ಚರ್ಮದ ಕಾಂತಿಗೆ ಬೆಂದ ಅನ್ನ+ಅರಿಶಿನದ ಮಾಸ್ಕ್

By: Arshad
Subscribe to Boldsky

ಚಳಿಗಾಲ ಮುಗಿಯುತ್ತಾ ಬಂದಂತೆ ಇನ್ನೇನು ಬೇಸಿಗೆಯ ದಿನಗಳು ದೂರವೇನಿಲ್ಲ. ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ತ್ವಚೆ ಕಪ್ಪಗಾಗದಿರಲು ಮುಂಜಾಗರೂಕತೆಗಾಗಿಯೇ ಇಂದು, ಅವಧಿಗೆ ಮುಂಚಿತವಾಗಿಯೇ ಒಂದು ಹೊಸ ವಿಧಾನವನ್ನು ಪ್ರಸ್ತುತಪಡಿಸುತ್ತಿದ್ದೇವೆ. ಬಿಸಿಲಿಗೆ ಒಡ್ಡಿದ ಬಳಿಕವೂ ಚರ್ಮ ಕಪ್ಪಗಾಗದಿರುವುದು ಮಾತ್ರವಲ್ಲ, ಸಹಜವರ್ಣ ಮತ್ತು ಕಾಂತಿಯನ್ನು ಉಳಿಸಿಕೊಳ್ಳುವುದೇ ಇದರ ವೈಶಿಷ್ಟ್ಯವಾಗಿದೆ.

ಚರ್ಮ ಕಪ್ಪಗಾಗಲು ಬಿಸಿಲಿನಲ್ಲಿರುವ ಅತಿನೇರಳೆ ಕಿರಣಗಳೇ ಕಾರಣ. ಚಳಿಗಾಲದಲ್ಲಿಯೂ ಬಿಸಿಲಿದ್ದರೂ ಏಕೆ ಕಪ್ಪಗಾಗುವುದಿಲ್ಲ ಎಂಬ ಪ್ರಶ್ನೆಗೆ ಉತ್ತರವೆಂದರೆ ಬಿಸಿಲುಗಾಲದಲ್ಲಿ ಬಿಸಿಲು ಬೀಳುವ ಕೋನ ಮಹತ್ತರ ಪಾತ್ರ ವಹಿಸುತ್ತದೆ. ಈ ಕೋನದಲ್ಲಿ ಬೀಳುವ ಬಿಸಿಲಿನಲ್ಲಿ ಅತಿನೇರಳೆ ಕಿರಣಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಚರ್ಮದಲ್ಲಿನ ಮೆಲನಿನ್ ಎಂಬ ವರ್ಣದ್ರವ್ಯವನ್ನು ಹೆಚ್ಚು ಉತ್ಪಾದಿಸುತ್ತದೆ.  ಬರೀ ನಾಲ್ಕೇ ವಾರದಲ್ಲಿ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಿ

ಇದು ಸಹಜವರ್ಣವನ್ನು ಇನ್ನಷ್ಟು ಗಾಢವಾಗಿಸುತ್ತದೆ. ಬಿಸಿಲಿಗೆ ಕಪ್ಪಗಾಗಿರುವ ಚರ್ಮಕ್ಕೆ ಸೂಕ್ತವಾದ ಆರೈಕೆ ನೀಡದಿದ್ದರೆ ವೃದ್ಧಾಪ್ಯದ ಚಿಹ್ನೆಗಳಾದ ನೆರಿಗೆಗಳು, ಸೂಕ್ಷ್ಮಗೆರೆಗಳು, ಸೂಕ್ಷ್ಮರಂಧ್ರಗಳು ಬೇಗನೇ ಆವರಿಸಲು ತೊಡಗುತ್ತವೆ. ಆದ್ದರಿಂದ ಬಿಸಿಲಿಗೆ ಚರ್ಮ ಕಪ್ಪಗಾಗದಂತೆ ತಡೆಯುವುದೇ ಜಾಣತನದ ಕ್ರಮವಾಗಿದ್ದು ಇದನ್ನು ಸಮರ್ಥವಾಗಿ ಪೂರೈಸಬಲ್ಲ ವಿಧಾನವನ್ನು ಇಂದು ನೀಡಲಾಗಿದೆ..

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಅರ್ಧ ಕಪ್ ಬೇಯಿಸಿದ ಅಕ್ಕಿ (ಪಾಲಿಶ್ ಮಾಡದ ಬೆಳ್ತಿಗೆ ಅಕ್ಕಿಯಾದರೆ ಉತ್ತಮ)

*ಮೂರು ಚಿಕ್ಕ ಚಮಚ ಅರಿಶಿನ ಪುಡಿ

*ಎಪ್ಸಮ್ ಉಪ್ಪು (ಮೆಗ್ನೇಶಿಯಂ ಸಲ್ಫೇಟ್) - ಕೊಂಚ

*ಎರಡು ಚಿಕ್ಕಚಮಚ ಮೊಸರು

*ಒಂದು ಚಿಕ್ಕ ಚಮಚ ಜೇನು

ಹಂತ #1

ಹಂತ #1

ಒಂದು ಚಿಕ್ಕ ಪಾತ್ರೆಯಲ್ಲಿ ಅನ್ನವನ್ನು ಹಾಕಿ.

ಹಂತ #2

ಹಂತ #2

ಇದಕ್ಕೆ ಜೇನು ಸೇರಿಸಿ ಮಿಶ್ರಣ ಮಾಡಿ

ಹಂತ #3

ಹಂತ #3

ಬಳಿಕ ಅರಿಶಿನ ಪುಡಿ ಸೇರಿಸಿ ಮಿಶ್ರಣ ಮಾಡಿ.

ಹಂತ #4

ಹಂತ #4

ಬಳಿಕ ಚಿಟಿಕೆಯಷ್ಟು ಎಪ್ಸಮ್ ಉಪ್ಪು ಸೇರಿಸಿ. ಒಂದು ವೇಳೆ ಇದು ಲಭ್ಯವಿಲ್ಲದಿದ್ದರೆ ಎರಡು ಚಿಟಿಕೆಯಷ್ಟು ಕಲ್ಲುಪ್ಪನ್ನು ಬಳಸಬಹುದು.

ಹಂತ #5

ಹಂತ #5

ಬಳಿಕ ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ #6

ಹಂತ #6

ಅನ್ನದ ಅಗುಳುಗಳನ್ನು ಕಿವುಚಿ ಮಿಶ್ರಣ ಮಾಡಿ. ಎಲ್ಲಿಯೂ ಅಗುಳುಗಳು ಉಳಿಯಬಾರದು.

ಹಂತ #7

ಹಂತ #7

ಒಂದು ವೇಳೆ ಕಷ್ಟ ಎನಿಸಿದರೆ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ಕೆಲವೇ ಸೆಕೆಂಡುಗಳವರೆಗೆ ಮಾತ್ರ ಕಡೆದು ಹೊರತೆಗೆಯಿರಿ.

ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ

ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ

ಈ ಲೇಪನವನು ಈಗತಾನೇ ತಣ್ಣೀರಿನಲ್ಲಿ ತೊಳೆದುಕೊಂಡಿರುವ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ. ಕೊಂಚ ಹೊತ್ತಿನಲ್ಲಿಯೇ ಇದು ಒಣಗಿ ಪದರದಂತೆ ಏಳಬೇಕು. ಆಗ ಇದನ್ನು ಉಗುರುಬೆಚ್ಚನೆಯ ನೀರನ್ನು ಬಳಸಿ ತೊಳೆದುಕೊಳ್ಳಿ. ದಿನಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿದರೆ ಕಪ್ಪಗಾಗಿದ್ದ ಚರ್ಮವೂ ಸಹಜವರ್ಣಕ್ಕೆ ತಿರುಗುತ್ತದೆ ಹಾಗೂ ಇನ್ನಷ್ಟು ಬಿಸಿಲಿಗೆ ಕಪ್ಪಗಾಗುವುದರಿಂದ ತಡೆಯುತ್ತದೆ.

ಅನ್ನವನ್ನು ಬಳಸುವುದರಿಂದ ತ್ವಚೆಗೆ ಸಿಗುವ ಪ್ರಯೋಜನಗಳು

ಅನ್ನವನ್ನು ಬಳಸುವುದರಿಂದ ತ್ವಚೆಗೆ ಸಿಗುವ ಪ್ರಯೋಜನಗಳು

ಅನ್ನದಲ್ಲಿ ಲಿನೋಲಿಕ್ ಆಮ್ಲ ಎಂಬ ಪೋಷಕಾಂಶವಿದೆ. ಇದು ಒಂದು ಸಕ್ಷಮ ಆಂಟಿ ಆಕ್ಸಿಡೆಂಟು ಆಗಿದ್ದು ಚರ್ಮದಲ್ಲಿ ಕೊಲ್ಯಾಜೆನ್ ಎಂಬ ಕಣಗಳ ಉತ್ಪತ್ತಿಗೆ ನೆರವಾಗುತ್ತದೆ. ಈ ಕೊಲ್ಯಾಜೆನ್ ಚರ್ಮದ ಮೃದುತ್ವ ಹಾಗೂ ಸಹಜವರ್ಣದಲ್ಲಿರಲು ನೆರವಾಗುತ್ತದೆ. ಅಲ್ಲದೇ ಚರ್ಮದ ಸೆಳೆತವನ್ನೂ ಹೆಚ್ಚಿಸಿ ನೆರಿಗೆಗಳಾಗದಂತೆ ತಡೆಯುತ್ತದೆ ಹಾಗೂ ಅತಿನೇರಳೆ ಕಿರಣಗಳು ಚರ್ಮದ ಆಳಕ್ಕೆ ಇಳಿಯದಂತೆ ತಡೆಯುತ್ತದೆ.

ಅರಿಶಿನದ ಪ್ರಯೋಜನಗಳು

ಅರಿಶಿನದ ಪ್ರಯೋಜನಗಳು

ಅರಿಶಿನ ಉತ್ತಮವಾದ ಉರಿಯೂತ ನಿವಾರಕವಾಗಿದೆ. ಅಲ್ಲದೇ ಇದೊಂದು ಉತ್ತಮ ಬ್ಯಾಕ್ಟೀರಿಯಾನಿವಾರಕವೂ ಆಗಿದ್ದು ಚರ್ಮದಲ್ಲಿರುವ ಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನು ಕೊಂದು ಚರ್ಮ ಸಹಜಕಳೆ ಹಾಗೂ ಕಾಂತಿಯನ್ನು ಪಡೆಯಲು ನೆರವಾಗುತ್ತದೆ.ಚಿನ್ನದ ದೇವತೆ 'ಅರಿಶಿನದ' ಸೌಂದರ್ಯ ಗುಣಗಳು

ಎಪ್ಸಂ ಉಪ್ಪಿನ ಪ್ರಯೋಜನಗಳು

ಎಪ್ಸಂ ಉಪ್ಪಿನ ಪ್ರಯೋಜನಗಳು

ಎಪ್ಸಂ ಉಪ್ಪಿನಲ್ಲಿ ವಿಟಮಿನ್ ಸಿ ಪ್ರಮಾಣ ಉತ್ತಮವಾಗಿದ್ದು ಕಪ್ಪಗಾಗಿದ್ದ ಚರ್ಮ ಪುನಃ ಸಹಜವರ್ಣ ಪಡೆಯಲು ನೆರವಾಗುತ್ತದೆ. ವಿಟಮಿನ್ ಸಿ ಚರ್ಮದ ಕಲೆ ಹಾಗೂ ಗಾಢವರ್ಣವನ್ನು ತಿಳಿಗೊಳಿಸಲು ನೆರವಾಗುತ್ತದೆ ಹಾಗೂ ಇನ್ನಷ್ಟು ಗಾಢವಾಗುವುದರಿಂದ ತಪ್ಪಿಸುತ್ತದೆ.

ಜೇನಿನ ಪ್ರಯೋಜನಗಳು

ಜೇನಿನ ಪ್ರಯೋಜನಗಳು

ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಅಮೈನೋ ಆಮ್ಲಗಳು ಚರ್ಮದಲ್ಲಿ ತೇವವನ್ನು ಉಳಿಸುವ ಕೆಲಸವನ್ನು ಮಾಡುತ್ತವೆ. ಇವು ಚರ್ಮದಲ್ಲಿ ಬಹಳ ಹೊತ್ತಿನವರೆಗೆ ಆರ್ದ್ರತೆಯನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಒಣಗುವುದರಿಂದ ಕಾಪಾಡುತ್ತದೆ. ಅಲ್ಲದೇ ಚರ್ಮದ ಜೀವಕೋಶಗಳನ್ನು ಭದ್ರವಾಗಿಸುವ ಮೂಲಾಕ ಚರ್ಮದ ಸೆಳೆತವನ್ನು ಹೆಚ್ಚಿಸಿ ನೆರಿಗೆ ಮೂಡದಂತೆ ತಡೆಯುತ್ತದೆ.ತ್ವಚೆಯ ಅಂದವನ್ನು ಹೆಚ್ಚಿಸುವ ಜೇನು ಮತ್ತು ಹಾಲಿನ ಪ್ಯಾಕ್

ಈ ಅನ್ನ-ಅರಿಸಿನದ ಮುಖಲೇಪದ ಪ್ರಯೋಜನಗಳು

ಈ ಅನ್ನ-ಅರಿಸಿನದ ಮುಖಲೇಪದ ಪ್ರಯೋಜನಗಳು

*ಬಿಸಿಲಿಗೆ ಹೋದಾಗ ಚರ್ಮ ಕಪ್ಪಗಾಗುವುದನ್ನು ತಡೆಯುತ್ತದೆ

*ಈಗಾಗಲೇ ಉಳಿದಿರುವ ಹಳೆಯ ಮೊಡವೆಗಳ ಮತ್ತು ಗಾಯಗಳ ಕಲೆಗಳನ್ನು ತಿಳಿಗೊಳಿಸುತ್ತದೆ

*ಚರ್ಮ ಒಣಗುವುದರಿಂದ ರಕ್ಷಿಸುತ್ತದೆ

*ಚರ್ಮ ಮೃದು ಮತ್ತು ನಯವಾಗಲು ಸಹಕರಿಸುತ್ತದೆ

*ಚರ್ಮದ ಸೂಕ್ಷ್ಮರಂಧ್ರಗಳನ್ನು ಕಿರಿದಾಗಿಸಿ ಸೋಂಕು ತಗಲುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

*ಚರ್ಮದ ಸೆಳೆತವನ್ನು ಹೆಚ್ಚಿಸುತ್ತದೆ.

*ಚರ್ಮದ ಕಾಂತಿಯನ್ನು ಹೆಚ್ಚಿಸಿ ತಾರುಣ್ಯವನ್ನು ಪ್ರಕಟಿಸುತ್ತದೆ.

English summary

Cooked Rice & Turmeric Anti-Tan Body Mask

Well, summer is almost around the corner, that's why we'd like to introduce to you a new body mask that will help you get rid of tan easily and also give you a glowing skin. When skin gets exposed to UV rays, it accelerates the production of melanin in the body, thus making our skin appear dark and tanned.
Please Wait while comments are loading...
Subscribe Newsletter