For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆಯಲ್ಲಿ ಪಾಲಿಸಬಹುದಾದ 10 ವಿಧಾನಗಳು

|

ಕೂದಲು ಅನ್ನುವುದು ಸೌಂದರ್ಯದ ಪ್ರಮುಖ ಅಂಶ. ವ್ಯಕ್ತಿಯ ಮುಖ ಎಷ್ಟೇ ಸುಂದರವಾಗಿದ್ದರೂ ಕೂದಲು ಇಲ್ಲದಿದ್ದರೆ ಅಷ್ಟೊಂದು ಆಕರ್ಷಕವಾಗಿ ಕಾಣಿಸುವುದಿಲ್ಲ. ಕೂದಲಿನ ಬಗ್ಗೆ ಸ್ವಲ್ಪ ಆರೈಕೆವಹಿಸಿದರೆ ಸಾಕು, ನೀವು ಬಯಸಿದಂತಹ ಸುಂದರವಾದ ಕೂದಲು ನಿಮ್ಮದಾಗುವುದು. ಈ ಕೆಳಗೆ ಕೆಲ ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ಪಾಲಿಸಿದರೆ ಆಕರ್ಷಕವಾದ ಕೂದಲನ್ನು ಪಡೆಯಬಹುದು.

ಕೂದಲಿನ ಆರೈಕೆ:

1. ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

2. ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ದಿನದಲ್ಲಿ ಅರ್ಧಗಂಟೆ ತಲೆಗೆ ಹಚ್ಚುವುದು ಒಳ್ಳೆಯದು.

3. ಮೆಹೆಂದಿ ಅಥವಾ ಮೊಸರು, ಮೊಟ್ಟೆ ಹೀಗೆ ನೈಸರ್ಗಿಕವಾದ ಕಂಡೀಷನರ್ ಬಳಸಿದರೆ ಒಳ್ಳೆಯದು. ರಾಸಾಯನಿಕವಿರುವ ಕಂಡೀಷನರ್ ಬಳಸಿದಾಗ ಶುರುವಿನಲ್ಲಿ ಕೂದಲು ಚೆನ್ನಾಗಿ ಕಾಣಿಸುತ್ತಿದೆ ಅನಿಸಿದರೂ, ಇದರಿಂದ ಅಡ್ಡ ಪರಿಣಾಮ ಉಂಟಾಗುತ್ತದೆ.

4. ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗೆ ಸ್ವಲ್ಪ ಮೆಂತೆಯನ್ನು ಹಾಕಿ ಕುದಿಸಿ. ನಂತರ ಸೋಸಿ ಒಂದು ಬಾಟಲಿನಲ್ಲಿ ಹಾಕಿಡಬೇಕು. ಈ ಎಣ್ಣೆಯಿಂದ ವಾರಕ್ಕೆ 3-4 ಬಾರಿಯಾದರೂ ಮಸಾಜ್ ಮಾಡುವುದು ಒಳ್ಳೆಯದು.

5. ಯಾವಾಗಲೂ ನೈಸರ್ಗಿಕ ಶ್ಯಾಂಪೂ ಬಳಸುವುದ ಒಳ್ಳೆಯದು. ಅದರಲ್ಲೂ ಸೀಗೆಕಾಯಿ, ನೆಲ್ಲಿಕಾಯಿ ಪುಡಿಯನ್ನು ತಲೆ ತೊಳೆಯಲು ಬಳಸುವುದು ಉತ್ತಮ.

6. ಸ್ಟೈಲ್ ಹೆಸರಿನಲ್ಲಿ ಹೆಚ್ಚಿನವರು ಕೂದಲಿಗೆ ಎಣ್ಣೆ ಹಚ್ಚುವುದಿಲ್ಲ . ಕೂದಲು ಉದುರುವುದಕ್ಕೆ ತಲೆಗೆ ಎಣ್ಣೆ ಹಚ್ಚದಿರುವುದೂ ಪ್ರಮುಖ ಕಾರಣ. ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ತಲೆಕೂದಲ ಬುಡಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಬೆರಳುಗಳ ತುದಿಯಿಂದ ಮಸಾಜ್ ಮಾಡಬೇಕು. ಅದರಲ್ಲೂ ಆಯುರ್ವೇದದ ಎಣ್ಣೆಗಳಾದ ಮಹಾಭೃಂಗರಾಜ ತೈಲ, ಆಮ್ಲಾ ಆಯಿಲ್, ನೀಲ ಭೃಂಗಾದಿ ತೈಲ ಅಥವಾ ಅರ್ನಿಕಾ ಆಯಿಲ್‌ಗಳನ್ನೂ ಬಳಸಬಹುದು.

7. ಭೃಂಗರಾಜ ಎಲೆ, ನೆಲ್ಲಿಕಾಯಿ, ಕಪ್ಪು ಎಳ್ಳು ಮತ್ತಿತರ ವಸ್ತುಗಳನ್ನು ಸೇರಿಸಿ ಮನೆಯಲ್ಲೇ ಎಣ್ಣೆ ಮಾಡಿ ನಿತ್ಯ ತಲೆಗೆ ಹಚ್ಚುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಿಕೊಳ್ಳಬಹುದು.

8. ತಲೆಗೆ ಸ್ನಾನ ಮಾಡಿದ ಮೇಲೆ ತಲೆ ಬುಡವನ್ನು ಚೆನ್ನಾಗಿ ಮಸಾಜ್ ಮಾಡುವಂತೆ ಉಜ್ಜಿ. ಇದು ನಿಮ್ಮ ತಲೆಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗೂ ಕೂದಲನ್ನು ದೃಢವಾಗಿಸುತ್ತದೆ. ಅಲ್ಲದೆ ಕೂದಲನ್ನು ಚೆನ್ನಾಗಿ ಒಣಗಿಸಿದ ನಂತರವೇ ತಲೆ ಬಾಚಬೇಕು.

9 . ಮೆಂತೆ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಧಾನವಾಗಿ ಕಡಿಮೆಯಾಗುತ್ತದೆ. ಮೆಂತೆ ಸೊಪ್ಪಿನ ಬದಲಾಗಿ ಮೆಂತೆ ಬಳಸಬಹುದು.

10. ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಕೆಲವು ಚೂರು ಕರ್ಪೂರವನ್ನೂ ಹಾಕಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಿದರೆ ತಲೆಹೊಟ್ಟು ನಿವಾರಣೆಯಾಗುವುದು.

English summary

10 Tips For Hair Care | Tips For Beauty | ಕೂದಲಿನ ಆರೈಕೆಗೆ 10 ಸಲಹೆಗಳು | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Hair fall this one of the most beauty problem of the people. but if you want care your hair it's better not to use chemicals. Here are 10 natural tips for hair care. Take a look.
Story first published: Tuesday, May 29, 2012, 11:48 [IST]
X