For Quick Alerts
ALLOW NOTIFICATIONS  
For Daily Alerts

  ಬಹುಪಯೋಗಿ ಅಲೋವೆರಾ, ಎಷ್ಟು ಹೊಗಳಿದರೂ ಕಡಿಮೆಯೇ!

  By Jaya Subramanya
  |

  ನೈಸರ್ಗಿಕ ವಸ್ತುಗಳು ಎಲ್ಲಾ ಕಾಲದಲ್ಲೂ ನಮ್ಮ ಸೌಂದರ್ಯಕ್ಕೆ ಪ್ರಮುಖ ಕೊಡುಗೆಗಳು ಎಂದೆನಿಸಿವೆ. ಅನಾದಿ ಕಾಲದಿಂದಲೂ ಈ ಉತ್ಪನ್ನಗಳು ನಮ್ಮ ಸೌಂದರ್ಯ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದ್ದು ನಮ್ಮ ಹಿರಿಯರ ನಳನಳಿಸುವ ಸೌಂದರ್ಯದ ಗುಟ್ಟು ಇದರಲ್ಲಿ ಅಡಗಿದೆ. ತಲೆಹೊಟ್ಟಿನ ನಿವಾರಣೆಗೆ-ಬಹೂಪಯೋಗಿ 'ಲೋಳೆಸರ'

  ಅವರ ಕೂದಲುಗಳು ಇಂದಿಗೂ ಗಟ್ಟಿಯಾಗಿ ಉದುರುವ ಸಮಸ್ಯೆಯನ್ನು ಕಾಣುತ್ತಿಲ್ಲ. ಹಲ್ಲುಗಳೂ ಗಟ್ಟಿಯಾಗಿವೆ. ಕಣ್ಣುಗಳ ಹೊಳಪಿನ ಶಕ್ತಿ ಇನ್ನೂ ಕುಂದಿಲ್ಲ. ಕೈಗಳ ನಯತ್ವ ಹಾಗೆಯೇ ಇದೆ. ಹಾಗಿದ್ದರೆ ನಮ್ಮ ಹಿರಿಯರ ಸೌಂದರ್ಯ ರಹಸ್ಯಗಳೇನು ಎಂಬುದನ್ನು ಅವಲೋಕಿಸಿದಾಗ ಅವರು ಬೆರಳು ಮಾಡುವುದು ನಿಸರ್ಗದ ಕಡೆಗಾಗಿದೆ. ಮನೆಮದ್ದಾಗಿ ಲೋಳೆಸರದ ಪಾತ್ರ

  ಈಗೀಗ ಮಾರುಕಟ್ಟೆಯಲ್ಲಿ ಕೂಡ ಹೆಚ್ಚು ಪ್ರಮಾಣದಲ್ಲಿ ನೈಸರ್ಗಿಕ ಉತ್ಪನ್ನಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ. ಜನರು ಹೆಚ್ಚು ಹೆಚ್ಚು ಇಂತಹ ಉತ್ಪನ್ನಗಳತ್ತ ವಾಲುತ್ತಿರುವುದರಿಂದ ಉದ್ದಿಮೆದಾರರೂ ನಿಸರ್ಗದ ಉತ್ಪನ್ನಗಳಿಂದಲೇ ಸೌಂದರ್ಯ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇಂತಹ ಉತ್ಪನ್ನಗಳಲ್ಲಿ ಇಂದು ಅಲೋವೆರಾಕೂಡ ಒಂದು. ಪಪ್ಪಾಯಿ-ಲೋಳೆ ಸರ ಫೇಸ್ ಪ್ಯಾಕ್: ಕಡಿಮೆ ವೆಚ್ಚ, ಅಧಿಕ ಲಾಭ!

  ಮನೆಯಲ್ಲಿ ಸರಳವಾಗಿ ಬೆಳೆಸಬಹುದಾದ ಜೆಲ್ ಸಸ್ಯ ಇದಾಗಿದ್ದು ಕೂದಲಿಗೆ ಮತ್ತು ಮುಖದ ಸೌಂದರ್ಯಕ್ಕೆ ಇದು ನೀಡುವ ಪ್ರಯೋಜನ ಅತ್ಯದ್ಭುತವಾಗಿದೆ. ಫೈಟೊಕೆಮಿಕಲ್ಸ್ ಈ ಸಸ್ಯದಲ್ಲಿ ಇದ್ದು ನಮ್ಮ ಕೂದಲು ಮತ್ತು ತ್ವಚೆಗೆ ಇದು ವರದಾನವಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಮುಖವನ್ನು ಸೌಂದರ್ಯವನ್ನು ಹೆಚ್ಚಿಸಲು ಅಲೋವೇರಾದ (ಲೋಳೆಸರ) ಕೊಡುಗೆಗಳೇನು ಎಂಬುದನ್ನು ಕಂಡುಕೊಳ್ಳೋಣ...

  ಮುಖದ ನೆರಿಗೆಗಳನ್ನು ನಿವಾರಿಸಿ ಮೈಬಣ್ಣವನ್ನು ವರ್ಧಿಸುತ್ತದೆ

  ಮುಖದ ನೆರಿಗೆಗಳನ್ನು ನಿವಾರಿಸಿ ಮೈಬಣ್ಣವನ್ನು ವರ್ಧಿಸುತ್ತದೆ

  ಇದೊಂದು ಮ್ಯಾಜಿಕ್ ಗಿಡವಾಗಿದ್ದು ಮೈ ಬಣ್ಣವನ್ನು ವರ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ನಿತ್ಯವೂ ಅಲೋವೆರಾ ರಸವನ್ನು ದಿನಕ್ಕೆ ಎರಡು ಚಮಚ ಸೇವಿಸಬೇಕು.... (ಮುನ್ನೆಚ್ಚರಿಕೆಯ ಕ್ರಮವಾಗಿ ಯಾವುದಕ್ಕೂ ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಿ)

  ಈ ರಸವು ದೇಹದಲ್ಲಿ ಸಾಕಷ್ಟು ವಿಟಮಿನ್ ಅಂಶವನ್ನು ಪೂರೈಸುತ್ತದೆ ಅಂತೆಯೇ ದೇಹದಿಂದ ಮೃತಕೋಶಗಳನ್ನು ನಿವಾರಣೆ ಮಾಡುತ್ತದೆ. ಹೊಸ ಕೋಶಗಳನ್ನು ದೇಹದಲ್ಲಿ ಉತ್ಪತ್ತಿ ಮಾಡಿ ಹೊಳಪುಳ್ಳ ಮತ್ತು ಹೈಡ್ರೇಟೆಟ್ ತ್ವಚೆಯನ್ನು ದಯಪಾಲಿಸುತ್ತದೆ.

  ತ್ವಚೆಯ ಸ್ಥಿತಿಸ್ಥಾಪಕತ್ವ ಸುಧಾರಣೆ

  ತ್ವಚೆಯ ಸ್ಥಿತಿಸ್ಥಾಪಕತ್ವ ಸುಧಾರಣೆ

  ಸುಲಭವಾಗಿ ತ್ವಚೆಯ ಸ್ಥಿತಿಸ್ಥಾಪಕತ್ವವನ್ನು ಇದು ಸುಧಾರಣೆ ಮಾಡುತ್ತದೆ. ವಿಟಮಿನ್ ಸಿ, ಇ ಯೊಂದಿಗೆ ಉತ್ಕರ್ಷಣ ನಿರೋಧಿ ಅಂಶವನ್ನು ಇದು ಒಳಗೊಂಡಿದ್ದು, ಬೀಟಾ - ಕ್ಯಾರೊಟಿನ್ ಇದರಲ್ಲಿದೆ. ಇದು ನಿಮ್ಮ ತ್ವಚೆಯನ್ನು ಅತ್ಯುತ್ತಮಗೊಳಿಸಲಿದೆ ಅಂತೆಯೇ ಈ ಜೆಲ್ ಅನ್ನು ಹಚ್ಚಿಕೊಳ್ಳುವುದರಿಂದ ನೆರಿಗೆಗಳು, ಗೆರೆಗಳು ಮತ್ತು ಮೊಡವೆಗಳ ನಿವಾರಣೆಯಾಗಲಿದೆ. ನಿತ್ಯವೂ ನೀರಿನಲ್ಲಿ ಜೆಲ್ ಅನ್ನು ಬೆರೆಸಿ ಸೇವಿಸುವುದು ಮತ್ತು ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನೀವು ತಾಜಾ ತ್ವಚೆಯನ್ನು ಪಡೆದುಕೊಳ್ಳಬಹುದಾಗಿದೆ.

  ಉರಿಯೂತವನ್ನು ನಿವಾರಿಸುತ್ತದೆ

  ಉರಿಯೂತವನ್ನು ನಿವಾರಿಸುತ್ತದೆ

  ಉರಿಯೂತ ನಿವಾರಕ ಅಂಶವು ಅಲೋವೇರಾದಲ್ಲಿದ್ದು ಇದು ಮುಖದಲ್ಲಿ ಕೆಂಪುಗುಳ್ಳೆಗಳ ನಿವಾರಣೆ ಮತ್ತು ಉರಿಯೂತವನ್ನು ನಿರ್ಮೂಲಗೊಳಿಸುತ್ತದೆ. ನಿಮ್ಮ ಕ್ರೀಮ್‌ ಅಥವಾ ಮಾಯಿಶ್ಚರೈಸ್‌ನಲ್ಲಿ ಇದನ್ನು ನಿತ್ಯವೂ ಬಳಸಿಕೊಳ್ಳಿ.

  ತ್ವಚೆಯ ಎಲ್ಲಾ ಸಮಸ್ಯೆಗಳ ನಿವಾರಣೆ

  ತ್ವಚೆಯ ಎಲ್ಲಾ ಸಮಸ್ಯೆಗಳ ನಿವಾರಣೆ

  ಅಲರ್ಜಿಕ್ ವಿರೋಧಿ ಅಂಶಗಳನ್ನು ಅಲೋವೆರಾಒಳಗೊಂಡಿದ್ದು ತ್ವಚೆಯ ಹಲವಾರು ಸಮಸ್ಯೆಗಳ ವಿರುದ್ಧ ಇದು ಹೋರಾಡಲಿದೆ. ತುರಿತ, ಎಸ್ಜಿಮಾ ಮತ್ತು ಸೋರಿಯಾಸಿಸ್ ಮುಂತಾದ ಚರ್ಮ ರೋಗಗಳನ್ನು ಇದು ನಿವಾರಣೆ ಮಾಡಲಿದೆ. ಮುಖದಲ್ಲಿ ಇನ್‌ಫೆಕ್ಶನ್ ಉಂಟಾದಲ್ಲಿ ಕೂಡ ಈ ಜೆಲ್ ಅನ್ನು ಪರಿಹಾರಕವಾಗಿ ನಿಮಗೆ ಬಳಸಿಕೊಳ್ಳಬಹುದಾಗಿದೆ. ನಿಮ್ಮ ಮುಖಕ್ಕೆ ಈ ಜೆಲ್ ಅನ್ನು ಹಚ್ಚಿಕೊಳ್ಳಿ ಮತ್ತು ನೈಸರ್ಗಿಕವಾಗಿ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

  ಸುಟ್ಟ ಕಲೆಗಳು ಮತ್ತು ಗಾಯಗಳಿಂದ ಸಂರಕ್ಷಣೆ

  ಸುಟ್ಟ ಕಲೆಗಳು ಮತ್ತು ಗಾಯಗಳಿಂದ ಸಂರಕ್ಷಣೆ

  ತ್ವಚೆಯಲ್ಲಿ ಯಾವುದೇ ಸುಟ್ಟ ಕಲೆ ಮತ್ತು ಗಾಯಗಳಿಂದ ನಿಮಗೆ ಸಂರಕ್ಷಣೆಯನ್ನು ಜೆಲ್ ನೀಡಲಿದೆ. ಇದರಲ್ಲಿ ಹೆಚ್ಚುವರಿ ಉತ್ಕರ್ಷಣ ನಿರೋಧಿ ಅಂಶಗಳಿದ್ದು, ಇದು ಉರಿಯನ್ನು ಮತ್ತು ಗಾಯಗಳನ್ನು ನಿವಾರಿಸುತ್ತದೆ. ಕ್ಯಾಲ್ಶಿಯಂ, ಮೆಗ್ನೇಶಿಯಮ್, ಜಿಂಕ್ ಮತ್ತು ಅಮಿನೊ ಆಸಿಡ್ ಅಲೋವೇರಾದಲ್ಲಿದ್ದು ಇದು ತ್ವಚೆಯ ಉರಿಯನ್ನು ಹೋಗಲಾಡಿಸಲಿದೆ. ಹೈಪರ್ಪಿಗ್ಮೆಂಟೇಶನ್ ಸಮಸ್ಯೆಗೂ ಪರಿಹಾರವನ್ನು ನೀಡಲಿದೆ.

  ಒಣ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ

  ಒಣ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ

  ನಿಮ್ಮದು ಒಣ ತ್ವಚೆ ಎಂದಾದಲ್ಲಿ, ನಿಯಮಿತವಾಗಿ ಅಲೋವೆರಾಜೆಲ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮಸಾಜ್ ಮಾಡಿಕೊಳ್ಳಿ. ಇದು ತ್ವಚೆಯ ಪಿಎಚ್ ಬ್ಯಾಲೆನ್ಸ್ ಅನ್ನು ಕಾಪಾಡುತ್ತದೆ. ತ್ವಚೆಯಲ್ಲಿ ಒಣ ತೇಪೆಗಳಿದ್ದಲ್ಲಿ ಅಲೋವೆರಾ ಜೆಲ್‌ನಿಂದ ಮಸಾಜ್ ಮಾಡಿಕೊಳ್ಳಿ.

   

   

  English summary

  Divine Ways Of Using Aloe Vera For Your Face

  Aloe vera is indeed one of the best ingredients of nature that helps improve the texture of skin, giving you a flawless-looking skin. Here is all that you need to know on how to use aloe vera for the skin. Let's check the benefits and uses of aloe vera for face.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more