ಮಾವಿನ ಹಣ್ಣಿನಲ್ಲಿ ಕಮ್ಮಿಯೆಂದರೂ 14 ಗುಣಗಳಿವೆ!

By Super

ಮಾವಿನ ಹಣ್ಣಿನಲ್ಲಿ 10ಕ್ಕೂ ಹೆಚ್ಚಿನ ಆರೋಗ್ಯಕರ ಗುಣಗಳಿವೆ. ಮಾವಿನಹಣ್ಣಿನಲ್ಲಿ ಕೊಬ್ಬಿನಂಶ, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ತೀರಾ ಕಡಿಮೆ ಪ್ರಮಾಣದಲ್ಲಿದೆ.ಅಲ್ಲದೆ ಇದರಲ್ಲಿ ನಾರಿನಂಶ, ವಿಟಮಿನ್ ಬಿ6, ವಿಟಮಿನ್ ಎ ಮತ್ತು ವಿಟಮಿನ್ ಯಥೇಚ್ಛವಾಗಿ ಹೊಂದಿರುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ಇದರ ಜೊತೆಗೆ ಮಾವಿನಲ್ಲಿ ರಂಜಕ, ಮ್ಯಾಗ್ನಿಷಿಯಂ ಮತ್ತು ಸತುವಿನಂತ ಖನಿಜಾಂಶಗಳು ಸಹ ಇವೆ. ಬೀಟಾ ಕೆರೋಟಿನ್ ಅಂಶಕ್ಕೆ ಉತ್ತಮ ಮೂಲವಾಗಿದೆ.

ಈ ಎಲ್ಲಾ oxidants ನಮ್ಮ ದೇಹದಲ್ಲಿನ ಫ್ರೀ ರಾಡಿಕಲ್ಸ್ (ಕಲ್ಮಶ) ಹತೋಟಿಯಲ್ಲಿಡುತ್ತವೆ. ಫ್ರೀ ರಾಡಿಕಲ್ಸ್ ನಮ್ಮ ಜೀವಕೋಶಗಳನ್ನು ಹಾನಿ ಮಾಡುವುದರಿಂದ ಹೃದಯಾಘಾತ, ಅವಧಿ ಪೂರ್ವ ವೃದ್ಧಾಪ್ಯ, ಕ್ಯಾನ್ಸರ್ ಮತ್ತು ನಮ್ಮನ್ನು ಕಾಡುವ ಇನ್ನಿತರ ರೋಗಗಳು ಉಂಟಾಗುವುದು. ಹಾಗಾಗಿ ಕಲ್ಮಶಗಳನ್ನು ಹೊರಹಾಕುವ ಆಹಾರಗಳನ್ನು ತಿನ್ನುವುದು ಒಳ್ಳೆಯದು. ಇಂತಹ ಆಹಾರಗಳಲ್ಲೊಂದು ಮಾವಿನ ಹಣ್ಣು. ಇದರ ಪ್ರಯೋಜನದ ಬಗ್ಗೆ ಈ ಕೆಳಗ್ಗೆ ನೀಡಲಾಗಿದೆ ನೋಡಿ:

1. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

1. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ಮಾವು ಅತಿ ಹೆಚ್ಚು ವಿಟಮಿನ್‍ಗಳನ್ನು ಹೊಂದಿದೆ. ಹಾಗಾಗಿ ಇದು ಆರೋಗ್ಯಕ್ಕೆ ಉತ್ತಮವೆಂದು ಬೇರೆ ಹೇಳಬೇಕಿಲ್ಲ. ಅಲ್ಲದೆ ಮಾವಿನಲ್ಲಿ ರಂಜಕ (4% ಪ್ರತಿ 156 ಮಿ.ಗ್ರಾಂ) ಮತ್ತು ಮ್ಯಾಗ್ನಿಷಿಯಂ (2% ಪ್ರತಿ 9 ಮಿ.ಗ್ರಾಂ) ಇರುತ್ತದೆ. ಹೀಗಾಗಿ ಮಾವಿನಹಣ್ಣು ರಕ್ತದೊತ್ತಡವನ್ನು ನಿವಾರಿಸಲು ಇರುವ ಪ್ರಕೃತಿ ದತ್ತ ಪರಿಹಾರವಾಗಿದೆ.

2. ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ

2. ಕ್ಯಾನ್ಸರ್ ಮತ್ತು ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ

ಮಾವಿನಲ್ಲಿ ಪೆಕ್ಟಿನ್ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೆಕ್ಟಿನ್ ಅಂಶ ಪ್ರೊಸ್ಟ್ರೇಟ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.

3. ತೂಕ ಹೆಚ್ಚಿಸಿಕೊಳ್ಳಲು ಸಹಕರಿಸುತ್ತದೆ

3. ತೂಕ ಹೆಚ್ಚಿಸಿಕೊಳ್ಳಲು ಸಹಕರಿಸುತ್ತದೆ

ಮಾವಿನ ಹಣ್ಣು ಸೇವಿಸುವುದರಿಂದ ನೀವು ಸುಲಭವಾಗಿ ತೂಕವನ್ನು ಹೆಚ್ಚಿಸಿಕೊಳ್ಳಬಹುದು. 150 ಗ್ರಾಂ ಮಾವಿನಲ್ಲಿ 86 ಕ್ಯಾಲೋರಿಗಳು ಇರುತ್ತವೆ. ಇದರ ಜೊತೆಗೆ ಮಾವಿನಲ್ಲಿ ಸ್ಟಾರ್ಚ್ ಇರುತ್ತದೆ. ಇದು ದೇಹದಲ್ಲಿ ಸಕ್ಕರೆಯಾಗಿ ಪರಿವರ್ತನೆಹೊಂದಿ ನಿಮ್ಮ ತೂಕವನ್ನು ಹೆಚ್ಚಿಸುತ್ತದೆ.

4. ಜೀರ್ಣ ಶಕ್ತಿ ಹೆಚ್ಚಿಸುತ್ತದೆ

4. ಜೀರ್ಣ ಶಕ್ತಿ ಹೆಚ್ಚಿಸುತ್ತದೆ

ಮಾವಿನ ಹಣ್ಣು ಅಜೀರ್ಣ ಮತ್ತು ಅಸಿಡಿಟಿಯನ್ನು ಹೊಡೆದೋಡಿಸುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುತ್ತದೆ. ಮಾವಿನ ಹಣ್ಣಿನಲ್ಲಿರುವ ಜೀರ್ಣ ಕ್ರಿಯೆಯ ಕಿಣ್ವಗಳು ಸ್ವಾಭಾವಿಕವಾಗಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

5. ಅನಿಮೀಯವನ್ನು ಹೊಡೆದೋಡಿಸುತ್ತದೆ

5. ಅನಿಮೀಯವನ್ನು ಹೊಡೆದೋಡಿಸುತ್ತದೆ

ಮಾವಿನಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದು ಅನಿಮೀಯಾದಿಂದ ಬಳಲುತ್ತಿರುವವರಿಗೆ ಉಪಯೋಗಕಾರಿಯಾಗಿದೆ. ಮಾವಿನ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಕಣಗಳು ಹೆಚ್ಚಾಗಿ ಅನಿಮೀಯಾವನ್ನು ನಿವಾರಿಸುತ್ತದೆ.

6. ಗರ್ಭಿಣಿಯರಿಗೆ ಉಪಯೋಗಕಾರಿ

6. ಗರ್ಭಿಣಿಯರಿಗೆ ಉಪಯೋಗಕಾರಿ

ಮಾವಿನಹಣ್ಣು ಗರ್ಭಿಣಿಯರಿಗೆ ಅತ್ಯುಪಯುಕ್ತ. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಇದು ಗರ್ಭಿಣಿಯರಿಗೆ ಅತ್ಯಗತ್ಯ. ವೈಧ್ಯರು ಕೂಡ ಕಬ್ಬಿಣಾಂಶದ ಮಾತ್ರೆಗಳನ್ನು ಶಿಫಾರಸು ಮಾಡುತ್ತಿರುತ್ತಾರೆ. ಆ ಮಾತ್ರೆಗಳನ್ನು ಸೇವಿಸುವ ಬದಲು ನೀವು ರುಚಿಯಾದ ಮಾವನ್ನು ಸೇವಿಸಿ ಕಬ್ಬಿಣಾಂಶವನ್ನು ಪಡೆಯಬಹುದು.

7. ಮೊಡವೆಗಳನ್ನು ನಿವಾರಿಸುತ್ತದೆ

7. ಮೊಡವೆಗಳನ್ನು ನಿವಾರಿಸುತ್ತದೆ

ಮಾವಿನ ಹಣ್ಣಿನ ತಿರುಳನ್ನು ಮುಖದ ಮೇಲೆ ಉಜ್ಜಿ ಅಥವಾ ಇಡಿ. ನಂತರ 10 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಮೊಡವೆಗಳು ನಿಯಂತ್ರಣಕ್ಕೆ ಬರುತ್ತವೆ. ಮಾವಿನ ಹಣ್ಣನ್ನು ತಿನ್ನುವುದರಿಂದ ಸಹ ಮೊಡವೆಗಳನ್ನು ನಿಯಂತ್ರಿಸಬಹುದು.

8. ಅಕಾಲಿಕ ನೆರಿಗೆ ಬೀಳದಂತೆ ತಡೆಯುತ್ತದೆ

8. ಅಕಾಲಿಕ ನೆರಿಗೆ ಬೀಳದಂತೆ ತಡೆಯುತ್ತದೆ

ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇವು ದೇಹದಲ್ಲಿ ಕೊಲೆಜಿನ್ ಪ್ರೋಟೀನ್‍ಗಳನ್ನು ಉತ್ಪಾದಿಸುತ್ತವೆ. ಕೊಲೆಜಿನ್‍ಗಳು ರಕ್ತನಾಳಗಳನ್ನು ರಕ್ಷಿಸುತ್ತವೆ. ಇವು ಇದಕ್ಕೆ ಸಂಬಂಧಿಸಿದ ಕೋಶಗಳನ್ನು ರಕ್ಷಿಸಿ ಚರ್ಮವು ಸುಕ್ಕಾಗದಂತೆ ತಡೆಯುತ್ತವೆ.

9. ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

9. ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಮಾವಿನಹಣ್ಣಿನಲ್ಲಿ ವಿಟಮಿನ್ ಬಿ-6 ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಮೆದುಳಿನ ಕಾರ್ಯಕ್ಷಮತೆಯನ್ನು ಅಧಿಕಗೊಳಿಸುತ್ತದೆ.

10. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

10. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮೊದಲೆ ಹೇಳಿದಂತೆ ಕ್ಯಾರೆಟ್‍ಗಳಂತೆ ಮಾವಿನಹಣ್ಣಿನಲ್ಲಿ ಬೀಟಾಕ್ಯಾರೊಟಿನ್ ಇದೆ. ಇವುಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

11. ಮಧುಮೇಹವನ್ನು ನಿಯಂತ್ರಿಸುತ್ತದೆ

11. ಮಧುಮೇಹವನ್ನು ನಿಯಂತ್ರಿಸುತ್ತದೆ

ಸಂಶೋಧನೆಗಳ ಪ್ರಕಾರ ಮಾವಿನಹಣ್ಣು ಪ್ರಾಕೃತಿಕವಾಗಿ ಮಧುಮೇಹದ ಮೇಲೆ ಹೋರಾಡುವ ಗುಣಗಳನ್ನು ಹೊಂದಿದೆ ಎಂದು ಧೃಢಪಟ್ಟಿದೆ. ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬಾರದು ಎಂದು ಹೇಳುವುದು ಕೇವಲ ಒಂದು ಮೂಢನಂಬಿಕೆ. ಮಧುಮೇಹಿಗಳು ಇದರ ಸಿಹಿಗೆ ಭಯಪಡುತ್ತಾರೆ. ಆದರೆ ಸಂಶೋಧನೆಗಳು ಇದರಲ್ಲಿರುವ ಅಂಶಗಳು ಮಧುಮೇಹವನ್ನು ತಡೆಯಲು ಸಹಕರಿಸುತ್ತವೆ ಎಂದು ತಿಳಿಸಿದೆ.

12. ಕಣ್ಣಿನ ಆರೋಗ್ಯಕ್ಕೆ ಅನುಕೂಲಕರ

12. ಕಣ್ಣಿನ ಆರೋಗ್ಯಕ್ಕೆ ಅನುಕೂಲಕರ

ಮಾವಿನ ಹಣ್ಣಿನ ಒಂದು ತುಂಡಿನಲ್ಲಿ ನಮ್ಮ ದೇಹಕ್ಕೆ ಒಂದು ದಿನಕ್ಕೆ ಅತ್ಯಗತ್ಯವಾಗಿರುವ ವಿಟಮಿನ್ ಎ ಇರುತ್ತದೆ. ಇದು ನಮ್ಮ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ದೃಷ್ಟಿ ದೋಷ ಮತ್ತು ಇರುಳು ಕುರುಡನ್ನು ಹಾಗು ಕಣ್ಣು ಡ್ರೈಯಾಗುವ ಸಮಸ್ಯೆಯನ್ನು ನಿವಾರಿಸುತ್ತದೆ.

13. ಲೈಂಗಿಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ

13. ಲೈಂಗಿಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ

ಮಾವಿನಹಣ್ಣಿನಲ್ಲಿ ವಿಟಮಿನ್ ಇ ಇರುತ್ತದೆ. ವಿಟಮಿನ್ ಇ ಮತ್ತು ಲೈಂಗಿಕ ವಾಂಛೆಯ ನಡುವೆ ಒಂದು ಅವಿನಾಭಾವ ಸಂಬಂಧವಿರುತ್ತದೆ. ಆದರೆ ಮಾವಿನ ಹಣ್ಣನ್ನು ಸೇವಿಸುವುದರಿಂದ ಇದನ್ನು ನೀವು ಪಡೆಯಬಹುದು.

14. ಬಿಸಿಲಿನ ಹೊಡೆತಕ್ಕೆ ಪರಿಹಾರ

14. ಬಿಸಿಲಿನ ಹೊಡೆತಕ್ಕೆ ಪರಿಹಾರ

ಮಾವಿನ ಹಣ್ಣಿನ ರಸವನ್ನು ಕುಡಿಯುವುದರಿಂದ ದೇಹ ತಂಪಾಗುತ್ತದೆ. ಆಯುರ್ವೇದದ ಪ್ರಕಾರ ಸಹ ಸೂರ್ಯನ ಬಿಸಿಲಿನ ಹೊಡೆತವನ್ನು ತಡೆಯಲು ನೀವು ಮಾವಿನ ಹಣ್ಣನ್ನು ಸೇವಿಸಬಹುದು. ಮಾವು ಮೂತ್ರಪಿಂಡಗಳಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

X
Desktop Bottom Promotion