For Quick Alerts
ALLOW NOTIFICATIONS  
For Daily Alerts

ಸೌಂದರ್ಯಕ್ಕೆ ಬರೀ ಒಂದೇ ಒಂದು ಚಮಚ 'ಅಡುಗೆ ಸೋಡಾ'!

By Hemanth
|

ಅಡುಗೆ ಕೋಣೆಯ ಒಳಹೊಕ್ಕರೆ ನಿಮಗೆ ಖಂಡಿತವಾಗಿಯೂ ಅಡುಗೆ ಸೋಡಾ ಹೆಚ್ಚಿನ ಮನೆಗಳಲ್ಲಿ ಕಾಣಸಿಗುತ್ತದೆ. ಯಾಕೆಂದರೆ ಅಡುಗೆ ಸೋಡಾದಿಂದ ಹಲವಾರು ರೀತಿಯ ಲಾಭಗಳು ಇವೆ. ಇದನ್ನು ಅಡುಗೆಗೆ ಬಳಸುವುದು ಮಾತ್ರವಲ್ಲದೆ ಇತರ ಕೆಲವೊಂದು ಕಾರ್ಯಗಳಿಗೂ ಇದನ್ನು ಬಳಸಬಹುದು. ಮುಖದ ಸೌಂದರ್ಯಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ!

ಅಡುಗೆ ಸೋಡಾವು ನಂಜುನಿರೋಧಕ ಗುಣವನ್ನು ಹೊಂದಿದ್ದು, ಇದು ಬಿಸಿಲಿನಿಂದ ಸುಟ್ಟ ಗಾಯ, ಕಪ್ಪು ಕಲೆಗಳು ಹಾಗೂ ಮೊಡವೆಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವುದರ ಜೊತೆಗೆ, ತ್ವಚೆಯಲ್ಲಿನ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು. ಬನ್ನಿ ತ್ವಚೆಯ ಆರೈಕೆಗೆ ಅಡುಗೆ ಸೋಡಾವನ್ನು ಯಾವ ರೀತಿಯಿಂದ ಬಳಸಬಹುದು ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ...

ತೆಂಗಿನ ಎಣ್ಣೆಯೊಂದಿಗೆ ಅಡುಗೆ ಸೋಡಾ

ತೆಂಗಿನ ಎಣ್ಣೆಯೊಂದಿಗೆ ಅಡುಗೆ ಸೋಡಾ

ಅರ್ಧ ಚಮಚ ಅಡುಗೆ ಸೋಡಾವನ್ನು ಎರಡು ಚಮಚ ತೆಂಗಿನ ಎಣ್ಣೆಯೊಂದಿಗೆ ಬೆರೆಸಿಕೊಳ್ಳಿ. ಅದಕ್ಕೆ ಒಂದು ಚಮಚ ಶುದ್ಧೀಕರಿಸಿದ ನೀರನ್ನು ಹಾಕಿ. ಇದನ್ನು ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ತೊಳೆಯಿರಿ. ತ್ವಚೆಗೆ ತೇವಾಂಶ ನೀಡಲು ವಾರದಲ್ಲಿ ಒಂದು ಸಲ ಹೀಗೆ ಮಾಡಿ. ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ಅಡುಗೆ ಸೋಡಾ ಮತ್ತು ಲಿಂಬೆ ರಸ

ಅಡುಗೆ ಸೋಡಾ ಮತ್ತು ಲಿಂಬೆ ರಸ

ಒಂದು ಚಮಚ ಅಡುಗೆ ಸೋಡಾಕ್ಕೆ ಒಂದು ಚಮಚ ಶುದ್ಧೀಕರಿಸಿದ ನೀರು ಮತ್ತು ಒಂದು ಚಮಚ ಲಿಂಬೆರಸವನ್ನು ಹಾಕಿ. ಇದನ್ನು ತ್ವಚೆಗೆ ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ತೊಳೆಯಿರಿ. ಇದನ್ನು ವಾರದಲ್ಲಿ ಒಂದು ಸಲ ಮಾಡಿ.ಮೊಡವೆಯ ಕಲೆಗೆ ಚಿಟಿಕೆಯಷ್ಟು ಅಡುಗೆ ಸೋಡಾ ಸಾಕು...

ಅಡುಗೆ ಸೋಡಾ ಮತ್ತು ಆಪಲ್ ಸೀಡರ್ ವಿನೇಗರ್

ಅಡುಗೆ ಸೋಡಾ ಮತ್ತು ಆಪಲ್ ಸೀಡರ್ ವಿನೇಗರ್

ಒಂದು ಚಮಚ ಅಡುಗೆ ಸೋಡಾದೊಂದಿಗೆ ಮೂರು ಹನಿ ಆಪಲ್ ಸೀಡರ್ ವಿನೇಗರ್ ಮತ್ತು ಒಂದು ಚಮಚ ಶುದ್ಧೀಕರಿಸಿದ ನೀರನ್ನು ಹಾಕಿ. ಇದನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ ಹತ್ತು ನಿಮಿಷ ಹಾಗೆ ಬಿಡಿ. ಬಳಿಕ ತೊಳೆಯಿರಿ. ಮೊಡವೆ ನಿವಾರಣೆಗೆ ವಾರದಲ್ಲಿ ಒಂದು ದಿನ ಇದನ್ನು ಬಳಸಿ.

 ಅಡುಗೆ ಸೋಡಾ ಮತ್ತು ಮೊಟ್ಟೆಯ ಲೋಳೆ

ಅಡುಗೆ ಸೋಡಾ ಮತ್ತು ಮೊಟ್ಟೆಯ ಲೋಳೆ

ಒಂದು ಚಮಚ ಅಡುಗೆ ಸೋಡಾವನ್ನು ಒಂದು ಮೊಟ್ಟೆಯ ಲೋಳೆಯ ಜತೆ ಮಿಶ್ರಣ ಮಾಡಿಕೊಳ್ಳಿ ಮತ್ತು ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಬಿಟ್ಟು ಮುಖ ತೊಳೆಯಿರಿ. ಒಣ ಚರ್ಮದವರು ವಾರದಲ್ಲಿ ಒಂದು ಸಲ ಇದನ್ನು ಪ್ರಯತ್ನಿಸಿದರೆ ಉತ್ತಮ ಫಲಿತಾಂಶ ಸಿಗುವುದು.

ಅಡುಗೆ ಸೋಡಾ ಮತ್ತು ಟೊಮೆಟೋ ತಿರುಳು

ಅಡುಗೆ ಸೋಡಾ ಮತ್ತು ಟೊಮೆಟೋ ತಿರುಳು

ಒಂದು ಚಮಚ ಟೊಮೆಟೋ ತಿರುಳಿಗೆ ಒಂದು ಚಮಚ ಅಡುಗೆ ಸೋಡಾವನ್ನು ಹಾಕಿ ಮಿಶ್ರಣ ಮಾಡಿ. ಇದಕ್ಕೆ ಕೆಲವು ಹನಿ ಶುದ್ಧೀಕರಿಸಿದ ನೀರನ್ನು ಹಾಕಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಬಿಟ್ಟು ತೊಳೆದರೆ ಸೂರ್ಯನ ಬಿಸಿಲಿನಿಂದ ಆದ ಕಲೆಗಳು ನಿವಾರಣೆಯಾಗುವುದು.ಅಡುಗೆ ಸೋಡಾ ನೀಡುತ್ತೆ ಅಂದದ ತ್ವಚೆ

English summary

Best Ways To Include Baking Soda In Your Skin Care Routine

Baking soda is a multitasking item that has been a kitchen staple in many households since decades. Often used for oral care and cleaning purposes, baking soda is used extensively all over the world. However, very few people know that this item comes with a host of benefits that can do wonders on an individual's skin.
Story first published: Tuesday, March 28, 2017, 19:36 [IST]
X
Desktop Bottom Promotion