For Quick Alerts
ALLOW NOTIFICATIONS  
For Daily Alerts

ಬರೀ ನಾಲ್ಕೇ ವಾರದಲ್ಲಿ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಿ

By manu
|

ಸೌಂದರ್ಯಪ್ರಜ್ಞೆ ಇರುವ ಎಲ್ಲರಿಗೂ ತಮ್ಮ ತ್ವಚೆ ಗೌರವರ್ಣದ್ದಾಗಿರಬೇಕೆಂಬ ಬಯಕೆಯಿರುತ್ತದೆ. ಆದರೆ ಚರ್ಮದ ಬಣ್ಣವನ್ನು ಬದಲಿಸುವುದು ಸಾಧ್ಯವಿಲ್ಲ. ಜಾಣತನವೆಂದರೆ ಚರ್ಮವನ್ನು ಉತ್ತಮ ಆರೋಗ್ಯದಿಂದ, ಕಾಂತಿಯಿಂದ ಕೂಡಿರುವಂತೆ ಮಾಡುವ ಮೂಲಕ ಕಲೆಯಿಲ್ಲದ ಮತ್ತು ನೆರಿಗೆಯಿಲ್ಲದಂತೆ ಕಾಪಾಡಿಕೊಳ್ಳುವ ಮೂಲಕ ಸಹಜ ಸೌಂದರ್ಯವನ್ನು ಬೆಳಗುವಂತೆ ಮಾಡಬಹುದು. ಆದರೆ ಇದು ಅಷ್ಟು ಸುಲಭವಲ್ಲ. ಇದಕ್ಕೆ ಸತರ ಆರೈಕೆ ಮತ್ತು ಪೋಷಣೆ ಅಗತ್ಯ. ಮೊಡವೆಗಳಿದ್ದರೆ ಚಿವುಟದಿರಲು ದೃಢ ಮನೋಬಲವೂ ಅಗತ್ಯ. ಕೇಸರಿಯ ರಹಸ್ಯ: ಕಣ ಕಣದಲ್ಲೂ ಸೌಂದರ್ಯದ ಶಕ್ತಿ!

ಇದಕ್ಕಾಗಿ ವರ್ಷಗಟ್ಟಲೇ ಆರೈಕೆ ನೀಡುವುದು ಅಗತ್ಯವಿಲ್ಲ. ಕೆಲವು ಸುಲಭ ವಿಧಾನಗಳ ಮೂಲಕ ಕೇವಲ ಮೂವತ್ತೇ ದಿನದಲ್ಲಿ ಚರ್ಮದ ಕಾಂತಿ ಹೆಚ್ಚುತ್ತದೆ. ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಈ ಉಪಾಯಗಳನ್ನು ಅನುಸರಿಸುವ ಮೂಲಕ ನಿಮ್ಮ ತ್ವಚೆ ಕಾಂತಿಯುಕ್ತವಾಗಲು ಸಹಾಯವಾಗುತ್ತದೆ. ತ್ವಚೆಯ ಮೊಡವೆ ನಿವಾರಣೆಗೆ ಬರೀ ಏಳೇ ದಿನಗಳು ಸಾಕು!

ಆರೋಗ್ಯಕರ ಆಹಾರ ಕ್ರಮ

ಆರೋಗ್ಯಕರ ಆಹಾರ ಕ್ರಮ

ತ್ವಚೆಯ ಆರೈಕೆಯೂ ಆಹಾರವನ್ನೇ ಅವಲಂಬಿಸಿದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್, ಒಮೆಗಾ 3 ಕೊಬ್ಬಿನ ತೈಲ ಇರುವ ಆಹಾರಗಳು, ವಿವಿಧ ಹಣ್ಣು ಮತ್ತು ತರಕಾರಿಗಳು ಚರ್ಮದ ಆರೈಕೆಗೆ ನೆರವಾಗುತ್ತದೆ. ಎಣ್ಣೆ, ಜಿಡ್ಡು, ಕರಿದ ಆಹಾರಗಳನ್ನು ವರ್ಜಿಸುವುದು ಪೂರಕವಾಗಿದೆ. ಉತ್ತಮ ಆಹಾರದ ಮೂಲಕ ನಾಲ್ಕು ವಾರದಲ್ಲಿ ಚರ್ಮದಲ್ಲಿ ಬದಲಾವಣೆ ಕಂಡುಬರುತ್ತದೆ. ಇದು ಎಲ್ಲಾ ಬಗೆಯ ಚರ್ಮದವರಿಗೂ ಸಮಾನವಾಗಿ ಅನ್ವಯವಾಗುತ್ತದೆ.

 ಮುಖ ತೊಳೆದುಕೊಳ್ಳುವುದು

ಮುಖ ತೊಳೆದುಕೊಳ್ಳುವುದು

ಚರ್ಮದ ಆರೈಕೆಯ ಇನ್ನೊಂದು ವಿಧಾನವೆಂದರೆ ಸ್ವಚ್ಛತೆಗೆ ಆದ್ಯತೆ ನೀಡುವುದು. ಹೆಚ್ಚಿನವರಿಗೆ ಮುಖ ತೊಳೆದುಕೊಳ್ಳಲೂ ಪುರುಸೊತ್ತು ಇಲ್ಲದಿರುವುದರಿಂದ ಚರ್ಮದ ಸೂಕ್ಷ್ಮರಂಧ್ರಗಳಲ್ಲಿರುವ ಕೊಳೆಯನ್ನು ನಿವಾರಿಸಲು ಆಗದೇ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪರೋಕ್ಷ ಕಾರಣವಾಗುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಟ ಮೂರು ಬಾರಿ ತೊಳೆದುಕೊಳ್ಳುವುದು ಅಗತ್ಯ. ಮೇಕಪ್ ಮಾಡಿಕೊಂಡಿದ್ದರೆ ಮೇಕಪ್ ನ ಅಗತ್ಯ ತೀರಿದ ತಕ್ಷಣ ನಿವಾರಿಸಿ ಸ್ವಚ್ಛಗೊಳಿಸುವುದು ಉತ್ತಮ. ಎಣ್ಣೆಚರ್ಮದವರಂತೂ ದಿನಕ್ಕೆ ನಾಲ್ಕಾರು ಬಾರಿ ಮುಖ ತೊಳೆದುಕೊಳ್ಳುವುದು ಉತ್ತಮ.

ಸಾಕಷ್ಟು ನೀರು ಕುಡಿಯುವುದು.

ಸಾಕಷ್ಟು ನೀರು ಕುಡಿಯುವುದು.

ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೀರು ತುಂಬಾ ಅಗತ್ಯ. ಬೆವರಿನ ಮೂಲಕವೂ ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು, ಚರ್ಮದ ರಂಧ್ರಗಳಲ್ಲಿ ಸಿಕ್ಕಿಕೊಂಡಿದ್ದ ಕಲ್ಮಶ ದೂರವಾಗುತ್ತದೆ. ಇದಕ್ಕೆ ದಿನದಲ್ಲಿ ಎಂಟು ಲೋಟಗಳಷ್ಟು ನೀರನ್ನು ಆಗಾಗ ಕುಡಿಯುತ್ತಿರುವುದು ಅಗತ್ಯ. ಆಗಾಗ ನೀರು ಕುಡಿಯುತ್ತಿರುವ ಕಾರಣ ಚರ್ಮ ತನ್ನ ಸೆಳೆತವನ್ನು ಉಳಿಸಿಕೊಂಡು ಸಹಜ ಕಾಂತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

 ನೈಸರ್ಗಿಕ ಸ್ವಚ್ಛತಾ ದ್ರವಗಳನ್ನು ಉಪಯೋಗಿಸಿ

ನೈಸರ್ಗಿಕ ಸ್ವಚ್ಛತಾ ದ್ರವಗಳನ್ನು ಉಪಯೋಗಿಸಿ

ಮುಖವನ್ನು ಮೇಲಿಂದ ಮೇಲೆ ತೊಳೆದುಕೊಂಡರೂ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಲು ಮಾತ್ರ ಕೇವಲ ನೀರಿನಿಂದ ಸಾಧ್ಯವಿಲ್ಲ. ಇದಕ್ಕೆ ಮಾರುಕಟ್ಟೆಯಲ್ಲಿ ರಾಸಾಯನಿಕ ದ್ರಾವಣಗಳು ದೊರಕಿದರೂ ಇದರ ಸತತ ಬಳಕೆ ಚರ್ಮಕ್ಕೆ ಹಾನಿಯುಂಟುಮಾಡಬಹುದು. ಬದಲಿಗೆ ಹಸಿ ಹಾಲನ್ನು ಅದ್ದಿದ ಹತ್ತಿಯ ಉಂಡೆಯನ್ನು ಮುಖದ ಮೇಲೆ ಒರೆಸುವುದರಿಂದ ಸೂಕ್ಷ್ಮ ರಂಧ್ರಗಳನ್ನು ಸ್ವಚ್ಛಗೊಳಿಸಬಹುದು.

ಮೇಕಪ್ ಕಡಿಮೆ ಮಾಡಿ

ಮೇಕಪ್ ಕಡಿಮೆ ಮಾಡಿ

ಅನಿವಾರ್ಯವಲ್ಲದ ಹೊರತು ಮುಖದ ಮೇಕಪ್ ಕನಿಷ್ಟ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವುದು ಜಾಣತನವಾಗಿದೆ. ದಿನದ ಬಹುಕಾಲ ಬಣ್ಣ ಹಚ್ಚಿಕೊಂಡಿರುವವರ ಚರ್ಮ ಚಿಕ್ಕವಯಸ್ಸಿನಲ್ಲಿಯೆ ಬಿಳಿಚಿಕೊಳ್ಳಲು ಪ್ರಾರಂಭಿಸುತ್ತದೆ. ರಾಸಾಯನಿಕಗಳ ಬದಲಿಗೆ ನೈಸರ್ಗಿಕ ಅಥವಾ ಆಯುರ್ವೇದೀಯ ಪರಿಕರಗಳನ್ನೊಳಗೊಂಡ ಮೇಕಪ್ ಸಾಧನಗಳನ್ನು ಬಳಸಿ.

ಆಗಾಗ ಎಣ್ಣೆ ಮಸಾಜ್ ಮಾಡಿ

ಆಗಾಗ ಎಣ್ಣೆ ಮಸಾಜ್ ಮಾಡಿ

ದೇಹದ ಇತರ ಭಾಗಗಳಿಗೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಆರ್ದ್ರತೆ ಮುಖದ ಚರ್ಮಕ್ಕೆ ಅಗತ್ಯವಿದೆ. ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಆರ್ದ್ರತೆ ಕೊಂಚ ಪ್ರಮಾಣದಲ್ಲಿ ಮಾತ್ರ ಲಭಿಸುವುದರಿಂದ ಇದಕ್ಕೆ ಬೇರೆ ವಿಧಾನ ಅನುಸರಿಸಿ. ವಾರಕ್ಕೊಮ್ಮೆ ಆಲಿವ್ ಅಥವಾ ಬೇರೆ ಯಾವುದಾದರೂ ಸೂಕ್ತ ಎಣ್ಣೆಯನ್ನು ಬಳಸಿ ನಯವಾಗಿ ಮಸಾಜ್ ಮಾಡುವ ಮೂಲಕ ಆರ್ದತೆಯ ಜೊತೆಗೇ ರಕ್ತಸಂಚಾರ ಉತ್ತಮಗೊಂಡು ಚರ್ಮ ಸಹಜಕಾಂತಿ ಪಡೆಯಲು ಸಾಧ್ಯವಾಗುತ್ತದೆ.

English summary

Get Clear Skin In Four Weeks

We all dream of getting clear and beautiful skin, but find it challenging to own it. Are you wondering how to get a beautiful and attractive clear skin? There are a number of ways to get clear skin in 30 days. Follow some of the basic steps regularly and enjoy your flawless skin. 
Story first published: Tuesday, September 8, 2015, 11:38 [IST]
X
Desktop Bottom Promotion