For Quick Alerts
ALLOW NOTIFICATIONS  
For Daily Alerts

  ಒಂದೆರಡು ಚಮಚ ಆಲಿವ್ ಎಣ್ಣೆ-ಇದುವೇ 'ಸೌಂದರ್ಯದ ಗಣಿ'!

  By Manu
  |

  ಆಲಿವ್ ಎಣ್ಣೆಯನ್ನು ಶತ ಶತಮಾನಗಳಿಂದಲು ನಮ್ಮ ಹಿರಿಯರು ಬಳಸುತ್ತಿದ್ದಾರೆ. ಅದರಲ್ಲಿರುವ ಅಪರಿಮಿತ ಪೋಷಕಾಂಶಗಳ ಜೊತೆಗೆ, ಆರೋಗ್ಯ ಮತ್ತು ಸೌಂದರ್ಯದ ದೃಷ್ಟಿಯಿಂದಲೂ ಸಹ ಇದು ನಮಗೆ ಅತ್ಯಂತ ನೆರವಾಗಿದೆ. ಅದರಲ್ಲು ಸೌಂದರ್ಯದ ವಿಚಾರದಲ್ಲಿ ಪ್ರಪಂಚದಲ್ಲಿ ಆಲಿವ್ ಎಣ್ಣೆಗೆ ಆಲಿವ್ ಎಣ್ಣೆಯೇ ಸಾಟಿ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸೌಂದರ್ಯೋತ್ಪನ್ನಗಳ ಮೇಲೆ ಜನರ ಮೋಹ ಅಧಿಕಗೊಳ್ಳುತ್ತಿದೆ.     ಮಲಬದ್ಧತೆ ಸಮಸ್ಯೆಗೆ 'ಆಲೀವ್ ಎಣ್ಣೆ'ಯೇ ದಿವ್ಯೌಷಧ

  ಹಾಗಾಗಿಯೇ ಅಮೆರಿಕಾದ ಮಾರುಕಟ್ಟೆಯಲ್ಲಿ ಸೌಂದರ್ಯೋತ್ಪನ್ನಗಳು ತಮ್ಮ ಅಸ್ತಿತ್ವವನ್ನು ಮತ್ತು ಪ್ರಾಮುಖ್ಯತೆಯನ್ನು ಸಾರಿ ಸಾರಿ ಹೇಳುತ್ತಿವೆ. ಸಹಜವಾಗಿ ಇಂತಹ ಉತ್ಪನ್ನಗಳ ಬೇಡಿಕೆ ಮತ್ತು ಮಾರಾಟ ಇತ್ತೀಚೆಗೆ ಹೆಚ್ಚಾಗಿದೆ. ಜನರಲ್ಲಿ ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕಂಪೆನಿಗಳು ಅವರ ಬೇಡಿಕೆಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ತರಹೇವಾರಿ ಉತ್ಪನ್ನವನ್ನು ಬಿಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ. ಆದರೆ ಇಂತಹ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಧಿಕವಾಗಿದ್ದು, ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ.   ಸೌಂದರ್ಯ ಮತ್ತು ಆರೋಗ್ಯಕ್ಕೆ ಕೀಲಿಕೈ ಆಲೀವ್

  ಅದಕ್ಕಾಗಿ ನಾವು ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸ್ವಾಭಾವಿಕ ಪರಿಹಾರಗಳ ಕಡೆಗೆ ಗಮನ ಹರಿಸಬೇಕಾದ ಕಾಲ ಬಂದಿದೆ. ಇಂತಹ ಸ್ವಾಭಾವಿಕ ಉತ್ಪನ್ನಗಳಲ್ಲಿ ಆಲಿವ್ ಎಣ್ಣೆಯು ಸಹ ಒಂದು. ತ್ವಚೆ ಹಾಗೂ ಕೂದಲಿನ ರೋಗ್ಯಪೂರ್ಣಗೊಳಿಸುವಲ್ಲಿ ಆಲಿವ್ ಎಣ್ಣೆಯು ಅದ್ಭುತವಾದ ಔಷಧಿ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಬಳಸುವುದರಿಂದ ನಮ್ಮ ತ್ವಚೆಗೆ ಅದ್ಭುತವಾದ ಹೊಳಪನ್ನು ನಾವು ನೀಡಬಹುದು. ಇದು ಇದರ ಹೆಚ್ಚುಗಾರಿಕೆ, ಇದರ ಇನ್ನಿತರ ಉಪಯೋಗಗಳ ಬಗ್ಗೆ ಈ ಕೆಳಗೆ ವಿವರವಾಗಿ ನೀಡಲಾಗಿದೆ ಓದಿ ತಿಳಿದುಕೊಳ್ಳಿ.....   

  ಒಣಚರ್ಮಕ್ಕಾಗಿ

  ಒಣಚರ್ಮಕ್ಕಾಗಿ

  ಆಲಿವ್ ಎಣ್ಣೆಯ ಉತ್ತಮವಾದ ಗುಣಗಳಲ್ಲಿ ಇದರ ತೇವಕಾರಕ ಗುಣ ಪ್ರಮುಖವಾಗಿದೆ. ಈ ಗುಣ ಒಣಚರ್ಮಕ್ಕೆ ಹೇಳಿ ಮಾಡಿಸಿದಂತಿದೆ. ಸ್ನಾನವಾದ ಬಳಿಕ ಕೆಲವು ಹನಿ ಆಲಿವ್ ಎಣ್ಣೆಯಿಂದ ಚರ್ಮವನ್ನು ಕೆಲವು ನಿಮಿಷಗಳ ಮಸಾಜ್ ಮೂಲಕ ಹಚ್ಚಿಕೊಳ್ಳುವ ಮೂಲಕ ಚರ್ಮ ಒಣಗುವುದನ್ನು ತಪ್ಪಿಸಬಹುದು.

  ಹಸ್ತಗಳ ಮೃದುತ್ವಕ್ಕಾಗಿ

  ಹಸ್ತಗಳ ಮೃದುತ್ವಕ್ಕಾಗಿ

  ಹಸ್ತಗಳು ಒರಟಾಗಿದ್ದರೆ ಕೆಲವು ಹನಿ ಆಲಿವ್ ಎಣ್ಣೆಯನ್ನು ಹಚ್ಚಿಕೊಂಡು ನಯವಾಗಿ ಉಜ್ಜಿಕೊಳ್ಳುವ ಮೂಲಕ ಮೃದುವಾಗುತ್ತದೆ. ಅಲ್ಲದೇ ಕೈ ತೊಳೆದುಕೊಳ್ಳುವ ಮುನ್ನ ಆಲಿವ್ ಎಣ್ಣೆಯನ್ನು ಹಚ್ಚಿಕೊಂಡು ಆ ಬಳಿಕ ಸೋಪು ಹಚ್ಚಿ ತೊಳೆದುಕೊಂಡರೆ ಕೈಗಳು ಮೃದುವಾಗಿಯೇ ಉಳಿಯುತ್ತವೆ.

  ತಲೆ ಹೊಟ್ಟಿನ ನಿವಾರಣೆಗಾಗಿ

  ತಲೆ ಹೊಟ್ಟಿನ ನಿವಾರಣೆಗಾಗಿ

  ಒಂದು ವೇಳೆ ನಿಮ್ಮ ತಲೆಯ ಚರ್ಮ ಒಣಗಿದ್ದು ತುರಿಕೆಯಿಂದ ಹಾಗೂ ತಲೆಹೊಟ್ಟಿನಿಂದ ಕೂಡಿದ್ದರೆ ವಾರಕ್ಕೆ ಮೂರು ಬಾರಿಯಾದರೂ ಆಲಿವ್ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿ ಸೌಮ್ಯ ಶಾಂಪೂವಿನಿಂದ ತೊಳೆದುಕೊಳ್ಳುವ ಮೂಲಕ ಉತ್ತಮ ಪರಿಣಾಮವನ್ನು ಪಡೆಯಬಹುದು.

  ಕೂದಲ ಹೊಳಪಿಗಾಗಿ

  ಕೂದಲ ಹೊಳಪಿಗಾಗಿ

  ಕೆಲವು ಹನಿ ಆಲಿವ್ ಎಣ್ಣೆಯನ್ನು ಬಿಸಿಮಾಡಿ ತಣಿಯಲು ಬಿಡಿ. ಇದು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ಎಣ್ಣೆಯಿಂದ ತಲೆಗೂದಲಿಗೆ ನಯವಾದ ಮಸಾಜ್ ಮೂಲಕ ಹಚ್ಚಿ. ಇದರಿಂದ ಕೂದಲ ಹೊಳಪು ಹೆಚ್ಚುತ್ತದೆ. ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕ ಕೂದಲು ಹೆಚ್ಚು ಎಣ್ಣೆಪಸೆಯಿಂದ ಕೂಡಿದ್ದು ಧೂಳನ್ನು ಸುಲಭವಾಗಿ ಆಕರ್ಶಿಸುತ್ತದೆ. ಆದರೆ ಆಲಿವ್ ಎಣ್ಣೆಯಲ್ಲಿ ಹೆಚ್ಚು ಎಣ್ಣೆ ಪಸೆ ಇಲ್ಲದ ಕಾರಣ ಹೊರಗೆ ಹೋಗುವಾಗ ಹಚ್ಚಿಕೊಳ್ಳಲು ಸೂಕ್ತವಾಗಿದೆ.

  ತಲೆಹೊಟ್ಟು ಸಮಸ್ಯೆಗೆ ರಾಮಬಾಣ...

  ತಲೆಹೊಟ್ಟು ಸಮಸ್ಯೆಗೆ ರಾಮಬಾಣ...

  ಆಲಿವ್ ಎಣ್ಣೆಯು ತನ್ನಲ್ಲಿರುವ ಕೇಶ ಸ್ನೇಹಿಗುಣಗಳಿಂದಾಗಿ ಭಾರೀ ಖ್ಯಾತಿಯನ್ನು ಪಡೆದಿದೆ. ಇದಕ್ಕೆ ಈ ಖ್ಯಾತಿ ಬರಲು ಇದರಲ್ಲಿರುವ ಕೂದಲನ್ನು ಹೊಳಪುಗೊಳಿಸುವ ಅಂಶಗಳೇ ಕಾರಣವಾಗಿವೆ. ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆಹೊಟ್ಟು ಬರುವುದಿಲ್ಲ ಮತ್ತು ಇದು ಒಂದು ಅತ್ಯುತ್ತಮ ಡೀಪ್ ಕಂಡೀಶನರ್ ಆಗಿ ಸಹ ಕಾರ್ಯ ನಿರ್ವಹಿಸುತ್ತದೆ. ಇದಕ್ಕಾಗಿ ಶಾಂಪೂ ಹಾಕಿಕೊಂಡ ನಂತರ ಕೂದಲಿಗೆ ಆಲಿವ್ ಎಣ್ಣೆ ಮತ್ತು ನೀರನ್ನು ಬೆರೆಸಿ ಮಸಾಜ್ ಮಾಡಿ. ಇದನ್ನು ಹಾಗೆಯೇ 5 ನಿಮಿಷ ಬಿಟ್ಟು ನಂತರ ನೀರಿನಲ್ಲಿ ತೊಳೆಯಿರಿ. ಇದರಲ್ಲಿರುವ ಕಂಡೀಶನಿಂಗ್ ಗುಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯಲ್ಲದೆ, ನಿಮ್ಮ ಕೂದಲಿಗೆ ಹೆಚ್ಚಿನ ಆಕರ್ಷಣೆಯನ್ನು ಮತ್ತು ಆರೋಗ್ಯವನ್ನು ನೀಡುತ್ತದೆ.

  ತುರಿಕೆಯುಕ್ತ ಚರ್ಮಕ್ಕಾಗಿ

  ತುರಿಕೆಯುಕ್ತ ಚರ್ಮಕ್ಕಾಗಿ

  ಒಂದು ವೇಳೆ ನಿಮ್ಮ ಚರ್ಮ ತುರಿಕೆಯಿಂದ ಕೂಡಿದ್ದರೆ ಈ ಭಾಗದಲ್ಲಿ ಕೆಲವು ಹನಿ ಆಲಿವ್ ಎಣ್ಣೆಯನ್ನು ಹಚ್ಚಿ ನೊರೆ ಬರುವಂತೆ ಮಾಡಿ. ಕೆಲವು ನಿಮಿಷಗಳ ಬಳಿಕ ಸೌಮ್ಯ ಸೋಪು ಬಳಸಿ ತೊಳೆದುಕೊಳ್ಳಿ.

   

  English summary

  Beauty Benefits Of Olive Oil

  There are several health benefits that this oil offers. It promotes digestion, stimulates your metabolism and offers vitamins and minerals to your body. Though most of us have started using olive oil for beauty purposes, it is a fact that it has been used since centuries. It is good for nails, skin and hair. In Egypt, this oil was used to treat hair many centuries ago. You can use olive oil on your skin as well as your hair too. Now, let us discuss about the beauty benefits of olive oil.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more