ಸಂಶಯವೇ ಬೇಡ! ಲಿಂಬೆ ಫೇಸ್‌ ಪ್ಯಾಕ್‌ನಿಂದ ಖಂಡಿತ ಮೋಸವಿಲ್ಲ..

By: manu
Subscribe to Boldsky

ಲಿಂಬೆರಸವನ್ನು ಹಿಂಡಿದ ಬಳಿಕ ಉಳಿದ ಸಿಪ್ಪೆಯನ್ನು ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಯಲ್ಲಿಯೂ ಹಲವು ಆರೋಗ್ಯಕರ ಗುಣಗಳಿದ್ದು ವಿಶೇಷವಾಗಿ ತ್ವಚೆಗೆ ಉತ್ತಮವಾಗಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು ಆರೋಗ್ಯಕರ ಮತ್ತು ತಾರುಣ್ಯಭರಿತ ತ್ವಚೆ ಪಡೆಯಲು ನೆರವಾಗುತ್ತದೆ.  ಮನೆಮದ್ದು: ಲಿಂಬೆ ಹಣ್ಣಿನ ಸಿಪ್ಪೆ-ಎಷ್ಟು ಹೊಗಳಿದರೂ ಸಾಲದು!

ಆದರೆ ಇದನ್ನು ಮುಖಲೇಪವಾಗಿ ಬಳಸುವುದು ಹೇಗೆ ಎಂದು ಗೊತ್ತಿಲ್ಲದಿದ್ದರೆ ಇಂದಿನ ಲೇಖದಲ್ಲಿ ಈ ಬಗ್ಗೆ ವಿವರಗಳನ್ನು ಪಡೆಯಲಿದ್ದೀರಿ. ಆದ್ದರಿಂದ ಮುಂದಿನ ಬಾರಿ ಲಿಂಬೆಹಣ್ಣಿನ ರಸವನ್ನು ಹಿಂಡಿದ ಬಳಿಕ ಇದರ ಸಿಪ್ಪೆಯನ್ನು ಮರೆಯದೇ ತೆಗೆದಿರಿಸಿ. ಬನ್ನಿ, ಲಿಂಬೆಯ ಸಿಪ್ಪೆಯನ್ನು ಮುಖಲೇಪವಾಗಿ ಬಳಸುವುದು ಹೇಗೆ ಎಂದುದನ್ನು ನೋಡೋಣ...  

ಲಿಂಬೆ ಸಿಪ್ಪೆ ಮತ್ತು ಲಿಂಬೆರಸದ ಮುಖಲೇಪ

ಲಿಂಬೆ ಸಿಪ್ಪೆ ಮತ್ತು ಲಿಂಬೆರಸದ ಮುಖಲೇಪ

ಒಂದು ಲಿಂಬೆಯ ಸಿಪ್ಪೆಯನ್ನು ಪ್ರತ್ಯೇಕಿಸಿ ಸುಮಾರು ಎರಡರಿಂದ ಮೂರು ದಿನಗಳ ಕಾಲ ಒಣಗಿಸಿ. ಸಿಪ್ಪೆ ಪೂರ್ಣವಾಗಿ ಒಣಗಿದ ಬಳಿಕ ಇದನ್ನು ಕುಟ್ಟಿ ಪುಡಿ ಮಾಡಿ. ಬಳಿಕ ಒಂದು ಚಿಕ್ಕಚಮಚ ಲಿಂಬೆರಸದೊಂದಿಗೆ ಒಂದು ಚಿಕ್ಕಚಮಚ ಈ ಸಿಪ್ಪೆಯ ಪುಡಿಯನ್ನು ಬೆರೆಸಿ. ಇದಕ್ಕೆ ಒಂದು ಹನಿ ಜೇನನ್ನು ಬೆರೆಸಿ. ಈ ಲೇಪವನ್ನು ಮುಖಕ್ಕೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಡ್ಲೆಹಿಟ್ಟು ಮತ್ತು ಲಿಂಬೆಸಿಪ್ಪೆ

ಕಡ್ಲೆಹಿಟ್ಟು ಮತ್ತು ಲಿಂಬೆಸಿಪ್ಪೆ

ಮೂರು ಚಿಕ್ಕ ಚಮಚ ಕಡ್ಲೆಹಿಟ್ಟ್ ಮತ್ತು ಎರಡು ಚಿಕ್ಕಚಮಚ ಲಿಂಬೆಸಿಪ್ಪೆಯ ಪುಡಿಯನ್ನು ಬೆರೆಸಿ ಕೊಂಚವೇ ಹಸಿಹಾಲು ಹಾಕಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಆವರಿಸುವಂತೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸೌತೆಕಾಯಿ ಮತ್ತು ಲಿಂಬೆಸಿಪ್ಪೆ

ಸೌತೆಕಾಯಿ ಮತ್ತು ಲಿಂಬೆಸಿಪ್ಪೆ

ಒಂದು ಸೌತೆಕಾಯಿಯನ್ನು ಅರೆದು ಹಿಂಡಿ ರಸವನ್ನು ಸಂಗ್ರಹಿಸಿ. ಒಂದು ಚಿಕ್ಕಚಮದಷ್ಟು ಈ ರಸ ಮತ್ತು ಲಿಂಬೆಸಿಪ್ಪೆಯ ಪುಡಿಯನ್ನು ಬೆರೆಸಿ ಮಿಶ್ರಣ ತಯಾರಿಸಿ. ಈ ಲೇಪವನ್ನು ಮುಖಕ್ಕೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.ಮುಖದ ಅಂದವನ್ನು ಹೆಚ್ಚಿಸುವ 'ಸೌತೆಕಾಯಿ' ಫೇಸ್ ಪ್ಯಾಕ್!

ಗಂಧದ ಪುಡಿ ಮತ್ತು ಲಿಂಬೆಪುಡಿ

ಗಂಧದ ಪುಡಿ ಮತ್ತು ಲಿಂಬೆಪುಡಿ

ಎರಡು ಚಿಕ್ಕಚಮಚ ಗಂಧದ ಪುಡಿ ಮತ್ತು ಒಂದು ಚಿಕ್ಕ ಚಮಚ ಲಿಂಬೆರಸ ಬೆರೆಸಿ. ಇದಕ್ಕೆ ಎರಡು ಚಮಚ ಲಿಂಬೆಸಿಪ್ಪೆಯ ಪುಡಿ ಸೇರಿಸಿ ಒಂದು ಚಮಚ ಹಸಿ ಹಾಲು ಬೆರೆಸಿ. ಇವೆಲ್ಲವನ್ನೂ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಹಾಲಿನ ಕೆನೆ ಮತ್ತು ಜೇನು ತುಪ್ಪದ ಜೊತೆಗೆ

ಹಾಲಿನ ಕೆನೆ ಮತ್ತು ಜೇನು ತುಪ್ಪದ ಜೊತೆಗೆ

ಸುಂದರವಾದ ತುಟಿಗೆಳಿಗಾಗಿ ಲಿಂಬೆಹಣ್ಣನ್ನು ಬಳಸಿ... ಲಿಂಬೆ ಹಣ್ಣಿನ ರಸವು ನಿಮ್ಮ ತುಟಿಗಳಿಗು ಸಹ ಉಪಯೋಗಕಾರಿ. ಒಣಗಿದ, ನಿಸ್ತೇಜಗೊಂಡ ಮತ್ತು ಒಡೆದ ತುಟಿಗಳಿಗೆ ಲಿಂಬೆ ಹಣ್ಣಿನ ರಸವನ್ನು ಹಚ್ಚಿ. ಲಿಂಬೆ ಹಣ್ಣಿನ ರಸವನ್ನು ಹಾಲಿನ ಕೆನೆ ಮತ್ತು ಜೇನು ತುಪ್ಪದ ಜೊತೆಗೆ ಬೆರೆಸಿ ನಿಮ್ಮ ಮನೆಯಲ್ಲೇ ಒಂದು ಉತ್ತಮ ಸ್ವಾಭಾವಿಕ ಲಿಪ್ ಬಾಮ್ ಅನ್ನು ತಯಾರಿಸಿಕೊಳ್ಳಬಹುದು. ಈ ಬಾಮ್ ನಿಮ್ಮ ತುಟಿಗೆ ಆರೋಗ್ಯವನ್ನು ಮತ್ತು ಮಾಯಿಶ್ಚರೈಸ್ ಅನ್ನು ಒದಗಿಸಲು ನೆರವಾಗುತ್ತದೆ.

ಬಾದಾಮಿ ಎಣ್ಣೆ, ಜೇನು ತುಪ್ಪ ಮತ್ತು ಲಿಂಬೆರಸ

ಬಾದಾಮಿ ಎಣ್ಣೆ, ಜೇನು ತುಪ್ಪ ಮತ್ತು ಲಿಂಬೆರಸ

ನಿಮ್ಮ ಕೈಗಳು ನಿಮ್ಮ ಮುಖದಷ್ಟೇ ಜನರ ಕಣ್ಣಿಗೆ ಕಾಣುವ ಒಂದು ಅಂಗವಾಗಿರುತ್ತದೆ. ಹಾಗಾಗಿ ಇದನ್ನು ಸಹ ನೀವು ಕಡೆಗಣಿಸದೆ, ಅಗತ್ಯವಾದ ಆರೈಕೆಯನ್ನು ಆಗಾಗ ಮಾಡುತ್ತಿರಬೇಕು. ನಿಮ್ಮ ಕೈಗಳಿಗೆ ಬಾದಾಮಿ ಎಣ್ಣೆ, ಜೇನು ತುಪ್ಪ ಮತ್ತು ಲಿಂಬೆರಸವನ್ನು ಬೆರೆಸಿದ ಮಿಶ್ರಣವನ್ನು ಲೇಪಿಸಿ, ಮಸಾಜ್ ಮಾಡುತ್ತ ಬನ್ನಿ. ನಿಮ್ಮ ಕೈಗಳು ಮೃದು ಮತ್ತು ಶುಭ್ರವಾಗುವುದನ್ನು ನೀವೇ ನೋಡುವಿರಿ. ಇದು ಹಠಮಾರಿಯಂತೆ ಕೂತ ಮೊಣಕೈನ ಕಪ್ಪನೆಯ ಒರಟು ಚರ್ಮವನ್ನು ಸಹ ಹೋಗಲಾಡಿಸುತ್ತದೆ. ಲಿಂಬೆ ಹಣ್ಣು: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು

 
English summary

Different Lemon Peel Face Masks You Should Try

In this article we'll let you know how to use lemon peel as a face mask, so continue reading. Lemon peels are storehouses of Vitamin C and hence they can help to provide a nice charming glow to the skin. So the next time you use a lemon, do not discard the lemon peel, as it is of great use as well. Read below to know more about the different types of lemon peel masks that you could use.
Please Wait while comments are loading...
Subscribe Newsletter