Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತ್ವಚೆಯ ಕೋಮಲತೆಗಾಗಿ ಮಾವಿನ ಹಣ್ಣಿನ ಫೇಸ್ ಪ್ಯಾಕ್
ಮಾರುಕಟ್ಟೆಯಲ್ಲಿ ಈಗ ಎಲ್ಲಿ ನೋಡಿದರೂ ಮಾವಿನ ಹಣ್ಣಿನದೇ ಕಾರುಬಾರು. ಸಿಹಿ ಹಾಗೂ ಪೋಷಕಾಂಶಗಳೆರಡರಲ್ಲೂ ಮಾವಿಗೆ ಸರಿಸಾಟಿಯಾದ ಹಣ್ಣು ಇನ್ನೊಂದಿಲ್ಲ. ಇದು ಕೇವಲ ನಿಮ್ಮ ದೇಹದ ಆರೋಗ್ಯಕ್ಕೆ ಅಷ್ಟೇ ಅಲ್ಲ, ನಿಮ್ಮ ತ್ವಚೆಯ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ ಎಂಬುದೇ ಇದರ ವೈಶಿಷ್ಟ್ಯತೆ.
ಆದರೆ ಒಂದು ಮಾತು ಅಂತೂ ಸತ್ಯ ಮಗುವಿನಂತಹ ತ್ವಚೆಯನ್ನು ಇನ್ನೊಮ್ಮೆ ಪಡೆಯುವುದು ಅಸಾಧ್ಯವಾದ ಮಾತು. ಟಿ.ವಿಯಲ್ಲಿ ಬರುವ ಎಲ್ಲಾ ಜಾಹೀರಾತು ಉತ್ಪನ್ನಗಳು ನಿಮ್ಮ ತ್ವಚೆಯನ್ನು ಮತ್ತೆ ನಳನಳಿಸುವಂತೆ ಮಾಡಲಾರವು. ಇದಕ್ಕಾಗಿ ಮನೆ ಮದ್ದುಗಳೇ ಸರಿ, ಇವುಗಳಿಂದ ಯಾವುದೇ ಅಡ್ಡ ಪರಿಣಾಮಗಳ ಭಯವಿರುವುದಿಲ್ಲ. ಅಲ್ಲದೆ ಇಂತಹ ನೈಸರ್ಗಿಕ ಹಣ್ಣುಗಳಿಂದ ಸ್ವಾಭಾವಿಕವಾದ ವಿಟಮಿನ್ ಮತ್ತು ಪೋಷಕಾಂಶಗಳು ತ್ವಚೆಗೆ ಇನ್ನಷ್ಟು ಲಾಭದಾಯಕವಾಗಲಿದೆ. ಮಾವಿನ ಹಣ್ಣಿನಲ್ಲಿ ಕಮ್ಮಿಯೆಂದರೂ 14 ಗುಣಗಳಿವೆ!
ಮಾವಿನ ಹಣ್ಣುಗಳಲ್ಲಿ ಬೀಟಾ ಕೆರೋಟಿನ್, ಸ್ವಾಭಾವಿಕವಾದ ಹಣ್ಣಿನ ಆಮ್ಲಗಳು ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ತ್ವಚೆಯ ಎಕ್ಸ್‌ಫೋಲಿಯೇಶನ್‌ಗೆ ಸಹಾಯ ಮಾಡುವುದರ ಜೊತೆಗೆ, ಕೆಟ್ಟ ಹವಾಮಾನದಿಂದ ಮುಖದ ಮೇಲೆ ಕೂರುವ ಧೂಳು ಮತ್ತು ಕೊಳೆಯನ್ನು ನಿವಾರಿಸುವುದರ ಮೂಲಕ ಮುಖಕ್ಕೆ ಕಳೆದುಹೋದ ಹೊಳಪನ್ನು ಮರಳಿ ನೀಡುವಲ್ಲಿ ಸಹಕಾರಿಯಾಗಿದೆ. ಬನ್ನಿ ಮಾವಿನ ಮಾವಿನ ಹಣ್ಣಿನ ಫೇಸ್ ಪ್ಯಾಕ್ ಬಗ್ಗೆ ತಿಳಿಯೋಣ...

ಮಾವಿನಹಣ್ಣು ಮತ್ತು ಜೇನಿನ ಫೇಸ್ ಮಾಸ್ಕ್
ಮಾವಿನಹಣ್ಣು ಮತ್ತು ಜೇನು ಎರಡ ಮಿಶ್ರಣವು ನಿಮ್ಮ ತ್ವಚೆಗೆ ಅಗತ್ಯವಾಗಿರುವ ಮೊಯಿಶ್ಚರನ್ನು ಒದಗಿಸುತ್ತವೆ. ಸ್ವಲ್ಪ ಮಾವಿನಹಣ್ಣಿನ ಹಳದಿ ಭಾಗಕ್ಕೆ ಒಂದು ಟೀ.ಚಮಚ ಜೇನುತುಪ್ಪವನ್ನು ಹಾಗು ಸ್ವಲ್ಪ ಬಾದಾಮಿ ಎಣ್ಣೆಯನ್ನು ಬೆರೆಸಿ. ಇದರ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಲೇಪಿಸಿ, 15 ನಿಮಿಷಗಳ ಕಾಲ ಬಿಡಿ. ನಂತರ ಮುಖ ತೊಳೆಯಿರಿ.

ಮಾವಿನ ಹಣ್ಣಿನ ತಿರುಳು
ಸ್ವಲ್ಪ ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಟೀ.ಚಮಚ ವೈಟ್ ಕ್ಲೇ ಅಥವಾ ಓಟ್ಸ್, ಜೇನು ತುಪ್ಪ ಮತ್ತು ಹಾಲನ್ನು ಬೆರೆಸಿ. ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ತ್ವಚೆಯ ಮೇಲೆ ಲೇಪಿಸಿ. ನಂತರ ಇದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ ಅಥವಾ ಬೆಚ್ಚಗಿನ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಒರೆಸಿಕೊಳ್ಳಿ.

ಕಪ್ಪುಕಲೆಗಳನ್ನು ನಿವಾರಿಸಿ
ಮಾವಿನ ಹಣ್ಣುಗಳು ತ್ವಚೆಯಲ್ಲಿರುವ ಕಪ್ಪು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಸ್ವಲ್ಪ ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಂಡು, ಅದನ್ನು ಹಾಲಿನ ಪುಡಿ ಮತ್ತು ಜೇನು ತುಪ್ಪದೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಅದನ್ನು ವೃತ್ತಾಕಾರವಾಗಿ ನಿಮ್ಮ ತ್ವಚೆಯ ಮೇಲೆ ಲೇಪಿಸಿ. ಸ್ವಲ್ಪ ಹೊತ್ತಿನ ನಂತರ ಅದನ್ನು ತೊಳೆಯಿರಿ.

ಅಕಾಲಿಕ ನೆರಿಗೆ ಬೀಳದಂತೆ ತಡೆಯುತ್ತದೆ
ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇವು ದೇಹದಲ್ಲಿ ಕೊಲೆಜಿನ್ ಪ್ರೋಟೀನ್‍ಗಳನ್ನು ಉತ್ಪಾದಿಸುತ್ತವೆ. ಕೊಲೆಜಿನ್‍ಗಳು ರಕ್ತನಾಳಗಳನ್ನು ರಕ್ಷಿಸುತ್ತವೆ. ಇವು ಇದಕ್ಕೆ ಸಂಬಂಧಿಸಿದ ಕೋಶಗಳನ್ನು ರಕ್ಷಿಸಿ ಚರ್ಮವು ಸುಕ್ಕಾಗದಂತೆ ತಡೆಯುತ್ತವೆ.

ಮೊಡವೆಗಳನ್ನು ನಿವಾರಿಸುತ್ತದೆ
ಮಾವಿನ ಹಣ್ಣಿನ ತಿರುಳನ್ನು ಮುಖದ ಮೇಲೆ ಉಜ್ಜಿ ಅಥವಾ ಇಡಿ. ನಂತರ 10 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಮೊಡವೆಗಳು ನಿಯಂತ್ರಣಕ್ಕೆ ಬರುತ್ತವೆ. ಮಾವಿನ ಹಣ್ಣನ್ನು ತಿನ್ನುವುದರಿಂದ ಸಹ ಮೊಡವೆಗಳನ್ನು ನಿಯಂತ್ರಿಸಬಹುದು.



Click it and Unblock the Notifications
