ಮುಖದ ಕಾಂತಿ ಹೆಚ್ಚಿಸುವ ಹೂವಿನ ಫೇಸ್‌ ಪ್ಯಾಕ್...

By: manu
Subscribe to Boldsky

ಸುಂದರ ತ್ವಚೆಯ ಪ್ರಥಮ ಶತ್ರುವೆಂದರೆ ಗಾಳಿಯಲ್ಲಿರುವ ಧೂಳು, ಹೊಗೆ, ಬಿಸಿಲು ಹಾಗೂ ಇತರ ಕಣಗಳು. ತಮ್ಮ ಉದ್ಯೋಗದ ನಿಮಿತ್ತ್ತಹೊರಗೆ ಕಾಲ ಕಳೆಯಬೇಕಾದ ಮಹಿಳೆಯರಿಗೆ ಈ ಶತ್ರುಗಳನ್ನು ಎದುರಿಸುವುದು ಕೊಂಚ ಕಷ್ಟವೇ. ವಾತಾವರಣದ ಬದಲಾವಣೆ ಸಹಾ ಚರ್ಮದ ಸಹಜ ತೈಲಗಳನ್ನು ಸೆಳೆದು ಚರ್ಮವನ್ನು ಒಣಗಿಸುತ್ತದೆ. ಪರಿಣಾಮವಾಗಿ ಚರ್ಮ ಒಣಗಿ ಕಳೆದುಂದಿದ್ದು ಸಹಜ ಸೌಂದರ್ಯವನ್ನು ಕುಂದಿಸುತ್ತದೆ.  ಜಾಹೀರಾತಿಗೆ ಮರುಳಾಗಿ ಸೌಂದರ್ಯ ಕಳೆದುಕೊಳ್ಳಬೇಡಿ!

ಒಂದು ವೇಳೆ ನೀವು ಉದ್ಯೋಗಸ್ಥೆಯಾಗಿದ್ದು ಹೆಚ್ಚಿನ ಸಮಯ ಹೊರಗೆ ಕಳೆಯುತ್ತಿದ್ದರೆ ಈ ಲೇಖನದ ಮೂಲಕ ನಿಮ್ಮ ಸೌಂದರ್ಯವನ್ನು ಹೂವುಗಳು ಹೇಗೆ ಮರಳಿಸುತ್ತವೆ ಎಂಬುದನ್ನು ಅರಿಯಬಹುದು. 

ಹಣ್ಣುಗಳಲ್ಲಿ ಆರೋಗ್ಯಕ್ಕೆ ಉತ್ತಮವಾದ ಹಲವು ಪೋಷಕಾಂಶಗಳಿವೆ. ಅಂತೆಯೇ ಹಣ್ಣುಗಳಿಗೆ ಹುಟ್ಟು ನೀಡುವ ಹೂವುಗಳಲ್ಲಿಯೂ ಹಲವು ಪೋಷಕಾಂಶಗಳಿದ್ದು ವಿಶೇಷವಾಗಿ ಚರ್ಮಕ್ಕೆ ಹೆಚ್ಚಿನ ಆರೈಕೆ ನೀಡುತ್ತದೆ. ಅಲ್ಲದೇ ಹಲವು ಸೋಂಕುಗಳಿಂದ ರಕ್ಷಣೆ ನೀಡುತ್ತದೆ ಹಾಗೂ ಕಾಂತಿಯನ್ನು ಹೆಚ್ಚಿಸುತ್ತದೆ. ಬನ್ನಿ, ಹೂವುಗಳಿಂದ ಈ ಪೋಷಣೆಯನ್ನು ಹೇಗೆ ಪಡೆಯಬಹುದು ಎಂಬುದನ್ನು ನೋಡೋಣ....

ಗುಲಾಬಿ

ಗುಲಾಬಿ

ಶತಮಾನಗಳಿಂದ ಗುಲಾಬಿ ಹೂವಿನಿಂದ ನೀರನ್ನು ಸಂಗ್ರಹಿಸಿ ಆಹಾರಗಳ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತಿದೆ. ಅಲ್ಲದೇ ಸುಗಂಧದ್ರವ್ಯವನ್ನೂ ತಯಾರಿಸಲಾಗುತ್ತದೆ. ಗುಲಾಬಿಯ ಪಕಳೆಗಳು ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದಕ್ಕಾಗಿ ಕೆಲವು ಹೂವುಗಳ ಪಕಳೆಗಳನ್ನು ನೀವು ಸ್ನಾನ ಮಾಡುವ ಟಬ್ ನಲ್ಲಿ ಹಾಕಿ ಕೊಂಚ ಹೊತ್ತು ಈ ನೀರಿನಲ್ಲಿ ಶರೀರವನ್ನು ಮುಳುಗಿಸಿ. ಇದರಿಂದ ಇಡಿಯ ದೇಹದ ಬಣ್ಣ ತಿಳಿಯಾಗುತ್ತದೆ.

ಗುಲಾಬಿ ದಳಗಳನ್ನು ಬೆರೆಸಿದ ನೀರು

ಗುಲಾಬಿ ದಳಗಳನ್ನು ಬೆರೆಸಿದ ನೀರು

ಸಾಮಾನ್ಯ ಹಾಗೂ ಒಣಚರ್ಮದ ವ್ಯಕ್ತಿಗಳಿಗೆ ಇದು ಕಾಂತಿಯನ್ನು ಹೆಚ್ಚಿಸಿದರೆ ಎಣ್ಣೆಚರ್ಮದ ವ್ಯಕ್ತಿಗಳ ಚರ್ಮಕ್ಕೆ ಇದು ಹೆಚ್ಚಿನ ತೈಲವನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಮದ ಸೂಕ್ಷ್ಮ ರಂಧ್ರಗಳನ್ನು ಕಿರಿದಾಗಿಸಲು ನೆರವಾಗುತ್ತದೆ. ರಾತ್ರಿ ಮಲಗುವ ಮುನ್ನ ಗುಲಾಬಿ ದಳಗಳು ಮುಳುಗಿರುವ ನೀರಿನಿಂದ ಸ್ನಾನ ಮಾಡಿಕೊಂಡರೆ ಉತ್ತಮ. ಇದು ಸಾಧ್ಯವಾಗದಿದ್ದರೆ ಈ ಪಕಳೆಗಳನ್ನು ನುಣ್ಣಗೆ ಅರೆದು ಈ ಲೇಪನವನ್ನು ಮಲಗುವ ಮುನ್ನ ಮೈಗೆ ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡಿಕೊಳ್ಳುವ ಮೂಲಕ ಕೋಮಲ ಹಾಗೂ ಉಜ್ವಲವರ್ಣದ ತ್ವಚೆಯನ್ನು ಪಡೆಯಬಹುದು.

ಮಲ್ಲಿಗೆ ಮತ್ತು ಮೊಸರಿನ ಪ್ಯಾಕ್

ಮಲ್ಲಿಗೆ ಮತ್ತು ಮೊಸರಿನ ಪ್ಯಾಕ್

ಈ ಪ್ಯಾಕ್ ಅನ್ನು ಬಳಸಿಕೊಂಡು ನಿಸ್ತೇಜ ಮತ್ತು ಸತ್ತಿರುವ ಚರ್ಮವನ್ನು ಸ್ಕ್ರಬ್ ಮಾಡಿಕೊಳ್ಳಬೇಕು. ಇದರಿಂದ ಚರ್ಮವು ಕಾಂತಿಯನ್ನು ಪಡೆಯುವುದು ಮತ್ತು ನೀವು ಬಿಳಿಯಾಗಿ ಕಾಣುತ್ತೀರಿ.

•ಒಂದು ಹಿಡಿ ಮಲ್ಲಿಗೆಯ ಎಸಲುಗಳು

•ಒಂದು ಚಮಚ ಮೊಸರು

•ಒಂದು ಚಮಚ ಸಕ್ಕರೆ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಹೂವುಗಳನ್ನು ಸರಿಯಾಗಿ ಜಜ್ಜಿಕೊಳ್ಳಿ.

*ಇತರ ಎರಡು ಸಾಮಗ್ರಿಗಳನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.

*ಮುಖದ ಮೇಲೆ ಹಚ್ಚಿಕೊಂಡು ಒಣಗಲು ಬಿಡಿ. 10-15 ನಿಮಿಷ ಬಳಿಕ ಮುಖ ತೊಳೆಯಿರಿ.

ದಾಸವಾಳದ ಹೂವು

ದಾಸವಾಳದ ಹೂವು

ದಾಸವಾಳದ ಹೂವಿನಲ್ಲಿ ಆಲ್ಫಾ ಹೈಡ್ರಾಕ್ಸಿಲ್ ಆಮ್ಲವಿದ್ದು ಇದು ಮುಖದ ಚರ್ಮದಲ್ಲಿ ನೆರಿಗೆಯುಂಟಾಗದಂತೆ ತಡೆಯುತ್ತದೆ. ಇದರಿಂದ ವೃದ್ದಾಪ್ಯ ದೂರಾಗುತ್ತದೆ. ಕೆಲವು ದಾಸವಾಳದ ಹೂವುಗಳ ದಳಗಳನ್ನು ಸಮಪ್ರಮಾಣದ ಜೇನು, ಹಾಲು ಮತ್ತು ಅರಿಶಿನ ಪುಡಿ ಬೆರೆಸಿ ನುಣ್ಣಗೆ ಅರೆದು ಲೇಪನ ತಯಾರಿಸಿ ಈ ಲೇಪನವನ್ನು ಚರ್ಮಕ್ಕೆ ಹಚ್ಚಿ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಗೌರರ್ವಣಕ್ಕೆ- ದಾಸವಾಳ ಹೂವು

ಗೌರರ್ವಣಕ್ಕೆ- ದಾಸವಾಳ ಹೂವು

ಈ ಲೇಪನ ವಿಶೇಷವಾಗಿ ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳನ್ನು ತಿಳಿಗೊಳಿಸಲು ನೆರವಾಗುತ್ತದೆ ಹಾಗೂ ಬಿಸಿಲಿಗೆ ಕಪ್ಪಾಗಿದ್ದ ಚರ್ಮದ ಬಣ್ಣವನ್ನು ಸಹಜವರ್ಣಕ್ಕೆ ಬದಲಿಸಲು ನೆರವಾಗುತ್ತದೆ.ಕೂದಲಿನ ಆರೈಕೆಗೆ, ಮನೆಯಂಗಳದ 'ದಾಸವಾಳ ಹೂವು'!

 
English summary

Flowers face pack For Beautiful Skin

It is a well known fact that fruit are good for skin but did you know that flowers also play an equally important role to maintain beautiful skin? Flowers are also rich in certain nutrients which keeps the skin healthy, treat them of infections and adds on to the glow. Lets look at some flowers for beautiful skin
Story first published: Friday, January 20, 2017, 13:32 [IST]
Subscribe Newsletter