ತ್ವಚೆಗೆ ನಾನಾ ಬಗೆಯ ಕ್ರೀಮ್‌ಗಳಿವೆ, ಹಣ ಕೊಟ್ಟು ಮೋಸ ಹೋಗಬೇಡಿ!

By: Jaya subramanya
Subscribe to Boldsky

ಇಂದಿನ ದಿನಗಳಲ್ಲಿ ಮಹಿಳೆಯರು ಸೌಂದರ್ಯದ ವಿಷಯದಲ್ಲಿ ಹೆಚ್ಚು ಮುತುವರ್ಜಿಯನ್ನು ವಹಿಸುತ್ತಿದ್ದಾರೆ. ಇದಕ್ಕಾಗಿ ಹೆಚ್ಚು ಹಣವನ್ನು ಖರ್ಚುಮಾಡಿಕೊಂಡು ಬ್ರ್ಯಾಂಡ್ ಉತ್ಪನ್ನಗಳನ್ನೇ ಬಳಸಿ ಸೌಂದರ್ಯವನ್ನು ಅತ್ಯುತ್ತಮಗೊಳಿಸುತ್ತಿದ್ದಾರೆ. ಆದರೆ ಈ ಸೌಂದರ್ಯ ಉತ್ಪನ್ನಗಳನ್ನು ಬಳಸುವಾಗ ಮಹಿಳೆಯರು ತಪ್ಪುಗಳನ್ನು ಮಾಡುತ್ತಿದ್ದಾರೆ ಯಾವ ರೀತಿಯ ಸೌಂದರ್ಯ ಉತ್ಪನ್ನಗಳನ್ನು ಬಳಸಬೇಕು ಎಂಬುದನ್ನು ಅವರು ಅರಿತುಕೊಳ್ಳುತ್ತಿಲ್ಲ.

ಯಾವುದೋ ಉತ್ಪನ್ನಗಳನ್ನು ಬಳಸಿಕೊಂಡು ಸುಂದರ ತ್ವಚೆಯನ್ನು ಹಾಳು ಮಾಡುತ್ತಿದ್ದಾರೆ. ಅದರಲ್ಲೂ ಇಂದು ಮಾರುಕಟ್ಟೆಯಲ್ಲಿ ಸೌಂದರ್ಯ ಉತ್ಪನ್ನಗಳು ನಾಯಿ ಕೊಡೆಯಂತೆ ತಲೆ ಎತ್ತಿ ನಿಂತಿವೆ. ಆದರೆ ಮಹಿಳೆಯರು ಇವುಗಳನ್ನು ಸ್ವಲ್ಪ ಸಮಯ ಮಾತ್ರ ಬಳಸಿಕೊಂಡು ನಂತರ ಅದರ ಬಳಕೆಯನ್ನು ನಿಲ್ಲಿಸುತ್ತಿದ್ದಾರೆ ಇದರಿಂದ ಈ ಉತ್ಪನ್ನಗಳು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತಿದೆ ಎಂಬುದನ್ನು ಅರಿತುಕೊಳ್ಳುವಲ್ಲಿ ಅವರು ವಿಫಲರಾಗುತ್ತಿದ್ದಾರೆ.

Sunscreen

ಇನ್ನು ಸೌಂದರ್ಯ ಉಪಕರಣಗಳನ್ನು ನೀವು ಖರೀದಿಸುತ್ತಿರುವಾಗ ಬೇರೆ ಬೇರೆ ಆಯ್ಕೆಗಳನ್ನು ನಿಮ್ಮದಾಗಿಸಿಕೊಳ್ಳಬಾರದು ಒಂದೇ ಬ್ರ್ಯಾಂಡ್‌ನ ಉತ್ಪನ್ನವನ್ನು ನೀವು ಆರಿಸಿಕೊಂಡು ನಂತರ ಅದನ್ನೇ ಖಾಯಂ ಆಗಿ ಬಳಸಿಕೊಳ್ಳಬೇಕು. ನಿಮ್ಮ ತ್ವಚೆಯ ಪ್ರಕಾರ, ವಯಸ್ಸು ಮತ್ತು ಇನ್ನಿತರ ಅಂಶಗಳನ್ನು ಆಧರಿಸಿಯೇ ನೀವು ಸೌಂದರ್ಯ ಉತ್ಪನ್ನವನ್ನು ಬಳಸಬೇಕು. ಇಂದಿನ ಲೇಖನದಲ್ಲಿ ನಿಮ್ಮ ಸೌಂದರ್ಯ ಸಾಧನಗಳಲ್ಲಿ ಯಾವುದು ಮುಖ್ಯವಾಗಿರಬೇಕು ಅಂತೆಯೇ ಮೇಕಪ್‌ ಕಿಟ್‌ನಲ್ಲಿ ಯಾವೆಲ್ಲಾ ಅಂಶಗಳು ಇರಬೇಕು ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.

ಬಿಬಿ ಕ್ರೀಮ್

ಈ ಪ್ರಕಾರದ ಕ್ರೀಮ್ ಸರ್ವೇ ಸಾಮಾನ್ಯವಾಗಿ ಎಲ್ಲಾ ಕಡೆಯೂ ದೊರೆಯುತ್ತದೆ. ಇದು ಸೂರ್ಯನ ಪ್ರಖರ ಕಿರಣದಿಂದ ರಕ್ಷಣೆಯನ್ನು ನೀಡುತ್ತದೆ ಮತ್ತು ದೈನಂದಿನ ಮಾಯಿಶ್ಚರೈಸರ್‌ನಂತೆ ಕಾರ್ಯನಿರ್ವಹಿಸುತ್ತದೆ. ಭಾರೀ ಫೌಂಡೇಶನ್ ಬಳಸಲು ಇಷ್ಟವಿಲ್ಲದವರಿಗೆ ಈ ಕ್ರೀಮ್ ಹೇಳಿಮಾಡಿಸಿದ್ದಾಗಿದೆ. ಅಂತೆಯೇ ಮೊಡವೆ ಮತ್ತು ಡಾರ್ಕ್ ಸ್ಪಾಟ್ ಕವರೇಜ್ ಮಾಡಲು ಈ ಕ್ರೀಮ್ ಉತ್ತಮ ಎಂದೆನಿಸಿದೆ.

ಇದು ತ್ವಚೆಯನ್ನು ಲೈಟ್ನಿಂಗ್ ಮಾಡುವ ಪ್ರಯೋಜನಗಳನ್ನು ಕೂಡ ಹೊಂದಿದೆ. ನೀವು ತರಾತುರಿಯಲ್ಲಿದ್ದೀರಿ ಎಂದಾದಲ್ಲಿ ಈ ಕ್ರೀಮ್ ಉತ್ತಮ ಎಂದೆನಿಸಿದೆ. ಉತ್ತಮ ಬಿಬಿ ಕ್ರೀಮ್ ಅನ್ನು ಬಳಸಿ ಇದಕ್ಕಿಂತ ಮೊದಲು ತ್ವಚೆಯನ್ನು ತೊಳೆದುಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. 

ಸಿಸಿ ಕ್ರೀಮ್‌ಗಳು

ಇತ್ತೀಚೆಗೆ ತಾನೇ ಈ ಬಗೆಯ ಕ್ರೀಮ್‌ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿವೆ. ಇದು ಬಿಬಿ ಕ್ರೀಮ್‌ಗಿಂತಲೂ ಉತ್ತಮ ತ್ವಚೆಯ ಕವರೇಜ್ ಅನ್ನು ಒದಗಿಸುತ್ತದೆ ಮತ್ತು ಬಹು ವಿಧ ಕಾರ್ಯಗಳಲ್ಲಿ ನಿಮಗೆ ಇದನ್ನು ಬಳಸಿಕೊಳ್ಳಬಹುದಾಗಿದೆ. ಇದು ಪ್ರೈಮರ್, ಗಾಢ ಫೌಂಡೇಶನ್‌ನಂತೆ ಕಾರ್ಯನಿರ್ವಹಿಸಲಿದ್ದು, ಸೂರ್ಯನ ಪ್ರಖರ ಕಿರಣದಿಂದ ರಕ್ಷಣೆಯನ್ನು ನೀಡುತ್ತದೆ ಮತ್ತು ವಯಸ್ಸಾದ ಕಳೆಯನ್ನು ಮರೆಮಾಚುತ್ತದೆ. ಇದು ಮುಕ್ತ ರಾಡಿಕಲ್ ಫೈಟರ್‌ಗಳನ್ನು ಒಳಗೊಂಡಿದ್ದು, ಸುಕ್ಕುಗಳನ್ನು ನಿವಾರಿಸುತ್ತದೆ. ನಿತ್ಯವೂ ಕಚೇರಿಗೆ ಹೋಗುವಾಗ ಈ ಕ್ರೀಮ್ ಅನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. 

Sunscreen

ಡಿಡಿ ಕ್ರೀಮ್‌ಗಳು

ಭಾರತದ ಮಾರುಕಟ್ಟೆಗೆ ಈ ಬಗೆಯ ಕ್ರೀಮ್‌ಗಳು ಇನ್ನೂ ಬಂದಿಲ್ಲ. ಇದು ಯಾವುದೇ ಸೂರ್ಯನ ಕಿರಣಗಳ ರಕ್ಷಣೆ ಮತ್ತು ಲೈಟ್ನಿಂಗ್ ಅಂಶಗಳನ್ನು ಒದಗಿಸುವುದಿಲ್ಲ. ಇವುಗಳು ಗಾಢವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಹೆಚ್ಚುವರಿ ಹೈಡ್ರೇಶನ್ ಅನ್ನು ಒದಗಿಸುತ್ತದೆ ಅಂತೆಯೇ ಬರಿಯ ಮುಖ ಮಾತ್ರವಲ್ಲದೆ ಕೈಗಳು ಹಾಗೂ ಕತ್ತಿಗೂ ನೀವು ಇದನ್ನು ಬಳಸಬಹುದಾಗಿದೆ.

ಕಾಲುಗಳು, ಪಾದಗಳು, ಮಣಿಗಂಟುಗಳು ಮೊದಲಾದ ಒಣ ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ವಿದೇಶಿ ಮಾರುಕಟ್ಟೆಯಲ್ಲಿರುವ ಡಿಡಿ ಕ್ರೀಮ್‌ಗಳು ವಯಸ್ಸಾಗುವಿಕೆಯನ್ನು ಮರೆಮಾಚುವ ಅಂಶವನ್ನು ಹೊಂದಿದೆ ಮತ್ತು ಗೆರೆಗಳನ್ನು ನಿವಾರಿಸಿ ತ್ವಚೆಯನ್ನು ಮೃದುವಾಗಿಸುತ್ತದೆ. ಈ ಅಂಶಗಳನ್ನು ಅರಿತುಕೊಂಡು ನಿಮ್ಮ ತ್ವಚೆಗೆ ಯಾವ ಬಗೆಯ ಕ್ರೀಮ್ ಸರಿಹೊಂದುತ್ತದೆ ಎಂಬುದನ್ನು ಆರಿಸಿಕೊಂಡು ಕ್ರೀಮ್‌ಗಳ ಬಳಕೆಯನ್ನು ಮಾಡಿ. ವೃಥಾ ಹಣವನ್ನು ಪೋಲು ಮಾಡದೇ ಸೌಂದರ್ಯ ತಜ್ಞರ ಅಭಿಪ್ರಾಯವನ್ನು ಅರಿತುಕೊಂಡು ತ್ವಚೆಗೆ ಈ ಕ್ರೀಮ್ ಬಳಕೆಯನ್ನು ಮಾಡಿ.

English summary

Ever Wondered What SPF On Your Sunscreen Implies?

Today's women are fiercely independent. They do not mind spending few extra bucks to look beautiful and presentable all the time. There are a whole lot of products in the market for this purpose and women are spolit for choices when it comes to beauty products. The makeup segment of the beauty market is ever growing. Apart from the existing products, new products keep making their way into the market. Women buy these new products just to try and most of the time, don't even know what it does.
Story first published: Friday, July 7, 2017, 8:31 [IST]
Subscribe Newsletter