ಶ್ರೀಗಂಧದ ಫೇಸ್ ಪ್ಯಾಕ್ ಪ್ರಯತ್ನಿಸಿ-ಇನ್ನಷ್ಟು ಮುದ್ದಾಗಿ ಕಾಣುವಿರಿ!

By: manu
Subscribe to Boldsky

ಗಂಧ ಎಂದರೆ ಮೊದಲು ಕನ್ನಡಿಗರಿಗೆ ಗಂಧದ ಗುಡಿ ನೆನೆಪಾದರೆ ತಪ್ಪೇನಿಲ್ಲ. ಆದರೆ ಅದರ ನಂತರದ ಸ್ಥಾನ ಇರುವುದು ಸೌಂದರ್ಯ ವರ್ಧಕಗಳಿಗೆ. ತ್ವಚೆಯ ಆರೋಗ್ಯ ಚರ್ಮ ವಯಸ್ಸಾಗುವುದನ್ನು ತಡೆಯುವುದು, ಚರ್ಮದ ಮೇಲೆ ಬೊಕ್ಕೆಗಳು ಏಳದಂತೆ ತಡೆಯುವ ಎಲ್ಲಾ ಸೌಂದರ್ಯ ವರ್ಧಕಗಳು ಹಾಗೂ ಸ್ಕಿನ್ ಕೇರ್‌ಗಳಲ್ಲಿ ಗಂಧದ ಉಲ್ಲೇಖ ಇದ್ದೇ ಇರುತ್ತದೆ. ನಿಮ್ಮ ತ್ವಚೆಯ ಅಂದಕ್ಕೆ ಬೇಕು ಶ್ರೀಗಂಧದ ಲೇಪನ!

ಆಯುರ್ವೇದದಲ್ಲೂ ಇದರ ಬಳಕೆಯ ಬಗ್ಗೆ ಸಾಕಷ್ಟು ಹೇಳಲಾಗಿದೆ. ಭಾರತದಲ್ಲಿ ಗಂಧ ಎಂದು ಕರೆಯುವ ಆಂಗ್ಲ ಭಾಷೆಯ ಸ್ಯಾಂಡಲ್ ವುಡ್ ಸೌಂದರ್ಯ ವರ್ಧಕಗಳಲ್ಲಿ ಸಾಮಾನ್ಯವಾಗಿ ಚರ್ಚಿತವಾದ ವಿಷಯ. ಚರ್ಮದ ಮೇಲೆ ಗಂಧದ ಪ್ರಭಾವ ಬಹಳಷ್ಟಿದೆ. ಗಂಧ ಒಂದು ನೈಸರ್ಗಿಕ ಸೌಂದರ್ಯ ವರ್ಧಕವೂ ಆಗಿರುವ ಕಾರಣ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಗಂಧಯುಕ್ತ ಸೌಂದರ್ಯ ವರ್ಧಕಗಳು ಇದೇ ಕಾರಣಕ್ಕಾಗಿ ಹೆಚ್ಚು ಜನಪ್ರಿಯವಾಗಿದೆ.   ಮುಖದ ಅಂದಕ್ಕೆ, ಟೊಮೆಟೊ-ಶ್ರೀಗಂಧದ ಫೇಸ್ ಪ್ಯಾಕ್

ಸಾಮಾನ್ಯವಾಗಿ ಸಾಬೂನು, ಕ್ರೀಮ್‌ಗಳು, ಪೌಡರ್‌ಗಳು, ಫೇಸ್ ಪ್ಯಾಕ್ ಮತ್ತು ಹ್ಯಾಂಡ್ ವಾಶ್‌ಗಳಲ್ಲಿ ಗಂಧದ ಅಂಶದ ಬಳಕೆಯಾಗುತ್ತದೆ. ಇದು ಬಹಳ ವಿಶಿಷ್ಟವಾದ ಸುವಾಸನೆಯನ್ನು ಹೊಂದಿದ್ದು ಗಾಳಿಯಲ್ಲಿ ಬಹಳ ಕಾಲದ ತನಕ ಇರುತ್ತದೆ. ಇದು ಸುಗಂಧ ಕಡ್ಡಿಗಳ ಉತ್ಪಾದನೆಯಲ್ಲೂ ಬಹಳ ಬೇಡಿಕೆ ಇರುವ ವಸ್ತುವಾಗಿದೆ.... 

ಶ್ರೀಗಂಧ ಮತ್ತು ಗುಲಾಬಿ ನೀರು

ಶ್ರೀಗಂಧ ಮತ್ತು ಗುಲಾಬಿ ನೀರು

ಶ್ರೀಗಂಧ ಮತ್ತು ಗುಲಾಬಿ ನೀರಿನ ಮಾಸ್ಕ್ ಒಣ ಹಾಗೂ ಚರ್ಮ ಎದ್ದುಬರುವ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾಗಿದೆ. ಐದು ಚಮಚ ಶ್ರೀಗಂಧದ ಹುಡಿಗೆ ಗುಲಾಬಿ ನೀರನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮುಖ ಹಾಗೂ ಕುತ್ತಿಗೆಗೆ ಇದನ್ನು ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟ ಬಳಿಕ ತಣ್ಣೀರಿನಿಂದ ತೊಳೆಯಿರಿ. ಶ್ರೀಗಂಧದ ಹುಡಿ ಮತ್ತು ಗುಲಾಬಿ ನೀರು ಚರ್ಮಕ್ಕೆ ತೇವಾಂಶವನ್ನು ನೀಡಿ ಪೋಷಿಸುತ್ತದೆ.

ಶ್ರೀಗಂಧ ಮತ್ತು ಅರಿಶಿನದ ಮಾಸ್ಕ್

ಶ್ರೀಗಂಧ ಮತ್ತು ಅರಿಶಿನದ ಮಾಸ್ಕ್

ಐದು ಚಮಚ ಶ್ರೀಗಂಧದ ಹುಡಿಗೆ ಎರಡು ಚಮಚ ಅರಿಶಿನ ಹುಡಿಯನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕುತ್ತಿಗೆಗೆ ಕೂಡ ಇದನ್ನು ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಮೊಡವೆಯ ಸಮಸ್ಯೆ ಇರುವವರಿಗೆ ಈ ಮಾಸ್ಕ್ ಒಳ್ಳೆಯದು. ಮೊಡವೆ, ಕಲೆಗಳು ಮತ್ತು ಗುಳ್ಳೆಗಳನ್ನು ಇದನ್ನು ನಿವಾರಿಸುತ್ತದೆ.

ಶ್ರೀಗಂಧ ಮತ್ತು ಅಕ್ಕಿನೀರಿನ ಮಾಸ್ಕ್

ಶ್ರೀಗಂಧ ಮತ್ತು ಅಕ್ಕಿನೀರಿನ ಮಾಸ್ಕ್

ಶ್ರೀಗಂಧ ಮತ್ತು ಅಕ್ಕಿ ನೀರಿನ ಮಾಸ್ಕ್ ನಿಂದ ಒಣಚರ್ಮದ ಸಮಸ್ಯೆಯನ್ನು ನಿವಾರಿಸಬಹುದು ಮತ್ತು ಕಪ್ಪು ಕಲೆಗಳನ್ನು ಇದು ಹೋಗಲಾಡಿಸುವುದು. ನೀವು ಯುವಕರಾಗಿ ಕಾಣಲು ಮತ್ತು ಕಾಂತಿಯುತ ಚರ್ಮಕ್ಕೆ ಇದು ಪರಿಣಾಮಕಾರಿ. ಸ್ವಲ್ಪ ಶ್ರೀಗಂಧದ ಹುಡಿ ಮತ್ತು ಅದಕ್ಕೆ ಒಂದು ಕಪ್ ಅಕ್ಕಿ ನೀರನ್ನು ಹಾಕಿಕೊಂಡು ಮಿಶ್ರಣ ಮಾಡಿ ಒಳ್ಳೆಯ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಶ್ರೀಗಂಧ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಮಾಸ್ಕ್

ಶ್ರೀಗಂಧ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಮಾಸ್ಕ್

ಐದು ಚಮಚ ಶ್ರೀಗಂಧದ ಹುಡಿ ಮತ್ತು ಎರಡು ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ಒಂದು ಚಮಚ ಜೇನುತುಪ್ಪ ಮತ್ತು ಹಾಲನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಈ ಮಾಸ್ಕ್ ನ್ನು ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ. ಶ್ರೀಗಂಧದ ಹುಡಿ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿಯ ಮಾಸ್ಕ್ ಆರೋಗ್ಯಕರ ಹಾಗೂ ಕಾಂತಿಯುತ ಚರ್ಮವನ್ನು ನೀಡುವುದು.

ಬೊಕ್ಕೆಗಳನ್ನು ನಿವಾರಿಸಬಹುದು

ಬೊಕ್ಕೆಗಳನ್ನು ನಿವಾರಿಸಬಹುದು

ಬಿಸಿಲಿನಿಂದ ಆಗುವ ಚರ್ಮದ ಮೇಲೆ ಏಳುವ ಬೊಕ್ಕೆಗಳನ್ನು ನಿಲ್ಲಿಸಬೇಕಾದರೂ ಗಂಧದ ಬಳಕೆ ರಾಮಬಾಣವಾಗಿದೆ. ಇಂತಹ ಬೊಕ್ಕೆಗಳು ಏಳದಂತೆ ಮತ್ತು ಎದ್ದಾಗ ಕಡಿಮೆ ಮಾಡಲು ಗಂಧವನ್ನು ಬಳಸಬಹುದು. ನೀರಿನ ಜೊತೆಗೆ ಗಂಧವನ್ನು ಬಳಸಿ ಮಾಡಿದ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ ಇದನ್ನು ಕಡಿಮೆ ಮಾಡಬಹುದು. ಇದು ಬಹಳ ಉತ್ತಮ ಪರಿಣಾಮವನ್ನು ನೀಡುವುದರಲ್ಲಿ ಅನುಮಾನವೇ ಇಲ್ಲ. ಇದು ಮಕ್ಕಳಿಗೂ ಬಹಳ ಸುರಕ್ಷಿತವಾದ ವಿಧಾನವಾಗಿದೆ.

 
English summary

Different Sandalwood Face Masks To Try At Home

Sandalwood powder is a one-stop solution to all your skin problems that helps to deal with excessively dry, oily skin and also helps to calm down an acne-prone skin.So, here we've brought to you some of the best sandalwood face masks that you could use to get a glowing and healthy skin. Take a look and do try these at home.
Please Wait while comments are loading...
Subscribe Newsletter