುತ್ತದೆ. ಇಂತಹ ಒಣಚರ್ಮವು ಕೆಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಚರ್ಮವು ಒಣಗಿದ್ದ ಕಡೆಗಳಲ್ಲಿ ತುರಿಸುವುದು ಮತ್ತು ಗಡುಸಾಗಿರುತ್ತದೆ.
ತುರಿಸಿದರೆ ಬಿಳಿ ಬಣ್ಣದ ಗೆರೆ ಚರ್ಮದ ಮೇಲೆ ಮೂಡುತ್ತದೆ. ಒಣ ಚರ್ಮದ ಸಮಸ್ಯೆಯು ಕೆಲವೊಂದು ಸಲ ತೀವ್ರವಾಗಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಇರುತ್ತದೆ. ಇದಕ್ಕೆ ಕೆಲವೊಂದು ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಕ್ರೀಮ್ ಗಳನ್ನು ಬಳಸಿಕೊಂಡು ಒಣ ಚರ್ಮ ನಿವಾರಣೆ ಮಾಡಬಹುದು. ಆದರೆ ಇದಕ್ಕೆ ಉತ್ತಮ ಪರಿಹಾರವೆಂದರೆ ಮನೆಯಲ್ಲಿ ತಯಾರಿಸುವಂತಹ ಫೇಸ್ ಪ್ಯಾಕ್ ಬಳಸಿಕೊಳ್ಳುವುದು.
ಹಣ್ಣುಗಳಿಂದ ತಯಾರಿಸುವಂತಹ ಫೇಸ್ ಪ್ಯಾಕ್ ಚರ್ಮಕ್ಕೆ ತೇವಾಂಶ ನೀಡುವುದು. ದೇಹದ ಯಾವುದೇ ಭಾಗಕ್ಕೆ ಈ ಪ್ಯಾಕ್ ಹಚ್ಚಿಕೊಳ್ಳಬಹುದು. ಒಳ್ಳೆಯ ಫಲಿತಾಂಶ ನೀಡಿದರೆ ಇದನ್ನು ಮುಂದೆ ಕೂಡ ಬಳಸಬಹುದು. ಹಣ್ಣುಗಳಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಮತ್ತು ಅದನ್ನು ಬಳಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿಕೊಳ್ಳಿ.

ಚೆನ್ನಾಗಿ ಕಳಿತ ಪಚ್ಚಬಾಳೆ ಹಣ್ಣು
ಒಂದು ಕಳಿತ ಬಾಳೆಹಣ್ಣನ್ನು ಕಿವುಚಿ ಮೂರು ದೊಡ್ಡಚಮಚ ಲಿಂಬೆರಸವನ್ನು ಸೇರಿಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಮುಖದ ಸೌಂದರ್ಯಕ್ಕೆ ನೈಸರ್ಗಿಕ ಫೇಸ್ ಪ್ಯಾಕ್, ಬೇಕೆ ಬೇಕು!
ಪಪ್ಪಾಯಿ-ಜೇನಿನ ಫೇಸ್ ಪ್ಯಾಕ್
*ಜೇನು
*ಹಸಿ ಹಾಲು ತಯಾರಿಕಾ ವಿಧಾನ:
ಸಮಪ್ರಮಾಣದಲ್ಲಿ ಈ ಮೂರೂ ಸಾಮಾಗ್ರಿಗಳನ್ನು ಚೆನ್ನಾಗಿ ಅರೆದು ಈಗತಾನೇ ತಣ್ಣೀರಿನಲ್ಲಿ ತೊಳೆದ ಮುಖಕ್ಕೆ ತೆಳುವಾಗಿ ಲೇಪಿಸಿಕೊಳ್ಳಿ.
*ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಬಿಟ್ಟು ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಬಳಸದಿರಿ.
ಹಲಸಿನ ಹಣ್ಣಿನ ಫೇಸ್ ಪ್ಯಾಕ್
*ಅರ್ಧ ಕಪ್ ಹಲಸಿನ ಹಣ್ಣಿನ ತಿರುಳು
*1 ಬಾಳೆಹಣ್ಣು, 1 ಗ್ರಾಂ ಕಡಲೆಹಿಟ್ಟು,
* ಅರ್ಧ ಕಪ್ ಹಾಲು ಮುಖದ ಅಂದಕ್ಕೆ, ಟೊಮೆಟೊ-ಶ್ರೀಗಂಧದ ಫೇಸ್ ಪ್ಯಾಕ್
ಮೇಲೆ ತಿಳಿಸಿದ ಎಲ್ಲಾ, ಸಾಮಾಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕುತ್ತಿಗೆಯ ಭಾಗಕ್ಕೂ ಅಪ್ಲೈ ಮಾಡಿ ಕೊಳ್ಳಬಹುದು. ಮುಖದಲ್ಲಿ ಪೂರ್ತಿಯಾಗಿ ಒಣಗುವವರೆಗೆ ಹಾಗೆಯೇ ಇಡಿ. ಸುಮಾರು ಅರ್ಧ ಗಂಟೆಯ ನಂತರ ತಣ್ಣಿರಿನಲ್ಲಿ ಚೆನ್ನಾಗಿ ಮುಖವನ್ನು ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಎರಡು ಬಾರಿ ನೀವಿದನ್ನು ಮಾಡಿಕೊಳ್ಳೋದು ಉತ್ತಮ.



Click it and Unblock the Notifications

