ಹಚ್ಚಿರಿ ಜೇನು ಹನಿಯ ಲೇಪ... ದೂರವಾಗಲಿ ಬೇಸಿಗೆಯ ತಾಪ...

By: manu
Subscribe to Boldsky

ಸಾಮಾಜಿಕವಾಗಿ ನಮ್ಮ ಸೌಂದರ್ಯವನ್ನು ಪ್ರತಿಬಿಂಬಿಸುವ ಪಾತ್ರವನ್ನು ನಮ್ಮ ಮುಖ ಮತ್ತು ತ್ವಚೆ ನಿರ್ವಹಿಸುತ್ತವೆ. ಅದಕ್ಕಾಗಿಯೇ ಬದಲಾಗುವ ವಾತಾವರಣ ಮತ್ತು ಋತುಗಳಿಗೆ ಅನುಗುಣವಾಗಿ ಆರೈಕೆಯನ್ನು ಮಾಡಿಕೊಳ್ಳಬೇಕು. ಇಲ್ಲವಾದರೆ ಮುಖದ ತ್ವಚೆಯು ಸುಕ್ಕುಗಟ್ಟಿರುವಂತೆ ತೋರುತ್ತದೆ. ಇದರೊಟ್ಟಿಗೆ ಬಹಳಷ್ಟು ವರ್ಷವಾಗಿರುವವರಂತೆ ಭಾಸವಾಗುತ್ತದೆ. ಕೇವಲ ದೇಹದ ಸೌಂದರ್ಯದಿಂದಲೇ ಆಕರ್ಷಿತರಾಗಲು ಸಾಧ್ಯವಿಲ್ಲ. ಅದಕ್ಕೆ ಸರಿಸಮನಾದ ತ್ವಚೆಯ ಆರೋಗ್ಯವೂ ಬಹಳ ಮುಖ್ಯ.

ಪ್ರತಿದಿನದ ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ತ್ವಚೆ ಮತ್ತು ಮುಖದ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆಯಾದರೂ ನಿಗಾವಹಿಸಲೇಬೇಕು. ಮುಖದ ಆರೈಕೆಗೆ ಎಂದು ಹೆಚ್ಚು ಹಣ, ವಿಶೇಷವಾದ ಫೇಸ್ ಪ್ಯಾಕ್‍ಗಳ ಮೊರೆ ಹೋಗಬೇಕೆಂದೇನೂ ಇಲ್ಲ. ನಮ್ಮ ಮನೆಯಲ್ಲಿರುವ ಕೆಲವು ಉತ್ಪನ್ನಗಳಿಂದ ನಾವು ಕಾಂತಿಯುತ ತ್ವಚೆಯನ್ನು ಹೊಂದಬಹುದು.  ನಿಮ್ಮನ್ನು ನಿಬ್ಬೆರಗಾಗಿಸುವ ಜೇನು ತುಪ್ಪದ ಸೌಂದರ್ಯ ಚಿಕಿತ್ಸೆ!

ಹೌದು, ಅಂತಹ ಒಂದು ಉತ್ತಮ ಉತ್ಪನ್ನಗಳಲ್ಲಿ ಜೇನುತುಪ್ಪವೂ ಒಂದು. ಚರ್ಮದ ಕೋಶಗಳಿಗೆ ಆರೋಗ್ಯ ನೀಡುವ ಜೇನು ತುಪ್ಪ ಅನೇಕ ಸಮಸ್ಯೆಗಳನ್ನು ದೂರಮಾಡುತ್ತದೆ. ಒಣ ತ್ವಚೆ, ಎಣ್ಣೆ ತ್ವಚೆ ಎನ್ನುವ ಭೇದವಿಲ್ಲದೆ ಕೆಲವು ಉತ್ತಮ ಕ್ರಮಗಳ ಅಳವಡಿಸಿಕೊಂಡು ಫೇಸ್ ಪ್ಯಾಕ್ ಧರಿಸಬಹುದು. ಇದರಿಂದ ಮುಖದ ಸೌಂದರ್ಯವು ಸದಾ ಕಾಂತಿಯುತವಾಗಿ ಆಕರ್ಷಿಸಲ್ಪಡುತ್ತದೆ. ಚರ್ಮದ ಪುನರುತ್ಪಾದನೆ ಹಾಗೂ ತೇವಾಂಶವನ್ನು ಕಾಯ್ದುಕೊಳ್ಳುವಂತೆ ಮಾಡಬಲ್ಲ ಜೇನುತುಪ್ಪದ ಬಳಕೆಯಿಂದ ಯಾವೆಲ್ಲಾ ಫೇಸ್ ಪ್ಯಾಕ್‍ಗಳನ್ನು ಧರಿಸಬಹುದು ಎಂಬುದನ್ನು ತಿಳಿಯೋಣ...    

ಜೇನುತುಪ್ಪ ಮತ್ತು ಬಾದಾಮಿ ಎಣ್ಣೆಯ ಫೇಸ್ ಪ್ಯಾಕ್

ಜೇನುತುಪ್ಪ ಮತ್ತು ಬಾದಾಮಿ ಎಣ್ಣೆಯ ಫೇಸ್ ಪ್ಯಾಕ್

ಒಂದು ಚಮಚ ಬಾದಾಮಿ ಎಣ್ಣೆ ತೆಗೆದುಕೊಂಡರೆ ಎರಡು ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಬೇಕು. ಇವೆರಡನ್ನು ಚೆನ್ನಾಗಿ ಮಿಶ್ರಣಗೊಳಿಸಿ ಮುಖಕ್ಕೆ ಹಚ್ಚಬೇಕು. ಸುಮಾರು ಅರ್ಥ ಗಂಟೆಗಳ ಕಾಲ ಮುಖದ ಮೇಲೆ ಆರಲು ಬಿಡಿ. ನಂತರ ತಣ್ಣೀರಿನಲ್ಲಿ ಫೇಸ್ ಪ್ಯಾಕ್ ತೆಗೆಯಿರಿ. ಮುಖದಲ್ಲಿ ಇರುವ ಸೂರ್ಯನ ಕಿರಣದ ಕಪ್ಪು ಕಲೆ ಹೋಗಬೇಕೆಂದರೆ ಈ ಮಿಶ್ರಣಕ್ಕೆ ಒಂದು ಚಿಕ್ಕ ಲಿಂಬೆ ತುಂಡಿನ ರಸವನ್ನು ಬೆರೆಸಿ ಹಚ್ಚಿಕೊಳ್ಳಿ. ಮುಖವು ಬಹಳ ಒಣ ತ್ವಚೆಯಿಂದ ಕೂಡಿದೆ ಎಂದೆನಿಸಿದರೆ ಬಾದಾಮಿ ಎಣ್ಣೆಯ ಬದಲು ತೆಂಗಿನೆಣ್ಣೆಯನ್ನು ಬಳಸಿ.

ಜೇನುತುಪ್ಪ ಮತ್ತು ಓಟ್ ಮೀಲ್

ಜೇನುತುಪ್ಪ ಮತ್ತು ಓಟ್ ಮೀಲ್

2 ಚಮಚ ಓಟ್‍ಮೀಲ್, 4 ಚಮಚ ಜೇನುತುಪ್ಪ, 2ಚಮಚ ಹಾಲು, ಸ್ವಲ್ಪ ಶ್ರೀಗಂಧದ ಪುಡಿ, ಸ್ವಲ್ಪ ಟೀ ಟ್ರೀ ಎಣ್ಣೆ. ಇವೆಲ್ಲವನ್ನು ಸಮನಾಗಿ ಮಿಶ್ರಗೊಳಿಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಚರ್ಮ ಶುಷ್ಕವಾಗಿದ್ದರೆ ಸ್ವಲ್ಪ ತೆಂಗಿನೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಸೇರಿಸಿಕೊಳ್ಳಬಹುದು. ಕಪ್ಪು ಬೀಜದ ಎಣ್ಣೆಯಿದ್ದರೆ ಅದನ್ನು ಬಳಸಬಹುದು. ಈ ಎಣ್ಣೆಯು ಹೆಚ್ಚು ಆಧ್ರ್ರಕ (ಮಾಯ್ಚುರೈಸಿಂಗ್)ಗುಣವನ್ನು ಹೊಂದಿರುವುದರಿಂದ ಚರ್ಮವು ಸದಾ ಕಾಲ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ಸಾಂಪ್ರದಾಯಿಕ ಫೇಸ್ ಪ್ಯಾಕ್

ಸಾಂಪ್ರದಾಯಿಕ ಫೇಸ್ ಪ್ಯಾಕ್

4 ಚಮಚ ಕಡಲೆ ಹಿಟ್ಟು, 1 ಚಮಚ ಅರಿಶಿನ, 2 ಚಮಚ ಗೋಧಿ ಹಿಟ್ಟು, ಚಿಟಿಕೆಯಷ್ಟು ನ್ಯಾಚುರಲ್ ಕ್ಯಾಂಪ್‍ಪೋರ್, ಒಂದೆರಡು ಎಸಳು ಕೇಸರಿ, 2 ಚಮಚ ಸಾಸಿವೆ ಎಣ್ಣೆ, 2 ಚಮಚ ಜೇನುತುಪ್ಪ, 2ಚಮಚ ಹಾಲು. ಇವೆಲ್ಲವನ್ನು ಒಂದು ಬೌಲ್‍ನಲ್ಲಿ ಹಾಕಿ ಸರಿಯಾಗಿ ಕಲಸಿ. ನಂತರ 10-15 ನಿಮಿಷ ನೆನೆಯಲು ಬಿಡಿ. ಬಳಿಕ ಮುಖಕ್ಕೆ ಹಚ್ಚಿಕೊಳ್ಳಬೇಕು. ಮುಖಕ್ಕೆ ಹಚ್ಚಿದ ಫೇಸ್ ಪ್ಯಾಕ್ ಒಣಗಿದ ಮೇಲೆ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಜೇನುತುಪ್ಪ ಮತ್ತು ಅಲೋವೆರಾ ಫೇಸ್ ಪ್ಯಾಕ್

ಜೇನುತುಪ್ಪ ಮತ್ತು ಅಲೋವೆರಾ ಫೇಸ್ ಪ್ಯಾಕ್

1/4 ಕಪ್ ಅಷ್ಟು ಅಲೋವೆರಾ ತಿರುಳು, 2 ಚಮಚ ಜೇನುತುಪ್ಪ, 1 ಚಮಚ ಗ್ಲಿಸರಿನ್, 1 ಚಮಚ ನಿಂಬೆ ರಸ. ಇವೆಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ ರಾತ್ರಿ ಮಲಗುವಾಗ ಹಚ್ಚಿಕೊಂಡು ಮಲಗೇಕು. ಬೆಳಗ್ಗೆ ತಣ್ಣೀರಿನಲ್ಲಿ ಫೇಸ್ ಪ್ಯಾಕ್ ತೆಗೆಯಿರಿ. ಇದರಿಂದ ತ್ವಚೆಯಲ್ಲಿರುವ ನಂಜಿನಂಶವನ್ನು ನಿವಾರಿಸಿ, ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಜೊತೆಗೆ ಹಾನಿಗೊಳಗಾದ ಚರ್ಮವನ್ನು ತೆಗೆಯಲು ಸಹಾಯಮಾಡುತ್ತದೆ. 'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ!

ಜೇನುತುಪ್ಪ ಮತ್ತು ಪಪ್ಪಾಯ ಫೇಸ್ ಪ್ಯಾಕ್

ಜೇನುತುಪ್ಪ ಮತ್ತು ಪಪ್ಪಾಯ ಫೇಸ್ ಪ್ಯಾಕ್

ಅರ್ಧ ಕಪ್ ಪಪ್ಪಾಯದ ತಿರುಳಿಗೆ 2 ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ. ನಂತರ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಬೇಕು. ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಸೂರ್ಯನ ಕಿರಣದಿಂದ ಮುಂಕಾದ ತ್ವಚೆ ಹೊಳಪನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಚರ್ಮವು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

ಜೇನುತುಪ್ಪ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್

ಜೇನುತುಪ್ಪ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್

1/4 ಕಪ್ ಬೆಚ್ಚಗಿನ ನೀರಿನಲ್ಲಿ ಗ್ರೀನ್ ಟೀ ಬ್ಯಾಗ್ ಅನ್ನು ನೆನೆಯಿಡಿ. ನಂತರ 4 ಚಮಚ ಜೇನುತುಪ್ಪವನ್ನು ಸೇರಿಸಿ. ಇವುಗಳ ಮಿಶ್ರಣದ ನಂತರ ಮುಖಕ್ಕೆ ಹಚ್ಚಬೇಕು. ಅರ್ಧ ಗಂಟೆಯ ಬಳಿಕ ಮುಖವನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಗ್ರೀನ್ ಟೀಯಲ್ಲಿ ಉತ್ಕರ್ಷಣ ಗುಣ ಹಾಗೂ ಜೇನುತುಪ್ಪದಲ್ಲಿ ಹ್ಯೂಮಕ್ಟಂಟ್ ಗುಣ ಸ್ವಾಭಾವಿಕವಾಗಿಯೇ ಇರುವುದರಿಂದ ಚರ್ಮದ ಕೋಶಗಳ ರಕ್ಷಣೆ ಹಾಗೂ ತೇವಾಂಶದಿಂದ ಇರುವಂತೆ ಮಾಡುತ್ತದೆ.

ಜೇನು ತುಪ್ಪ ಮತ್ತು ಸ್ಟ್ರಾಬೆರಿ ಫೇಸ್ ಪ್ಯಾಕ್

ಜೇನು ತುಪ್ಪ ಮತ್ತು ಸ್ಟ್ರಾಬೆರಿ ಫೇಸ್ ಪ್ಯಾಕ್

ಅರ್ಧ ಕಪ್ ಹಿಸುಕಿದ ಸ್ಟ್ರಾಬೆರಿ, 2 ಚಮಚ ಜೇನುತುಪ್ಪ ಬೆರೆಸಿ. ನಂತರ ಮುಖಕ್ಕೆ ಅನ್ವಯಿಸಬೇಕು. ಅದನ್ನು ಮುಖದ ಮೇಲೆ 30 ನಿಮಿಷಗಳಕಾಲ ಆರಲು ಬಿಡಬೇಕು. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ಒಣ ತ್ವಚೆಗೆ ಜೇನುತುಪ್ಪದ ಪ್ರಯೋಜನಗಳು

ಒಣ ತ್ವಚೆಗೆ ಜೇನುತುಪ್ಪದ ಪ್ರಯೋಜನಗಳು

ಜೇನು ತುಪ್ಪವು ಅನಾದಿಕಾಲದಿಂದಲೂ ಸೌಂದರ್ಯ ಪಾಕವಿಧಾನಗಳಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ಇದರಲ್ಲಿರುವ ಅದ್ಭುತ ಆಧ್ರ್ರಕ ಶಕ್ತಿ, ಆಕ್ಸಿಡೀಕರಣದ ಗುಣವು ಹೆಚ್ಚು ಪರಿಣಾಮಕಾರಿಯಾಗಿವೆ. ಹಾಗಾಗಿಯೇ ಇದು ಒಣ ಚರ್ಮ, ಸುಕ್ಕುಗಟ್ಟುವುದು ಹಾಗೂ ಬಿರುಕುಗಳ ಸಮಸ್ಯೆಗಳನ್ನು ಗುಣಮುಖಮಾಡುತ್ತದೆ. ಈ ಮೇಲೆ ಹೇಳಲಾದ ಪೇಸ್ ಪ್ಯಾಕ್ ವಿಧಾನವು ಮುಖದ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಸಹಾಯಮಾಡುತ್ತವೆ.

English summary

Amazing Honey Face Packs For Dry Skin

The reason being that the skin needs moisture to regenerate; and dry skin lacks just that. Honey is the holy grail ingredient for those with dry skin. Here are some recipes of the best honey face packs that could be used on dry skin. Take a look.
Subscribe Newsletter