For Quick Alerts
ALLOW NOTIFICATIONS  
For Daily Alerts

  ಮುಖದ ಅಂದಕ್ಕೆ, ಟೊಮೆಟೊ-ಶ್ರೀಗಂಧದ ಫೇಸ್ ಪ್ಯಾಕ್

  By Arshad
  |

  ಹಿಂದಿನ ದಿನಗಳಲ್ಲಿ ಈಗ ಲಭ್ಯವಿರುವ ನೂರಾರು ಪ್ರಸಾಧನಗಳೆಲ್ಲಾ ಇರಲೇ ಇಲ್ಲ. ಆದಾಗ್ಯೂ ಅಂದು ಮಹಿಳೆಯರು ತಮ್ಮ ಸೌಂದರ್ಯವನ್ನು ಹೇಗೆ ರಕ್ಷಿಸಿಕೊಳ್ಳುತ್ತಿದ್ದರು? ಆಗ ನೈಸರ್ಗಿಕ ವಿಧಾನಗಳನ್ನೇ ಅತಿ ಹೆಚ್ಚಾಗಿ ನೆಚ್ಚಿಕೊಳ್ಳಬೇಕಾಗಿತ್ತು. ಚರ್ಮ, ಕೂದಲಿನ ಪೋಷಣೆ ಮತ್ತು ಆರೈಕೆಗೆ ನಿಸರ್ಗ ನೀಡಿದ ಪರಿಕಗಳನ್ನೇ ಬಳಸಿಕೊಳ್ಳುತ್ತಿದ್ದರು. ಆದರೆ ಇಂದಿನ ಪ್ರಸಾಧನಗಳು ಥಟ್ಟನೇ ಸೊಬಗು ನೀಡುವ ಭರದಲ್ಲಿ ಹಲವು ಹಾನಿಯನ್ನೂ ನೀಡುತ್ತಿವೆ.   ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

  ಒಂದು ಸಂಶೋಧನೆಯಲ್ಲಿ ಹಿಂದಿನ ದಿನಗಳಲ್ಲಿ ನೈಸರ್ಗಿಕ ವಿಧಾನಗಳಿಂದ ಅಂದಿನ ಮಹಿಳೆಯರು ಇಂದಿನ ದುಬಾರಿ ಪ್ರಸಾಧನ ಬಳಸುತ್ತಿರುವ ಮಹಿಳೆಯರಿಗಿಂತಲೂ ಹೆಚ್ಚು ಅರೋಗ್ಯಕಾರಿ ಚರ್ಮ ಮತ್ತು ಕೂದಲನ್ನು ಪಡೆದಿದ್ದರು ಎಂದು ಕಂಡುಕೊಳ್ಳಲಾಗಿದೆ.  ಟೊಮೆಟೊದಿಂದ ಕಾಂತಿಯುತ ತ್ವಚೆಗಾಗಿ 6 ವಿಧಾನ

  ಹಿಂದಿನ ದಿನಗಳಿಗೆ ಹೋಲಿಸಿದರೆ ಬದಲಾದ ಜೀವನಶೈಲಿ, ಅನಾರೋಗ್ಯಕರ ಸಿದ್ಧ ಆಹಾರಗಳು, ಮಾನಸಿಕ ಮತ್ತು ಕೆಲಸದ ಒತ್ತಡ, ಗಾಳಿಯಲ್ಲಿನ ಪ್ರದೂಷಣೆ ಮೊದಲಾದ ಹತ್ತು ಹಲವು ಕಾರಣಗಳು ಇಂದಿನ ಜನಾಂಗದ ಯುವಜನತೆಯ ಚರ್ಮ ಮತ್ತು ಕೂದಲನ್ನು ಅನಾರೋಗ್ಯಕರವಾಗಿಸಿದೆ.    ಅಪ್ಸರೆಯಂತಹ ತ್ವಚೆಗಾಗಿ ಶ್ರೀಗಂಧದ ಫೇಸ್ ಪ್ಯಾಕ್!

  ಹಿಂದಿನ ದಿನಗಳ ನೈಸರ್ಗಿಕ ಸೌಂದರ್ಯವನ್ನು ಪಡೆಯಲು ಈಗಲೂ ತಡವಾಗಿಲ್ಲ, ಅವರು ಬಳಸುತ್ತಿದ್ದ ನೈಸರ್ಗಿಕ ಪ್ರಸಾಧನಗಳನ್ನು ಬಳಸಿ ಈ ಹಾನಿಯನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ಈಗಿರುವುದಕ್ಕಿಂತಲೂ ಉತ್ತಮ ಸೌಂದರ್ಯವನ್ನು ಪಡೆಯಬಹುದು. ಇದರಲ್ಲೊಂದು ಸುಲಭ ವಿಧಾನವೆಂದರೆ ಟೊಮೆಟೊ ಮತ್ತು ಗಂಧದ ಪುಡಿಯ ಬಳಕೆ. ಬನ್ನಿ, ಇದರ ಮಹತ್ವವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....  ನಿಮ್ಮ ಅಂದದ ತ್ವಚೆಗೆ ಚಂದನದ ಆರೈಕೆ

  ಬಳಸುವ ವಿಧಾನ

  ಬಳಸುವ ವಿಧಾನ

  ಒಂದು ದೊಡ್ಡಚಮಚ ಗಂಧದ ಪುಡಿ ಮತ್ತು ಒಂದು ದೊಡ್ಡಚಮಚ ಟೊಮೆಟೊ ತಿರುಳಿನ ರಸ (ಸಿಪ್ಪೆ ಮತ್ತು ಬೀಜ ಇರಬಾರದು), ಇವೆರಡನ್ನೂ ಚೆನ್ನಾಗಿ ಬೆರೆಸಿ ಈಗತಾನೇ ತಣ್ಣೀರಿನಲ್ಲಿ ತೊಳೆದುಕೊಂಡಿದ್ದ ಮುಖದ ಮೇಲೆ ನಯವಾಗಿ ಹಚ್ಚಿ. ತುಟಿಗೆ ಹಚ್ಚಬೇಡಿ. ಕಣ್ಣ ಕೆಳಗೆ ಹೆಚ್ಚು ದಪ್ಪನಾಗಿ ಮತ್ತು ರೆಪ್ಪೆಗಳ ಮೇಲೆ ಅತಿ ತೆಳುವಾಗಿ ಹಚ್ಚಿ. ಹದಿನೈದು ನಿಮಿಷಗಳ ಕಾಲ ಕಣ್ಣುಮುಚ್ಚಿ ಹಾಗೇ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಬಿಸಿನೀರು ಅಥವಾ ಸೋಪು ಉಪಯೋಗಿಸಬೇಡಿ. ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಅನುಸರಿಸಿ. ಇದರ ಪ್ರಯೋಜನಗಳೇನು ಎಂಬುದನ್ನು ಈಗ ನೋಡೋಣ:

  ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ

  ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ

  ಟೊಮೆಟೊದಲ್ಲಿರುವ ಟ್ಯಾನಿನ್ ಬಿಸಿಲಿನ ಪ್ರಭಾವಕ್ಕೆ ಗಾಢವಾಗಿದ್ದ ಮೆಲನಿನ್ ಕಣಗಳನ್ನು ತಿಳಿಯಾಗಿಸಲು ನೆರವಾಗುತ್ತದೆ. ಗಂಧದಲ್ಲಿರುವ ಚಿಕಿತ್ಸಕ ಗುಣ ಈ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಪರಿಣಾಮವಾಗಿ ಬಿಸಿಲಿನಿಂದ ಬಾಡಿದ್ದ, ಕಪ್ಪಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣ ಪಡೆಯುವಂತೆ ಮಾಡುತ್ತದೆ.

  ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

  ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

  ಚರ್ಮದ ಮೆಲನಿನ್ ಕಣಗಳನ್ನು ತಿಳಿಯಾಗಿಸುವ ಜೊತೆಗೇ ಸತ್ತ ಜೀವಕೋಶಗಳನ್ನು ನಿವಾರಿಸುವ ಮೂಲಕ ಹೊರಚರ್ಮ ಕಾಂತಿಯುಕ್ತವಾಗಿಸಲು ನೆರವಾಗುತ್ತದೆ. ಕೆಲವೇ ದಿನಗಳಲ್ಲಿ ಈ ಕಾಂತಿಯನ್ನು ಸ್ಪಷ್ಟವಾಗಿ ಗುರುತಿಸಬಹುದು.

  ಮೊಡವೆಗಳನ್ನು ದೂರಾಗಿಸುತ್ತದೆ

  ಮೊಡವೆಗಳನ್ನು ದೂರಾಗಿಸುತ್ತದೆ

  ಟೊಮೆಟೊದಲ್ಲಿರುವ ವಿಟಮಿನ್ ಸಿ ಮತ್ತು ಗಂಧದ ಪುಡಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಚರ್ಮದಲ್ಲಿ ಅಶ್ರಯ ಪಡೆದು ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದ ಬ್ಯಾಕ್ಟೀರಿಯಾಗಳನ್ನು ಬುಡಸಹಿತ ಕಿತ್ತು ಎಸೆಯುವ ಮೂಲಕ ಚರ್ಮದ ಅಡಿಯಲ್ಲಿ ಸೋಂಕು ಉಂಟಾಗದಂತೆ ನೋಡಿಕೊಳ್ಳಬಹುದು. ಇದರಿಂದ ಮೊಡವೆಗಳಾಗುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.

  ವೃದ್ಧಾಪ್ಯವನ್ನು ದೂರಾಗಿಸುತ್ತದೆ

  ವೃದ್ಧಾಪ್ಯವನ್ನು ದೂರಾಗಿಸುತ್ತದೆ

  ಗಂಧದಪುಡಿ ಮತ್ತು ಟೊಮೆಟೊದಲ್ಲಿರುವ ಪೋಷಕಾಂಶಗಳು ಚರ್ಮದಲ್ಲಿ ಕೊಲ್ಯಾಜೆನ್ ಎಂಬ ಕಣಗಳನ್ನು ಹೆಚ್ಚು ಉತ್ಪತ್ತಿಯಾಗಲು ನೆರವಾಗುತ್ತವೆ. ಹೆಚ್ಚು ಕೊಲ್ಯಾಜೆನ್ ಇದ್ದಷ್ಟೂ ಚರ್ಮದ ಜೀವಕೋಶಗಳ ಸಂಖ್ಯೆ ಅಧಿಕವಾಗುವುದರಿಂದ ಮಡಿಕೆ ಬೀಳುವ ಸಂಭವ ಕಡಿಮೆ. ತನ್ಮೂಲಕ ವೃದ್ಧಾಪ್ಯದ ಚಿಹ್ನೆಗಳಾದ ನೆರಿಗೆಗಳಾಗದಂತೆ ನೋಡಿಕೊಳ್ಳಬಹುದು.

  ತುರಿಕೆಯನ್ನು ಇಲ್ಲವಾಗಿಸುತ್ತದೆ

  ತುರಿಕೆಯನ್ನು ಇಲ್ಲವಾಗಿಸುತ್ತದೆ

  ನೂರಾರು ವರ್ಷಗಳಿಂದ ಆಯುರ್ವೇದ ಟೊಮೆಟೊ ಮತ್ತು ಗಂಧದಪುಡಿಯನ್ನು ಚರ್ಮದ ಉರಿಯೂತಕ್ಕೆ ಬಳಸುತ್ತಾ ಬಂದಿದೆ. ಚರ್ಮದ ತುರಿಕೆ, ಉರಿ ಮೊದಲಾದ ತೊಂದರೆಗಳಿಗೆ ಈ ಲೇಪನ ಉತ್ತಮ ಪರಿಹಾರ ನೀಡುತ್ತದೆ.

  ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

  ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

  ಟೊಮೆಟೊ ಮತ್ತು ಗಂಧದ ಪುಡಿ ಎರಡು ಉತ್ತಮ ತೇವಕಾರಕವಾಗಿದ್ದು ಚರ್ಮದ ಪ್ರತಿ ಜೀವಕೋಶ ತೇವಾಂಶವನ್ನು ಪಡೆಯಲು ನೆರವಾಗುತ್ತದೆ. ಉತ್ತಮ ತೇವಾಂಶ ಪಡೆದ ಚರ್ಮ ನೈಸರ್ಗಿಕವಾಗಿ ಕಳಕಳಿಸುತ್ತಿದ್ದು ಉತ್ತಮ ಕಾಂತಿಯನ್ನು ಸೂಸುತ್ತದೆ.

   

  English summary

  Apply Tomato And Sandalwood To Your Skin & Watch What Happens!

  The variety of unhealthy foods, the pollution in the air, work stress, unhealthy lifestyle habits, etc, have made the recent generations become quite unhealthy and it reflects on our skin as well. Did you know that the mixture of sandalwood powder and tomato juice can have numerous skin benefits?
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more