For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಹೆಚ್ಚಿಸುವ ವೋಡ್ಕಾ ಮೋಡಿ ನೋಡಿ...

ಹೆಚ್ಚಿನ ಮದ್ಯಪಾನದ ಅಂಶಗಳನ್ನು ಹೊಂದಿದ್ದರೂ ಕೂಡ ವೋಡ್ಕಾ ಒಂದು ಒಳ್ಳೆಯ ಪಾನೀಯವಾಗಿದೆ ಇದು ಕೆಲವೊಂದು ಸೌಂದರ್ಯವರ್ಧಕ ಗುಣಗಳನ್ನೂ ಕೂಡ ನಿಮಗೆ ಕೊಡುಗೆಯಾಗಿ ನೀಡುತ್ತದೆ.

By Divya
|

ರಷ್ಯನ್ನರು ಅತಿ ಹೆಚ್ಚಾಗಿ ಸೇವಿಸುವ ಮದ್ಯವಾದ ವೋಡ್ಕಾ ನೋಡಲು ಪಾರದರ್ಶಕ ನೀರಿನಂತೆ ಕಂಡುಬಂದರೂ ಅಮಲೇರಿಸುವಲ್ಲಿ ಬೇರೆ ಯಾವುದೇ ಪಾನೀಯಾಗಳಿಗೆ ಕಡಿಮೆಯಿಲ್ಲ. ಆದರೆ ಈ ಪಾನೀಯವನ್ನು ಹೊಟ್ಟೆಗೆ ಹಾಕುವ ಬದಲಿಗೆ ಸೌಂದರ್ಯವೃದ್ಧಿಗೆ ಬಳಸಿಕೊಂಡರೆ ಹಲವು ವಿಧದಲ್ಲಿ ಪ್ರಯೋಜನಕಾರಿಯಾಗಿದೆ.

ವಿವಿಧ ಕಾಳುಗಳನ್ನು ಕೊಳೆಸಿ ಭಟ್ಟಿಯಿಳಿಸಿದ ವೋಡ್ಕಾದಲ್ಲಿ ಪ್ರಮುಖವಾಗಿರುವ ಧಾತುವೆಂದರೆ ಇಥನಾಲ್. ಇದು ಒಂದು ಪ್ರಬಲ ಮಾರ್ಜಕವಾಗಿದ್ದು ಮದ್ಯದ ಹೊರತಾಗಿ ಹಲವು ಇತರ ಉತ್ಪನ್ನಗಳಲ್ಲೂ ಬಳಸಲ್ಪಡುತ್ತದೆ... ಬನ್ನಿ ತ್ವಚೆಯ ಆರೈಕೆ ಹಾಗೂ ಕೂದಲಿನ ಪೋಷಣೆಗೆ ಯಾವ ರೀತಿಯಲ್ಲಿ ಇದನ್ನು ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ....

ಹೊಳೆಯುವ ಚರ್ಮಕ್ಕಾಗಿ

ಹೊಳೆಯುವ ಚರ್ಮಕ್ಕಾಗಿ

ಇದಕ್ಕಾಗಿ ನೀರು ಮತ್ತು ವೋಡ್ಕಾವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಎರಡು ಚಿಕ್ಕಚಮಚ ದಷ್ಟು ಪ್ರಮಾಣವನ್ನು ಒಂದು ಹತ್ತಿಯಿಂಡೆಯಲ್ಲಿ ಅದ್ದಿ ಮುಖದ ಚರ್ಮವನ್ನು ಒರೆಸಿಕೊಳ್ಳಿ. ಇದರಿಂದ ಚರ್ಮದ ಕೊಳೆ ಆಳದಿಂದ ಹೊರಬಂದು ಸೂಕ್ಷ್ಮರಂಧ್ರಗಳು ತೆರೆದುಕೊಳ್ಳುತ್ತವೆ ಹಾಗೂ ಅಡಗಿಕೊಂಡಿದ್ದ ಬ್ಯಾಕ್ಟೀರಿಯಾ ಮತ್ತು ಹೊರಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಕಲೆಗಳ ನಿವಾರಕ

ಕಲೆಗಳ ನಿವಾರಕ

ಒಂದು ಕಪ್ ವೋಡ್ಕಾ, ಅರ್ಧ ಕಪ್ ಜೇನುತುಪ್ಪ, 1 ಚಮಚ ಪೆನ್ನೆಲ್ ಬೀಜದ ಮಿಶ್ರಣ. ಇವೆಲ್ಲವನ್ನು ಸೇರಿಸಿ ಒಂದು ಮಿಶ್ರಣವನ್ನಾಗಿ ತಯಾರಿಸಿ. ನಂತರ ಅದನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಆರಲು ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆಯಿರಿ. ಹೀಗೆ ಮಾಡುತ್ತಾ ಬಂದರೆ ಮುಖದ ಮೇಲಿರುವ ಕಲೆ, ಕಣ್ಣಿನ ಕೆಳಭಾಗದ ಕಪ್ಪು ತಿಳಿಯಾಗುವುದು. ಜೊತೆಗೆ ತ್ವಚೆಯೂ ತೇವಾಂಶದಿಂದ ಕೂಡಿರುವುದು.

ಚರ್ಮದ ಕಿರಿಕಿರಿ

ಚರ್ಮದ ಕಿರಿಕಿರಿ

ಅರ್ಧಕಪ್ ವೋಡ್ಕಾ, ಅರ್ಧ ಕಪ್ ಗ್ರೀನ್ ಟೀ ಅನ್ನು ಸೇರಿಸಿ ಒಂದು ಮಿಶ್ರಣ ತಯಾರಿಸಿಕೊಳ್ಳಬೇಕು. ಬಳಿಕ ಮುಖಕ್ಕೆ ಹಚ್ಚಬೇಕು. ಸ್ವಲ್ಪ ಸಮಯದ ನಂತರ ತಂಪಾದ ನೀರಿನಲ್ಲಿ ತೊಳೆಯಬೇಕು. ನಿಯಮಿತವಾಗಿ ಹೀಗೆ ಮಾಡುವುದರಿಂದ ತ್ವಚೆಯ ಉರಿಯೂತವನ್ನು ನಿವಾರಿಸಬಹುದು.

ಕೂದಲ ಹೊಳಪು

ಕೂದಲ ಹೊಳಪು

ಅರ್ಧಕಪ್ ವೋಡ್ಕಾ, ಸ್ವಲ್ಪ ನಿಂಬೆ ರಸ, 1 ಚಮಚ ಆಲಿವ್ ಎಣ್ಣೆ. ಇವೆಲ್ಲವನ್ನು ಸೇರಿಸಿದ ಮಿಶ್ರಣವನ್ನು ನೆತ್ತಿ ಹಾಗೂ ಕೂದಲ ಬುಡದಲ್ಲಿ ಹಚ್ಚಬೇಕು. 30 ನಿಮಿಷದ ಬಳಿಕ ಕೂದಲನ್ನು ತೊಳೆಯಬೇಕು. ಈ ರೀತಿ ಮಾಡುವುದರಿಂದ ಕೂದಲು ಉದ್ದ ಹಾಗೂ ದಟ್ಟವಾಗಿ ಬೆಳೆದು, ಹೊಳಪಿನಿಂದ ಕೂಡಿರುತ್ತದೆ.

ಇದನ್ನೂ ಓದಿ-ಕೂದಲಿನ ಆರೈಕೆಯಲ್ಲಿ ಪಾಲಿಸಬಹುದಾದ 10 ವಿಧಾನಗಳು

ಕೂದಲ ಆರೋಗ್ಯ

ಕೂದಲ ಆರೋಗ್ಯ

ಒಂದು ಕಪ್ ವೋಡ್ಕಾ, ಒಂದು ಮೊಟ್ಟೆಯ ಹಳದಿ ಲೋಳೆ, 10 ಚಮಚ ಮೇಯನೆಸ್ ಮತ್ತು ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಒಂದು ಮಿಶ್ರಣ ತಯಾರಿಸಿಕೊಳ್ಳಬೇಕು. ಈ ಮಿಶ್ರಣವನ್ನು ನೆತ್ತಿ ಹಾಗೂ ಕೂದಲ ಬುಡಕ್ಕೆ ಅನ್ವಯಿಸಿ ಬಿಡಬೇಕು. ಒಂದು ಗಂಟೆಯ ನಂತರ ತಂಪಾದ ನೀರಿನಲ್ಲಿ ತೊಳೆದರೆ ಕೂದಲು ಹೆಚ್ಚು ಆರೋಗ್ಯಕರವಾಗಿ ಇರುವುದು. ಗಟ್ಟಿ ಹಾಗೂ ತೇವಾಂಶ ಭರಿತ ಕೇಶರಾಶಿಯನ್ನು ಹೊಂದಬಹುದು.

ತಲೆ ಹೊಟ್ಟು ನಿವಾರಕ

ತಲೆ ಹೊಟ್ಟು ನಿವಾರಕ

ಒಂದು ಕಪ್ ವೋಡ್ಕಾ, ಒಂದು ಕಪ್ ನಿಂಬೆ ರಸ ಮತ್ತು ಅರ್ಧಕಪ್ ಗ್ರೀನ್ ಟೀ. ಇವುಗಳ ಮಿಶ್ರಣವನ್ನು ಕೂದಲಿನ ಬುಡಕ್ಕೆ ತಾಗುವಂತೆ ಅನ್ವಯಿಸಬೇಕು. ಒಂದು ಗಂಟೆ ಬಿಟ್ಟು, ತಂಪಾದ ನೀರಿನಲ್ಲಿ ತೊಳೆಯಬೇಕು. ಹೀಗೆ ಗಣನೀಯವಾಗಿ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುವುದು.

ಕೂದಲುದುರುವಿಕೆಯ ನಿಯಂತ್ರಣ

ಕೂದಲುದುರುವಿಕೆಯ ನಿಯಂತ್ರಣ

ಒಂದು ಕಪ್ ವೋಡ್ಕಾ, ಒಂದು ಕಪ್ ನಿಂಬೆ ರಸ, 5-10 ಚಮಚ ಸೇಬು ಸೈಡರ್ ವಿನೆಗರ್. ಇವುಗಳ ಮಿಶ್ರಣವನ್ನು ತಲೆಗೆ ಸರಿಯಾಗಿ ಹಚ್ಚಿಕೊಳ್ಳಬೇಕು. 30 ನಿಮಿಷದ ಬಳಿಕ ತೊಳೆಯಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.

English summary

Benefits Of Using Vodka On Skin And Hair

Here is how you can include vodka in your daily skin care routine that can help to enhance the texture of your hair and skin. Take a look.
Story first published: Tuesday, May 16, 2017, 20:10 [IST]
X
Desktop Bottom Promotion