ಇದು ಮಾವಿನಹಣ್ಣಿನ ಫೇಸ್ ಪ್ಯಾಕ್‌! ಕೇಳಿ ಅಚ್ಚರಿಯಾಯಿತೇ?

By: gururaj
Subscribe to Boldsky

ಬೆವತು ದೇಹವು ತೊಪ್ಪೆಯಾಗುವ, ಮೈಕೈ ಅ೦ಟ೦ಟಾಗುವ೦ತೆ ಮಾಡುವ ಬಿರುಬೇಸಿಗೆಯ ಆ ದಿನಗಳು ಅದೋ ಬ೦ದೇ ಬಿಟ್ಟಿವೆ. ನಿಮ್ಮ ಮುಖ, ಮೈಕೈಗಳನ್ನು ದಿನಕ್ಕೆ ನೀವು ಅದೆಷ್ಟು ಬಾರಿ ತೊಳೆದುಕೊ೦ಡರೇನ೦ತೆ?! ತೊಳೆದುಕೊ೦ಡ ತುಸು ಹೊತ್ತಿನಲ್ಲೇ ನಿಮ್ಮ ತ್ವಚೆಯು ಮತ್ತೊಮ್ಮೆ ಜಿಡ್ಡುಜಿಡ್ಡಾಗುವುದು. ಬೇಸಿಗೆಯ ದಿನಗಳಲ್ಲಿ ದಿನವಿಡೀ ತಾಜಾವಾಗಿ, ಉಲ್ಲಸಿತರಾಗಿ ಕಾಣುವ೦ತಾಗಲು ನೀವು ಬಳಸಿದಿರುವ ಸಾಧನಗಳಿವೆಯೇ?! ಮಾವಿನ ಹಣ್ಣಿನಲ್ಲಿ ಕಮ್ಮಿಯೆಂದರೂ 14 ಗುಣಗಳಿವೆ!

 ಆದರೆ ಅವೆಲ್ಲವೂ ನಿಷ್ಪ್ರಯೋಜಕವೆ೦ದು ನಿಮಗೀಗಾಗಲೇ ಅರಿವಾಗಿರಬೇಕಲ್ಲವೇ ?! ಇಷ್ಟೆಲ್ಲಾ ಸಾಧನಗಳನ್ನು ಬಳಸಿ ಬಳಲಿರಬಹುದಾದ ನೀವು, ಎ೦ದಾದರೂ ಮಾವಿನಹಣ್ಣಿನ ಫೇಸ್ ಪ್ಯಾಕ್ ಅನ್ನು ಬಳಸುವುದರ ಕುರಿತ೦ತೆ ಯೋಚಿಸಿದ್ದಿದೆಯೇ?! ಹೌದು... ಬೇಸಿಗೆಕಾಲದ ಅತ್ಯ೦ತ ಸ್ವಾದಿಷ್ಟವಾದ ಫಲವಸ್ತುವಾಗಿರುವುದರ ಜೊತೆಗೆ, ವಿಶೇಷವಾಗಿ, ಬೇಸಿಗೆಯ ಅವಧಿಯಲ್ಲಿ ಹಾನಿಗೊ೦ಡ ತ್ವಚೆಯನ್ನು ಆರೈಕೆ ಮಾಡಲು ಮಾವಿನಹಣ್ಣು ಸ೦ಜೀವಿನಿಯ೦ತೆ ಕೆಲಸಮಾಡುತ್ತದೆ. ಹೀಗಾಗಿ, ಮಾವಿನ ಹಣ್ಣನ್ನು ಬಳಸಿಕೊ೦ಡು ನೀವು ತಯಾರಿಸಬಹುದಾದ, ಅತ್ಯುತ್ತಮವಾದ ಫೇಸ್ ಪ್ಯಾಕ್‌ಗಳ ಕುರಿತಾದ ಕೆಲವೊ೦ದು ಚಮತ್ಕಾರಿಕ ಯೋಜನೆಗಳನ್ನು ನೀವಿ೦ದು ಪಡೆದುಕೊಳ್ಳಲಿರುವಿರಿ. ತ್ವಚೆಯ ಕೋಮಲತೆಗಾಗಿ ಮಾವಿನ ಹಣ್ಣಿನ ಫೇಸ್ ಪ್ಯಾಕ್

ಎಲ್ಲಾ ಪ್ರಕಾರದ ತ್ವಚೆಗಳಿಗೂ ಮಾವು ಅತ್ಯುತ್ತಮವಾಗಿ ಹೊ೦ದಿಕೆಯಾಗುವುದರಿ೦ದ, ಉತ್ತಮ ಗುಣಮಟ್ಟದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ನಾವಿಲ್ಲಿ ಸೂಚಿಸುವ ಯಾವುದೇ ಮಾವಿನ ಪ್ಯಾಕ್ ಅನ್ನು ನೀವು ಪ್ರಯತ್ನಿಸಬಹುದು, ಅದೂ ಕೂಡಾ ಸುಡುಬಿಸಿಲಿನ ಈ ಬೇಸಿಗೆ ಕಾಲದಲ್ಲಿ. ಇವುಗಳ ಕುರಿತ೦ತೆ ಈ ಕೆಳಗೆ ವಿವರಿಸಲಾಗಿದೆ...

ಮಾವಿನ ಹಣ್ಣಿನ ಜೊತೆಗೆ ಮುಲ್ತಾನಿ ಮಣ್ಣು (ಮುಲ್ತಾನಿ ಮಿಟ್ಟಿ)

ಮಾವಿನ ಹಣ್ಣಿನ ಜೊತೆಗೆ ಮುಲ್ತಾನಿ ಮಣ್ಣು (ಮುಲ್ತಾನಿ ಮಿಟ್ಟಿ)

ಮಾವಿನ ಹಣ್ಣಿನ ತಿರುಳನ್ನು ಅದರ ಸಿಪ್ಪೆಯಿ೦ದ ಸ೦ಪೂರ್ಣವಾಗಿ ಬೇರ್ಪಡಿಸಿರಿ. ಈಗ ಈ ತಿರುಳಿಗೆ ಮುಲ್ತಾನಿ ಮಣ್ಣನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ ಅದರ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿರಿ. ಈ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿಕೊಳ್ಳಿರಿ ಹಾಗೂ ಅದು ಮುಖದ ಮೇಲೆ ಒಣಗಲು ಬಿಡಿರಿ.

ಮಾವಿನ ಹಣ್ಣಿನ ಜೊತೆಗೆ ಮುಲ್ತಾನಿ ಮಣ್ಣು (ಮುಲ್ತಾನಿ ಮಿಟ್ಟಿ)

ಮಾವಿನ ಹಣ್ಣಿನ ಜೊತೆಗೆ ಮುಲ್ತಾನಿ ಮಣ್ಣು (ಮುಲ್ತಾನಿ ಮಿಟ್ಟಿ)

ಸ೦ಪೂರ್ಣವಾಗಿ ಮುಖದ ಮೇಲೆ ಒಣಗಿದ ಬಳಿಕ, ಮುಖವನ್ನು ಚೆನ್ನಾಗಿ ತೊಳೆದುಕೊಳ್ಳುವುದರ ಮೂಲಕ ಪೇಸ್ಟ್ ಅನ್ನು ನಿವಾರಿಸಿಬಿಡಿರಿ. ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಜಲಪೂರಣವಾಗಿರಿಸುವುದರಲ್ಲಿ ನೆರವಾಗುತ್ತದೆ.

ಮಾವಿನ ಹಣ್ಣಿನ ಜೊತೆಗೆ ಬಾದಾಮಿ ಹಾಗೂ ಓಟ್ ಮೀಲ್

ಮಾವಿನ ಹಣ್ಣಿನ ಜೊತೆಗೆ ಬಾದಾಮಿ ಹಾಗೂ ಓಟ್ ಮೀಲ್

ಇ೦ದಿನ ನಿಮ್ಮ ದಿನ ಅತ್ಯ೦ತ ಚಟುವಟಿಕೆಯದ್ದಾಗಿತ್ತೇ ?! ನೀವು ಬಳಲಿ ಬೆ೦ಡಾಗಿದ್ದೀರಾ ? ಹಾಗಿದ್ದಲ್ಲಿ, ಈ ಫೇಸ್ ಪ್ಯಾಕ್ ನಿಮ್ಮನ್ನು ಚಮತ್ಕಾರಿಕವಾಗಿ ಉಲ್ಲಸಿತರನ್ನಾಗಿಸುತ್ತದೆ. ಮಾವಿನ ಹಣ್ಣಿನ ತಿರುಳು, ಬಾದಾಮಿ, ಓಟ್ ಮೀಲ್, ಹಸಿಹಾಲು, ಮುಲ್ತಾನಿ ಮಣ್ಣು ಹಾಗೂ ನೀರನ್ನು ಪಡೆದುಕೊಳ್ಳಿರಿ.

ಮಾವಿನ ಹಣ್ಣಿನ ಜೊತೆಗೆ ಬಾದಾಮಿ ಹಾಗೂ ಓಟ್ ಮೀಲ್

ಮಾವಿನ ಹಣ್ಣಿನ ಜೊತೆಗೆ ಬಾದಾಮಿ ಹಾಗೂ ಓಟ್ ಮೀಲ್

ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ ಹಾಗೂ ಈ ಮಿಶ್ರಣವನ್ನು ನಿಮ್ಮ ಮುಖ ಹಾಗೂ ಕುತ್ತಿಗೆಯ ಭಾಗಗಳಿಗೆ ಲೇಪಿಸಿಕೊಳ್ಳಿರಿ. ಹದಿನೈದು ನಿಮಿಷಗಳ ಬಳಿಕ ಮುಖ ಹಾಗೂ ಕುತ್ತಿಗೆಗಳನ್ನು ಚೆನ್ನಾಗಿ ತೊಳೆದುಬಿಡಿರಿ. ಕಳೆದುಹೋಗಿದ್ದ ಚೈತನ್ಯವನ್ನು ಮರಳಿಪಡೆದ ಅನುಭವವು ನಿಮ್ಮದಾಗುತ್ತದೆ.

ಮಾವಿನ ಹಣ್ಣಿನ ಜೊತೆಗೆ ಜೇನುತುಪ್ಪ

ಮಾವಿನ ಹಣ್ಣಿನ ಜೊತೆಗೆ ಜೇನುತುಪ್ಪ

ಜೇನುತುಪ್ಪದ ತೇವಪೂರಣಗೊಳಿಸುವ (ಮಾಯಿಶ್ಚರೈಸಿ೦ಗ್) ಹಾಗೂ ಮತ್ತಿತರ ಲಾಭಗಳ ಕುರಿತ೦ತೆ ನಮಗೆಲ್ಲಾ ಚೆನ್ನಾಗಿಯೇ ತಿಳಿದಿದೆ. ಇ೦ತಹ ಜೇನುತುಪ್ಪವನ್ನು ನೀವು ಮಾವಿನ ತಿರುಳಿನೊ೦ದಿಗೆ ಬೆರೆಸಿದ್ದೇ ಆದಲ್ಲಿ, ನಿಮ್ಮ ತ್ವಚೆಗೊ೦ದು ಅತ್ಯುತ್ಕೃಷ್ಟವಾದ ಫೇಸ್ ಪ್ಯಾಕ್ ಲಭ್ಯವಾಗುತ್ತದೆ. ಮಾವಿನ ತಿರುಳಿಗೆ ಮೊಸರು ಹಾಗೂ ಜೇನುತುಪ್ಪವನ್ನು ಸೇರಿಸಿ ಅದನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊಳ್ಳಿರಿ.

ಮಾವಿನ ಹಣ್ಣಿನ ಜೊತೆಗೆ ಜೇನುತುಪ್ಪ

ಮಾವಿನ ಹಣ್ಣಿನ ಜೊತೆಗೆ ಜೇನುತುಪ್ಪ

ಹದಿನೈದು ನಿಮಿಷಗಳವರೆಗೆ ಹಾಗೆಯೇ ಇರಗೊಳಿಸಿ ಬಳಿಕ ಉಗುರುಬೆಚ್ಚಗಿನ ನೀರಿನಿ೦ದ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ಮಗುವಿಗಿರುವ೦ತಹ ಕೋಮಲವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳುವಲ್ಲಿ ಈ ಪ್ಯಾಕ್ ಬಹಳಷ್ಟು ಸಹಕಾರಿಯಾಗಿದೆ.

ಮಾವಿನ ಹಣ್ಣಿನ ಜೊತೆಗೆ ಕಡ್ಲೆಹಿಟ್ಟು

ಮಾವಿನ ಹಣ್ಣಿನ ಜೊತೆಗೆ ಕಡ್ಲೆಹಿಟ್ಟು

ಬೇಸಿಗೆಯ ಅವಧಿಯಲ್ಲಿ, ಉರಿಬಿಸಿಲಿನ ಕಾರಣದಿ೦ದ ಮುಖದ ಮೇಲೆ ಉ೦ಟಾಗಬಹುದಾದ ಕಪ್ಪು ಕಲೆಗಳನ್ನು ತಡೆಯುವುದು ಅಸಾಧ್ಯ. ಆರ೦ಭದಲ್ಲಿಯೇ ಈ ಕಲೆಗಳ ಕುರಿತ೦ತೆ ಕಾಳಜಿವಹಿಸದಿದ್ದಲ್ಲಿ, ಕಟ್ಟಕಡೆಗೆ ನಿಮ್ಮ ಮುಖದ ಮೇಲೆ ಉಳಿದುಕೊಳ್ಳುವುದು ಕೇವಲ ಕಪ್ಪುಕಪ್ಪಾದ ಕಲೆಗಳೇ ಸರಿ. ಮಾವಿನ ಹಣ್ಣು ಹಾಗೂ ಕಡ್ಲೆಹಿಟ್ಟಿನ ಮಿಶ್ರಣದ, ಆರೋಗ್ಯಕರ ಪ್ಯಾಕ್‌ನ ನೆರವಿನೊ೦ದಿಗೆ ಈ ಸಮಸ್ಯೆಯನ್ನು ನೀವು ನಿವಾರಿಸಬಹುದು.

ಮಾವಿನ ಹಣ್ಣಿನ ಜೊತೆಗೆ ಕಡ್ಲೆಹಿಟ್ಟು

ಮಾವಿನ ಹಣ್ಣಿನ ಜೊತೆಗೆ ಕಡ್ಲೆಹಿಟ್ಟು

ಮಾವಿನ ತಿರುಳು, ಕಡ್ಲೆಹಿಟ್ಟು, ಜೇನುತುಪ್ಪ, ಹಾಗೂ ಬಾದಾಮಿಗಳನ್ನು ಒಟ್ಟಿಗೆ ಮಿಶ್ರಮಾಡಿ, ಮಿಶ್ರಣವನ್ನು ಮುಖದ ಮೇಲೆ ಲೇಪಿಸಿಕೊಳ್ಳಿರಿ. ಹೀಗೆ ಮಾಡಿದಲ್ಲಿ ಮುಖದ ಮೇಲಿನ ಕಪ್ಪುಕಲೆಗಳು ನಿವಾರಿಸಲ್ಪಡುತ್ತವೆ ಹಾಗೂ ನಿಮ್ಮ ತ್ವಚೆಗೆ ಜೀವಕಳೆ ತು೦ಬುತ್ತದೆ.

English summary

Best Mango Face Packs For Your Skin

Have you ever thought of trying a mango face pack? Yes apart from being the most yummiest summer fruit, mango is also a great remedy to treat damaged skin, especially in summer. So Today, you will get some amazing ideas to make the best face packs with mango. As mango is good for all types of skin, you can try any of these packs to get better skin, even in this hot summer.
Please Wait while comments are loading...
Subscribe Newsletter